ನಿವೇದಿತಾ ಗೌಡ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಸುದ್ದಿಗೆ ಸದ್ದು ಆಗುತ್ತಲೇ ಇರುತ್ತಾರೆ ಈ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಹೌದು ನಿವೇದಿತಾ ಗೌಡ ಅವರು ಯಾವಾಗ ಬಿಗ್ ಬಾಸ್ ಮನೆಗೆ ಹೋಗಿ ಬಂದರೋ ಹಾಗೆನಿಂದ ಹಿಡಿದು ಇಲ್ಲಿಯವರೆಗೂ ಕೂಡ ಪ್ರತಿನಿತ್ಯವೂ ಯಾವುದಾದರೂ ಒಂದು ವಿಚಾರಕ್ಕೆ ಹೆಸರುವಾಸಿ ಆಗುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರೆಟಿಗಳು ಆದಂತಹ ವ್ಯಕ್ತಿಗಳು ಒಂದೆರಡು ವರ್ಷಗಳು ಫೇಮಸ್ ಆಗಿದ್ದ ನಂತರ ಕಣ್ಮರೆಯಾಗುತ್ತಾರೆ. ಆದರೆ ನಿವೇದಿತ ಗೌಡ ಅವರ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿ ಐದು ವರ್ಷಗಳ ಕಳೆದು ಹೋಗಿದೆ ಆದರೆ ಇವರ ಕ್ರೇಜ್ ಎಲ್ಲಿಯೂ ಕೂಡ ಇಲ್ಲಿಯವರೆಗೂ ಕಡಿಮೆಯಾಗಿಲ್ಲ ಅಂತ ಹೇಳಬಹುದು.
ಏಕೆಂದರೆ ಪ್ರತಿನಿತ್ಯವೂ ಕೂಡ ಇವರಿಗೆ ಇರುವಂತಹ ಹೆಸರು ಸ್ಥಾನಮಾನ ಹಾಗೂ ಕ್ರೇಜ್ ಹೆಚ್ಚಾಗುತ್ತಲೆ ಇದೆ. ಬಿಗ್ ಬಾಸ್ ಮನೆಯಲ್ಲಿ ನಾವಿಬ್ಬರು ಅಣ್ಣ ತಂಗಿ ಬೆಸ್ಟ್ ಫ್ರೆಂಡ್ ಅಂತ ತೋರಿಸಿಕೊಂಡಿದ್ದಂತಹ ನಿವೇದಿತಾ ಚಂದನ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ತಾವಿಬ್ಬರು ಪ್ರೀತಿಸುತ್ತಿದ್ದೇನೆ ಮದುವೆಯಾಗುತ್ತಿದ್ದೇವೆ ಎಂಬ ವಿಚಾರ ರಿವೀಲ್ ಮಾಡಿದರು. ಅದು ಕೂಡ ಈ ಒಂದು ವಿಚಾರವನ್ನು ದಸರಾ ವೇದಿಕೆಯಲ್ಲಿ ಹೇಳುವ ಮೂಲಕ ಕೆಲವು ಟೀಕೆಗೆ ಒಳಗಾಗಿದ್ದರೂ. ಆದರೂ ಕೂಡ ಚಂದನ್ ಶೆಟ್ಟಿ ಅವರು ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ತಾವು ಪ್ರೀತಿಸಿದ ಹುಡುಗಿಯನ್ನು ಮದುವೆಯಾದರೂ ಮೈಸೂರಿನಲ್ಲಿ ಅದ್ದೂರಿ ಮದುವೆಯಾದಂತಹ ನಿವೇದಿತಾ ಗೌಡ ಅವರು ನೂತನ ಜೀವನಕ್ಕೆ ಕಾಲಿಟ್ಟು ಚಂದನ್ ಶೆಟ್ಟಿಗೆ ಮತ್ತು ಅವರ ಮನೆಯವರಿಗೆಲ್ಲರಿಗೂ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ.
ಇಲ್ಲಿಯವರೆಗೂ ಅವರ ದಾಂಪತ್ಯ ಜೀವನದಲ್ಲಿ ಚಿಕ್ಕದೊಂದು ವಿರಸವು ಕೂಡ ಉಂಟಾಗಿಲ್ಲ ಇನ್ನೇನು ಈ ಜೋಡಿ ಮದುವೆಯಾಗಿ ಮೂರು ವರ್ಷಗಳ ಕಳೆದು ಹೋಗಿದೆ ಆದರೂ ಕೂಡ ಎಲ್ಲಿಯೂ ಕೂಡ ಅಪಸ್ವರ ಕಂಡುಬಂದಿಲ್ಲ. ಇನ್ನು ಚಂದನ್ ಶೆಟ್ಟಿ ಅವರು ಕೂಡ ತಮ್ಮ ಹೆಂಡತಿಯನ್ನು ಬಹಳಷ್ಟು ಪ್ರೀತಿ ಮಾಡುತ್ತಾರೆ ಅಷ್ಟೇ ಅಲ್ಲದೆ ಆಕೆ ಮಾಡುವಂತಹ ಎಲ್ಲಾ ಕೆಲಸಗಳಿಗೂ ಕೂಡ ಸಪೋರ್ಟ್ ಮಾಡುತ್ತಾರೆ. ಈ ಕಾರಣಕ್ಕಾಗಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ನಡುವೆ ಯಾವುದೇ ರೀತಿಯಾದಂತಹ ಬಿರುಕು ಉಂಟಾಗಿಲ್ಲ ಅಂತ ಹೇಳಬಹುದು. ಸದ್ಯಕ್ಕೆ ನಿವೇದಿತಾ ಗೌಡ ಅವರು ಕಿರುತೆರೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೆಸರುವಾಸಿಯಾಗಿದ್ದು ತೆಲುಗು ಚಿತ್ರರಂಗವು ಕೂಡ ಕಾಲಿಡುತ್ತಿದ್ದಾರೆ.
ಹೌದು ತೆಲುಗು ಚಿತ್ರರಂಗದಿಂದ ಸಿನಿಮಾ ಆಫರ್ ಬಂದಿದ್ದು ಆ ಸಿನಿಮಾದಲ್ಲಿ ನಾಯಕ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದೇನೆ ಎಂದು ಸ್ವತಃ ನಿವೇದಿತ ಗೌಡ ಅವರೇ ಹೇಳಿದ್ದಾರೆ. ಇಷ್ಟು ದಿನಗಳ ಕಾಲ ಕನ್ನಡದಲ್ಲಿ ಮನೆ ಮಾತಾಗಿದಂತಹ ನಿವೇದಿತ ಗೌಡ ಅವರು ಇನ್ನು ಮುಂದೆ ತೆಲಗು ಚಿತ್ರರಂಗದಲ್ಲಿಯೂ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಿವೇದಿತಾ ಗೌಡ ಅವರು ತಮ್ಮ ಬಿಡುವಿನ ಸಮಯದಲ್ಲಿ ಇನ್ಸ್ಟಾಗ್ರಾಮ್ ರಿಲ್ಸ್ ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ತಮ್ಮ ಪತಿಯೊಟ್ಟಿಗೆ ವಿಡಿಯೋ ಮಾಡುವುದರ ಮೂಲಕ ಅದನ್ನು ಅಪ್ಲೋಡ್ ಮಾಡಿ ಜನರಿಗೆ ಮನರಂಜನೆಯನ್ನು ನೀಡುತ್ತಾರೆ. ಅದೇ ರೀತಿ ಈ ಬಾರಿ ನಿವೇದಿತ ಗೌಡ ಅವರು ತಮ್ಮ ಪತಿಯೊಂದಿಗೆ ಕುಳಿತುಕೊಂಡು ಹಾಡಿದಂತಹ ಹಾಡೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತ ಗೌಡ ಅವರು ಸ್ಪಷ್ಟ ಕನ್ನಡ ಮಾತನಾಡುವುದಿಲ್ಲ ಅವರು ಮಾತನಾಡುವಂತಹ ಶೈಲಿ ಮತ್ತು ವಿಧಾನವೇ ಬೇರೆ. ನಿವೇದಿತಾ ಗೌಡ ಅವರು ಮಾತನಾಡುವುದನ್ನು ಕೇಳಿ ಕೆಲವು ಜನ ಟೀಕೆ ಮಾಡುತ್ತಾರೆ ಇನ್ನು ಕೆಲವು ಜನ ಈಕೆಗೆ ಕನ್ನಡವೇ ಬರುವುದಿಲ್ಲ ಅಂತ ನಿಂದಿಸುತ್ತಾರೆ. ಇನ್ನೂ ಕೆಲವರು ಅಪಹಾಸ್ಯ ಮಾಡುತ್ತಾರೆ ಆದರೆ ನಿವೇದಿತಾ ಗೌಡ ಅವರು ಇದ್ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ ಇಷ್ಟೆಲ್ಲಾ ಟೀಕೆಗಳು ಇದ್ದರೂ ಕೂಡ ತಮ್ಮ ಪತಿಗಾಗಿ ವಿಶೇಷ ಹಾಡೊಂದು ಹಾಡಿದ್ದಾರೆ. ಹೌದು ನಿವೇದಿತಾ ಗೌಡ ಅವರು ತಮ್ಮ ಕಂಠದ ಮೂಲಕ ಹಾಡನ್ನು ಕವರ್ ಸಾಂಗ್ ಆಗಿ ಹಾಡಿದ್ದಾರೆ. ಇದಕ್ಕೆ ಅವರ ಪತಿ ಚಂದನ್ ಶೆಟ್ಟಿ ಅವರು ಗಿಟಾರ್ ನುಡಿಸಿದ್ದಾರೆ ಸದ್ಯ ಈ ಜೋಡಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇನ್ನು ನಿವೇದಿತಾ ಗೌಡ ಅವರು ಯಾವ ಹಾಡನ್ನು ಹಾಡಿದ್ದಾರೆ? ಯಾವ ರೀತಿ ಹಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.