ಸೈಮಾ ಅವಾರ್ಡ್ಸ್ ಗೆ ಆಯ್ಕೆಯಾದ ಡಿ ಬಾಸ್ ರಾಬರ್ಟ್ ಸಿನಿಮಾ, ನಾಮಿನೇಟ್ ಆದ 5 ಸಿನಿಮಾದ ಪೈಕಿ ದರ್ಶನ್ ಸಿನಿಮಾ ಮೊದಲ ಸ್ಥಾನ ಪಡೆದಿದೆ.

ದಕ್ಷಿಣ ಭಾರತದ ಚಿತ್ರರಂಗದ ಅವಾರ್ಡ್ಸ್ ಕಾರ್ಯಕ್ರಮ ಆದ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವೀ ಅವಾರ್ಡ್ಸ್ ಪ್ರಖ್ಯಾತ ಬೆಂಗಳೂರು ನಗರಿಯಲ್ಲಿ ಇಂದಿನಿಂದ ಪ್ರಾರಂಭ ಆಗಿದ್ದು ಈ ಕಾರ್ಯಕ್ರಮ ನಾಳೆಯೂ ಕೂಡ ಮುಂದುವರೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್, ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ವಿಜಯ್ ದೇವರಕೊಂಡ, ತಮಿಳಿನ ಕಮಲ್ ಹಾಸನ್ ಮತ್ತು ಹಿಂದಿಯ ರಣವೀರ್ ಸಿಂಗ್ ಪೀಠವನ್ನು ಅಲಂಕರಿಸಲಿದ್ದಾರೆ. ಈ ಬಾರಿಯ ಸೈಮಾ ಅವಾರ್ಡ್ ನಲ್ಲಿ ಕನ್ನಡದ ಅನೇಕ ಚಿತ್ರಗಳು ಆಯ್ಕೆಯಾಗಿದ್ದು ಅನೇಕ ವಿಭಾಗಗಳಲ್ಲಿ ನಾಮಿನೇಟ್ ಆಗಿ ಪ್ರಶಸ್ತಿ ಸ್ವೀಕಾರಕ್ಕೆ ನಾ ಮುಂದು ತಾ ಮುಂದು ಕಾದು ಕುಳಿತಿವೆ.

ಕನ್ನಡದ ಚಿತ್ರಗಳಷ್ಟೇ ಅಲ್ಲದೇ ದಕ್ಷಿಣ ಭಾರತದ ತೆಲುಗು, ತಮಿಳು ಚಿತ್ರಗಳು ಸಹ ಆಯ್ಕೆಯಾಗಿದ್ದು ಅಲ್ಲಿನ ಎಲ್ಲಾ ಪ್ರಶಸ್ತಿ ಪಡೆಯುವವರು ನಮ್ಮ ಬೆಂಗಳೂರಿಗೆ ಬರಲಿದ್ದಾರೆ. ಈ ಸೈಮಾ ಅವಾರ್ಡ್ಸ್ ನಲ್ಲಿ ಈ ಬಾರಿ ನಮ್ಮ ಡಿ ಬಾಸ್ ಅಭಿನಯದ ರಾಬರ್ಟ್ ಚಿತ್ರ 10 ವಿಭಾಗಗಳಲ್ಲಿ ಆಯ್ಕೆಯಾಗಿದ್ದು ಅತಿ ಹೆಚ್ಚು ವಿಭಾಗಗಳಲ್ಲಿ ಆಯ್ಕೆಯಾದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೊಂದೇ ಅಲ್ಲದೇ ನಮ್ಮ ಅಪ್ಪು ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ 7 ವಿಭಾಗಗಳಲ್ಲಿ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ ಗರುಡ ಗಮನ ವೃಷಭ ವಾಹನ ಚಿತ್ರ 8 ವಿಭಾಗಗಳಲ್ಲಿ ಆಯ್ಕೆಯಾಗಿದ್ದು ಪ್ರಶಸ್ತಿ ಪಡೆಯಲು ಹಾತೊರೆಯುತ್ತಿದ್ದಾರೆ.

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಸೈಮಾ ಈ ಬಾರಿ ತನ್ನ 10 ನೇ ವರ್ಷದ ಸಂಭ್ರಮಾಚಾರಣೆಯಲ್ಲಿದೆ. 2012 ರಲ್ಲಿ ಆರಂಭವಾದ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಸುಮಾರು 19 ವಿಭಾಗಗಳನ್ನು ಆಯ್ದುಕೊಂಡು ಪ್ರಶಸ್ತಿಗಳನ್ನ ವಿತರಣೆ ಮಾಡುತ್ತ ಬಂದಿದ್ದು ಕನ್ನಡ, ತೆಲುಗು, ಮಲೆಯಾಳಮ್, ತಮಿಳು ಭಾಷಾ ಚಿತ್ರಗಳು ಸೈಮಾ ಅಡಿಯಲ್ಲಿ ಬರುತ್ತವೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ-ನಟಿ ಸೇರಿ ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ಭಾಷೆಯಲ್ಲಿ ಸುಮಾರು 19 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ.

ಈಗಾಗಲೇ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ವಿನ್ನರ್ ಯಾರು ಎಂಬುದು ಇಂದು ಮತ್ತು ನಾಳೆ ಘೋಷಣೆ ಆಗಬೇಕಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿಸಿ ಅಪ್ಪು ಅವರನ್ನು ಸ್ಮರಿಸಲಾಯಿತು ನಂತರ ನಾಮಿನೇಷನ್ ಪ್ರಕ್ರಿಯೆ ಜೊತೆಗೆ ಕಾರ್ಯಕ್ರಮ ಆರಂಭಿಸಲಾಯಿತು. 2021ರಲ್ಲಿ ತರುಣ್ ಸುಧಿರ್ ನಿರ್ದೇಶನದ ‘ರಾಬರ್ಟ್​’ ಸಿನಿಮಾ ತೆರೆಗೆ ಬಂದಿತ್ತು ಸುಧಾಕರ್ ರಾಜ್ ಅವರು ಈ ಚಿತ್ರದ ಸಿನಿಮಾಟೋಗ್ರಫಿಗೆ ‘ಬೆಸ್ಟ್ ಸಿನಿಮಾಟೋಗ್ರಫಿ’ (ಕನ್ನಡ) ಪ್ರಶಸ್ತಿ ಪಡೆದುಕೊಂಡಿದ್ದಾರೆ.

‘ನಿನ್ನ ಸನಿಹಕೆ’ ಸಿನಿಮಾದ ‘ನೀ ಪರಿಚಯ..’ ಹಾಡಿಗೆ ವಾಸುಕಿ ವೈಭವ್ ‘ಅತ್ಯುತ್ತಮ ಗೀತ ರಚನಕಾರ’ (ಕನ್ನಡ) ಪ್ರಶಸ್ತಿ ಬಾಚಿಕೊಂಡಿದ್ದಾರೆ. ತರುಣ್ ಸುಧೀರ್ ಅವರೂ ಸಹ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರೆ ಶಿವಣ್ಣ ಅವರು ಸಹ ಭಜರಂಗಿ 2 ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಿನೇಟ್ ಆಗಿ ಪ್ರಶಸ್ತಿ ಸ್ವೀಕಾರಕ್ಕೆ ಕ್ಷಣ ಗಣನೆಗೆ ಕಾದಿದ್ದಾರೆ. ಇನ್ನು ದರ್ಶನ್ ಅವರ ರಾಬರ್ಟ್ ಚಿತ್ರ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪಡೆಯುವುದರ ಮೂಲಕ ತನ್ನ ಮೊದಲನೇ ಪ್ರಶಸ್ತಿ ಖಾತೆಯನ್ನು ತೆರೆದು ಉಳಿದ ಪ್ರಶಸ್ತಿಗಳಿಗೆ ಕಾಯುತ್ತಿದ್ದಾರೆ.

Leave a Comment

WhatsApp Group Join Now
Telegram Group Join Now