ಸ್ಯಾಂಡಲ್ ವುಡ್ ಅನ್ನು ಇಂಟರ್ನ್ಯಾಷನಲ್ ಮಟ್ಟಕ್ಕೆ ಕರೆದುಕೊಂಡು ಹೋದ ನಟ ಅಂದರೆ ಅದು ಯಶ್ ಅಂತಾನೆ ಹೇಳಬಹುದು ಮೊದಲೆಲ್ಲಾ ಕನ್ನಡ ಸಿನಿಮಾ ಇಂಡಸ್ಟ್ರಿ ಎಂದರೆ ಸಾಕು ಎಲ್ಲರೂ ಬಹಳ ಅಸಡ್ಡೆಯಿಂದ ನೋಡುತ್ತಿದ್ದರು. ಅಷ್ಟೇ ಅಲ್ಲದೆ ಈ ಸಿನಿಮಾ ರಂಗ ಉದ್ಧಾರ ಆಗುವುದಿಲ್ಲ ಅಂತ ಮಾತನಾಡಿಕೊಳ್ಳುತ್ತಿದ್ದರು ಈ ರೀತಿ ಮಾತನಾಡುತ್ತಿರುವಂತಹ ವ್ಯಕ್ತಿಗಳಿಗೆ ಕೆಲವೇ ದಿನಗಳಲ್ಲಿ ತಿರುಗೇಟು ನೀಡಿದಂತಹ ವ್ಯಕ್ತಿ ಅಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಂತಾನೇ ಹೇಳಬಹುದು. ಕೆಜಿಎಫ್ ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗು ನೋಡಬೇಕು ಆ ರೀತಿ ಮಾಡಿದರು. ಒಂದೇ ಒಂದು ಪ್ಯಾನ್ ಇಂಡಿಯಾ ಸಿನಿಮಾದಿಂದಾಗಿ ಕರ್ನಾಟಕದ ಸ್ಟಾರ್ ಆಗಿದ್ದಂತಹ ರಾಕಿ ಬಾಯ್ ಇದೀಗ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡರು.
ಇದು ಒಂದು ಕಡೆಯಾದರೆ ಈ ದಿನ ರಾಖಿ ಹಬ್ಬ ಹೆಣ್ಣುಮಕ್ಕಳಿಗೆ ಮತ್ತು ಸಹೋದರರಿಗೆ ಇದೊಂದು ಅವಿನಾಭಾವನಾ ಸಂಬಂಧದ ದಿನ ಅಂತಾನೆ ಹೇಳಬಹುದು. ತಮ್ಮ ನೆಚ್ಚಿನ ಅಣ್ಣನಿಗೆ ಅಥವಾ ತಮ್ಮನಿಗೆ ರಾಖಿಯನ್ನು ಕಟ್ಟಬೇಕು ಅಂತ ಮನೆಯಲ್ಲಿ ಇರುವಂತಹ ಅಕ್ಕ ಮತ್ತು ತಂಗಿ ಕಾತುರದಿಂದ ಕಾಯ್ದುಕೊಂಡಿರುತ್ತಾರೆ. ವರ್ಷಕ್ಕೆ ಒಮ್ಮೆ ಬರುವಂತಹ ಈ ರಾಖಿ ಹಬ್ಬದ ದಿನ ತಮ್ಮ ಅಣ್ಣನಿಗೆ ಆರತಿಯನ್ನು ತೆಗೆದು ಆತನಿಗೆ ಯಾವುದೇ ರೀತಿಯಾದಂತಹ ಕೆಟ್ಟ ದೃಷ್ಟಿ ಬೀಳದೆ ಇರಲಿ ಆತನ ಜೀವನದಲ್ಲಿ ಯಶಸ್ಸು ಎಂಬುದು ಸದಾ ಸಿಗಲಿ ಎಂದು ಹಾರೈಸಿ, ಒಳ್ಳೆಯ ಮನಸ್ಸಿನಿಂದ ಆರತಿಯನ್ನು ಎತ್ತಿ ಹಣೆಗೆ ಸಿಂಧೂರವನ್ನು ಇಟ್ಟು ಕೈಗೆ ಕಟ್ಟುವಂತಹ ಕಂಕಣವನ್ನೇ ನಾವು ರಾಖಿ ಹಬ್ಬ ಎಂದು ಆಚರಿಸುತ್ತೇವೆ.
ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರ ಮನೆಯಲ್ಲೂ ಕೂಡ ಇದೇ ರೀತಿಯಾದಂತಹ ರಾಖಿ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರಿಗೆ ಒಬ್ಬ ಸಹೋದರಿ ಇದು ಆಕೆಯ ಹೆಸರು ನಂದಿನಿ ಅಂತ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅವರ ಸಹೋದರಿ ನಂದಿನಿ ಅಂದರೆ ಬಹಳ ಪ್ರೀತಿ. ಈಗಾಗಲೇ ನಂದಿನಿ ಅವರಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ ಮೊದಲು ವಿದೇಶದಲ್ಲಿ ನೆಲೆಸಿದ್ದಂತಹ ನಂದಿನಿ ಅವರು ಇದೀಗ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ನಂದಿನಿ ಅವರ ಪತಿ ಸಾಫ್ಟ್ವೇರ್ ಇಂಜಿನಿಯರ್ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದರು ಆದರೆ ಯಶ್ ಅವರಿಗೆ ತಮ್ಮ ತಂಗಿಯ ಮೇಲೆ ಇರುವಂತಹ ಪ್ರೀತಿಯಿಂದಾಗಿ ವಿದೇಶಕ್ಕೆ ಕಳುಹಿಸಲು ಇಷ್ಟ ಇಲ್ಲದೆ ಬೆಂಗಳೂರಿನಲ್ಲಿಯೇ ಸ್ವಂತ ಕಂಪನಿ ಒಂದನ್ನು ತೆರೆಸಿ ಅಲ್ಲಿಯೇ ಕೆಲಸ ಮಾಡಲು ಮಾರ್ಗದರ್ಶನವನ್ನು ಸೂಚಿಸಿದ್ದಾರೆ.
ರಾಖಿ ಹಬ್ಬದ ದಿನ ನಂದಿನಿ ಯಶ್ ಅವರ ಮನೆಗೆ ಬಂದು ತನ್ನ ಪ್ರೀತಿಯ ಅಣ್ಣನಿಗೆ ಸಿಂಧೂರವನ್ನು ಇಟ್ಟು ಕೈಗೆ ರಾಖಿಯನ್ನು ನಿನ್ನ ಮುಂದಿನ ಸಿನಿಮಾ ಜರ್ನಿ ಇನ್ನಷ್ಟು ಉನ್ನತ ಮಟ್ಟಕ್ಕೆ ಹೋಗಲಿ ಎಂದು ಹಾರೈಸಿದ್ದಾರೆ. ಸಾಮಾನ್ಯವಾಗಿ ನಮ್ಮಲ್ಲಿ ರಾಖಿ ಕಟ್ಟಿದಂತಹ ಸಹೋದರಿಯರಿಗೆ ಏನಾದರೂ ಉಡುಗೊರೆ ಕೊಡುವಂತಹ ಪದ್ಧತಿ ಇದೆ. ಈ ಬಾರಿ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ತಂಗಿಗೆ ವಿಶೇಷವಾದಂತಹ ಉಡುಗೊರೆಯಿಂದ ನೀಡಿದ್ದಾರೆ ಹೌದು ತಮ್ಮ ಪ್ರೀತಿಯ ತಂಗಿಗಾಗಿ ದುಬಾರಿ ಬೆಲೆಯ ಆಭರಣ ಒಂದನ್ನು ಖರೀದಿ ಮಾಡಿರುವಂತಹ ಯಶ್ ಅವರು ತಮ್ಮ ತಂಗಿಗೆ ಅದನ್ನು ರಕ್ಷಾಬಂಧನದ ಉಡೂಗೊರೆಯಾಗಿ ನೀಡಿದ್ದಾರೆ. ಈ ಆಭರಣದ ಬೆಲೆಯು ಬೇರೊಬ್ಬರಿ ಒಂದು ಕೋಟಿ ರೂಪಾಯಿ ಡೈಮೆಂಡ್ ನೆಕ್ಲೆಸ್ ನೀಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ಉತ್ತರಿಸಿ.
