ಅಂದು ರಶ್ಮಿಕಾ ಮಂದಣ್ಣ ಎಂದರೆ ಕರ್ನಾಟಕ ಕ್ರಶ್ ಎನ್ನುತ್ತಿದ್ದ ಅಭಿಮಾನಿಗಳು ಇಂದು ನ್ಯಾಷನಲ್ ಕ್ರಶ್ ಎಂದೂ ಕರೆಯುತ್ತಿದ್ದಾರೆ. ಹೌದು ಗೂಗಲ್ ಕೂಡ ರಶ್ಮಿಕಾ ಮಂದಣ್ಣ ಅವರನ್ನು ನ್ಯಾಷನಲ್ ಕ್ರಶ್ 2020 ಎಂದು ಕರೆದಿದೆ. ಇಷ್ಟರ ಮಟ್ಟಿಗೆ ರಶ್ಮಿಕಾ ಮಂದಣ್ಣ ವೇಗವಾಗಿ ತಮ್ಮ ಅಭಿನಯ ಕಲೆಯಿಂದ ಭಾರತಕ್ಕೆ ಪರಿಚಿತರಾಗಿದ್ದು ಸುಮಾರು 16 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೊಡಗಿನ ಬೆಡಗಿ ಆಗಿರುವ ರಶ್ಮಿಕಾ ಮಂದಣ್ಣ 2014 ರಲ್ಲಿ ಮಾಡೆಲಿಂಗ್ ಶುರು ಮಾಡಿ ಕೆಲವು ಅವಾರ್ಡ್ ಗಳನ್ನು ಗಳಿಸಿಕೊಂಡಿದ್ದಾರಲ್ಲದೇ ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡು ಕ್ಲೀನ್ ಅಂಡ್ ಕ್ಲಿಯರ್ ನ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದರು. ನಂತರ ಅವರು ಲಾಮೋಡ್ ಬೆಂಗಳೂರಿನ ಅತ್ಯತ್ತಮ ರೂಪದರ್ಶಿ ಹುಡುಕಾಟ ೨೦೧೫ ರಲ್ಲಿ ಟಿ.ವಿ.ಸಿ ಯ ಪ್ರಶಸ್ತಿಯನ್ನು ಪಡೆದರು.
ಇದಾದ ನಂತರ 2016 ರಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿ ಈ ಚಿತ್ರದಲ್ಲಿ ಕರ್ಣ ಎಂಬ ಕಾಲೇಜು ಹುಡುಗನ ಪ್ರೇಯಸಿಯಾಗಿ ಸಾನ್ವಿ ಜೋಸೆಫ್ ಎಂಬ ಹೆಸರಿನಲ್ಲಿ ಅಭಿನಯಿಸಿ ತಮ್ಮ ನಟನ ಕೌಶಲ್ಯಕ್ಕೆ ಕನ್ನಡಿಗರಿಂದ ಭೇಷ್ ಎನಿಸಿಕೊಂಡು ಕರ್ನಾಟಕ ಕ್ರಶ್ ಎಂದು ಕರೆಸಿಕೊಂಡು ಮೆರೆದರು. ಇದೇ ಚಿತ್ರಕ್ಕೆ 2016 ರ SIIMA ಅವಾರ್ಡ್ ನಲ್ಲಿ ಚೊಚ್ಚಲ ಚಿತ್ರದ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರರಾದರು. ಈ ಚಿತ್ರದ ನಂತರ ಅಪ್ಪು ಅವರ ಅಂಜನೀಪುತ್ರ ಚಿತ್ರದಲ್ಲಿ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಚಮಕ್ ಚಿತ್ರದಲ್ಲಿ, ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಹಾಗೂ ದ್ರುವ ಸರ್ಜಾ ಅವರ ಪೊಗರು ಚಿತ್ರದಲ್ಲಿ ನಾಯಕಿ ಆಗಿ ಕಾಣಿಸಿಕೊಂಡಿದ್ದು ಬಿಟ್ಟರೆ ಇನ್ನ್ಯಾವ ಕನ್ನಡ ಚಿತ್ರಗಳಲ್ಲೂ ಕಾಣಿಸಿಕೊಂಡಿಲ್ಲ.
ಕನ್ನಡ ಚಿತ್ರರಂಗದಲ್ಲಿ ತಮ್ಮ ಕೀರ್ತಿ ಪತಾಕೆ ಹಾರುತ್ತಿದ್ದಂತೆ ರಶ್ಮಿಕಾ ಕೂಡ ಬೇರೆ ಚಿತ್ರರಂಗದತ್ತ ಹಾರಿದರು. ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಅವರು ಟಾಲಿವುಡ್ ನ ಎಲ್ಲಾ ಮೇರು ನಟರೊಂದಿಗೂ ನಟಿಸಿ ತಮ್ಮ ಯಶಸ್ಸಿನ ಶಿಖರದತ್ತ ಮುಖ ಮಾಡಿದ್ದಾರೆ. ಅವರು ನಟಿಸಿರುವ ಎಲ್ಲಾ 14 ಚಿತ್ರಗಳೂ ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದಲ್ಲದೆ ಇಲ್ಲಿಯವರೆಗೂ ಸೋತಿದೆ ಎನ್ನುವ ಸುದ್ದಿ ಇರಲಿಲ್ಲ. ಆದರೆ ಇತ್ತೀಚೆಗೆ ತೆರೆಕಂಡ ಆಡವಲ್ಲು ಮೀಕು ಜೋಹರಲ್ಲೋ ಸಿನಿಮಾ ಕೇವಲ 3.60 ಕೋಟಿ ಕಲೆಕ್ಷನ್ ಮಾಡಿ ರಶ್ಮಿಕಾ ಕೇರಿಯರ್ ನಲ್ಲಿಯೇ ಸೋಲು ಕಂಡ ಚಿತ್ರವಾಗಿದೆ.
ಸಾಮಾನ್ಯವಾಗಿ ತೆಲುಗಿನ ಯಾವುದೇ ಚಿತ್ರ ಬಿಡುಗಡೆಯಾದರೂ ದಿನಕ್ಕೆ 10 ಕೋಟಿ ಆದರೂ ಗಳಿಕೆ ಕಾಣುತ್ತವೆ ಆದರೆ ಈ ಚಿತ್ರ ಅತ್ಯಂತ ಕಡಿಮೆ ಗಳಿಕೆ ಕಂಡು ರಶ್ಮಿಕಾ ಅದೃಷ್ಟ ಕೈ ಕೊಟ್ಟ ಹಾಗಿದೆ. ತೆಲುಗಿನ ಎಲ್ಲಾ ಜನಪ್ರಿಯ ನಟರೊಂದಿಗೆ ನಟಿಸಿ ರಶ್ಮಿಕಾ ಮಂದಣ್ಣ ಲಕ್ಕಿ ಚಾರ್ಮ್ ಎನಿಸಿಕೊಂಡು ನ್ಯಾಷನಲ್ ಕ್ರಶ್ ಎಂತಲೂ ಎನಿಸಿಕೊಂಡವರು ಆದರೆ ಇವರ ಈ ಯಶಸ್ಸಿಗೆ ರಕ್ಷಿತ್ ಶೆಟ್ಟಿಯ ಕಿರಿಕ್ ಪಾರ್ಟಿ ಎಂದರೆ ತಪ್ಪಲ್ಲ. ಕಾರಣಾಂತರಗಳಿಂದ ರಕ್ಷಿತ್ ಶೆಟ್ಟಿ ಜೊತೆಗಿನ ಸಂಬಂಧ ಮುರಿದುಕೊಂಡು ಕನ್ನಡಿಗರ ಕೋಪ ಟೀಕೆಗಳಿಗೆ ಗುರಿಯಾಗಿರುವ ರಶ್ಮಿಕಾ ಇಂದು ತಮ್ಮ ಮೊದಲ ಸೋಲಿನ ರುಚಿಯನ್ನು ಕಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ