Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಇವತ್ತು ಓಪನ್ ಆಗಿ ಮಾತಾಡ್ತಿನಿ ನಟ ಯಶ್

Posted on August 13, 2022 By Kannada Trend News No Comments on ಇವತ್ತು ಓಪನ್ ಆಗಿ ಮಾತಾಡ್ತಿನಿ ನಟ ಯಶ್

ಮೈಸೂರಿನಲ್ಲಿ ಮೈಸೂರು ವಿವಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಯುವ ಜನ ಮಹೋತ್ಸವ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಭಾಗವಹಿಸಿ ಯುವಪೀಳಿಗೆಯನ್ನು ಉದ್ದೇಶಿಸಿ ತಮ್ಮ ನೇರ ನುಡಿಗಳಿಂದ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡುತ್ತಾರೆ. ಮಹಾರಾಜ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಯಶ್ ಅವರನ್ನು ನೋಡಲು ವಿದ್ಯಾರ್ಥಿಗಳು ಮುಗಿಬಿದ್ದು ಕೂಗಾಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸುತ್ತಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಅವರು ಕಾಲೇಜು ದಿನಗಳಲ್ಲಿ ನಾನೇನು ತಂದೆ-ತಾಯಿಗಳು ಇಚ್ಛೆ ಪಡುವ ರೀತಿಯಲ್ಲಿ ಜವಾಬ್ದಾರಿಯುತ ಮಗನಾಗಿರದೆ ಅಂದಿನ ದಿನಗಳಲ್ಲಿ ಅಲ್ಲಿ ಇಲ್ಲಿ ಸ್ಟಂಟ್ ಮಾಡುತ್ತ ಹುಡುಗರ ಜೊತೆ ಪಡುವಾರಳ್ಳಿ, ಗಂಗೋತ್ರಿ, ಒಂಟಿಕೊಪ್ಪಲ್, ಕಾಳಿದಾಸ ರಸ್ತೆಗಳಲ್ಲಿ ಅಲೆಯುತ್ತಿದ್ದೆ ಎಂದು ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಇಂದು ಅದೇ ಊರಿನಲ್ಲಿ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ. ದೇಶದ ಧ್ವಜ ಹಿಡಿಯುವ ಪುಣ್ಯದ ಕಾರ್ಯಕ್ರಮ ಇದಾಗಿದ್ದು ವಿದ್ಯಾರ್ಥಿಗಳ ಎದುರು ನಾನು ಹೆಚ್ಚು ಮಾತನಾಡಲು ಬಯಸುತ್ತೇನೆ ಇದಕ್ಕೆ ಕಾರಣ ವಿದ್ಯಾರ್ಥಿ ಜೀವನದಲ್ಲಿ ಅನೇಕ ಗೊಂದಲಗಳಿರುತ್ತವೆ ಇಂತಹ ಗೊಂದಲಗಳನ್ನು ದಾಟಿ ಬಂದಿರುವ ನಾನು ನಿಮ್ಮೆದುರು ಮಾತನಾಡಲು ಬಯಸುತ್ತೇನೆ ಎಂದು ಮಾತನ್ನು ಆರಂಭಿಸಿದ ಯಶ್ ಅವರು ವಿದ್ಯಾರ್ಥಿ ಜೀವನದಲ್ಲಿ ನಾನೂ ಸಹ ಬೇಜವಾಬ್ದಾರಿಯಿಂದ ಇದ್ದುದಲ್ಲದೆ ಇದೇ ಊರಿನಲ್ಲಿ ಬೆಳೆದ ನಾನು ಇಂದು ಈ ಮಟ್ಟಕ್ಕೆ ನಿಲ್ಲಲು ಕಾರಣ ಸರಳ ಬದಲಾವಣೆಗಳು ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಎಲ್ಲವನ್ನೂ ಬಿಟ್ಟು ತಪಸ್ಸು ಮಾಡಬೇಕು ಎಂದುಕೊಳ್ಳುತ್ತೇವೆ ಆದರೆ ಸಣ್ಣ ಸಣ್ಣ ಬದಲಾವಣೆಗಳಿಂದ ನಾವು ಏನನ್ನಾದರೂ ಸಾಧಿಸಬಹುದು ಇದಕ್ಕೆ ತಕ್ಕಂತೆ ಆತ್ಮವಿಶ್ವಾಸ ಇರಬೇಕು ಎಂದು ಮುಂದುವರೆಸಿ ತಮ್ಮ ಕೆಜಿಎಫ್ ಸಿನಿಮಾ ಕುರಿತಾಗಿ ಒಂದಿಷ್ಟು ಮಾತುಗಳನ್ನ ಆಡುತ್ತಾರೆ.

https://youtu.be/sQNt9yzakNk

ಇಂದು ಕನ್ನಡ ಸಿನಿಮಾ ಇಷ್ಟು ದೊಡ್ಡ ಯಶಸ್ಸನ್ನು ಗಳಿಸುತ್ತದೆ ಎಂದು ಯಾರಾದರೂ ಯೋಚಿಸಿದ್ದಿರಾ?. ಆದರೆ ಇಂದು ಕನ್ನಡ ಸಿನಿಮಾ ಆ ಯಶಸ್ಸನ್ನು ಗಳಿಸಿರುವ ಬಗ್ಗೆ ನನಗೆ ಹೆಮ್ಮೆ ಇದ್ದು ಇದನ್ನು ನಾನು ಸಂಕೋಚವಿಲ್ಲದೆ ನೇರವಾಗಿ ಹೇಳಿಕೊಳ್ಳುತ್ತೇನೆ ಎಂದು ತಮ್ಮ ಸ್ಫೂರ್ತಿದಾಯಕ ನುಡಿಗಳನ್ನು ಮುಂದುವರೆಸುತ್ತಾರೆ. ಓಪನ್ ಆಗಿ ಮಾತನಾಡುವುದರಿಂದ ನಮ್ಮಲ್ಲಿ ಸಕರಾತ್ಮಕ ಶಕ್ತಿ ಬೆಳೆಯುತ್ತದೆ ಈ ರೀತಿ ಮಾತನಾಡುವುದರಿಂದ ಕೆಲವರು ನಮಗೆ ಅಹಂಭಾವ ಇದೆ ಎಂದು ಭಾವಿಸುತ್ತಾರೆ ಆದರೆ ನಾವು ಒಳ್ಳೆಯದನ್ನು ಮಾತನಾಡಿದರೆ ಯೋಚಿಸಿದರೆ ಈ ಮಾತುಗಳಿಂದ ಸ್ವಲ್ಪ ಜನರಾದರೂ ಸಹ ಒಳ್ಳೆಯವರು ಇದ್ದೇ ಇರುತ್ತಾರೆ ಎಂದು ತಮ್ಮ ಸ್ಟ್ರೈಟ್ ಫಾರ್ವರ್ಡ್ ಮಾತುಗಳನ್ನ ಆಡುತ್ತಾರೆ. ಸರ್ಕಾರಗಳು ತಮ್ಮ ಕೆಲಸಗಳನ್ನು ಮಾಡುತ್ತಿರುತ್ತವೆ ಆದರೆ ನಮ್ಮೊಳಗೇ ಒಂದು ಸರ್ಕಾರ ಹುಟ್ಟಿ ಅಲ್ಲಿ ನಮ್ಮದೇ ಆದ ಇಲಾಖೆಗಳನ್ನು ನಾವೇ ಸ್ಥಾಪಿಸಿಕೊಂಡರೆ ದೇಶದ ಪ್ರತಿಯೊಬ್ಬ ಪ್ರಜೆ ಉನ್ನತಿ ಸಾಧಿಸಿವುದಲ್ಲದೆ ದೇಶವೂ ಸಹ ಪ್ರಗತಿಯತ್ತ ಸಾಗುತ್ತದೆ ಎಂದು ಹೇಳುತ್ತಾರೆ.

ಹೀಗೆ ತಮ್ಮ ಸ್ಪೂರ್ತಿದಾಯಕ ಮಾತುಗಳನ್ನು ತಮ್ಮ ನೇರ ನುಡಿಗಳಿಂದ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಮನ ಮುಟ್ಟುವ ಹಾಗೆ ದೀರ್ಘ ಸಂಭಾಷಣೆಯನ್ನು ರಾಕಿಂಗ್ ಸ್ಟಾರ್ ಯಶ್ ಅವರು ಯುವ ಜನ ಮಹೋತ್ಸವ ಕಾರ್ಯಕ್ರಮದಲ್ಲಿ ಯುವಪೀಳಿಗೆಗೆ ಉಪಯುಕ್ತ ಆಗುವ ಯಶಸ್ಸಿನ ಹಾದಿಯ ಕೆಲ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಸ್ನೇಹಿತರೆಲ್ಲರೊಂದಿಗೂ ಬೆರೆತು ಹೆಚ್ಚು ಗಂಭೀರವಾಗಿರದೆ ಚಿಕ್ಕ ಚಿಕ್ಕ ವಿಷಯಗಳನ್ನು ಎಂಜಾಯ್ ಮಾಡಿ ಯಶಸ್ಸಿನ ಕಡೆಗೆ ಚಿತ್ತವನ್ನು ಹರಿಸಿ ಎಂದು ಯುವ ಪೀಳಿಗೆಗೆ ಕಿವಿ ಮಾತನ್ನು ಹೇಳುತ್ತಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

https://youtu.be/sQNt9yzakNk

Entertainment Tags:Mysore, Rocking star yash, Yash, Yuva dasara
WhatsApp Group Join Now
Telegram Group Join Now

Post navigation

Previous Post: ದರ್ಶನ್ ಮತ್ತು ಸುದೀಪ್ ಇಬ್ಬರ ಸಿನಿಮಾ ಒಂದೇ ದಿನ ಬಿಡುಗಡೆಯಾಗಿತ್ತು ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಸಿನಿಮಾ ಯಾವುದು ಗೊತ್ತಾ.?
Next Post: ದೇಹದ ಇಂಚಿಂಚಿಗೂ ಟ್ಯಾಟೋ ಹಾಕಿಸಿಕೊಂಡ ಹಾಲಿವುಡ್ ನಾ ಖ್ಯಾತ ನಟಿ, ಟ್ಯಾಟೋ ಹಾಕಿಸಿಕೊಂಡ ಅನುಭವದ ಮಾತು ಕೇಳಿದ್ರೆ ಎಂಥವರಾದರು ದಂಗಾಗಿ ಹೋಗುತ್ತಾರೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore