ಸರಿಗಮಪದ ಹನುಮಂತ ಯಾರಿಗೆ ಗೊತ್ತಿಲ್ಲ ಹೇಳಿ ಕುರಿ ಕಾಯುತ್ತಿದ್ದ ಈತ ಇಂದು ಕರ್ನಾಟಕದ ಜನಪ್ರಿಯ ಹಾಡುಗಾರನಾಗಿ ಬದಲಾಗಿರುವುದೇ ಒಂದು ರೋಚಕ ಕಥೆ. ಈತ ಈಗ ಕರ್ನಾಟಕದ ಎಲ್ಲರಿಗೂ ಚಿರಪರಿಚಿತ. ಅಷ್ಟೇ ಅಲ್ಲದೆ ಈತನ ಧ್ವನಿ ಹಾಗೂ ಇತರ ಮುಖ ನೋಡಿ ಗುರುತಿಸದವರೇ ಇಲ್ಲ. ಸರಿಗಮಪ ಎನ್ನುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋ ಹಲವರ ಬದುಕಿಗೆ ದಾರಿ ಮಾಡಿಕೊಟ್ಟಿದೆ ಅದರಲ್ಲೂ ಹಳ್ಳಿಗಾಡಿನ ಪ್ರತಿಭೆಗಳಿಗೆ ಹೇಳಿ ಮಾಡಿಸಿದ ವೇದಿಕೆ ಎಂದು ಹೇಳಬಹುದು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಟ್ಟಿನ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ
ಈ ರೀತಿ ಹಳ್ಳಿ ಪ್ರತಿಭೆಗಳ ಗಾನ ಸುದೆಯನ್ನು ಜಗತ್ತಿಗೆ ಸಾರಲು ಅದ್ಭುತ ಅವಕಾಶ ನೀಡುವ ರಿಯಾಲಿಟಿ ಶೋ ಅಲ್ಲಿ ಕುರಿಗಾಹಿ ಹನುಮಂತು ಕೂಡ ಕಂಟೆಸ್ಟೆಂಟ್ ಆಗಿದ್ದರು. ಅಂದಿನಿಂದ ಇವರು ಸರಿಗಮಪ ಹನುಮಂತು ಎಂದೇ ಫೇಮಸ್ ಆಗಿದ್ದಾರೆ. ಕನ್ನಡ ಕಿರುತೆರೆ ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡಿರುವ ಹನುಮಂತು ಜಡ್ಜ್ ಗಳ ವಿಧೇಯ ಕಂಟೆಸ್ಟಂಟ್ ಆಗಿ ಆಂಕರ್ ಅನುಶ್ರೀ ಅವರಿಗೆ ಪ್ರೀತಿಯ ತಮ್ಮನಾಗಿ ಅವಕಾಶ ಸಿಕ್ಕಾಗಲಿಲ್ಲ ಜೀ ಕನ್ನಡ ವೇದಿಕೆಗೆ ಬಂದು ಹಾಡುತ್ತಾರೆ. ಇಂದು ಅವರು ಎಷ್ಟೇ ಫೇಮಸ್ ಆಗಿದ್ದರೂ ಕೂಡ ಅವರ ಮೊದಲ ದಿನ ಅವರಲ್ಲಿ ಯಾವ ಮುಗ್ಧತೆ ಇತ್ತು ಅದರಲ್ಲಿ ಕೊಂಚ ಕೂಡ ಬದಲಾವಣೆ ಆಗಿಲ್ಲ.
ಹಾಡಲು ಅವಕಾಶ ಸಿಕ್ಕರೆ ಮೊದಲು ಜನಪದ ಗೀತೆಗಳನ್ನು ಆರಿಸಿಕೊಳ್ಳುವ ಇವರ ಬಾಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜನಪದ ಗೀತೆಗಳನ್ನು ಕೇಳುವುದೇ ಒಂದು ಖುಷಿ. ಇದಲ್ಲದೆ ಸ್ವಲ್ಪ ಕಾಮಿಡಿ ಸೆನ್ಸ್ ಕೂಡ ಹೊಂದಿರುವ ಇವರು ಜೀ ಕನ್ನಡ ಕಾಮಿಡಿ ಕಾರ್ಯಕ್ರಮಗಳಲ್ಲೂ ಕೂಡ ಗೆಸ್ಟ್ ಆಗಿ ಭಾಗವಹಿಸಿ ಹೊಟ್ಟೆ ಹಣ್ಣಾಗುವಂತೆ ನಗಿಸಿದ್ದಾರೆ. ಇದರ ಜೊತೆಗೆ ಹನುಮಂತು ಅವರ ಮದುವೆಯ ಸುದ್ದಿ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಹನುಮಂತು ಜೀವನದ ಕುರಿತು ಹಲವಾರು ಊಹಪೋಹಗಳನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಷಯಗಳನ್ನು ಹಬ್ಬಿಸಲಾಗುತ್ತಿದೆ.
ಪ್ರತಿ ಬಾರಿ ಕೂಡ ತಮ್ಮ ಮದುವೆ ಕುರಿತು ಬರುವ ಸುದ್ದಿಗಳನ್ನು ನಿರಾಕರಿಸಿ ಮುಗ್ಧತೆಯಿಂದ ನಕ್ಕು ಹೋಗುವ ಹನುಮಂತು ಅವರು ಇನ್ನು ಕೂಡ ಸಿಂಗಲ್ ಆಗಿಯೇ ಉಳಿದಿದ್ದಾರೆ. ಈ ಕಾರಣದಿಂದ ಇವರಿಗೆ ಯುವತಿಯರ ಕಡೆಯಿಂದ ಹಲವು ಪ್ರಪೋಸಲ್ಗಳು ಬರುತ್ತವೆ ಈಗ ಯುವತಿಯರು ಮಾತ್ರವಲ್ಲದೆ ಹೀರೋಗಳು ಕೂಡ ಹನುಮಂತ ಅವರಿಗೆ ಪ್ರಪೋಸ್ ಮಾಡಲು ಶುರು ಆಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ಒಂದಕ್ಕೆ ಅತಿಥಿಯಾಗಿ ಭಾಗವಹಿಸಿದ ಕನ್ನಡದ ನಟಿ ನಿಷಿಕ ನಾಯ್ಡು ಅವರು ಅದೇ ಕಾರ್ಯಕ್ರಮದಲ್ಲಿ ಹಾಡಲು ಬಂದಿದ್ದ ಹನುಮಂತ ಅವರಿಗೆ ಪ್ರಪೋಸ್ ಮಾಡಿದ್ದಾರೆ.
ಅದಕ್ಕೆ ನಾಚಿ ನೀರಾದ ಹನುಮಂತ ಏನು ಮಾತನಾಡಬೇಕು ಎಂದು ತಿಳಿಯದೆ ಸುಮ್ಮನಾಗಿದ್ದಾರೆ, ನಿಷಿಕ ನಾಯ್ಡು ಅವರು ಮಾತನಾಡಿ ನನಗಾಗಿ ಒಂದು ಹಾಡು ಹಾಡು ಎಂದಾಗ ಜಾನಪದ ಗೀತೆ ಹಾಡುತ್ತೇನೆ ಎಂದಿದ್ದಾರೆ. ಅದಕ್ಕೆ ಅದು ಬೇಡ ರೋಮ್ಯಾಂಟಿಕ್ ಎಂದರೆ ಏನು ಗೊತ್ತ ಎಂದಾಗ ಗೊತ್ತಿಲ್ಲ ಅಕ್ಕ ಹೇಳಿಕೊಡಿ ಎಂದು ನಿಷಿಕ ನಾಯ್ಡು ಅವರಿಗೆ ಉತ್ತರಿಸಿದ್ದಾರೆ, ಇದರಿಂದಲೇ ತಿಳಿಯುತ್ತದೆ ಹನುಮಂತ ಎಷ್ಟು ಮುಗ್ಧ ಎಂದು ಕೊನೆಗೂ ಹನುಮಂತು ಹಾಡಿದ ಜಾನಪದ ಗೀತೆಗೆ ನಿಷಿಕ ನಾಯ್ಡು ನಿದ್ದೆ ಹೋಗಿದ್ದಾರೆ. ವೇದಿಕೆ ಮೇಲೆ ನಡೆದ ಒಂದು ಕಾಮಿಡಿ ಸನ್ನಿವೇಶ ಇದಾಗಿದೆ. ಈ ವಾರ ಪ್ರಸಾರವಾದ ಜೀ ಕನ್ನಡ ವಾಹಿನಿಯ ಜೋಡಿ ನಂಬರ್ ವನ್ ರಿಯಾಲಿಟಿ ಶೋ ಎಪಿಸೋಡ್ ಅಲ್ಲಿ ಇದು ಪ್ರಸಾರವಾಗಿದೆ.