Home Entertainment ಮೊದಲ ಬಾರಿಗೆ ತಾವು ಪ್ರೀತಿಸುತ್ತಿರುವ ಹುಡುಗ ಬಗ್ಗೆ ಮಾತನಾಡಿದ ಪ್ರೇಮ ಇವರ ಲವರ್ ಯಾರಂತೆ ಗೊತ್ತಾ.?

ಮೊದಲ ಬಾರಿಗೆ ತಾವು ಪ್ರೀತಿಸುತ್ತಿರುವ ಹುಡುಗ ಬಗ್ಗೆ ಮಾತನಾಡಿದ ಪ್ರೇಮ ಇವರ ಲವರ್ ಯಾರಂತೆ ಗೊತ್ತಾ.?

0
ಮೊದಲ ಬಾರಿಗೆ ತಾವು ಪ್ರೀತಿಸುತ್ತಿರುವ ಹುಡುಗ ಬಗ್ಗೆ ಮಾತನಾಡಿದ ಪ್ರೇಮ ಇವರ ಲವರ್ ಯಾರಂತೆ ಗೊತ್ತಾ.?

ಪ್ರೇಮ ತೊಂಬತ್ತರ ದಶಕದಿಂದ 2010 ರವರೆಗೆ ಕರುನಾಡಿನ ಸಿನಿಮಾ ರಂಗವನ್ನು ಆಳಿದ ಸ್ಟಾರ್ ನಟಿ. ಶಿವರಾಜ್ ಕುಮಾರ್ ಅವರ ಜೊತೆ ಅಭಿನಯಿಸಿ ಓಂ ಸಿನಿಮಾದಲ್ಲಿ ಅದ್ಭುತ ಬ್ರೇಕ್ ಪಡೆದುಕೊಂಡ ಪ್ರೇಮ ಅವರು ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಸತತವಾಗಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಬ್ಯಾಕ್ ಟು ಬ್ಯಾಕ್ ಕೊಟ್ಟ ಇವರು ಶಿವರಾಜ್ ಕುಮಾರ್ ,ರವಿಚಂದ್ರನ್ ಮತ್ತು ವಿಷ್ಣುವರ್ಧನ್ ಹಾಗೂ ರಮೇಶ್ ಅರವಿಂದ್ ಅವರಿಗೆ ಸೂಪರ್ ಜೋಡಿ ಆಗಿ ತೆರೆ ಮೇಲೆ ಕಾಣಿಸುತ್ತಿದ್ದರು. ಇದರಲ್ಲೂ ಶಿವರಾಜಕುಮಾರ್ ಹಾಗೂ ರಮೇಶ್ ಅರವಿಂದ್ ಜೊತೆ ಪ್ರೇಮ ಅವರು ಸಿನಿಮಾದಲ್ಲಿ ಇದ್ದರೆ ಆ ಸಿನಿಮಾ ತಪ್ಪದೆ ಹಿಟ್ ಆಗುತ್ತಿತ್ತು. ಚಂದ್ರೋದಯ ನಮ್ಮೂರ ಮಂದಾರ ಹೂವೆ ಈ ಸಿನಿಮಾಗಳಲ್ಲಿ ಆ ಕೆಮಿಸ್ಟ್ರಿ ವರ್ಕ್ ಆಗಿತ್ತು.

ವಿಷ್ಣುವರ್ಧನ್ ಹಾಗೂ ರವಿಚಂದ್ರನ್ ಅವರ ಜೊತೆಗೂ ಅನೇಕ ಸಿನಿಮಾಗಳಲ್ಲಿ ಜೋಡಿ ಕಾಣಿಸಿಕೊಂಡ ಇವರು ಅವರ ಜೊತೆಗೂ ಕೂಡ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿದ್ದರು. ಆದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾರಂಗದಿಂದ ದೂರವಾಗಿದ್ದರು. ಈಗ ಅವರ ವೈವಾಹಿಕ ಜೀವನದಲ್ಲಿ ಬಿರುಕು ಎದ್ದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈಗ ನಟಿ ಒಂಟಿ ಆಗಿ ಇರುವುದು ಎಲ್ಲರಿಗೂ ತಿಳಿದೇ ಇದೆ. ಆ ಬಳಿಕ ಮತ್ತೆ ತಮ್ಮ ಕೆರಿಯರ್ ಬಗ್ಗೆ ಗಮನ ಹರಿಸಿರುವ ಇವರು ಉಪೇಂದ್ರ ಮತ್ತೆ ಬಾ ಎನ್ನುವ ಸಿನಿಮಾದಲ್ಲಿ ಮತ್ತೆ ಬಣ್ಣ ಹಚ್ಚಿದ್ದರು. ನಟಿ ಪ್ರೇಮ ಅವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕೂಡ ಗುರುತಿಸಿಕೊಂಡಿದ್ದರು. ಹಾಗಾಗಿ ಈಗಲೂ ಕೂಡ ನಟಿ ಪ್ರೇಮ ಅವರಿಗೆ ಹಲವು ಸಿನಿಮ ಇಂಡಸ್ಟಿಗಳಿಂದ ಬೇಡಿಕೆ ಇದೆ.

ಆದರೆ ಇತ್ತೀಚೆಗೆ ಪಾತ್ರಗಳ ಆಯ್ಕೆಯಲ್ಲಿ ಬಹಳ ಚೂಸಿ ಆಗಿರುವ ಅವರು ಮತ್ತೊಮ್ಮೆ ಕನ್ನಡದಲ್ಲಿ ವೆಡ್ಡಿಂಗ್ ಕಾರ್ಡ್ ಎನ್ನುವ ಸಿನಿಮಾದಲ್ಲಿ ವಿಭಿನ್ನ ಗೆಟಪ್ ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಈ ಬಗ್ಗೆ ಮಾತುಕತೆಗೆ ಸಿಕ್ಕಾಗ ವರದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರ ಕೊಟ್ಟಿದ್ದಾರೆ. ನನ್ನನ್ನು ಯಾಕೆ ಸಿನಿಮಾದಿಂದ ಗ್ಯಾಪ್ ತೆಗೆದುಕೊಂಡಿದ್ದೀರಾ ಎಂದು ಕೇಳುತ್ತೀರಾ ನಾನು ಎಲ್ಲೂ ರಿಟೈರ್ಡ್ ಆಗಿಲ್ಲವಲ್ಲ. ನನಗೆ ನನ್ನ ಪಾತ್ರ ಸ್ಯಾಟಿಸ್ಫೆಕ್ಷನ್ ಆಗಬೇಕು ಮೊದಲಿನಿಂದಲೂ ನಾನು ಇದೇ ರೀತಿ ಬಯಸುತ್ತಿದ್ದೆ. ನನ್ನ ಅಭಿಮಾನಿಗಳು ಕೂಡ ನಾನು ಮಾಡಿರುವ ಪಾತ್ರದ ಬಗ್ಗೆ ಮೆಚ್ಚಿ ಮಾತನಾಡುವುದು ನನಗೆ ಕೇಳಬೇಕು. ಅವಕಾಶವಿಲ್ಲದೆ ಯಾವುದೋ ಪಾತ್ರ ಒಪ್ಪಿಕೊಂಡಿದ್ದೇನೆ ಎಂದು ಯಾರು ಅಂದುಕೊಳ್ಳಬಾರದು. ಹೀಗಾಗಿ ನಾನು ಒಳ್ಳೆಯ ಕಥೆಗಾಗಿ ಕಾಯುತ್ತೇನೆ ಅಷ್ಟೇ.

ನಾನು ನನ್ನ ಆತ್ಮ ತೃಪ್ತಿಗಾಗಿ ಕೆಲಸ ಮಾಡುತ್ತೇನೆ ಕೆಲಸ ಇಲ್ಲ ಎಂದು ಅಭಿನಯ ಮಾಡುತ್ತಿಲ್ಲ ಹೀಗಾಗಿ ಪಾತ್ರದ ಆಯ್ಕೆಯ ಬಗ್ಗೆ ನಿರ್ಧಾರ ಮಾಡುವ ಹಕ್ಕು ನನಗಿರುತ್ತದೆ. ನಾನು ಯಾವುದೇ ಕೆಲಸ ಮಾಡಿದರೂ ಅದರ ಬಗ್ಗೆ ಒಂದು ದಿನ ಪೂರ್ತಿ ಯೋಚನೆ ಮಾಡಿ ಮಾಡುತ್ತೇನೆ ಎಂದಿದ್ದಾರೆ. ಜೊತೆಗೆ ಈ ಬಾರಿಯ ಪಾತ್ರದ ತಯಾರಿ ಬಗ್ಗೆ ಕೇಳಿದಾಗ ನನಗೆ ಕ್ಯಾಮರಾ ಬಹಳ ಇಷ್ಟ ಯಾರಾದರೂ ನಿನ್ನ ಲವರ್ ಯಾರು ಎಂದು ಕೇಳಿದರೆ ಕ್ಯಾಮೆರಾ ಎನ್ನುತ್ತೇನೆ ಕ್ಯಾಮರಾ ಮುಂದೆ ನಿಂತಾಗ ಸಹಜವಾಗಿಯೇ ಆಕ್ಟಿಂಗ್ ಬರುತ್ತದೆ. ಆದರೆ ಈ ಬಾರಿ ಡೈಲಾಗ್ ಗಳು ವಿಭಿನ್ನವಾಗಿದೆ, ಹಾಗಾಗಿ ಅದರ ಬಗ್ಗೆ ಹೆಚ್ಚಿನ ಗಮನ ಕೊಟ್ಟಿದ್ದೇನೆ ಎಂದಿದ್ದಾರೆ.

LEAVE A REPLY

Please enter your comment!
Please enter your name here