ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಹೊಂದಿರುವ ನಟರ ಪೈಕಿ ದರ್ಶನ್ ಅವರು ಕೂಡ ಒಬ್ಬರು ಅಂತ ಹೇಳಬಹುದು ದರ್ಶನ್ ಅವರಿಗೆ ಇರುವಂತಹ ಫ್ಯಾನ್ ಫಾಲೋವರ್ಸ್ ಬೇರೆ ಯಾವ ನಟನಿಗೂ ಕೂಡ ಇಲ್ಲ ಎಂಬ ಮಾತುಗಳು ಹಾಗಾಗಿ ಕೇಳಿ ಬರುತ್ತದೆ. ಇದಕ್ಕೆ ಕಾರಣ ಏನೆಂದರೆ ದರ್ಶನ್ ಅವರನ್ನು ಎಲ್ಲ ಮಾಧ್ಯಮಗಳು ಕೂಡ ಬ್ಯಾನ್ ಮಾಡಿದೆ ಹಾಗಾಗಿ ದರ್ಶನ ಅವರ ಕ್ರಾಂತಿ ಸಿನಿಮಾದ ಪ್ರಮೋಷನ್ ಅನ್ನು ಸ್ವತಃ ಅಭಿಮಾನಿಗಳೇ ತಾವೇ ಮಾಡುತ್ತಿದ್ದಾರೆ. ಇವೆಲ್ಲವನ್ನೂ ನೋಡಿದಂತಹ ನೆಟ್ಟಿಗರು ಹಾಗೂ ಸಿಹಿ ರಸಿಕರು ದರ್ಶನ್ ಅವರಿಗೆ ಹೆಚ್ಚು ಫ್ಯಾನ್ ಫಾಲೋವರ್ಸ್ ಇದ್ದಾರೆ ಯಾವುದೇ ಮೀಡಿಯಾ ಸಪೋರ್ಟ್ ಮಾಡದೆ ಇದ್ದರೂ ಕೂಡ ಇವರು ಕ್ರಾಂತಿ ಸಿನಿಮಾದಲ್ಲಿ ಗೆಲ್ಲುತ್ತಾರೆ ಅಂತ ಹೇಳುತ್ತಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ದರ್ಶನ್ ಅವರು ಚಿತ್ರರಂಗಕ್ಕೆ ಬಂದು ಇಂದಿಗೆ 25 ವರ್ಷ ಪೂರೈಸಿದೆ.
ದರ್ಶನ್ ಅವರು ಚಿತ್ರರಂಗಕ್ಕೆ ಬಂದು 25 ವರ್ಷಗಳು ಆದ ಕಾರಣ ಇದೀಗ ದರ್ಶನ್ ಅವರ 25ನೇ ವರ್ಷದ ಸಿನಿ ಜರ್ನಿಯನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಆಗಸ್ಟ್ 11 ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿ ಬದುಕಿನಲ್ಲಿ ಮರೆಯಲಾರದ ದಿನ ದರ್ಶನ್ ತೂಗುದೀಪ ನಟನೆಯ ಮೊದಲ ಸಿನಿಮಾ ‘ಮಹಾಭಾರತ’ ರಿಲೀಸ್ ಆಗಿದ್ದ ದಿನ 1997 ಆಗಸ್ಟ್ 11 ರಂದು ಎಸ್. ನಾರಾಯಣ್ ನಿರ್ದೇಶನದ ‘ಮಹಾಭಾರತ’ ಚಿತ್ರ ರಿಲೀಸ್ ಆಗಿತ್ತು ಈ ಮೂಲಕ ನಟ ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. ”ಮೆಜೆಸ್ಟಿಕ್” ಸಿನಿಮಾ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಚಿತ್ರರಂಗದಲ್ಲಿ ಛಾಪು ಮೂಡಿಸಿದರು ದರ್ಶನ್ ಅಭಿಮಾನಿಗಳು ಈ ದಿನವನ್ನು ವಿಶೇಷವಾಗಿ ಸಂಭ್ರಮಿಸುವುದಕ್ಕಾಗಿ ಹೊಸ ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ ಇನ್ನು ಕನ್ನಡದ ಹಲವು ಸಿನಿಮಾ ಸ್ನೇಹಿತರ ಜೊತೆಗೆ ನಟ ದರ್ಶನ್ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.
ನಟ ದರ್ಶನ್ ತಮ್ಮ ಸಿನಿಮಾ ಬದುಕಿನಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಇದರ ಪ್ರಯುಕ್ತ ನಟ ದರ್ಶನ್ ಯಾವುದೇ ಕಾರ್ಯಕ್ರಮ ಮಾಡಿರಲಿಲ್ಲ. ಆದರೆ ತಡವಾಗಿ ಅವರ ಹಲವು ಸ್ನೇಹಿತರು ಸೇರಿ, ದರ್ಶನ್ ರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದಕ್ಕಾಗಿ ವಿಶೇಷವಾದ ಕೇಕ್ ತಯಾರಾಗಿದ್ದು, ದರ್ಶನ್ ನಟನೆಯ ಎಲ್ಲಾ ಸಿನಿಮಾಗಳ ಹೆಸರನ್ನು ಕೇಕ್ ಮೇಲೆ ಬರೆಸಲಾಗಿತ್ತು. ನಟ ದರ್ಶನ್ ಗಾಗಿ ಅವರ ಸ್ನೇಹಿತ ಬಳಗ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು ಇಲ್ಲಿ ದರ್ಶನ್ ಸಿನಿಮಾರಂಗಕ್ಕೆ ಬಂದು 25 ವರ್ಷ ಪೂರೈಸಿದ ಸಂಭ್ರಮವನ್ನು ಆಚರಿಸಲಾಯಿತು. ನಟ ಪ್ರಜ್ವಲ್ ದೇವರಾಜ್, ಯಶಸ್ ಸೂರ್ಯ, ಧರ್ಮ ಕೀರ್ತಿರಾಜ್ ಸೇರಿದಂತೆ ಹಲವು ಸ್ನೇಹಿತರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿನ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲು ವೈರಲ್ ಆಗಿವೆ.
ನಟ ದರ್ಶನ್ ಸಿನಿಮಾರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ ಎನ್ನುವ ಸಂಭ್ರಮವನ್ನು ಸಿನಿಮಾ ಮಂದಿ ಕೂಡ ಆಚರಿಸುತ್ತಿದ್ದಾರೆ. ಹಲವು ಸಿನಿಮಾ ತಾರೆಯರು ದರ್ಶನ್ಗೆ ಸೋಷಿಯಲ್ ಮೀಡಿಯಾದ ಮೂಲಕ ಶುಭಕೋರಿದ್ದಾರೆ. ನಿರ್ಮಾಪಕಿ ಶೈಲಜಾ ನಾಗ್, ನಿರ್ದೇಶಕ ವಿ. ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್ ದರ್ಶನ್ 25 ವರ್ಷಗಳನ್ನು ಪೂರೈಸಿದ್ದಕ್ಕೆ ಶುಭಕೋರಿದ್ದಾರೆ ಜೊತೆಗೆ ನಟ ಧನ್ವೀರ್ ಮತ್ತು ಅಯ್ಯಂಗಾರ್ ಕೂಡ ವಿಶ್ ಮಾಡಿದ್ದಾರೆ. ಇನ್ನು ಕೆಲವು ಸೋಶಿಯಲ್ ಮೀಡಿಯಾ ಗಳಲ್ಲಿ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಕೂಡ ಒಟ್ಟಾಗಿ ಇರುವಂತಹ ಫೋಟೋಗಳು ಎಡಿಟ್ ಆಗಿದ್ದು ಅದು ವೈರಲ್ ಆಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ದರ್ಶನ ಅವರ 25ನೇ ವರ್ಷದ ಸಿನಿ ಕಾರ್ಯಕ್ರಮಕ್ಕೆ ಸುದೀಪ ಅವರು ಆಗಮಿಸಿದ್ದಾರೆ ಅಂತ ಅಂದುಕೊಂಡಿದ್ದರು.
ಅಷ್ಟೇ ಅಲ್ಲದೆ ಇದನ್ನು ನೋಡಿದಂತಹ ಅಭಿಮಾನಿಗಳು ಸದ್ಯ ನಮ್ಮ ನೆಚ್ಚಿನ ನಟರು ಇಬ್ಬರು ಕೂಡ ತಮ್ಮ ಮನಸ್ಸಿನಲ್ಲಿ ಇದ್ದಂತಹ ಎಲ್ಲಾ ವೈ ಮನಸ್ಸನ್ನು ಮರೆತು ಒಂದಾಗಿದ್ದಾರೆ ಎಂಬ ಸಂತಸದಲ್ಲಿದ್ದರು. ಆದರೆ ಇದು ಕಲಾವಿದನ ಕೈಚಳಕದಲ್ಲಿ ಮೂಡಿ ಬಂದ ಚಿತ್ರವಾಗಿದೆ ಈ ಕಲಾವಿದನ ಕೈಚಳಕದಲ್ಲಿ ಮೂಡಿ ಬಂದ ಚಿತ್ರ ಆದಷ್ಟು ಬೇಗ ಸತ್ಯವಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಈ ಎಡಿಟೆಡ್ ಚಿತ್ರವನ್ನು ನೋಡಿದರೆ ನಿಮಗೆ ಏನನಿಸುತ್ತದೆ ತಪ್ಪದೇ ನಮಗೆ ಕಾಮೆಂಟ್ ಮಾಡಿ ಹಾಗೂ ನೀವು ಕೂಡ ಕಿಚ್ಚ ಸುದೀಪ್ ಮತ್ತು ದರ್ಶನ್ ಇಬ್ಬರು ಒಂದಾಗುವುದನ್ನು ಬಯಸುವುದಾದರೆ ಕಾಮೆಂಟ್ ಬಾಕ್ಸ್ ನಲ್ಲಿ ಕಿಚ್ಚ ಮತ್ತು ದಚ್ಚು ಎಂದು ಕಾಮೆಂಟ್ ಮಾಡಿ.