ಪರಮಾತ್ಮ ನಮ್ಮೆಲ್ಲರನ್ನು ಬಿಟ್ಟು ಹೋಗಿ ಒಂಬತ್ತು ತಿಂಗಳಾಗಿದೆ ಆದರೂ ಕೂಡ ಆತನ ನಾಮಸ್ಮರಣೆಯನ್ನು ನಾವು ಒಂದು ದಿನವೂ ಕೂಡ ತಪ್ಪಿಸಿಲ್ಲ. ಈಗಾಗಲೇ ಸಾಕಷ್ಟು ಕಾರ್ಯಕ್ರಮ ಹಬ್ಬ ಹರಿದಿನ ಪೂಜೆ ಪುನಸ್ಕಾರ ಮುಂತಾದ ಎಲ್ಲಾ ಧಾರ್ಮಿಕ ಮತ್ತು ಶೈಕ್ಷಣಿಕ ಸಾಮಾಜಿಕ ಕಾರ್ಯಕ್ರಮದಲ್ಲೂ ಕೂಡ ಅಪ್ಪು ಅವರನ್ನು ನಾವು ಸ್ಮರಿಸಿಕೊಂಡಿದ್ದೇವೆ. ಅದೇ ರೀತಿಯಾಗಿ ಅಣ್ಣ ಮತ್ತು ತಂಗಿಯ ಸಂಬಂಧವನ್ನು ಎತ್ತಿ ತೋರಿಸುವಂತಹ ರಾಖಿ ಹಬ್ಬದಲ್ಲಿಯೂ ಕೂಡ ಇದೀಗ ಅಪ್ಪು ಅವರ ನಾಮಸ್ಮರಣೆ ಮಾಡುತ್ತಿರುವುದು ನಿಜಕ್ಕೂ ಕೂಡ ವಿಶೇಷ ಅಂತಾನೆ ಹೇಳಬಹುದು. ಅಪ್ಪು ಅವರ ಫೋಟೋ ಎಲ್ಲಾ ಕಡೆ ರಾರಾಜಿಸುತ್ತಿದೆ ಅದೇ ಮಾದರಿಯಲ್ಲೇ ಇದೀಗ ರಾಖಿಯ ಒಳಗೂ ಕೂಡ ಅಪ್ಪು ಅವರ ಭಾವಚಿತ್ರ ಇರುವಂತಹ ಮತ್ತು ಅಪ್ಪು ಅವರ ಪ್ರತಿಮೆ ಇರುವಂತಹ ರಾಖಿಗಳು ಮಾರುಕಟ್ಟೆಗೆ ಬಂದಿವೆ.
ತಮ್ಮ ನೆಚ್ಚಿನ ಫೋಟೋ ಇರುವಂತಹ ರಾಖಿಯನ್ನು ನೋಡಿದಂತಹ ಅಭಿಮಾನಿಗಳು ಇದನ್ನು ಖರೀದಿ ಮಾಡುವುದಕ್ಕೆ ಮುಗಿಬಿದ್ದಿದ್ದಾರೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡನ್ನು ಕೂಡ ಸೃಷ್ಟಿ ಮಾಡಿದೆ. ತಂಗಿಯರು ಮತ್ತು ಅಕ್ಕಂದಿರು ತಮ್ಮ ನೆಚ್ಚಿನ ಅಣ್ಣನಿಗೆ ಮತ್ತು ತಮ್ಮನಿಗೆ ವರ್ಷಕ್ಕೆ ಒಮ್ಮೆ ಬರುವಂತಹ ರಾಖಿ ಹಬ್ಬದ ದಿನ ರಕ್ಷಾಬಂಧನವನ್ನು ಕಟ್ಟುವ ಮೂಲಕ ಆತನ ಜೀವನ ಸುಖವಾಗಿರಲಿ ಆತನಿಗೆ ಯಾವುದೇ ರೀತಿಯಾದಂತಹ ತೊಂದರೆ ಬರದಿರಲಿ ಎಂದು ರಾಖಿಯನ್ನು ಕಟ್ಟುತ್ತಾರೆ. ಇಂತಹ ಅವಿನಾ ಬಾವನ ಸಂಬಂಧದಲ್ಲಿ ಅಪ್ಪು ಅವರು ಕೂಡ ಇದೀಗ ಜೊತೆಗೂಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಸಂತೋಷವಾಗುತ್ತದೆ.
ಅಪ್ಪು ಅವರು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೆ ಇದ್ದರೂ ಕೂಡ ಮಾನಸಿಕವಾಗಿ ಯಾವುದಾದರೂ ಒಂದಲ್ಲ ಒಂದು ರೂಪದಲ್ಲಿ ನಮ್ಮ ಜೊತೆ ಇರುತ್ತಾರೆ ಎಂಬುದಕ್ಕೆ ಇದೀಗ ಈ ರಾಖಿಯೇ ಸಾಕ್ಷಿ ಅಂತ ಹೇಳಬಹುದು. ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವಂತಹ ಅಪ್ಪು ಇರುವಂತಹ ರಾಖಿಗೆ ಈಗಾಗಲೇ ಸಾಕಷ್ಟು ಜನ ಖರೀದಿ ಮಾಡಿ ತಮ್ಮ ಅಣ್ಣಂದಿರಿಗೆ ಮತ್ತು ತಮ್ಮಂದಿರಿಗೆ ಕಟ್ಟಿದ್ದಾರೆ. ಇನ್ನು ಯುವಕರಿಗಂತು ರಾಕಿ ಹಬ್ಬ ಬಂತು ಅಂದರೆ ಎಲ್ಲಿಂದದ ಸಂಭ್ರಮ ಮತ್ತು ಸಡಗರ ಏಕೆಂದರೆ ತಮ್ಮ ಮುದ್ದಿನ ತಂಗಿ ಅಥವಾ ಅಕ್ಕ ತನಗಾಗಿ ತನ್ನ ಯಶಸ್ವಿಗಾಗಿ ದೇವರಲ್ಲಿ ಪ್ರಾರ್ಥಿಸಿ ರಕ್ಷಾಬಂಧನವನ್ನು ಕಟ್ಟುತ್ತಾಳೆ ಹಾಗಾಗಿ ಅಪ್ಪು ಅಭಿಮಾನಿಗಳು ತಮ್ಮಿಷ್ಟದ ನಟನ ರಾಖಿಯೇ ಕಟ್ಟಿಸಿಕೊಳ್ಳುತ್ತಿರುವುದರಿಂದ ಅಪ್ಪು ಅಭಿಮಾನಿಗಳಿಗೆ ಇದೊಂದು ಸಂತಸದ ವಿಚಾರವಾಗಿದೆ.
ನೀವು ಕೂಡ ಈ ವಿಭಿನ್ನವಾದ ರಾಖಿಯನ್ನು ಒಮ್ಮೆ ನೋಡಿ ಎಷ್ಟು ಮನಮೋಹಕವಾಗಿದೆ ಅಂತ ಅಪ್ಪು ಅವರ ಭಾವಚಿತ್ರವನ್ನು ನೋಡುತ್ತಿದ್ದ ಹಾಗೆ ನಮ್ಮ ಮನಸ್ಸಿನಲ್ಲಿ ಒಂದು ರೀತಿಯಾದಂತಹ ಆನಂದ ಉಂಟಾಗುತ್ತದೆ. ಅಷ್ಟೇ ಅಲ್ಲದೆ ನಮ್ಮ ಅರಿವಿಗೆ ಬರದೆ ಕಣ್ಣೀರು ಕೂಡ ಬರುತ್ತದೆ ಪರಮಾತ್ಮನನ್ನು ಕಳೆದುಕೊಂಡು ನಿಜಕ್ಕೂ ಕೂಡ ನಾವು ಬಹಳನೇ ಪರಿತಪಿಸುವಂತಹ ಪರಿಸ್ಥಿತಿ ಎದುರಾಗಿದೆ. ಒಂದು ವೇಳೆ ಅಪ್ಪು ಬದುಕಿದ್ದರೆ ಇಂದು ಈ ರಾಖಿ ಹಬ್ಬವನ್ನು ಎಷ್ಟು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದರು ಎಂಬುದನ್ನು ನೀವೇ ಒಂದು ಬಾರಿ ಊಹೆ ಮಾಡಿಕೊಳ್ಳಿ ನಿಜಕ್ಕೂ ಮನಸ್ಸು ಒಂದು ಕ್ಷಣ ವಿಚಲಿತವಾಗುತ್ತದೆ. ಜೊತೆಗಿರದ ಜೀವ ಎಂದೆಂದಿಗೂ ಕೂಡ ಜೀವಂತ ಎಂಬ ಮಾತನ್ನು ನಾವು ಅರ್ಥೈಸಿಕೊಂಡು ಇದೀಗ ಸಹ ಬಾಳ್ವೆಯನ್ನು ನಡೆಸಲೇಬೇಕಾದಂತಹ ಅನಿವಾರ್ಯ ಎದುರಾಗಿದೆ. ಆದರೂ ಕೂಡ ಮಾರುಕಟ್ಟೆಯಲ್ಲಿ ದೊರೆಯುತ್ತಿರುವಂತಹ ಅಪ್ಪು ಇರುವ ರಾಖಿಯನ್ನು ನೋಡಿದರೆ ಮನಸ್ಸಿಗೆ ಒಂದು ರೀತಿಯಾದಂತಹ ಆನಂದ ದೊರೆಯುತ್ತದೆ. ಈ ರಾಖಿಯನ್ನು ನೋಡಿದರೆ ನಿಮ್ಮ ಮನಸ್ಸಿನಲ್ಲಿ ಬೀರುವಂತಹ ಅಭಿಪ್ರಾಯವೇನು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ