ನಟಿ ನಿವೇದಿತಾ ಗೌಡ ಅವರು ಸದ್ಯಕ್ಕೆ ಕಿರುತೆರೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ ಸದಾಕಾಲ ಯಾವುದಾದರೂ ಒಂದು ವಿಚಾರಕ್ಕೆ ಹೆಚ್ಚು ಟ್ರೋಲ್ ಆಗುವಂತಹ ನಿವೇದಿತ ಗೌಡ ಅವರು ಈ ಬಾರಿ ಗಂಡು ವೇಷ ಧರಿಸಿ ಎಷ್ಟು ಬೇಕಾದರೂ ಕುಡಿಯಿರಿ ಅಂತ ಚಂದನ್ ಶೆಟ್ಟಿ ಅವರು ಸಿದ್ಧಪಡಿಸಿರುವಂತಹ ಆಡೊಂದಕ್ಕೆ ರೀಲ್ಸ್ ಮಾಡಿದ್ದಾರೆ. ನಿವೇದಿತಾ ಗೌಡ ಅವರು ಈ ರೀತಿ ಪುರುಷನ ವೇಷ ಹಾಕಿರುವುದನ್ನು ನೋಡಿದರೆ ಯಾರಿಂದಲೂ ಕೂಡ ಇದು ನಿವೇದಿತಾ ಗೌಡ ಅಂತ ಕಂಡು ಹಿಡಿಯುವುದಕ್ಕೆ ಸಾಧ್ಯವಿಲ್ಲ ಆ ರೀತಿ ಕಾಣುತ್ತಾರೆ. ತನ್ನ ದಿನದ ಬಹುತೇಕ ಸಮಯವನ್ನು ಸೋಶಿಯಲ್ ಮೀಡಿಯಾದಲ್ಲಿ ಕಳೆಯುವಂತಹ ನಟಿ ನಿವೇದಿತ ಗೌಡ ಅವರು ಇದೀಗ ಹೊಸ ಹಾಡಿಗೆ ಹೆಜ್ಜೆಯನ್ನು ಹಾಕಿರುವುದನ್ನು ನೋಡಿದಂತಹ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಇದೇನು ನಿವೇದಿತಾ ಗೌಡ ಅವರ ಈ ಅವತಾರ ಎಂದು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ. ಆದರೆ ನಿವೇದಿತಾ ಗೌಡ ಅವರ ಅಭಿಮಾನಿಗಳು ಮಾತ್ರ ತಮ್ಮ ಹೊಸ ಕಾನ್ಸೆಪ್ಟನ್ನು ಮೆಚ್ಚಿಕೊಂಡಿದ್ದಾರೆ. ಸದ್ಯಕ್ಕೆ ರಾಜ ರಾಣಿ ಕಾರ್ಯಕ್ರಮದ ನಂತರ ಗಿಚ್ಚಿಗಿಲಿಗಿಲಿ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ 2022ರ ಮಿಸಸ್ ಇಂಡಿಯಾ ಚಾಂಪಿಯನ್ಶಿಪ್ ನಲ್ಲಿ ಕೂಡ ಭಾಗವಹಿಸಿದ್ದರು ಈ ಒಂದು ಪ್ರೋಗ್ರಾಮ್ ನಲ್ಲಿ ಚಾಯ್ಸ್ ಆಫ್ ಪೀಪಲ್ ಎಂಬ ಪ್ರಶಸ್ತಿಯನ್ನು ಮುಡುಗೇರಿಸಿಕೊಂಡರು ನಿಜಕ್ಕೂ ಇದು ಎಮ್ಮೆ ಪಡುವಂತಹ ವಿಚಾರವೇ. ಆದರೂ ಕೂಡ ನಿವೇದಿತಾ ಗೌಡ ಅವರು ಆಗಾಗ ಇನ್ನು ಚಿಕ್ಕ ಹುಡುಗಿಯ ಮಾದರಿಯಲ್ಲೇ ಆಡುವುದನ್ನು ನೋಡಿದಂತಹ ನೆಟ್ಟಿದರು ಮದುವೆಯಾಗಿ ಎರಡು ವರ್ಷವಾದರೂ ಕೂಡ ಈಕೆಗೆ ಇನ್ನೂ ಬುದ್ಧಿ ಬಂದಿಲ್ಲವಾ ಎಂದು ಕಾಮೆಂಟ್ ಹಾಕುತ್ತಿದ್ದಾರೆ.
ನಿವೇದಿತಾ ಗೌಡ ಅವರು ಮಾತ್ರ ಇದ್ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳದೆ ತವಾಯಿತು ತಮ್ಮ ಖುಷಿಯಾಯಿತು ಅಂತ ಸದ್ಯಕ್ಕೆ ಕಾಲ ಕಳೆಯುತ್ತಿದ್ದಾರೆ. ತೆಲುಗುನಿಂದ ಫಿಲಂ ಆಫರ್ ಬಂದಿದೆಯಂತೆ ಹೌದು ಕನ್ನಡದಲ್ಲಿ ಯಾವ ಸಿನಿಮಾಗೂ ಕೂಡ ನಿವೇದಿತ ಗೌಡ ಅವರನ್ನು ಆಯ್ಕೆ ಮಾಡಿಲ್ಲ ಆದರೆ ಮೊಟ್ಟಮೊದಲ ಬಾರಿಗೆ ತೆಲುಗು ಚಿತ್ರರಂಗದಿಂದ ಸಿನಿಮಾ ಒಂದಕ್ಕೆ ನಾಯಕ ನಟಿಯಾಗಿ ಅಭಿನಯಿಸುವಂತೆ ಆಫರ್ ಬಂದಿದೆಯಂತೆ. ಸದ್ಯಕ್ಕೆ ಈ ಆಫರ್ ಅನ್ನು ಸ್ವೀಕರಿಸಿದಂತಹ ನಿವೇದಿತಾ ಗೌಡ ಅವರು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರಂತೆ. ಆದರೆ ನಿವೇದಿತಾ ಗೌಡ ಅವರು ಮಾತ್ರ ಎಲ್ಲಿಯೂ ಈ ಸಿನಿಮಾದ ವಿಚಾರವನ್ನು ರಿವೀಲ್ ಮಾಡಿಲ್ಲ ಹೀರೋ ಯಾರು ಯಾವ ಸಿನಿಮಾ ಚಿತ್ರಕಥೆ ಹೇಗಿರಲಿದೆ ಎಂಬುದನ್ನು ಹೇಳಿಕೊಂಡಿಲ್ಲ.
ಆದರೆ ತಾವು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿರುವುದರ ಬಗ್ಗೆ ಮಾತ್ರ ಚಿಕ್ಕದೊಂದು ಸುಳಿವನ್ನು ನೀಡುತ್ತಿದ್ದಾರೆ, ಇದರ ಬಗ್ಗೆ ಕೆಲವು ನೆಟ್ಟಿಗರು ಪ್ರಶ್ನೆಯನ್ನು ಕೇಳಿದರೂ ಕನ್ನಡವನ್ನು ಬಿಟ್ಟು ಈ ರೀತಿ ತೆಲುಗಿಗೆ ಹೋಗಲು ಕಾರಣವೇನು ಅಂತ ಕೇಳಿದರು. ಈ ಪ್ರಶ್ನೆಗೆ ಉತ್ತರ ನೀಡಿದಂತಹ ನಿವೇದಿತ ಗೌಡ ಅವರು ಕಿರುತೆರೆಯಲ್ಲಿ ಮಾತ್ರ ನನಗೆ ಹೆಚ್ಚು ಆಫರ್ ಬಂದಿದೆ ಬೆಳ್ಳಿತರೆಯಲ್ಲಿ ಇಲಿಯವರೆಗೂ ಕೂಡ ಯಾವುದೇ ರೀತಿಯ ಆಫರ್ ಬಂದಿಲ್ಲ. ಹಾಗಾಗಿ ನಾನು ತೆಲುಗು ಚಿತ್ರರಂಗಕ್ಕೆ ಹೋಗುತ್ತಿದ್ದೇನೆ ಅಂತ ಹೇಳಿದ್ದಾರೆ ಇದೆಲ್ಲ ಒಂದು ಕಡೆಯಾದರೆ ಇದೀಗ ನಿವೇದಿತಾ ಗೌಡ ಅವರು ಮಾಡಿದಂತಹ ಈ ರೀಲ್ಸ್ ಅನ್ನು ನೋಡಿದಂತಹ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಈ ವಿಡಿಯೋವನ್ನು ಒಮ್ಮೆ ನೀವು ನೋಡಿ ನಿವೇದಿತಾ ಅವರ ಈ ಅವತಾರವನ್ನು ನೋಡಿದರೆ ನಿಮಗೆ ಏನನಿಸುತ್ತದೆ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.