ತನ್ನ ಚಟಪಟ ಮಾತಿನ ಮುಖಾಂತರವೇ ಕರ್ನಾಟಕದಾದ್ಯಂತ ಹೆಸರುವಾಸಿ ಆಗಿರುವಂತಹ ನಂಬರ್ ಒನ್ ಆಂಕರ್ ಅಂದರೆ ಅದು ಅನುಶ್ರೀ ಅಂತ ಹೇಳಬಹುದು. ಮೂಲತಃ ಮಂಗಳೂರಿನವರಾದರೂ ಕೂಡ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ ಇವರ ಮಾತಿಗೆ ಫಿದಾ ಆಗದವರೇ ಇಲ್ಲ. ಕಾರ್ಯಕ್ರಮ ಇರಲಿ, ರಿಯಾಲಿಟಿ ಶೋ ಇರಲಿ, ಸಿನಿಮಾಗೆ ಸಂಬಂಧಪಟ್ಟಂತಹ ಸಮಾರಂಭ ಇರಲಿ, ರಾಜಕೀಯ ವಿಚಾರವಾಗಿರಲಿ ಎಲ್ಲಾ ಕಡೆಯಲ್ಲೂ ಕೂಡ ಸದ್ಯಕ್ಕೆ ಆಂಕರ್ ಅನುಶ್ರೀ ಅವರ ನಿರೂಪಣೆಯೇ ಕಾಣಿಸಿಕೊಳ್ಳುತ್ತದೆ. ಒಂದು ಕಾಲದಲ್ಲಿ ಅವಕಾಶವಿಲ್ಲದೆ ಮೂಲೆ ಗುಂಪಾಗಿದ್ದಂತಹ ಅನುಶ್ರೀ ಇಂದು ಬಹು ಬೇಡಿಕೆಯ ಆಂಕರ್ ಆಗಿ ಗುರುತಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ನಂಬರ್ ಒನ್ ಆಂಕರ್ ಎಂಬ ಪಟ್ಟವನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ ಕಳೆದ ನಾಲ್ಕು ವರ್ಷಗಳಿಂದಲೂ ಕೂಡ ನಂಬರ್ ಒನ್ ಆಂಕರ್ ಎಂಬ ಬಿರುದನ್ನು ಅನುಶ್ರೀ ಅವರೇ ಪಡೆಯುತ್ತಿದ್ದರೆ ನಿಜಕ್ಕೂ ಇವರ ಶ್ರಮ ಹಾಗೂ ಡೆಡಿಕೇಶನ್ ಅನ್ನು ನಾವೆಲ್ಲರೂ ಮೆಚ್ಚಲೇಬೇಕು. ಅನುಶ್ರೀ ಅವರು ಬಿಗ್ ಬಾಸ್ ಸೀಸನ್ ಒಂದರಲ್ಲೂ ಕೂಡ ಸ್ಪರ್ಧಿಯಾಗಿದ್ದರು ಇದಾದ ನಂತರ ಡಿಮ್ಯಾಂಡ್ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಸ್ತೂರಿ ವಾಹಿನಿಯ ಬಂಗಾರದ ಬೇಟೆ, ಡ್ಯಾನ್ಸ್ ವಿತ್ ಡಾನ್ಸ್ ಇನ್ನಿತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೊಟ್ಟಮೊದಲ ಬಾರಿಗೆ ಕಸ್ತೂರಿ ವಾಹಿನಿಯಲ್ಲಿ ಆಂಕರಿಂಗ್ ವೃತ್ತಿಯನ್ನು ಆರಂಭಿಸುತ್ತಾರೆ ಇಲ್ಲಿಂದ ಇವರ ಜರ್ನಿ ಪ್ರಾರಂಭವಾಗುತ್ತದೆ.
ತದನಂತರ ಇವರು ಸೋತ ಇತಿಹಾಸವೇ ಇಲ್ಲ ಅಲ್ಲಿಂದ ಹಿಡಿದು ಇಲ್ಲಿಯವರೆಗೂ ಕೂಡ ಬಹಳಷ್ಟು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ ಅನುಶ್ರೀ ಅವರ ನಿರೂಪಣೆ ಅಂದರೆ ಸಾಕು ಎಲ್ಲದ ಜನ ಸಾಗರ ಬಂದು ನಿಲ್ಲುತ್ತಾರೆ. ಇವರ ಮಾತಿಗೆ ಇವರ ನಡೆಗೆ ಇವರ ನುಡಿಗೆ ಅಷ್ಟೊಂದು ಪ್ರಾಧ್ಯಾನತೆ ಇದೆ ಎಂಬುದು ಇದರಿಂದಲೇ ತಿಳಿಯುತ್ತದೆ ಅನುಶ್ರೀ ಅವರು ಕಳೆದ 15 ವರ್ಷಗಳಿಂದಲೂ ಕೂಡ ಆಂಕರಿಂಗ್ ವೃತ್ತಿಯನ್ನು ಮಾಡುತ್ತಿದ್ದಾರೆ. ಆದರೆ ಇವರಿಗೆ ಹೆಸರು ಮತ್ತು ಕೀರ್ತಿಯನ್ನು ತಂದು ಕೊಟ್ಟಂತಹ ಚಾನೆಲ್ ಅಂದರೆ ಅದು ಜೀ ಕನ್ನಡ ವಾಹಿನಿ ಅಂತಾನೆ ಹೇಳಬಹುದು. ಸರಿಗಮಪ ಹಾಗೂ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆ ಮುಖಾಂತರ ಹೆಚ್ಚು ಪ್ರಸಿದ್ಧಿಯನ್ನು ಪಡೆದರು ಇನ್ನು ಅನುಶ್ರೀ ಅವರು ಕೇವಲ ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲೂ ಕೂಡ ಅಭಿನಯಿಸಿದ್ದಾರೆ.
ಹೌದು ಮಾದ ಮತ್ತು ಮಾನಸಿ ಎಂಬ ಸಿನಿಮಾದಲ್ಲಿ ಸೈಡ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ ಕೇವಲ ಇದಿಷ್ಟು ಮಾತ್ರವಲ್ಲದೆ ಬೆಂಕಿ ಪಟ್ಟಣ ಎನ್ನುವ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿರುವ ಇವರು ಈ ಸಿನಿಮಾದ ಅಭಿನಯಕ್ಕಾಗಿ NAK ಇಂದ ಬೆಸ್ಟ್ ಡೆಬ್ಯು ಆಕ್ಟರ್ ಅವಾರ್ಡ್ ಕೂಡ ಪಡೆದರು. ಇದರೊಂದಿಗೆ ರಿಂಗ್ ಮಾಸ್ಟರ್ ಎನ್ನುವ ಸಿನಿಮಾದಲ್ಲೂ ಕೂಡ ಇವರು ಅಭಿನಯ ಮಾಡಿದ್ದಾರೆ. ಹಾಗೆಯೇ ಪ್ರಜ್ವಲ್ ದೇವರಾಜ್ ಅವರ ಅಭಿನಯದ ಮಾದ ಮತ್ತು ಮಾನಸಿ ಸಿನಿಮಾದಲ್ಲಿ ಟೈಟಲ್ ಟ್ರ್ಯಾಕಿಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ ಈ ಸಿನಿಮಾಕ್ಕಾಗಿ ಇವರು ಕರ್ನಾಟಕ ಸ್ಟೇಟ್ ಅವಾರ್ಡ್ ಕೂಡ ಪಡೆದಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಅನುಶ್ರೀ ಅವರು ಕೇವಲ ಕಿರುತರೆ ಮಾತ್ರವಲ್ಲದೆ ಬೆಳ್ಳಿದರೆ ಎಲ್ಲೂ ಕೂಡ ರಾರಾಜಿಸಿದ್ದಾರೆ, ಇವರಿಗೆ ಪೂರ್ಣ ಪ್ರಮಾಣದ ನಾಯಕ ನಟಿ ಆಗಬೇಕು ಎಂಬ ಆಸೆ ಇತ್ತು. ಆದರೆ ಅವಕಾಶಗಳು ಸಿಗದೇ ಸದ್ಯಕ್ಕೆ ಕಿರುತೆರೆಯಲ್ಲಿ ಮಿಂಚುತ್ತಿದ್ದರೆ ಇನ್ನು ಕೆಲವು ಮೂಲಗಳ ಪ್ರಕಾರ ಅನುಶ್ರೀ ಅವರು ಒಂದು ಕಾರ್ಯಕ್ರಮಕ್ಕೆ ಸುಮಾರು 20 ಲಕ್ಷ ರೂಪಾಯಿ ಈ ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅನುಶ್ರೀ ಅವರು ತಮ್ಮ ಬಿಡುವಿನ ಸಮಯದಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಂಟೆಸ್ಟೆಂಟ್ಗಳ ಜೊತೆ ಹೆಜ್ಜೆಯನ್ನು ಹಾಕುತ್ತಾರೆ ಇದಕ್ಕೆ ಸಂಬಂಧಪಟ್ಟಂತಹ ರಿಲ್ಸ್ ಗಳನ್ನು ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾರೆ.
ಇದರ ಜೊತೆಗೆ ಅನುಶ್ರೀ ಅವರು ಸ್ವಂತ ಯುಟ್ಯೂಬ್ ಚಾನೆಲ್ ಒಂದನ್ನು ಹೊಂದಿದ್ದರೆ ಇದರ ಮೂಲಕ ಸಿನಿಮಾ ರಂಗಕ್ಕೆ ಸಂಬಂಧಪಟ್ಟಂತಹ ಹಾಗೂ ಕಿರುತೆರೆಗೆ ಸಂಬಂಧಪಟ್ಟಂತಹ ಇಂಟರ್ವ್ಯೂಗಳನ್ನು ಮಾಡುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಒಂದು ಕಾಲದಲ್ಲಿ ಕೆಲಸವಿಲ್ಲದೆ ಕುಳಿತಿದ್ದಂತಹ ಅನುಶ್ರೀ ಅವರು ಸದ್ಯಕ್ಕೆ ಕೆಲಸ ಮಾಡುವುದಕ್ಕೆ ಸಮಯ ಸಾಕಾಗುತ್ತಿಲ್ಲ ಎಂಬುವಷ್ಟರ ಎತ್ತರ ಸ್ಥಾನಕ್ಕೆ ಬೆಳೆದು ನಿಂತಿದ್ದಾರೆ. ಇದರ ಜೊತೆಗೆ ಅನುಶ್ರೀಯವರು ರಿಂಗ್ ಮಾಸ್ಟರ್ ಎಂಬ ಸಿನಿಮಾ ಒಂದರಲ್ಲಿ ಹೆಜ್ಜೆ ಹಾಕಿರುವಂತಹ ಹಾಟ್ ಮತ್ತು ರೋಮ್ಯಾಂಟಿಕ್ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನು ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗರು ನಿಜಕ್ಕೂ ಒಂದು ಕ್ಷಣ ಆಶ್ಚರ್ಯ ಚಿಕಿತರಾಗಿದ್ದರೆ ಏಕೆಂದರೆ ಅನುಶ್ರೀ ಅವರು ಇಷ್ಟು ಗ್ಲಾಮರ್ ಲುಕ್ ನಲ್ಲಿ ಎಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ. ಈ ಹಾಡಿನಲ್ಲಿ ಇಷ್ಟು ರೋಮ್ಯಾಂಟಿಕ್ ಆಗಿ ಹಾಟ್ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆ ವಿಡಿಯೋ ಈ ಕೆಳಗಿದೆ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.