ಸಾಹಸಸಿಂಹ ವಿಷ್ಣುವರ್ಧನ್ 200 ಸಿನಿಮಾಗಳಿಗಿಂತಲೂ ಹೆಚ್ಚಿನ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೆ ಬರಪೂರ ಮನೋರಂಜನೆಯನ್ನು ನೀಡಿ ಒಂದು ಮಾದರಿ ಜೀವನವನ್ನು ಜೀವಿಸಿ ಕೋಟ್ಯಾಂತರ ಹೃದಯಗಳನ್ನು ಮುಟ್ಟಿ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಮರೆಯಲಾಗದ ಮಾಣಿಕ್ಯ ಆಗಿರುವ ವ್ಯಕ್ತಿ. ಇಂದು ವಿಷ್ಣುವರ್ಧನ್ ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲದೆ ಇದ್ದರೂ ಕೂಡ ಅವರ ನೆನಪುಗಳು ಕರ್ನಾಟಕದ ಎಲ್ಲಾ ಮನೆಗಳನ್ನು ತುಂಬಿಕೊಂಡಿವೆ. ನಿಜವಾಗಿಯೂ ಇಂತಹ ಒಬ್ಬ ಅದ್ಭುತ ಕಲಾವಿದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಿದ್ದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಷಯ. ಒಂದು ಅರ್ಥದಲ್ಲಿ ಡಾಕ್ಟರ್ ರಾಜಕುಮಾರ್ ಅವರನ್ನು ಬಿಟ್ಟರೆ ವಿಷ್ಣುವರ್ಧನ್ ಅವರೇ ಕನ್ನಡ ಇಂಡಸ್ಟ್ರಿಯನ್ನು ಈ ಮಟ್ಟಕ್ಕೆ ಹೆಸರುವಾಸಿ ಮಾಡಿದ ಕಲಾವಿದ ಎನ್ನಬಹುದು.
ಇವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಹಿಂದಿ ಮತ್ತು ಮಲಯಾಳಂ ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ ಬಾಲನಟನಾಗಿ ಮೊದಲು ಸಂಪತ್ ಕುಮಾರ್ ಆಗಿದ್ದ ಇವರು ಸಿನಿಮಾ ಇಂಡಸ್ಟ್ರಿಯನ್ನು ಪಾದರ್ಪಣೆ ಮಾಡಿದರು. ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದ ನಾಗರಹಾವು ಸಿನಿಮಾ ಇವರು ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡ ಸಿನಿಮಾ ಈ ಸಿನಿಮಾದ ನಂತರ ಇವರ ಹೆಸರನ್ನು ವಿಷ್ಣುವರ್ಧನ್ ಎಂದು ಬದಲಾಯಿಸಲಾಯಿತು. ನಂತರ ಸಾಲು ಸಾಲು ಸೂಪರ್ ಹಿಟ್ ಸಿನಿಮಾ ಗಳನ್ನು ಕೊಟ್ಟ ಡಾಕ್ಟರ್ ವಿಷ್ಣುವರ್ಧನ್ ಅವರು ಹಲವು ಶತಮಾನಗಳವರೆಗೆ ಕನ್ನಡ ಇಂಡಸ್ಟ್ರಿಯನ್ನು ಆಳಿದರು ಎಂದು ಹೇಳಬಹುದು. ಇಂದಿಗೂ ವಿಷ್ಣುವರ್ಧನ್ ಅವರು ಅಭಿನಯಿಸಿದ ಬಹುತೇಕ ಸಿನಿಮಾಗಳು ಕನ್ನಡ ಜನರಿಗೆ ಬಹಳ ಇಷ್ಟ.
ಪ್ರಮುಖವಾಗಿ ಅವರ ನಾಗ ಕಾಳ ಭೈರವ, ರಾಯರು ಬಂದರು ಮಾವನ ಮನೆಗೆ, ಮಹಾ ಕ್ಷತ್ರಿಯ, ಸಾಮ್ರಾಟ, ಧಣಿ, ಜಯಸಿಂಹ, ಮೋಜುಗಾರ ಸೊಗಸುಗಾರ, ಮದುವೆ ಮಾಡು ತಮಾಷೆ ನೋಡು, ಸೊಸೆ ತಂದ ಸೌಭಾಗ್ಯ, ಕೋಟಿಗೊಬ್ಬ, ಯಜಮಾನ, ಸಿಂಹಾದ್ರಿಯ ಸಿಂಹ, ಸೂರಪ್ಪ, ಸೂರ್ಯವಂಶ ಆಪ್ತಮಿತ್ರ, ವಿಷ್ಣು ಸೇನಾ ಎಂದಿಗೂ ಎವರ್ಗ್ರೀನ್ ಸಿನಿಮಾಗಳು ಎನ್ನಬಹುದು. ಕನ್ನಡದಲ್ಲಿ ಮಾತ್ರವಲ್ಲದೆ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ದ್ವಿಪಾತ್ರದಲ್ಲಿ ನಟಿಸಿದ ನಟ ಎಂದರೆ ವಿಷ್ಣುವರ್ಧನ್ ಅವರೇ. ವಿಷ್ಣುವರ್ಧನ್ ಅವರು ತೆರೆ ಮೇಲೆ ಅಬ್ಬರಿಸುತ್ತಿದ್ದರೆ ಅವರ ಮುಖದಲ್ಲಿ ಸಿಂಹದ ತೇಜಸ್ಸು ಕಾಣುತ್ತಿತ್ತು ಇದರಿಂದಲೇ ಅಭಿಮಾನಿಗಳ ಅವರನ್ನು ಸಾಹಸ ಸಿಂಹ ಎಂದು ಕರೆದರು ವಿಷ್ಣುವರ್ಧನ್ ಅವರನ್ನು ಸಿನಿಮಾ ಇಂಡಸ್ಟ್ರಿ ಯ ಎಲ್ಲರೂ ಬಹಳ ಇಷ್ಟಪಡುತ್ತಿದ್ದರು.
ಆದರೆ ವಿಷ್ಣುವರ್ಧನ್ ಅವರಿಗೆ ಇವರೆಲ್ಲರನ್ನು ಕಂಡರೆ ಅಷ್ಟೇ ಪ್ರೀತಿ ಗೌರವ ಇದ್ದರೂ ಈ ಒಬ್ಬ ವ್ಯಕ್ತಿಯ ಮೇಲೆ ಅದಕ್ಕಿಂತ ಜಾಸ್ತಿ ಇತ್ತು. ಅವರು ಬೇರೆ ಯಾರು ಇಲ್ಲ ರಮೇಶ್ ಅರವಿಂದ್. ಅವರು ರಮೇಶ ಅವರ ಜೊತೆ ವಿಷ್ಣುವರ್ಧನ್ ಅವರಿಗೆ ವಿಶೇಷ ಒಡನಾಟ ಇತ್ತು ಅವರಿಬ್ಬರು ಒಟ್ಟಿಗೆ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆ ಕೂಡ ಇತ್ತು. ದೀಪಾವಳಿ ಎನ್ನುವ ಸಿನಿಮಾದಲ್ಲಿ ಇದು ಪೂರ್ತಿಗೊಂಡಿತು. ನಂತರ ಅವರು ವಿಷ್ಣು ಸೇನಾ, ವರ್ಷ, ಆಪ್ತಮಿತ್ರ, ಏಕದಂತ ಈ ಸಿನಿಮಾಗಳಲ್ಲೂ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸ್ವತಃ ವಿಷ್ಣುವರ್ಧನ್ ಅವರೇ ತಮ್ಮ ಸಿನಿಮಾಗಳ ಕಥೆ ಕೇಳುವಾಗ ರಮೇಶ್ ಅರವಿಂದ್ ಅವರಿಗೆ ಒಪ್ಪುವ ಯಾವುದಾದರು ಪಾತ್ರವಿದೆಯೇ ಎಂದು ಕೇಳುತ್ತಿದ್ದರಂತೆ ಅಷ್ಟು ರಮೇಶ ಅರವಿಂದ್ ಎಂದರೆ ವಿಷ್ಣುವರ್ಧನ್ ಅವರಿಗೆ ಪ್ರೀತಿ ಗೌರವ ಮತ್ತು ನಂಬಿಕೆ ಇತ್ತು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ಉತ್ತರಿಸಿ.