Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಮಾನ್ಸೂನ್ ರಾಗ ಸಿನಿಮಾದಲ್ಲಿ ಸೆ-ಕ್ಸ್ ವರ್ಕರ್ ಪಾತ್ರದಲ್ಲಿ ಕಾಣಿಸಿಕೊಂಡ ರಚಿತಾ ರಾಮ್, ಈ ಪಾತ್ರ ಮಾಡುವುದಕ್ಕೆ...

ಮಾನ್ಸೂನ್ ರಾಗ ಸಿನಿಮಾದಲ್ಲಿ ಸೆ-ಕ್ಸ್ ವರ್ಕರ್ ಪಾತ್ರದಲ್ಲಿ ಕಾಣಿಸಿಕೊಂಡ ರಚಿತಾ ರಾಮ್, ಈ ಪಾತ್ರ ಮಾಡುವುದಕ್ಕೆ ರಚಿತಾ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?

ಡಾಲಿ ಧನಂಜಯ್ ಅವರ ಬಹು ನಿರೀಕ್ಷಿತ ಸಿನಿಮಾ ಅಂದರೆ ಅದು ಮನ್ಸೂನ್ ರಾಗ ಅಂತಾನೆ ಹೇಳಬಹುದು ಈ ಸಿನಿಮದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕೂಡ ನಟನೆ ಮಾಡಿದ್ದಾರೆ. ಈಗಾಗಲೇ ಡಾಲಿ ಧನಂಜಯ್ ಅವರ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿದ್ದು ತಿಂಗಳಿಗೆ ಒಂದರಂತೆ ಒಂದೊಂದೇ ಸಿನಿಮಾ ಬಿಡುಗಡೆಯಾಗುತ್ತಿದೆ. ವಿಶೇಷ ಎಂದರೆ ಎಲ್ಲವೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಅಷ್ಟೇ ಅಲ್ಲದೆ ಯಾವ ಸಿನಿಮಾವು ಕೂಡ ಸೋತ ಇತಿಹಾಸವೇ ಇಲ್ಲ ಇದೆಲ್ಲವನ್ನು ನೋಡುತ್ತಿದ್ದರೆ ಡಾಲಿ ಧನಂಜಯ್ ಅವರ ಅದೃಷ್ಟ ಕುಲಾಯಿಸಿತು ಅಂತಾನೆ ಹೇಳಬಹುದು. ಇನ್ನು ಡಾಲಿ ಧನಂಜಯ್ ಅವರ ನಟನೆಯಲ್ಲಿ ರಾಕ್ಷಸ ಅಂತ ಹೇಳಬಹುದು ಯಾವುದೇ ಪಾತ್ರ ಇರಲಿ ಯಾವುದೇ ಸನ್ನಿವೇಶ ಇರಲೇ ಅದನ್ನು ಕರಗತ ಮಾಡಿಕೊಂಡು ತನ್ನನ್ನು ತಾನು ಪರಕಾಯ ಪ್ರವೇಶ ಮಾಡಿಕೊಂಡು ನೋಡುಗರ ಮನಸ್ಸಿಗೆ ಮನರಂಜನೆಯನ್ನು ನೀಡುತ್ತಾರೆ.

ಈ ಬಾರಿಯೂ ಕೂಡ ಮಾನ್ಸೂನ್ ರಾಗ ಎಂಬ ಸಿನಿಮಾದಲ್ಲಿ ಧನಂಜಯ್ ಅವರು ಅದ್ಭುತ ಪಾತ್ರ ಒಂದನ್ನು ನಿಭಾಯಿಸಿದ್ದಾರೆ ಈ ಸಿನಿಮಾ ಭಾಗಶಃ ಮಳೆಯಲ್ಲೇ ನಡೆಯುತ್ತದೆ. ಆ ಕಾರಣದಿಂದಾಗಿ ಈ ಸಿನಿಮಾಗೆ ಮಾನ್ಸೂನ್ ರಾಗ ಎಂಬ ಹೆಸರನ್ನು ಇಟ್ಟಿದ್ದಾರೆ ಈಗಾಗಲೇ ಮಾನ್ಸೂನ್ ರಾಗದ ಟ್ರೈಲರ್ ಮತ್ತು ಟೀಸರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ವರಮಹಾಲಕ್ಷ್ಮಿ ಹಬ್ಬ ಆದ ನಂತರದಲ್ಲಿಯೇ ಈ ಒಂದು ಟೀಸರ್ ಅನ್ನು ಬಿಡುಗಡೆ ಮಾಡಲಾಯಿತು. ಈ ಟೀಸರ್ ಬಿಡುಗಡೆ ಮಾಡುವುದಕ್ಕೆ ಹಲವಾರು ಗಣ್ಯ ವ್ಯಕ್ತಿಗಳು ಕೂಡ ಆಗಮಿಸಿದ್ದರು.

ಮನ್ಸೂನ್ ರಾಗದ ವಿಭಿನ್ನ ಕಥೆಯನ್ನು ತೆರೆಯ ಮೇಲೆ ಹೇಳಲು ಚಿತ್ರ ತಂಡ ಹೊರಟಿದ್ದು ಈ ಸಿನಿಮಾದಲ್ಲಿ ಸೆ-ಕ್ಸ್ ವರ್ಕರ್ ಪಾತ್ರದಲ್ಲಿ ಕಾಣಿಸಿಕೊಳ್ಳೋ ರಚಿತಾ ರಾಮ್ ಮೇಲೆ ಡಾಲಿಗೆ ಲವ್ ಆಗೋ ಸೂಚನೆ ಟ್ರೇಲರ್ ಮೂಲಕ ನಾವು ಗಮನಿಸಬಹುದು. ಟ್ರೈಲರ್ ನೋಡಿದ್ರೆ ಅದ್ಬುತ ಸ್ಟೋರಿ ಈ ಚಿತ್ರದಲ್ಲಿ ಇರೋದು ಪಕ್ಕಾ ಆಗಿದೆ ಬಿಡಿ. ಸಿನಿಮಾದ ಟ್ರೈಲರ್ ಹೇಳುವಂತೆ ಆಲ್ ಮೋಸ್ಟ್ ಸಿನಿಮಾ ಮಳೆಯಲ್ಲೇ ಶೂಟಿಂಗ್ ಆಗಿದೆ ಅನ್ನೋದನ್ನ ಸಾಕಷ್ಟು ಬಾರಿ ಚಿತ್ರತಂಡ ಹೇಳಿಕೊಂಡಿದೆ. ಈ ಮಾನ್ಸೂನ್‌ ರಾಗ ಸಿನಿಮಾ ಕೂಡ 70-80ರ ದಶಕದಲ್ಲಿ ನಡೆಯುವಂಥ ಕಥೆಯನ್ನು ಹೊಂದಿದ್ದು, ಸದ್ಯ ಈ ಸಿನಿಮಾ ಆಗಸ್ಟ್ 19 ರಂದು ತೆರೆಮೇಲೆ ಬರಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಈ ಸಿನಿಮಾದಲ್ಲಿ ರಚಿತಾ ರಾಮ್ ಅವರು ನಟನೆ ಮಾಡುವುದಕ್ಕೆ ಎಷ್ಟು ಸಂಭವನೆ ಪಡೆದರು ಎಂಬ ವಿಚಾರವೇ ಹೆಚ್ಚು ಸುದ್ದಿಯಲ್ಲಿ ಇದೆ.

ಏಕೆಂದರೆ ಇದು ಒಂದು ವಿಭಿನ್ನವಾದ ಚಿತ್ರಕಥೆಯಾಗಿದೆ ರಚಿತಾರಾಮ್ ಅವರು ನಟನೆ ಮಾಡಿರುವ ಎಲ್ಲಾ ಸಿನಿಮಾದಲ್ಲೂ ಕೂಡ ನಾಯಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಈ ಚಿತ್ರದಲ್ಲಿ ಮಾತ್ರ ವಿಭಿನ್ನ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದಾರೆ ಅಷ್ಟು ಸುಲಭವಾಗಿ ಈ ಪಾತ್ರವನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಕೂಡ ಇವರು ಈ ಪಾತ್ರವನ್ನು ಮಾಡಿದ್ದಾರೆ ಎಂದರೆ ಇದಕ್ಕೆ ತಕ್ಕ ಪ್ರತಿಫಲವನ್ನು ಖಂಡಿತವಾಗಿಯೂ ಕೂಡ ಅವರು ಪಡೆದೆ ಇರುತ್ತಾರೆ. ಕೆಲವು ಮೂಲಗಳ ಪ್ರಕಾರ ರಚಿತರಾಮ್ ಅವರು ಈ ಸಿನಿಮಾದಲ್ಲಿ ಈ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಬರೋಬ್ಬರಿ ಒಂದು ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಇಷ್ಟು ದೊಡ್ಡ ಪ್ರಮಾಣದ ಸಂಭಾವನೆಯನ್ನು ಪಡೆದ ನಾಯಕ ನಟಿಯರ ಪಟ್ಟಿಯಲ್ಲಿ ರಚಿತಾ ರಾಮ್ ಅವರೇ ಏಕೈಕ ವ್ಯಕ್ತಿ ಅಂತ ಹೇಳಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಸೆ-ಕ್ಸ್ ಪಾತ್ರದಲ್ಲಿ ಕಾಣಿಸುವ ಮೂಲಕ ರಚಿತಾರಾಮ್ ಅವರು ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.