Home Entertainment ದರ್ಶನ್ ನನಗೊಂದು ಮಾತು ಕೊಟ್ಟಿದ್ದಾನೆ, ಎಂಬ ವಿಚಾರವನ್ನು ರಿವೀಲ್ ಮಾಡಿದ ರಕ್ಷಿತಾ ಅಷ್ಟಕ್ಕೂ ಡಿ ಬಾಸ್ ಕೊಟ್ಟ ಮಾತು ಯಾವುದು ಗೊತ್ತಾ.?

ದರ್ಶನ್ ನನಗೊಂದು ಮಾತು ಕೊಟ್ಟಿದ್ದಾನೆ, ಎಂಬ ವಿಚಾರವನ್ನು ರಿವೀಲ್ ಮಾಡಿದ ರಕ್ಷಿತಾ ಅಷ್ಟಕ್ಕೂ ಡಿ ಬಾಸ್ ಕೊಟ್ಟ ಮಾತು ಯಾವುದು ಗೊತ್ತಾ.?

0
ದರ್ಶನ್ ನನಗೊಂದು ಮಾತು ಕೊಟ್ಟಿದ್ದಾನೆ, ಎಂಬ ವಿಚಾರವನ್ನು ರಿವೀಲ್ ಮಾಡಿದ ರಕ್ಷಿತಾ ಅಷ್ಟಕ್ಕೂ ಡಿ ಬಾಸ್ ಕೊಟ್ಟ ಮಾತು ಯಾವುದು ಗೊತ್ತಾ.?

ನಟ ದರ್ಶನ್ ಅವರು ನೋಡುವುದಕ್ಕೆ ಮುಂಗೋಪಿಯಾಗಿರಬಹುದು ಅಷ್ಟೇ ಅಲ್ಲದೆ ಇವರ ಮಾತಿನಲ್ಲಿ ಯಾವುದೇ ರೀತಿಯಾದಂತಹ ಫಿಲ್ಟರ್ ಇರುವುದಿಲ್ಲ ಇದ್ದ ವಿಚಾರವನ್ನು ಇದ್ದಹಾಗೆ ಹೇಳಿಬಿಡುತ್ತಾರೆ. ನೇರ ವ್ಯಕ್ತಿತ್ವಕ್ಕೆ ಹಾಗೂ ನೇರ ನುಡಿಕೆ ಹೆಸರುವಾಸಿಯಾದಂತಹ ವ್ಯಕ್ತಿ ಅಂದರೆ ಅದು ದರ್ಶನ್ ಅಂತಾನೆ ಹೇಳಬಹುದು. ದರ್ಶನ್ ಅವರನ್ನು ಒಂದು ರೀತಿಯಲ್ಲಿ ಅಂಬರೀಶ್ ಅವರಿಗೂ ಕೂಡ ಹೋಲಿಕೆ ಮಾಡಬಹುದು ಏಕೆಂದರೆ ಅಂಬರೀಶ್ ಅವರು ದಾನ ಧರ್ಮ ಮಾಡುವುದರಲ್ಲಿ ಸಹಾಯ ಮಾಡುವುದರಲ್ಲಿ ಚಿತ್ರರಂಗದಲ್ಲಿ ಇರುವಂತಹ ಕಲಾವಿದರನ್ನು ಬೆಳೆಸುವುದರಲ್ಲಿ ಮತ್ತು ಕಠಿಣವಾಗಿ ಮಾತನಾಡುವುದರಲ್ಲಿ ಕೋಪ ಮಾಡಿಕೊಳ್ಳುವುದು ಎಲ್ಲವನ್ನು ಮಾಡುತ್ತಿದ್ದರು.

ಆದರೆ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕೆಟ್ಟ ಉದ್ದೇಶ ಇರುತ್ತಿರಲಿಲ್ಲ ನಿಷ್ಕಲ್ಮಶ ಮನಸ್ಸನ್ನು ಹೊಂದುತ್ತಿದ್ದರು. ಅದೇ ರೀತಿಯಲ್ಲಿ ನಟ ದರ್ಶನ್ ಅವರು ಕೂಡ ಸಾಗುತ್ತಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಇವರನ್ನು ನೋಡಿದರೆ ನಿಜಕ್ಕೂ ಅಂಬರೀಶ್ ಅವರೇ ನೆನಪು ಆಗುತ್ತಾರೆ ಅಂಬರೀಶ್ ಅವರು ಯಾರಿಗೂ ಕೂಡ ಕೇರ್ ಮಾಡುತ್ತಿರಲಿಲ್ಲ ತಾವಯ್ತು ತಮ್ಮ ಕೆಲಸವಾಯಿತು ಅಂತ ಹೋಗುತ್ತಿದ್ದರು ಇನ್ನು ಇವರ ಬಗ್ಗೆ ಯಾರಾದರೂ ಮಾತನಾಡಿದರೆ ಅವರನ್ನು ಸುಮ್ಮನೆ ಕೂಡ ಬಿಡುತ್ತಿರಲಿಲ್ಲ ಯಾರಿಗೂ ಕೂಡ ಎದೆಗುಂದದೆ ಧೈರ್ಯವಾಗಿ ಮಾತನಾಡುತ್ತಿದ್ದರು ಅದೇ ನಡವಳಿಕೆಯನ್ನು ನಟ ದರ್ಶನ್ ಅವರು ಕೂಡ ರೂಪಿಸಿಕೊಂಡು ಹೋಗಿದ್ದಾರೆ.

ಇನ್ನು ದರ್ಶನವರು ಒಮ್ಮೆ ಮಾತು ಕೊಟ್ಟರೆ ಮುಗಿಯಿತು ಆ ಮಾತನ್ನು ಅವರು ಎಂದಿಗೂ ಕೂಡ ತಪ್ಪುವುದಿಲ್ಲ ಆ ಒಂದು ಕೆಲಸದಿಂದ ಹಿಂಜರಿಯುವುದಿಲ್ಲ ಈ ವಿಚಾರ ಸಾಕಷ್ಟು ವಿಚಾರದಲ್ಲಿ ಸಾಬೀತಾಗಿದೆ. ಸದ್ಯಕ್ಕೆ ರಕ್ಷಿತಾ ಪ್ರೇಮ್ ಅವರ ವಿಚಾರದಲ್ಲಿಯೂ ಕೂಡ ಈ ವಿಚಾರ ನೆರವೇರಿದೆ ಅಂತ ಹೇಳಬಹುದು. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಒಂದು ಕಾಲದಲ್ಲಿ ರಕ್ಷಿತಾ ಮತ್ತು ದರ್ಶನ್ ಜೋಡಿ ಅಂದರೆ ಒಂದು ಮೋಡಿ ಮಾಡುತ್ತಿತ್ತು. ಇವರಿಬ್ಬರೂ ಒಟ್ಟಾಗಿ ನಡೆಸಿದಂತಹ ಎಲ್ಲಾ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ ಇಲ್ಲಿಯವರೆಗೂ ಕೂಡ ನಟ ದರ್ಶನ್ ಹಾಗೂ ರಕ್ಷಿತಾ ಕಲಾಸಿಪಾಳ್ಯ, ಮಂಡ್ಯ, ಅಯ್ಯ, ಸುಂಟರಗಾಳಿ ಸಿನಿಮಾಗಳಲ್ಲಿ ನಟಿಸಿದ್ದಾರೆ ಈ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿದೆ.

ಅಂದಿನ ಕಾಲದಲ್ಲಿ ದರ್ಶನ್ ಮತ್ತು ರಕ್ಷಿತಾ ಸಿನಿಮಾ ಅಂದರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು ಈ ಜೋಡಿ ಅಷ್ಟೊಂದು ಮೋಡಿ ಮಾಡಿತು. ಆದರೆ ಮದುವೆಯಾದ ನಂತರ ರಕ್ಷಿತ ಅವರು ಸಿನಿಮಾದಲ್ಲಿ ನಟನೆ ಮಾಡುವುದು ಕಡಿಮೆಯಾಗುತ್ತದೆ ನಟನೆ ಮಾಡುವುದರಿಂದ ದೂರ ಉಳಿದರು ಕೂಡ ರಕ್ಷಿತಾ ಅವರು ದರ್ಶನ್ ಆತ್ಮೀಯ ಸ್ನೇಹಿತರಾಗಿದ್ದರು. ಅಷ್ಟೇ ಅಲ್ಲದೆ ಹಿತೈಷಿಯು ಕೂಡ ಹೌದು ಈ ಕಾರಣಕ್ಕಾಗಿಯೇ ರಕ್ಷಿತಾ ಅವರ ಮನೆಯಲ್ಲಿ ಯಾವುದೇ ಸಮಾರಂಭ ಆದರೂ ಕೂಡ ದರ್ಶನ್ ಅವರು ಭೇಟಿ ನೀಡುತ್ತಿದ್ದರು. ಇನ್ನು ಸಿನಿಮಾದ ವಿಚಾರವಾಗಿ ಆಗಾಗ ದರ್ಶನ್ ಮತ್ತು ರಕ್ಷಿತಾ ಒಟ್ಟಾಗಿ ಸೇರುತ್ತಿದ್ದರು. ಈ ಸಮಯದಲ್ಲಿ ದರ್ಶನ ಅವರ ರಕ್ಷಿತಾ ಅವರಿಗೆ ಒಂದು ಮಾತನ್ನು ಕೊಟ್ಟಿದ್ದರಂತೆ.

ಆ ಮಾತನ್ನು ಇದೀಗ ರಕ್ಷಿತಾ ಅವರು ಸ್ಮರಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ರಕ್ಷಿತಾ ಅವರು ಕೊಟ್ಟಂತಹ ಏಳಿಗೆ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟಿ ರಕ್ಷಿತಾ ಅವರ ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಡಾನ್ಸ್ ಕರ್ನಾಟಕ ಡಾನ್ಸ್ ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದಾರೆ. ಪ್ರತಿ ವಾರವೂ ಕೂಡ ಈ ಒಂದು ಕಾರ್ಯಕ್ರಮದಲ್ಲಿ ಹಲವಾರು ನಟ ನಟಿಯರಿಗೆ ಸಂಬಂಧಪಟ್ಟಂತಹ ಡಾನ್ಸ್ ಅನ್ನು ಮಾಡಲಾಗುತ್ತದೆ. ಈ ಬಾರಿ ನಟ ದರ್ಶನ್ ಅವರಿಗೆ ಸಂಬಂಧಪಟ್ಟಂತಹ ಹಾಡಿಗೆ ಸ್ಪರ್ಧಿಗಳು ಹೆಜ್ಜೆಯನ್ನು ಹಾಕಿದ್ದಾರೆ.

ದರ್ಶನ್ ಮತ್ತು ರಕ್ಷಿತಾ ಕಾಂಬಿನೇಶನ್‌ ನಾ ಸುಂಟರಗಾಳಿ ಹಾಡಿಗೆ ಸ್ಪರ್ಧಿಗಳು ಇದರ ಸಣ್ಣ ಪ್ರೋಮೊ ತುಣುಕನ್ನು ಹರಿಬಿಡಲಾಗಿದೆ. ಇದರಲ್ಲಿ ನಟಿ ರಕ್ಷಿತಾ ದರ್ಶನ್ ಬಗ್ಗೆ ಮಾತನಾಡಿದ್ದಾರೆ ದರ್ಶನ್ ತನಗೆ ಕೊಟ್ಟ ಮಾತಿನ ಬಗ್ಗೆಯೂ ಮಾತನಾಡಿದ್ದಾರೆ. ದರ್ಶನ್ ಬಗ್ಗೆ ಡಿಕೆಡಿ ವೇದಿಕೆ ಮೇಲೆ ರಕ್ಷಿತಾ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ “ದರ್ಶನ್ ನನಗೆ ಯಾವಾಗ್ಲೂ ಒಂದು ಮಾತು ಹೇಳುತ್ತಾ ಇದ್ದರು, ಯಾವಾಗಲೂ ನೀನು ಖುಷಿಯಾಗಿ ಬದುಕಬೇಕು, ಕಷ್ಟ ಬಂದಾಗ ನಿನ್ನ ಬೆನ್ನ ಹಿಂದೆ ನನ್ನ ಕೈ ಯಾವಾಗ್ಲೂ ಇರುತ್ತೆ” ಎಂದು ದರ್ಶನ್ ಹೇಳಿದ್ದಾರೆ ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ.

ಈ ಮೂಲಕ ದರ್ಶನ್ ಜೊತೆಗಿನ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ ರಕ್ಷಿತಾ ಅವರು ಕಾರ್ಯಕ್ರಮದಲ್ಲಿ ತನ್ನ ಹಾಗೂ ದರ್ಶನ್ ರವರ ಪವಿತ್ರ ಸ್ನೇಹದ ಕುರಿತಂತೆ ಎಲ್ಲರಿಗೂ ತಿಳಿಯುವಂತೆ ಮಾತನಾಡಿದ್ದಾರೆ. ಇಬ್ಬರು ಅಂದಿನಿಂದ ಇಂದಿನವರೆಗೂ ಕೂಡ ಒಳ್ಳೆಯ ಸ್ನೇಹಿತರಾಗಿದ್ದಾರೆ ಎನ್ನುವುದು ನಿಜಕ್ಕೂಕೂಡ ಪ್ರತಿಯೊಬ್ಬರೂ ಮೆಚ್ಚಿ ಕೊಳ್ಳಬೇಕಾದ ವಿಚಾರ. ನಟಿ ರಕ್ಷಿತಾ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಂದರೆ ಬಹಳ ಇಷ್ಟ ಮತ್ತು ಅವರಿಗೆ ಬಹಳ ಗೌರವ ಕೊಡುತ್ತಾರೆ. ಬಹಳಷ್ಟು ಚಿತ್ರಗಳಲ್ಲಿ ಒಟ್ಟಾಗಿ ನಟನೆಯನ್ನ ಮಾಡಿರುವ ಇಬ್ಬರು ಬಹಳ ಒಳ್ಳೆಯ ಸ್ನೇಹಿತರು ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯಕ್ಕೆ ನಟಿ ರಕ್ಷಿತಾ ಅವರು ನಟ ದರ್ಶನ್ ಬಗ್ಗೆ ಕೊಟ್ಟಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here