ಈಗಿನ ದಿನಗಳಲ್ಲಿ ಮನೋರಂಜನೆ ಎಂದರೆ ಜನರು ಟಿವಿಯನ್ನು ಹೆಚ್ಚಾಗಿ ಆರಿಸಿಕೊಂಡಿದ್ದಾರೆ. ಅದರಲ್ಲೂ ಜನರಿಗೆ ರಿಯಾಲಿಟಿ ಶೋಗಳು ಎಂದರೆ ಬಹಳ ಕುತೂಹಲ, ಸಂತೋಷ, ಕಣ್ಣಿಗೆ ಏನೋ ಒಂದು ಹಬ್ಬದ ಹಾಗೆ. ಈ ಪೈಕಿ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ವಾರದ ಏಳು ದಿನವೂ ಕೂಡ ಪ್ರಸಾರವಾಗುತ್ತದೆ. ಬಿಗ್ ಬಾಸ್ ಕನ್ನಡ ಒಂದು ಕನ್ನಡದ ಮನೋರಂಜನೆಯ ರಿಯಾಲಿಟಿ ಶೋ ಆಗಿದೆ. ಕಲರ್ಸ್ ಕನ್ನಡದ ಚಾನೆಲ್ ನ ಮೂಲಕ ಭಾರತಾದ್ಯಂತ ಪ್ರಸಾರವಾಗುತ್ತಿದೆ. ಕಿಚ್ಚ ಸುದೀಪ್ ರವರು ಈ ಶೋ ಅನ್ನು ನಡೆಸಿ ಕೊಡುತ್ತಿದ್ದಾರೆ.ಬಿಗ್ ಬಾಸ್ ಮನೆ ಎಂದರೆ ಪ್ರೀತಿ, ಸ್ನೇಹ, ಜಗಳ, ವಾದ ವಿವಾದ, ಸೋಲು ಗೆಲುವು, ಎಲ್ಲವೂ ಇರುತ್ತದೆ. ಅಂತೆಯೇ ಕೆಲವು ಮಾತುಗಳು ಹಾಗೂ ವಿಡಿಯೋಗಳು ಕೂಡ ವೈರಲಾಗಿ ಬಿಡುತ್ತದೆ. ಕೆಲವರ ಮಾತುಗಳು ವರ್ತನೆಗಳು, ಇನ್ನೊಬ್ಬರಿಗೆ ಇಷ್ಟವಾಗುವುದಿಲ್ಲ.
ಇದೆಲ್ಲವನ್ನು ಸಹಿಸಿಕೊಂಡು ಎಲ್ಲರ ಜೊತೆಯಾಗಿ ಯಾರನ್ನು ಬೇಸರ ಮಾಡದೆ ಎಲ್ಲರ ಮನೆಗೆದ್ದು ಕೊನೆಯವರೆಗೂ ಉಳಿಯುವರು ಗೆಲುವನ್ನು ಸಾಧಿಸುತ್ತಾರೆ. ಈ ಬಾರಿ ಬಿಗ್ ಬಾಸ್ ಕನ್ನಡದವರು ಬಿಗ್ ಬಾಸ್ ಕನ್ನಡ ಓಟಿಟಿ ಎಂಬ ಶೋವನ್ನು ಶುರು ಮಾಡಿದ್ದು ಅದಕ್ಕೆ ಬೇಕಾದ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಹೊಸದಾದ ಮೊದಲನೆ ಬಿಗ್ ಬಾಸ್ ಓಟಿಟಿ ಶೋ ಬಹಳ ಹರುಷದಿಂದ ಶುರುವಾಗಿದ್ದು, ಪ್ರತಿಯೊಬ್ಬ ಸ್ಪರ್ಧಿಯು ಬೇರೆ ಬೇರೆ ಜೀವನದ ಹಾದಿಯಲ್ಲಿ ನಡೆದು ಬಂದಿರುವವರಾಗಿರುತ್ತಾರೆ. ಈ ಸಲ ಸ್ಪರ್ಧಿಗಳನ್ನು 42 ದಿನಗಳವರೆಗೆ ಬಿಗ್ ಬಾಸ್ ಮನೆಯಲ್ಲಿ ಕೂಡಿಹಾಕಲಾಗುತ್ತದೆ. ಅದರಲ್ಲಿ ಆಯ್ಕೆ ಆದ ಪ್ರಮುಖ ಸ್ಪರ್ಧಿಗಳನ್ನು ಮುಂದೆ ನಡೆಯಲಿರುವ ಬಿಗ್ ಬಾಸ್ 9ಕ್ಕೆ ಆಯ್ಕೆ ಮಾಡಲಾಗುತ್ತದೆ.
ಇದರಲ್ಲಿ ಸೋನು ಶ್ರೀನಿವಾಸ್ ಗೌಡ, ಆರ್ಯವರ್ಧನ್ ಗುರೂಜಿ, ಸಾನಿಯಾ ಅಯ್ಯರ್, ರಾಕೇಶ್ ಅಡಿಗ ಸೇರಿದಂತೆ ಹಲವರು ಇದ್ದಾರೆ. ಬಿಗ್ ಬಾಸ್ ಮನೆ ಎಂದರೆ ಮಾತುಕತೆಯು ದಿನನಿತ್ಯ ನಡೆಯುತ್ತಾ ಇರುತ್ತದೆ ಅದರಲ್ಲಿ ಒಂದೆಡೆ ದಂತಕತೆ ಆದರೆ ಇನ್ನೊಂದೆಡೆ ಪ್ರೇಮ ಕಥೆ ನಡೆಯುತ್ತಿರುತ್ತದೆ. ಈ ಪೈಕಿ ಆರ್ಯವರ್ಧನ್ ಗುರೂಜಿ ಅವರ ಮಾತು ಬಹಳ ವೈರಲಾಗಿ ಸುದ್ದಿಯಾಗಿದೆ ಬಿಗ್ ಬಾಸ್ ಮನೆಯಲ್ಲಿ ಒಬ್ಬೊಬ್ಬರದು ವಿಭಿನ್ನವಾದ ನೋವುಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಕೆಲವರು ತಮಗಾದ ಅವಮಾನ ಬಗ್ಗೆ ಹೇಳಿದರೆ ಇನ್ನೊಬ್ಬರು ತನಗಾದ ಮಾನಸಿಕ ಶೋಷಣೆ ಹಾಗೂ ದೈಹಿಕ ಶೋಷಣೆಯ ಬಗ್ಗೆ ಹಂಚಿಕೊಂಡಿರುತ್ತಾರೆ. ಈ ಮಧ್ಯೆ ಯಾರ ಮಾತನ್ನು ಲೆಕ್ಕಿಸದೆ ಅವರ ಇಷ್ಟ ಬಂದಂತೆ ಇರುವ ಆರ್ಯವರ್ಧನ್ ಗುರೂಜಿಯವರು ಅವರ ಮಾತನ್ನು ಇನ್ನೊಂದು ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.
ತಂದೆ, ತಾಯಿ, ಪ್ರೀತಿ, ವಿರಹ ಎಂದು ಹೇಳಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ ಎಲ್ಲರಿಗೂ ಕಷ್ಟ ಬಂದು ಹೋಗುತ್ತದೆ ಅದನ್ನು ಹೇಳಿಕೊಂಡು ಸಿಂಪತಿ ಗಿಟ್ಟಿಸಿಕೊಳ್ಳಬಾರದೆಂದು ಹೇಳಿದ್ದಾರೆ. ಈ ಮಾತನ್ನು ಹೇಳುವಾಗ ಅವರು 5 ಸಾವಿರ ಕೋಟಿಯ ಒಡೆಯ ಎಂದು ಹೇಳಿದ್ದಾರೆ ಅವರು ಹಳ್ಳಿಯಿಂದ ಬಂದಿದ್ದು ಅವರಿಗೆ 5 ಸಾವಿರ ಕೋಟಿಗೂ ಅಧಿಕ ಬೆಲೆ ಬಾಳುವ ಆಸ್ತಿ ಇದೆ ಕಷ್ಟದಲ್ಲಿ ಹುಟ್ಟಿಲ್ಲ ಸುಖವಾಗಿ ಬೆಳೆದಿದ್ದು ಅವರಿಗೆ ಕಷ್ಟ ಏನೆಂದು ತಿಳಿದೇ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟಲ್ಲದೆ ಕೆಲವರಿಗೆ ಸಾಲ ಕೊಟ್ಟು ಹಣ ಸಹಾಯ ಮಾಡಿದ್ದಾರೆ, ಕನ್ನಡ ಚಿತ್ರರಂಗಕ್ಕೂ ಕೂಡ ಸಾಲ ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈವರೆಗೂ ಯಾರಿಗೆ ಕೊಟ್ಟಿದ್ದಾರೆ ಎಂದು ಹೇಳಿಲ್ಲ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.