ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟಿ ಶ್ರುತಿ ಅವರು ಮಹೇಂದ್ರ ಎನ್ನುವವರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಚಾರ ತಿಳಿದೇ ಇದೆ. ಇನ್ನು ಮದುವೆಯಾದ ಹೊಸದರಲ್ಲಿ ನಟಿ ಶ್ರುತಿ ಮತ್ತು ನಿರ್ದೇಶಕ ಮಹೇಂದ್ರ ಅವರು ತುಂಬಾನೇ ಅನ್ಯೋನ್ಯವಾಗಿ ಸಂಸಾರ ಮಾಡುತ್ತಿದ್ದರು. ಈ ದಂಪತಿಗಳಿಗೆ ಗೌರಿ ಎಂಬ ಒಂದು ಹೆಣ್ಣು ಮಗು ಕೂಡ ಜನನವಾಯಿತು ಮಗಳಿಗೆ ಐದು ವರ್ಷ ವಾಗುವ ತನಕವೂ ಕೂಡ ಇವರಿಬ್ಬರೂ ಸುಖ ಸಂಸಾರವನ್ನು ನಡೆಸುತ್ತಿದ್ದರು. ಆದರೆ ಇವರಿಬ್ಬರ ಸಂಸಾರದಲ್ಲಿ ಹಾಗೂ ಸಂಬಂಧದಲ್ಲಿ ಕೆಲವು ಭಿನ್ನ ಅಭಿಪ್ರಾಯಗಳು ಬಂದ ಕಾರಣ ಇಬ್ಬರೂ ಕೂಡ ಪರಸ್ಪರ ಕುಳಿತುಕೊಂಡು ಮಾತನಾಡಿ ವಿ.ಚ್ಛೇ.ದ.ನವನ್ನು ಪಡೆದುಕೊಳ್ಳುತ್ತಾರೆ. ತದನಂತರ ನಟಿ ಶ್ರುತಿ ಅವರು ತಮ್ಮ ಮಗಳೊಟ್ಟಿಗೆ ಒಂಟಿ ಜೀವನವನ್ನು ಸಾಗಿಸುವುದಕ್ಕೆ ಪ್ರಾರಂಭಿಸುತ್ತಾರೆ.
ಶ್ರುತಿ ಅವರಿಂದ ವಿ.ಚ್ಛೇ.ದ.ನ ಪಡೆದ ಮಹೇಂದ್ರ ಅವರು ಮೈಸೂರಿನ ಮೂಲದ ಹುಡುಗಿಯರುಗಳನ್ನು ಮತ್ತೊಂದು ಮದುವೆಯಾಗಿ ಇದೀಗ ಅವರೊಟ್ಟಿಗೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ.
ಇದಾದ ಕೆಲವೇ ದಿನದಲ್ಲಿ ನಟಿ ಶೃತಿ ಅವರು ಕೂಡ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಆದಂತಹ ಚಕ್ರವರ್ತಿ ಚಂದ್ರಚೂಡ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಅಂದ ಹಾಗೆ ಚಕ್ರವರ್ತಿ ಚಂದ್ರಚೂಡಾ ಅವರಿಗೆ ಇದು ಮೊದಲನೇ ಮದುವೆ ಏನಲ್ಲ ಇದಕ್ಕೂ ಮೊದಲೇ ಅವರಿಗೆ ಮದುವೆಯಾಗಿ ಒಟ್ಟು ಮೂರು ಜನ ಮಕ್ಕಳಿದ್ದಾರೆ. ಆದರೂ ಕೂಡ ನಟಿ ಶ್ರುತಿಯವರು ಚಕ್ರವರ್ತಿ ಚಂದ್ರಚೂಡ ಅವರನ್ನು 2013ನೇ ಇಸ್ವಿಯಲ್ಲಿ ಎರಡನೇ ಮದುವೆ ಯಾಗುತ್ತಾರೆ. ಈ ಮದುವೆ ನಿಜಕ್ಕೂ ಕೂಡ ಅಂದಿನ ಕಾಲದಲ್ಲಿ ಒಂದು ಸೆನ್ಸಿಯೆಷನ್ ಕ್ರಿಯೇಟ್ ಮಾಡಿದಂತಹ ವಿಚಾರ ಅಂತ ಹೇಳಬಹುದು. ಏಕೆಂದರೆ ನಟಿ ಶ್ರುತಿ ಅವರು ಮದುವೆಯಾಗುತ್ತಿರುವ ವಿಚಾರ ಯಾರಿಗೂ ತಿಳಿದಿರಲಿಲ್ಲ ನಟಿ ಶ್ರುತಿ ಅವರ ಮದುವೆಯ ಫೋಟೋ ಹೊರ ಬರುತ್ತಿದ್ದ ಹಾಗೆ ಎಲ್ಲರೂ ಕೂಡ ಆಶ್ಚರ್ಯ ಚಿಕಿತರಾದರು.
ಆದರೆ ಈ ವಿವಾಹ ಹೆಚ್ಚು ದಿನ ಉಳಿಯಲಿಲ್ಲ ಮದುವೆಯಾದ ಕೇವಲ ಒಂದೇ ವರ್ಷಕ್ಕೆ ಚಕ್ರವರ್ತಿ ಚಂದ್ರಚೂಡ ಅವರಿಗೆ ಶ್ರುತಿ ಅವರು ವಿ.ಚ್ಛೇ.ಧನ. ನೀಡುತ್ತಾರೆ. ಚಕ್ರವರ್ತಿ ಚಂದ್ರ ಚೂಡಾ ಅವರಿಗೆ ಶೃತಿಯವರು ವಿ.ಚ್ಛೇ.ದ.ನ ನೀಡುವುದಕ್ಕೆ ಕಾರಣವೇನು ಪ್ರೀತಿಸಿ ಮದುವೆಯಾದಂತಹ ಈ ಜೋಡಿ ಒಂದು ವರ್ಷವೂ ಕೂಡ ಜೊತೆಗೆ ಯಾಕೆ ಉಳಿಯಲಿಲ್ಲ ಎಂಬ ಅನುಮಾನಗಳು ಅಭಿಮಾನಿಗಳಲ್ಲಿ ಮತ್ತು ನೆಟ್ಟಿಗಳಲ್ಲಿ ಕಾಡ ತೊಡಗುತ್ತದೆ. ಇದಕ್ಕೆ ಕಾರಣ ಏನು ಎಂಬುದನ್ನು ಶೃತಿ ಅವರು ಒಂದು ಸಂದರ್ಶನ ಒಂದರಲ್ಲಿ ರಿವೀಲ್ ಮಾಡಿದ್ದಾರೆ ಹೌದು ಅದೇನೆಂದರೆ. ನಟಿ ಶೃತಿ ಅವರ ಎಲ್ಲಾ ವ್ಯವಹಾರಕ್ಕೂ ಕೂಡ ಚಕ್ರವರ್ತಿ ಚಂದ್ರಚೂಡ ಅವರು ಕೈ ಹಾಕುತ್ತಿದ್ದರಂತೆ ಅಷ್ಟೇ ಅಲ್ಲದೆ ಶ್ರುತಿ ಅವರ ವೃತ್ತಿ ಜೀವನದಲ್ಲಿಯೂ ಕೂಡ ಎಲ್ಲಾ ನಾನು ಹೇಳಿದ ಮಾದರಿಯಲ್ಲೇ ನಡೆಯಬೇಕು ಎಂಬ ಕಂಡಿಶನ್ ಹಾಕುತ್ತಿದ್ದರಂತೆ.
ಸಾಮಾನ್ಯವಾಗಿ ಬೆಳ್ಳಿತೆರೆಯಲ್ಲಿ ನಟನೆ ಮಾಡುತ್ತಿದ್ದಾರೆ ಅಂದಮೇಲೆ ಅವರಿಗೆ ಸಹಜವಾಗಿ ನಿರ್ಮಾಪಕರು ನಿರ್ದೇಶಕರು ಅಥವಾ ನಟ ನಟಿಯರು ಕರೆ ಮಾಡುವುದು ಸಹಜ. ಆದರೆ ಯಾರೇ ಕರೆ ಮಾಡಿದರು ಕೂಡ ಅವುಗಳೆಲ್ಲವನ್ನು ಕೂಡ ಎನ್ಕ್ವೈರಿ ಮಾಡುವುದು ಪ್ರಶ್ನೆ ಮಾಡುವುದು ತುಂಬಾ ಕಿರಿ ಕಿರಿ ಮಾಡುವುದನ್ನು ಮಾಡುತ್ತಿದ್ದರಂತೆ. ಈ ವಿಚಾರಕ್ಕಾಗಿಯೇ ಸಾಕಷ್ಟು ಬಾರಿ ಇವರಿಬ್ಬರ ನಡುವೆ ಕಲಹ ನಡೆಯಿತಂತೆ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಚಕ್ರವರ್ತಿ ಚಂದ್ರಚೂಡ ಅವರ ಮೊದಲ ಹೆಂಡತಿ ಮಂಜುಳಾ ಅವರು ನನಗೆ ಚಕ್ರವರ್ತಿ ಚಂದ್ರ ಚೂಡಾ ಅವರು ವಿ.ಚ್ಛೇ.ದ.ನ ಕೊಟ್ಟಿಲ್ಲ ಆದರೂ ಕೂಡ ಶ್ರುತಿ ಅವರನ್ನು ಮದುವೆಯಾಗಿದ್ದಾರೆ ಎಂದು ಕೋರ್ಟ್ ಮೆಟ್ಟಿಲು ಏರಿದರಂತೆ.
ಈ ಎಲ್ಲಾ ವಿಚಾರವನ್ನು ಮನಗೊಂಡಂತಹ ಶ್ರುತಿ ಅವರು ಚಕ್ರವರ್ತಿ ಚಂದ್ರಚೂಡ ಅವರು ನನಗೆ ಸರಿಯಾದ ಸಂಗಾತಿ ಅಲ್ಲ ವೈಯಕ್ತಿಕ ವಿಚಾರದಲ್ಲಿಯೂ ಕೂಡ ನನಗೆ ಹೊಂದಾಣಿಕೆಯಾಗುತ್ತಿಲ್ಲ ಇನ್ನು ಸಾಂಸಾರಿಕ ವಿಚಾರಕ್ಕೆ ಬರುವುದಾದರೆ ಮೊದಲ ಹೆಂಡತಿಗೆ ವಿ.ಚ್ಛೇ.ದ.ನ ನೀಡಿದ್ದೇನೆ ಎಂದು ಸುಳ್ಳು ಹೇಳಿ ನನ್ನನ್ನು ಮದುವೆಯಾಗಿದ್ದಾರೆ. ಹಾಗಾಗಿ ಇಂತಹ ವ್ಯಕ್ತಿಯ ಜೊತೆ ನಾನು ಜೀವನ ಸಾಗಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿ ಮೊದಲನೇ ಹೆಂಡತಿ ಮಂಜುಳಾ ಅವರ ಬಳಿ ಮಾತನಾಡಿ ನಾನು ವಿ.ಚ್ಛೇ.ದ.ನ ಪಡೆದುಕೊಳ್ಳುತ್ತೇನೆ ನೀವು ನಿಮ್ಮ ಪತಿಯೊಟ್ಟಿಗೆ ಸಂಸಾರವನ್ನು ನಡೆಸಿ ಎಂದು ಮಹತ್ತರವಾದಂತಹ ನಿರ್ಧಾರವನ್ನು ಕೈಗೊಂಡು ಚಕ್ರವರ್ತಿ ಚಂದ್ರಚೂಡಾ ಅವರಿಗೂ ಕೂಡ ಮದುವೆಯಾದ ಒಂದೇ ವರ್ಷಕ್ಕೆ ವಿ.ಚ್ಛೇ.ದ.ನ ನೀಡಿದರು. ಶ್ರುತಿ ಅವರ ಬದುಕಿನಲ್ಲಿ ಇಷ್ಟೆಲ್ಲ ಏಳು ಬೀಳುಗಳನ್ನು ನೋಡಿದಂತಹ ಅಭಿಮಾನಿಗಳು ನಟಿ ಶ್ರುತಿ ಅವರಿಗೆ ಇದೆಲ್ಲ ಬೇಕಿತ್ತಾ.? ಮೊದಲನೇ ಗಂಡನಿಗೆ ವಿ.ಚ್ಛೇ.ದ.ನ ಕೊಟ್ಟು ಎರಡನೇ ಮದುವೆಯಾದರೂ ಆದರೆ ಎರಡನೇ ಮದುವೆಯೂ ಕೂಡ ಕೇವಲ ಒಂದೇ ವರ್ಷಕ್ಕೆ ಮುರಿದು ಬಿತ್ತು ಎಂದು ಮಾತನಾಡುವುದಕ್ಕೆ ಪ್ರಾರಂಭಿಸಿದರು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.