ಐಶ್ವರ್ಯ ರೈ ಭುವನ ಸುಂದರಿ ಮಿಸ್ ವರ್ಲ್ಡ್ ಅವಾರ್ಡನ್ನು ಗಿಟ್ಟಿಸಿಕೊಂಡವರು ಮೂಲತಃ ಕರ್ನಾಟಕದವರೇ ಅಂತ ಹೇಳಿಕೊಳ್ಳುವುದಕ್ಕೆ ಬಹಳ ಹೆಮ್ಮೆಯಾಗುತ್ತದೆ. ಹೌದು ಐಶ್ವರ್ಯ ರವರು ಮೂಲತಃ ಮಂಗಳೂರಿನ ಮೂಲದವರು ಹುಟ್ಟಿದ್ದು ಬೆಳೆದದ್ದು ಎಲ್ಲವೂ ಕೂಡ ಮಂಗಳೂರಿನಲ್ಲಿ. ಮೊದಲಿಗೆ ತಮಿಳು ಸಿನಿಮಾ ಒಂದರಲ್ಲಿ ನಟನೆ ಮಾಡುತ್ತಾರೆ ಈ ಸಿನಿಮಾದಲ್ಲಿ ಯಶಸ್ಸು ಸಿಕ್ಕ ನಂತರ ಐಶ್ವರ್ಯ ರೈ ಅವರನ್ನು ಕೈಬಿಸಿ ಕರೆದದ್ದು ಬಾಲಿವುಡ್ ಅಂತಾನೇ ಹೇಳಬಹುದು. ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ವಯಸ್ಸು 48 ಆದರೂ ಇನ್ನೂ 25 ವರ್ಷದಂತೆ ಕಾಣುವಂತಹ ಐಶ್ವರ್ಯ ರೈ ಅವರ ಸೌಂದರ್ಯದ ಗುಟ್ಟು ನಿಜಕ್ಕೂ ಇಲ್ಲಿಯವರೆಗೂ ಯಾರಿಗೂ ತಿಳಿದಿಲ್ಲ ಅಂತಾನೆ ಹೇಳಬಹುದು.
ಇನ್ನು ಐಶ್ವರ್ಯ ರೈ ಅವರು ಬಾಲಿವುಡ್ ನ ಬಿಗ್ ಬಾಸ್ ಆದಂತಹ ಅಮಿತಾ ಬಚ್ಚನ್ ಅವರ ಏಕೈಕ ಸುಪುತ್ರ ಅಭಿಷೇಕ್ ಬಚ್ಚನ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಈ ದಂಪತಿಗಳಿಗೆ ಆರಾಧ್ಯ ಬಚ್ಚನ್ ಎಂಬ ಹೆಣ್ಣು ಮಗು ಕೂಡ ಇದೆ ಐಶ್ವರ್ಯ ರೈ ಅವರು ತಮ್ಮ ಮಗುವನ್ನು ಬಹಳ ಇಷ್ಟ ಪಡುತ್ತಾರೆ. ಈ ಕಾರಣಕ್ಕಾಗಿಯೇ ಮಗು ಹುಟ್ಟಿದ ಮೇಲೆ ಅವರು ಚಿತ್ರರಂಗದಿಂದ ಕಣ್ಮರೆಯಾಗಿದ್ದಾರೆ ಅಂತಾರೆ ಹೇಳಬಹುದು. ಇದಕ್ಕಿಂತ ಮುಂಚೆ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದರು ಆದರೆ ತಮ್ಮ ಮಗುವಿಗೆ ಜನ್ಮ ಕೊಟ್ಟ ನಂತರ ಸಿನಿಮಾ ರಂಗದ ಕಡೆ ಆಸಕ್ತಿ ಮತ್ತು ಒಲವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಸಧ್ಯಕ್ಕೆ ತಮ್ಮ ಮಗುವಿನ ಲಾಲನೆ ಪಾಲನೆ ಪೋಷಣೆಯಲ್ಲಿ ಹೆಚ್ಚು ಗಮನ ನೀಡುತ್ತಿದ್ದಾರೆ ಅಷ್ಟೇ ಅಲ್ಲದೆ ಆಕೆಯ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ.
ಹೌದು ಐಶ್ವರ್ಯ ರೈ ಅವರು ತಮ್ಮ ಮಗಳು ಆರಾಧ್ಯ ಬಚ್ಚನ್ ಅವರನ್ನು ದೇಶದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಓದಿಸುತ್ತಿದ್ದಾರೆ ಇಲ್ಲಿಯವರೆಗೂ ಕೂಡ ಯಾವ ಸೆಲೆಬ್ರಿಟಿ ಯು ಕೂಡ ಇಂತಹದೊಂದು ದುಬಾರಿ ಬೆಲೆಯ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿಲ್ಲ. ಇದೆ ಮೊದಲ ಬಾರಿಗೆ ಐಶ್ವರ್ಯ ರೈ ಅವರು ತಮ್ಮ ಮಗಳ ಉತ್ತಮ ಭವಿಷ್ಯಕ್ಕಾಗಿ ದುಬಾರಿ ಬೆಲೆಯ ಶಾಲೆಗೆ ಸೇರಿಸಿ ಆಕೆಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಹೌದು ಮಿತ್ರರೇ ಆರಾಧ್ಯ ಬಚ್ಚನ್ ಅವರು ವಿದ್ಯಾಭ್ಯಾಸ ಮಾಡುತ್ತಿರುವುದು ಪ್ರತಿಷ್ಠಿತ ದೀರುಬಾಯ್ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ. ಇನ್ನು ಆರಾಧ್ಯ ಬಚ್ಚನ್ ಶಿಕ್ಷಣಕ್ಕಾಗಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಇಬ್ಬರು ಖರ್ಚು ಮಾಡುತ್ತಿರುವುದು ಪ್ರತಿ ತಿಂಗಳಿಗೆ ಬರೋಬ್ಬರಿ 50 ಲಕ್ಷ ರೂಪಾಯಿ. ಇದು ನಿಜಕ್ಕೂ ಕೂಡ ಅತ್ಯಂತ ದುಬಾರಿ ಆಗಿದ್ದು ಈ ಮೊತ್ತ ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆಯಾಗಿ ಮಕ್ಕಳಾದರೂ ಕೂಡ ತಮ್ಮ ವೃತ್ತಿ ಜೀವನದಲ್ಲಿ ಮುಂದುವರೆಯುತ್ತಾರೆ ಹೆಚ್ಚಿನ ಯಶಸ್ಸು ಮತ್ತು ಹಣವನ್ನು ಗಳಿಸಬೇಕು ಎಂದು ಮುನ್ನುಗುತ್ತಾರೆ. ಆದರೆ ಐಶ್ವರ್ಯ ರೈ ಅವರು ಮಾತ್ರ ಹಣಕ್ಕಿಂತಲೂ ಮಗುವಿನ ಭವಿಷ್ಯ ಮುಖ್ಯ ಆಕೆಯ ವಿದ್ಯಾಭ್ಯಾಸ ಮುಖ್ಯ ಎಂಬುದನ್ನು ಮನಗೊಂಡು ಸದ್ಯಕ್ಕೆ ಎಲ್ಲಾ ಸಿನಿಮಾ ಕೆಲಸಗಳಿಗೂ ಕೂಡ ತೆರೆ ಎಳೆದಿದ್ದು ಆರಾಧ್ಯ ಬಚ್ಚನ್ ಅವರ ವಿದ್ಯಾಭ್ಯಾಸದ ಕಡೆ ಮಾತ್ರ ಗಮನ ನೀಡುತ್ತಿದ್ದಾರೆ. ತಿಂಗಳಿಗೆ ಲಕ್ಷ ಲಕ್ಷ ಫೀಸ್ ಕಟ್ಟಿ ತನ್ನ ಮಗುವಿಗೆ ವಿದ್ಯಾಭ್ಯಾಸ ಕೊಡಿಸುತ್ತಿರುವಂತಹ ಐಶ್ವರ್ಯ ರೈ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ