ಬಿಗ್ ಬಾಸ್ ಮನೆಯ ಆರ್ಯವರ್ಧನ್ ಗುರೂಜಿಗೆ 22 ವರ್ಷದ ಸಾನ್ಯಾ ಲವ್ ಪ್ರಪೋಸ್ ಮಾಡಿದ್ದಾಳೆ, ಅಯ್ಯೋ ಈ ಹುಡುಗಿಗೆ ಅದೇನು ಬಂತೋ ನೋಡಿ.

ಆಗಸ್ಟ್ 8ನೇ ತಾರೀಕು ಓಟಿಟಿ ಯಲ್ಲಿ ಮಿನಿ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ ಈ ಮಿನಿ ಬಿಗ್ ಬಾಸ್ ಓಟಿಟಿಯಲ್ಲಿ 16 ಜನ ಕಂಟೆಸ್ಟೆಂಟ್ಗಳು ಭಾಗವಹಿಸಿದ್ದಾರೆ. ಅದರ ಪೈಕಿ ಸಂಖ್ಯಾಶಾಸ್ತ್ರದ ಪ್ರಾವೀಣ್ಯತೆ ಪಡೆದಂತಹ ಆರ್ಯವರ್ಧನ್ ಗುರೂಜಿ ಅವರು ಮೊದಲನೇ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ಕಾಲಿಟ್ಟ ಇವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುವುದು ನಿಮಗೆ ತಿಳಿದೇ ಇದೆ. ನೆನ್ನೆಯ ಎಪಿಸೋಡ್ ನಲ್ಲಿ ಉದಯ್ ಜೊತೆಗೆ ಟಾಸ್ಕ್ ಮಾಡುವಂತಹ ಸಂದರ್ಭದಲ್ಲಿ ಕಿರಿಕ್ ಮಾಡಿಕೊಂಡು ಜಗಳವಾಡಿಕೊಂಡಿದ್ದರು. ಇದಕ್ಕೂ ಹಿಂದಿನ ದಿನ ತಮ್ಮ ಕೇಶ ಮುಂಡನೆ ಮಾಡುವುದರ ಮೂಲಕ ಹೊಸ ಲುಕ್ ನೊಂದಿಗೆ ಕಾಣಿಸಿಕೊಂಡರು.

ಆದರೆ ಇದೀಗ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ ಹೌದು ಈ ವಿಚಾರ ಕೇಳುತ್ತಿದ್ದ ಹಾಗೆ ಪ್ರೇಕ್ಷಕರ ಎಲ್ಲರು ಕೂಡ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಅಷ್ಟಕ್ಕೂ ಇವರಿಗೆ ಲವ್ ಪ್ರಪೋಸ್ ಮಾಡಿದ್ದು ಬೇರೆ ಯಾರು ಅಲ್ಲ ಪುಟ್ಟಗೌರಿ ಮದುವೆಯ ಖ್ಯಾತಿಯ ಬಾಲ ನಟಿಯಾಗಿ ಅಭಿನಯಿಸಿದಂತಹ 22 ವರ್ಷದ ಸಾನ್ಯಾ ಅಯ್ಯರ್ ಅವರು ಲವ್ ಯು ಗುರೂಜಿ ಅಂತ ಲವ್ ಪ್ರಪೋಸ್ ಮಾಡಿದ್ದಾರೆ. ಸಾನಿಯಾ ಅಯ್ಯರ್ ಲವ್ ಪ್ರಪೋಸ್ ಮಾಡಿದ್ದನ್ನು ಕೇಳಿದಂತಹ ಗುರೂಜಿ ಅವರೇ ಒಂದು ಕ್ಷಣ ಕನ್ಫ್ಯೂಸ್ ಆಗುತ್ತಾರೆ. ಅಷ್ಟಕ್ಕೂ ಇವರಿಬ್ಬರ ನಡುವೆ ಇಂತಹ ಸಂಭಾವನೆ ಬರುವುದಕ್ಕೆ ಕಾರಣವಾದರೂ ಏನು ಎಂಬುದನ್ನು ನೋಡುವುದಾದರೆ.

ಮನೆಯಲ್ಲಿ ಇರುವಂತಹ ಸದಸ್ಯರೆಲ್ಲರೂ ಕೂಡ ಜಾಲಿ ಮೂಡ್ ನಲ್ಲಿ ಗೇಮ್ ಒಂದನ್ನು ಆಡುತ್ತಾರೆ ಆ ಸಮಯದಲ್ಲಿ ಮನೆಯಲ್ಲಿ ಇದ್ದಂತಹ ಇತರೆ ಕಂಟೆಸ್ಟೆಂಟ್ಗಳು ಗುರೂಜಿಯವರನ್ನು ನೀವು ಸ್ವಲ್ಪ ರೋಮ್ಯಾಂಟಿಕ್ ಆಗಿ ಮಾತನಾಡಬೇಕು ಅಂತ ಕೇಳಿಕೊಳ್ಳುತ್ತಾರೆ. ಆಗ ಗುರೂಜಿ ಅವರು ನಾನು ಮಾತನಾಡುತ್ತೇನೆ ಆದರೆ ಅದನ್ನು ತಡೆದುಕೊಳ್ಳುವಂತಹ ಶಕ್ತಿ ನಿಮಗೆ ಇರುವುದಿಲ್ಲ ಅಂತ ಹೇಳಿದ್ದಾರೆ. ಆದರೂ ಕೂಡ ಪರವಾಗಿಲ್ಲ ನೀವು ಮಾತನಾಡಿ ಅಂತ ಕಂಟೆಸ್ಟೆಂಟ್ಗಳು ಕೇಳಿಕೊಂಡಿದ್ದಾರೆ ಆಗ ಮಾತುಗಳನ್ನು ಆರಂಭಿಸಿದಂತಹ ಗುರೂಜಿ. “ಸಖತ್ ಆಗಿ ಹೇಳುತ್ತೇನೆ, ಕಳೆದು ಹೋಗುತ್ತೀರಿ ಆರಾಮವಾಗಿರಿ, ನೀವೆಲ್ಲ ಬೆಚ್ಚಿ ಬೀಳುತ್ತೀರಿ, ಆಗಿದ್ದು ಆಗಲಿ, ಮಾತನಾಡುತ್ತೇನೆ ಎಂದಿದ್ದಾರೆ” ಇದಕ್ಕೆ ಪ್ರತಿಕ್ರಿಯೆ ನೀಡಿದಂತಹ ಸಾನಿಯಾ ಅಯ್ಯರ್ ಕೂಡ ನೀವು ಬಿಗ್ ಬಾಸ್ ಮನೆಗೆ ಮೊದಲ ಕಂಟೆಸ್ಟೆಂಟ್ ಆಗಿ ಬಂದಿದ್ದೀರಾ ಹಾಗಾಗಿ ನನ್ನ ಮನಸ್ಸಿಗೂ ಕೂಡ ನೀವೆ ಮೊದಲು ಕಾಲಿಡಬೇಕು ಎಂದಿದ್ದಾಳೆ.

ಸಾನ್ಯಾ ಮಾತುಗಳನ್ನು ಕೇಳಿದಂತಹ ಆರ್ಯವರ್ಧನ್ ಗುರೂಜಿಯವರು ಈ ಮನೆಗೆ ಬಂದೆ ಈ ಮನೆಯಲ್ಲಿ ದೀಪ ಹಚ್ಚುವವರಿಲ್ಲ, ಅಡುಗೆ ಮಾಡುವವರಿಲ್ಲ ಆ ಸ್ಥಾನ ನಿಮಗೆ ಕೊಡುತ್ತೇನೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದಂತಹ ಸಾನಿಯಾ ಅಯ್ಯರ್, ನಾನೇನು ಕೆಲಸದವಳ ಗುರೂಜಿ ಎಂದು ತಮಾಷೆ ಮಾಡಿದ್ದಾಳೆ. ಆರ್ಯವರ್ಧನ್ ಉತ್ತರಿಸಿ ಬೇರೆ ತರ ಪ್ರಶ್ನೆಯನ್ನು ಕೇಳಿ ಇದು ಬೇಡ ಎಂದರೆ ಸಾನ್ಯಾ ಅಯ್ಯರ್ ನೀವು ಕಂದನ ತರ ಇದ್ದಿರಿ ಬಹಳ ಮುದ್ದಾಗಿದ್ದೀರಾ, ನನ್ನ ಬಾಳಲ್ಲಿ ಬರುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅರೆ ವರ್ಧನ್ ಗುರೂಜಿ ಅವರು ನಾನು ನೋಡುವುದಕ್ಕೆ ಮುದ್ದಾಗಿ ಮತ್ತು ಕಂದನ ಮಾದರಿಯಲ್ಲಿ ಇದ್ದೀನಿ ಅಲ್ವಾ ಅದಕ್ಕೆ ನನಗೆ ಎರಡು ದಿನ ಸಮಯಾವಕಾಶ ಕೊಡು ನಿನ್ನನ್ನು ಮದುವೆಯಾಗಬೇಕೋ ಅಥವಾ ಬೇಡ ಎಂಬುದನ್ನು ನಾನು ನಿರ್ಧಾರ ಮಾಡಬೇಕು ಎಂದು ಗುರೂಜಿಯವರು ಹೇಳಿದ್ದಾರೆ. ಈ ಮಾತನ್ನು ಕೇಳಿದಂತಹ ಮನೆಯವರೆಲ್ಲರೂ ಕೂಡ ಒಂದು ಕ್ಷಣ ನಕ್ಕಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ನಿಮ್ಮ ಪ್ರಕಾರ 22 ವರ್ಷದ ಸಾನ್ಯಾ ಅಯ್ಯರ್ 45 ವರ್ಷದ ಗುರೂಜಿಯವರನ್ನು ಮದುವೆಯಾದರೆ ಹೇಗಿರುತ್ತದೆ ಹೇಳಿ.?

Leave a Comment

WhatsApp Group Join Now
Telegram Group Join Now