ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ಅನನ್ಯ ರಾಮ ಅವರು ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಹೌದು ಮಾಲಾಶ್ರೀ ಅವರ ಮಗಳು ನಟ ದರ್ಶನ್ ಜೊತೆ ಅಭಿನಯಿಸುವುದಕ್ಕೆ ಸಕಲ ತಯಾರಿಯನ್ನು ಮಾಡಿಕೊಂಡಿದ್ದಾರೆ. ವಿಶೇಷ ಏನೆಂದರೆ ಸಿನಿಮಾ ರಂಗಕ್ಕೆ ಕಾಲಿಡುತ್ತಿರುವ ಅನನ್ಯ ಅವರು ಈ ಸಿನಿಮಾಗಾಗಿಯೇ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಮಾಲಾಶ್ರೀ ಅವರ ಮಗಳ ಹುಟ್ಟಿನ ಹೆಸರು ಅನನ್ಯ ಆದರೆ ಸಿನಿಮಾಗಾಗಿ ರಾಧಾನರಾಮ್ ಎಂದು ಹೆಸರನ್ನು ಬದಲಿಸಿಕೊಂಡಿದ್ದಾರೆ. ಮಾಲಾಶ್ರೀ ಅವರ ಮಗಳಿಗೆ ಈ ಹೆಸರನ್ನು ಬದಲಾಯಿಸಬೇಕು ಅಂತ ಮಾಲಾಶ್ರೀ ಮತ್ತು ಅವರ ಪತಿ ಆದಂತಹ ಜೋಟಿ ರಾಮ ಅವರು ಮೊದಲೇ ನಿರ್ಧಾರ ಮಾಡಿದರು. ಆದರೆ ಅದಕ್ಕೆ ಅವಕಾಶ ಎಂಬುದು ಸಿಕ್ಕಿರಲಿಲ್ಲ ಕಳೆದ ವರ್ಷವಷ್ಟೇ ಕರೋನದಿಂದಾಗಿ ಕೋಟಿ ರಾಮು ಅವರು ಸಾ.ವ.ನ.ಪ್ಪಿ.ದ.ರು.
ಆದಕಾರಣ ಹೊಸ ಹೆಸರನ್ನು ನಾಮಕರಣ ಮಾಡುವಂತಹ ಕೆಲಸವು ಅರ್ಧಕ್ಕೆ ನಿಂತಿತ್ತು ಆದರೆ ಯಾವಾಗ ದರ್ಶನ್ ಅವರ ಜೊತೆ ಮಾಲಾಶ್ರೀ ಅವರ ಮಗಳು ಹೀರೋಯಿನ್ ಆಗಿ ಎಂಟ್ರಿ ನೀಡುತ್ತರೋ ಅದೇ ಸಮಯದಲ್ಲಿ ಆಕೆಯ ಹೆಸರನ್ನು ರಾಧಾನ ರಾಮ್ ಎಂಬ ಹೊಸ ಹೆಸರನ್ನು ನಾಮಕರಣ ಮಾಡುತ್ತಾರೆ. ದರ್ಶನ್ ಅವರ 56ನೇ ಸಿನಿಮಾ ಆದಂತಹ ಕಾಟೇರ ಸಿನಿಮಾದಲ್ಲಿ ರಾಧನಾ ರಾಮ್ ಅವರು ನಾಯಕನಟಿಯಾಗಿ ನಟಿಸುವುದರ ಮೂಲಕ ಸ್ಯಾಂಡಲ್ ವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 90 ಮತ್ತು 80ರ ದಶಕದಲ್ಲಿ ಚಿತ್ರರಂಗವನ್ನು ಆಳಿದ ಖ್ಯಾತ ನಟಿಯರಲ್ಲಿ ಮಾಲಾಶ್ರೀ ಅವರು ಕೂಡ ಒಬ್ಬರು ಲೇಡಿ ಸೂಪರ್ ಸ್ಟಾರ್ ಕನಸಿನ ರಾಣಿ ಈ ರೀತಿ ಸಾಕಷ್ಟು ಬಿರುದುಗಳನ್ನು ಪಡೆದುಕೊಂಡಿದ್ದಾರೆ. ಒಂದು ಕಾಲದಲ್ಲಿ ಸಂಪ್ರದಾಯಿಕ ಹಿನ್ನೆಲೆಗಳನ್ನು ಒಳಗೊಂಡ ಸಿನಿಮಾಗಳನ್ನು ಮಾಡುತ್ತಿದ್ದ ಮಾಲಾಶ್ರೀ ದುರ್ಗಿ ಸಿನಿಮಾದ ನಂತರ ಕ್ಲಾಸ್ ಮತ್ತು ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುವುದಕ್ಕೆ ಆರಂಭಿಸುತ್ತಾರೆ.
ಸದ್ಯಕ್ಕೆ ಚಿತ್ರರಂಗದಿಂದ ದೂರ ಉಳಿದಿರುವಂತಹ ಮಾಲಾಶ್ರೀ ಅವರು ನಿರ್ಮಾಣ ಕೆಲಸದತ್ತ ಗಮನ ವಹಿಸುತ್ತಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಮಗಳನ್ನು ಚಿತ್ರ ರಂಗಕ್ಕೆ ಕರೆ ತರುವಂತಹ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಕಾರಣಕ್ಕಾಗಿಯೇ ದರ್ಶನ್ ಅವರ ಐವತ್ತಾರನೇ ಸಿನಿಮಾಗೆ ನಟಿ ಮಾಲಶ್ರೀ ಅವರ ಮಗಳು ಆಯ್ಕೆಯಾಗಿರುವುದು ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ದರ್ಶನ್ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೇನೆಂದರೆ ಮಾಲಾಶ್ರೀ ಅವರು ಮೂಲತಃ ತೆಲುಗಿನವರು ಹುಟ್ಟಿದ್ದು ಬೆಳೆದಿದ್ದು ಓದಿದ್ದು ಎಲ್ಲವೂ ಕೂಡ ಆಂಧ್ರಪ್ರದೇಶದಲ್ಲಿ. ಆದರೆ ಅವರಿಗೆ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಸಹಾಯ ಮಾಡಿದ್ದು ಹಾಗೂ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದಕ್ಕೆ ಅವಕಾಶಕೊಟ್ಟಿದ್ದು ನಮ್ಮ ಕರ್ನಾಟಕ ಅಂತಾನೆ ಹೇಳಬಹುದು. ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದು ದೊಡ್ಡ ಮನೆಯ ಕುಟುಂಬ.
ಆದರೆ ಕಳೆದ ಬಾರಿ ಮಾಲಾಶ್ರೀ ಅವರು ತೆಲುಗು ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು ಈ ಸಮಯದಲ್ಲಿ ಮಾತಿನ ಭರದಲ್ಲಿ ನನ್ನ ನನ್ನ ಮಗಳು ನಾಯಕ ನಟಿಯಾಗಿ ಎಂಟ್ರಿ ಆಗುವುದಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾಳೆ. ನನ್ನ ಮಗಳು ಒಂದು ವೇಳೆ ಸಿನಿಮಾರಂಗಕ್ಕೆ ಕಾಲಿಡುವುದಾದರೆ ಅದು ತೆಲುಗು ಇಂಡಸ್ಟ್ರಿ ಮೂಲಕವೇ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗದಲ್ಲಿ ನಾಯಕನಟಿಯಾಗಿ ಅಭಿನಯಿಸಿದರೆ ಹೆಚ್ಚು ಜನಕ್ಕೆ ರೀಚ್ ಆಗುತ್ತಾಳೆ, ದಕ್ಷಿಣ ಭಾರತದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಬಹುದು ಬಾಲಿವುಡ್ ನಲ್ಲಿಯೂ ಕೂಡ ಒಳ್ಳೆಯ ಹೆಸರನ್ನು ಪಡೆಯಬಹುದು ಅಂತ ಹೇಳಿಕೊಂಡಿದ್ದಾರೆ. ಈ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಇದನ್ನು ನೋಡಿದಂತಹ ಅಭಿಮಾನಿಗಳು ತೀವ್ರ ಆ.ಕ್ರೋ.ಶ.ವ.ನ್ನು ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ ನಿಮ್ಮ ಮಗಳನ್ನು ತೆಗೆದು ಇಂಡಸ್ಟ್ರಿಯಲ್ಲೇ ಪರಿಚಯ ಮಾಡಿ ನಮ್ಮ ದರ್ಶನ್ ಜೊತೆ ಯಾಕೆ ನಟನೆ ಮಾಡುವುದಕ್ಕೆ ಒಪ್ಪಿಕೊಂಡಿದ್ದೀರಿ ಆಂಧ್ರಪ್ರದೇಶಕ್ಕೆ ಹೋಗಿ ಅಲ್ಲಿನ ನಟನ ಜೊತೆಯೇ ನಿಮ್ಮ ಮಗಳನ್ನು ಹೀರೋಯಿನ್ ಮಾಡಿ ಎಂದು ಇದೀಗ ಹೋರಾಟ ನಡೆಸುತ್ತಿದ್ದಾರೆ. ಒಂದು ಕಡೆ ದರ್ಶನ್ ಅವರು ಅಪ್ಪು ಅವರ ವಿಚಾರವಾಗಿ ಹೇಳಿದ್ದ ಹೇಳಿಕೆಯಿಂದ ಸಾಕಷ್ಟು ತಲೆಯವಾಗಿ ಪರಿಣಮಿಸಿದೆ. ಇದೀಗ ಇದ್ದಕ್ಕಿದ್ದ ಹಾಗೆ ಮಾಲಾಶ್ರೀ ಅವರು ಎಂದೋ ಮಾತನಾಡಿದಂತಹ ವಿಡಿಯೋ ಈಗ ವೈರಲ್ ಆಗಿದ್ದು ಅದು ಕೂಡ ದರ್ಶನ್ ಅವರಿಗೆ ಬಾರಿ ತಲೆ ನೋವಾಗಿ ಪರಿಣಮಿಸಿದೆ. ಹಾಗಾಗಿ ದರ್ಶನ್ ಒಂದು ಕಡೆ ಅಪ್ಪು ಅಭಿಮಾನಿಗಳನ್ನು ಸಮಾಧಾನ ಪಡಿಸುವಂತಹ ಕೆಲಸದಲ್ಲಿ ನಿರತರಾಗಿದ್ದರೆ ಮತ್ತೊಂದು ಕಡೆ ಮಾಲಾಶ್ರೀ ಅವರು ಮಾಡಿದಂತಹ ಈ ಎಡವಟ್ಟನ್ನು ಯಾವ ರೀತಿಯಾಗಿ ಪರಿಹರಿಸಬೇಕು ಎಂಬುದರ ಬಗ್ಗೆ ಚಿಂತಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.