ನಮ್ಮಲ್ಲಿ ಸಾಕಷ್ಟು ನಟ ನಟಿಯರು ಇದ್ದಾರೆ ಆದರೆ ಆ ನಟ ನಟಿಯರಲ್ಲಿ ಸಹಾಯ ಮಾಡುವಂತಹ ಗುಣವನ್ನು ಹೊಂದಿರುವಂತಹ ವ್ಯಕ್ತಿಗಳು ಕೆಲವೇ ಕೆಲವು ಅಂತ ಹೇಳಬಹುದು. ಆ ಪೈಕಿ ಸೋನು ಸೂದ್ ಅವರು ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ನಮ್ಮ ಕರ್ನಾಟಕದಲ್ಲಿ ಮಾತ್ರವಲ್ಲದೇ ಭಾರತದಾದ್ಯಂತ ಯಾರಿಗೆ ಏನೇ ತೊಂದರೆ ಆದರೂ ಕೂಡ ಮೊದಲು ಸಹಾಯಕ್ಕೆ ಧಾವಿಸುವ ಏಕೈಕ ವ್ಯಕ್ತಿ ಅಂದರೆ ಅದು ಸೋನು ಸೂದ್ ಅಂತ ಹೇಳಬಹುದು. ಏಕೆಂದರೆ ಕಳೆದ ಎರಡು ವರ್ಷಗಳ ಹಿಂದೆ ಕರೋನ ಹಾವಳಿ ಹೆಚ್ಚಾದಂತಹ ಸಮಯದಲ್ಲಿ ತಮ್ಮ ಇಡೀ ಆಸ್ತಿಯನ್ನು ಒತ್ತೆ ಇಟ್ಟು ಅದರಿಂದ ಬಂದಂತಹ ಹಣದಿಂದ ಸಾಕಷ್ಟು ಜನರಿಗೆ ಚಿಕಿತ್ಸೆಯನ್ನು ನೀಡಿದ್ದರು.
ಅಷ್ಟೇ ಅಲ್ಲದೆ ನಮ್ಮ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಸಪ್ಲೈ ಇಲ್ಲದೆ ಇರುವುದರಿಂದ 23 ಜನ ಸಾ-ವ-ನ-ಪ್ಪಿ-ದಾ-ಗ ಅವರ ಕುಟುಂಬಕ್ಕೆ ಪರಿಹಾರ ನೀಡಿ ಆಸ್ಪತ್ರೆಗೆ ಆಕ್ಸಿಜನ್ ಸಿಲೆಂಡರ್ ತರಿಸಿಕೊಟ್ಟಿದ್ದರು. ಕೇವಲ ಇದಿಷ್ಟು ಮಾತ್ರವಲ್ಲದೆ ಬಡವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ಜನರಿಗೆ ಸೋನು ಸೂದ್ ಅವರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದ್ದಾರೆ. ಒಂದು ಮಾಹಿತಿಯ ಪ್ರಕಾರ ಸೋನು ಸೂದ್ ಅವರು ಸಂಪಾದನೆ ಮಾಡುವ ಶೇಕಡ 100 ರಲ್ಲಿ 80 ಭಾಗದಷ್ಟು ಹಣವನ್ನು ಸಮಾಜ ಸೇವೆಗೆಂದೆ ಮೀಸಲಿಡುತ್ತಾರೆ. ಸೋನು ಸೂದ್ ಅವರು ತಮ್ಮದೇ ಆದಂತಹ ಫೌಂಡೇಶನ್ ಒಂದನ್ನು ಒಳಗೊಂಡಿದ್ದಾರೆ ಈ ಫೌಂಡೇಶನ್ ಮುಖಾಂತರ ಕಷ್ಟದಲ್ಲಿ ಇರುವಂತವರಿಗೆ ಮತ್ತು ಚಿಕಿತ್ಸೆ ಬೇಕಾದವರಿಗೆ ಆಪತ್ ಕಾಲದಲ್ಲಿ ತೊಂದರೆ ಉಂಟಾದಾಗ ಅವರಿಗೆ ನೆರವಿಗೆ ಬೇಕಾದಂತಹ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ.
ಈ ಫೌಂಡೇಶನ್ ಭಾರತ ಸೇರಿದಂತೆ ಕರ್ನಾಟಕದ ಹಲವು ಭಾಗದಲ್ಲಿಯೂ ಕೂಡ ಇದೆ ಇನ್ನು ನಟ ಸೋನು ಸೂದ್ ಅವರು ಕೇವಲ ಬಡವರಿಗೆ ಮಾತ್ರ ಸಹಾಯ ಮಾಡಿಲ್ಲ ಇದೀಗ ಟಗರು ಸಿನಿಮಾ ಖ್ಯಾತಿಯ ಮನ್ವಿತ ಕಾಪಾಡ್ ಅವರ ತಾಯಿಯ ಚಿಕಿತ್ಸೆಗೂ ಕೂಡ ನೆರವಾಗಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಮನ್ವಿತಾ ಕಾಮತ್ ಅವರು ಕೆಂಡಸಂಪಿಗೆ, ಟಗರು, ಶಿವ ಲ, ಕನಕ ಹೀಗೆ ಕನ್ನಡದ ಬಹುತೇಕ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಸದ್ಯಕ್ಕೆ ಮನ್ವಿತ ತಾಯಿ ಅವರ ಆರೋಗ್ಯದಲ್ಲಿ ಗಂ.ಭೀ.ರ ಪರಿಣಾಮ ಬೀರಿದೆ. ಹೌದು ಮನ್ವಿತಾ ಕಾಮಿತ್ ಅವರ ತಾಯಿ ಹಲವು ದಿನದಿಂದ ಕಿಡ್ನಿ ಸಮಸ್ಯೆಯ ವೈಫಲ್ಯದಿಂದ ಬಳಲುತ್ತಿದ್ದಾರೆ. ಕಿಡ್ನಿ ಸಮಸ್ಯೆಗೆ ಸಂಬಂಧಪಟ್ಟ ಹಾಗೆ ಯಾರಾದರೂ ನುರಿತ ತಜ್ಞರನ್ನು ನಮಗೆ ತಿಳಿಸಿ ಎಂದು ಮನ್ವಿತ ಕಾಮತ್ ಅವರು ತಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು.
ಇದನ್ನು ಗಮನಿಸಿದ ಮಂಗಳೂರು ಮೂಲದ ಸೋನು ಸೋದ್ ಫೌಂಡೇಶನ್ ಕಾರ್ಯಕರ್ತರೊಬ್ಬರು ಮಾನ್ವಿತಾರನ್ನು ಸಂಪರ್ಕ ಮಾಡಿದ್ದಾರೆ. ಅವರ ತಾಯಿಗೆ ಕಿಡ್ನಿ ವೈಫಲ್ಯತೆ ಇರುವುದನ್ನು ತಿಳಿದ ಬಳಿಕ ಅವರ ಚಿಕಿತ್ಸೆಗೆ ಸೋನು ಸೂದ್ ಫೌಂಡೇಶನ್ ಮುಂದಾಗಿದೆ ಸೋನು ಸೂದ್ ಫೌಂಡೇಷನ್ ಕಡೆಯಿಂದ ತಮಗೆ ಆದ ಸಹಾಯದ ಬಗ್ಗೆ ಮಾನ್ವಿತಾ ಮಾತನಾಡಿದ್ದಾರೆ. ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯಲ್ಲಿ ಮಾನ್ವಿತಾ ತಾಯಿಗೆ ಚಿಕಿತ್ಸೆಯನ್ನು ಕೊಡಿಸಲಾಯಿತು ಸೋನು ಸೂದ್ ಫೌಂಡೇಶನ್ ಮಾನ್ವಿತಾ ಸಹಾಯಕ್ಕೆ ಬಂದಿರುವುದು ಬಹಳ ದೊಡ್ಡ ಅನುಕೂಲವಾಯಿತು ಎಂದು ಹೇಳಿಕೊಂಡಿದ್ದಾರೆ. ಮಾನ್ವಿತಾ ತಾಯಿಗೆ ಡಯಾಲಿಸಿಸ್ ಕೂಡ ಮಾಡಿಸುವ ಅಗತ್ಯತೆ ಇದೆ ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಅವರ ತಾಯಿ ಅನಾರೋಗ್ಯಕ್ಕೀಡಾಗಿದ್ದು ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಖರ್ಚು ಬರುತ್ತಿದೆಯಂತೆ.
ಹಾಗಾಗಿ ಇದೀಗ ಸೋನು ಸೂದ್ ಫೌಂಡೇಶನ್ ಮಾಡಿರುವ ಸಹಾಯ ಬಹಳ ದೊಡ್ಡದು ಎಂದು ಮಾನ್ವಿತಾ ಹೇಳಿಕೊಂಡಿದ್ದಾರೆ. ಇನ್ನು ಆಸ್ಪತ್ರೆಯ ಸಿಇಓ ಜೊತೆಗೆ ಖುದ್ದಾಗಿ ಸೋನು ಸೂದ್ ಅವರೇ ಮಾತನಾಡಿ ಚಿಕಿತ್ಸೆಯ ಕುರಿತು ಸಹಾಯ ಮಾಡುವುದಾಗಿ ಹೇಳಿದ್ದಾರಂತೆ. ಹಾಗಾಗಿ ಮುಂದೆ ಮಾನ್ವಿತಾ ತಾಯಿಗೆ ಕಿಡ್ನಿ ಕಸಿ ನಡೆಯಲಿದ್ದು ಅದಕ್ಕೂ ಕೂಡ ಅವರ ಫೌಂಡೇಶನ್ ಇಂದ ಸಹಾಯ ಮಾಡುವುದಾಗಿ ಭರವಸೆಯನ್ನು ಕೊಟ್ಟಿದ್ದಾರಂತೆ. ಮಾನ್ವಿತಾ ಕಾಮತ್ ಸೋನು ಸೂದ್ ಅವರನ್ನು ಸಹಾಯಕ್ಕಾಗಿ ಹುಡುಕಿಕೊಂಡು ಹೋಗಿಲ್ಲ. ಆದರೆ ಇವರನ್ನು ಹುಡುಕಿಕೊಂಡು ಬಂದು ಅವರೇ ಸಹಾಯ ಮಾಡಿದ್ದಾರೆ ಹಾಗಾಗಿ ಹಲವರ ಊಹೆಯಂತೆ ಅವರು ಪ್ರಚಾರಕ್ಕಾಗಿ ಏನನ್ನೋ ಮಾಡುತ್ತಿಲ್ಲ. ಬದಲಿಗೆ ನಿಜವಾಗಿಯೂ ಸಹಾಯ ಬೇಕಿದ್ದವರಿಗೆ ಸಹಾಯ ಮಾಡುತ್ತಿದ್ದಾರೆ ಅವರು ನಿಜವಾದ ಹೀರೊ ಎನ್ನುತ್ತಾರೆ ನಟಿ ಮಾನ್ವಿತಾ ಕಾಮತ್.
ಸದ್ಯಕ್ಕೆ ಸೋನು ಸೂದ್ ಅವರು ತಮ್ಮ ತಾಯಿಗೆ ಮಾಡಿದಂತಹ ಸಹಾಯವನ್ನು ನೆನೆದಂತಹ ಮನ್ವಿತಾ ಕಾಮತ್ ಅವರು ಆಗಸ್ಟ್ 24ನೇ ತಾರೀಕು ಸೋನು ಸುಧಾ ಅವರಿಗೆ ಟ್ವಿಟರ್ ಮೂಲಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಈ ಟ್ವಿಟ್ ನಲ್ಲಿ ಮನ್ವಿತಾ ಕಾಮತ್ ಈ ರೀತಿ ಬರೆದುಕೊಂಡಿದ್ದಾರೆ “ಈಗಷ್ಟೇ ಸೋನು ಸೂದ್ ಸರ್ ಜೊತೆಗೆ ಮಾತನಾಡಿದೆ. ಅವರು ನನ್ನ ತಾಯಿಗಾಗಿ ಮಾಡಿದ ಸಹಾಯಕ್ಕೆ ನಾನು ಮನಸಾರೆ ಧನ್ಯವಾದವನ್ನು ತಿಳಿಸುತ್ತೇನೆ. ನೀವು ನಿಜವಾಗಿಯೂ ಹೀರೊ ಸರ್. ಎಲ್ಲದಕ್ಕೂ ಧನ್ಯವಾದಗಳು” ಎಂದು ಮನ್ವಿತಾ ಕಾಮತ್ ತಮ್ಮ ಟ್ವೀಟ್ನಲ್ಲಿ ಬರೆದು ನಟ ಸೋನು ಸೂದ್ ಟ್ಯಾಗ್ ಮಾಡಿದ್ದಾರೆ. ನಿಜಕ್ಕೂ ಸೋಲುಸುವುದವರ ಈ ಒಂದು ಸಮಾಜಮುಖಿ ಸೇವೆಯನ್ನು ನಾವೆಲ್ಲರೂ ಗೌರವಿಸಲೇಬೇಕು.
Justttt spoke to @SonuSood sir and thanked him personally for alll that he did for my mother. You are truly a hero,sir. Thank you so much for everything! 🙏🙏
— Manvita Kamath (@manvitakamath) August 24, 2022
ಏಕೆಂದರೆ ಬಾಲಿವುಡ್ ನಲ್ಲಿ ಸಾಕಷ್ಟು ಖಾನ್ ಗಳು ಇದ್ದಾರೆ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಮಾಡಿದ್ದಾರೆ ಆದರೆ ಯಾರು ಕೂಡ ಸಹಾಯ ಮಾಡಿದಂತಹ ಇತಿಹಾಸವನ್ನು ನಾವು ಕೇಳೇ ಇಲ್ಲ. ಅಷ್ಟೇ ಅಲ್ಲದೆ ಫೌಂಡೇಶನ್ ಹೊಂದಿರುವಂತಹ ನಟನು ಕೂಡ ಇಲ್ಲ ಆದರೆ ಈ ಎಲ್ಲಾ ಖಾನ್ ಗಳ ನಡುವೆ ಸೋನು ಸೂದ್ ಅವರು ಮಾತ್ರ ಬಾನಂಗಳದಲ್ಲಿ ಇರುವಂತಹ ಚಂದ್ರನಂತೆ ಕಂಗೊಳಿಸುತ್ತಾರೆ ಎಂದು ಹೇಳಿದರು ಕೂಡ ತಪ್ಪಾಗಲಾರದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಸೋನು ಸೂದ್ ಅವರು ಮಾಡಿದಂತಹ ಈ ಸಹಾಯ ನಿಮಗೆ ಮೆಚ್ಚುಗೆ ಆಗಿದ್ದರೆ ರಿಯಲ್ ಹೀರೋ ಸೋನು ಸೂದ್ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.