Home Entertainment ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ನಿವೇದಿತಾ ಗೌಡ ಈಕೆಯ ಡೈಲಾಗ್ ಕೇಳಿದ್ರೆ ನಿಜಕ್ಕೂ ಬೆರಗಾಗಿ ಹೋಗುತ್ತೀರಾ.

ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ನಿವೇದಿತಾ ಗೌಡ ಈಕೆಯ ಡೈಲಾಗ್ ಕೇಳಿದ್ರೆ ನಿಜಕ್ಕೂ ಬೆರಗಾಗಿ ಹೋಗುತ್ತೀರಾ.

0
ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ನಿವೇದಿತಾ ಗೌಡ ಈಕೆಯ ಡೈಲಾಗ್ ಕೇಳಿದ್ರೆ ನಿಜಕ್ಕೂ ಬೆರಗಾಗಿ ಹೋಗುತ್ತೀರಾ.

ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆ ನೋಡಿದರೂ ಕೂಡ ನಿವೇದಿತಾ ಗೌಡ ಅವರಿಗೆ ಸಂಬಂಧಪಟ್ಟಂತಹ ವಿಡಿಯೋಗಳು ಫೋಟೋಗಳು ಟ್ರೋಲ್ ಗಳು ಹೆಚ್ಚಾಗಿ ಕಾಣಿಸುತ್ತದೆ. ಅಷ್ಟಕ್ಕೂ ಈ ನಿವೇದಿತ ಗೌಡ ಪ್ರತಿನಿತ್ಯ ಯಾಕೆ ಈ ರೀತಿ ಸುದ್ದಿಯಲ್ಲಿ ಇರುತ್ತಾರೆ ಎಂಬುದನ್ನು ನೋಡುವುದಾದರೆ ಇವರು ಸಾಮಾನ್ಯರಲ್ಲ. ಹೌದು ಸಾಕಷ್ಟು ವಿಭಿನ್ನತೆ ಮತ್ತು ವೈಶಿಷ್ಟತೆಯನ್ನು ಹೊಂದಿರುವಂತಹ ಗುಣಲಕ್ಷಣವನ್ನು ಒಳಗೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಸುದ್ದಿಗೆ ಹೆಸರುವಾಸಿಯಾಗಿರುತ್ತಾರೆ. ಇಷ್ಟು ದಿನಗಳ ಕಾಲ ಕೇವಲ ನೀವು ನಿವೇದಿತಾ ಗೌಡ ಅವರ ಫೋಟೋಸ್ ಅನ್ನು ಮತ್ತು ಡಾನ್ಸ್ ಮಾಡುವಂತಹ ವಿಡಿಯೋಗಳನ್ನು ಅಥವಾ ಪ್ರಾಂಕ್ ಮಾಡುವಂತಹ ವೀಡಿಯೋಸ್ಗಳನ್ನು ಅಥವಾ ಹಾಡು ಹೇಳುವಂತಹ ವಿಡಿಯೋಗಳನ್ನು ಮಾತ್ರ ನೋಡಿದ್ದೀರಿ.

ಆದರೆ ಇದೇ ಮೊದಲ ಬಾರಿಗೆ ಖಡಕ್ ಪೊಲೀಸ್ ವೇಷಾ ಧರಿಸಿದಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೋಡುಗರ ಗಮನವನ್ನು ಸೆಳೆದಿದೆ. ಹೌದು ಅಷ್ಟಕ್ಕೂ ನಿವೇದಿತ ಗೌಡ ಪೊಲೀಸ್ ಡ್ರೆಸ್ ಹಾಕಿದ್ದಾದರೂ ಯಾಕೆ ಎಂಬುದನ್ನು ನೋಡುವುದಾದರೆ. ಚುಟ್ಕಿ ಎಂಬ ವೆಬ್ ಸೀರೀಸ್ ಪ್ರಾರಂಭವಾಗಿದ್ದು ಈ ಒಂದು ವೆಬ್ ಸೀರೀಸ್ ನಲ್ಲಿ ನಿವೇದಿತಾ ಗೌಡ ಅವರು ಖಡಕ್ ಪೊಲೀಸ್ ಅಧಿಕಾರಿ ಆಗಿ ಕಾಣಿಸಿಕೊಂಡಿದ್ದಾರೆ. ಕಳ್ಳನನ್ನು ಹಿಡಿಯುವ ಕೆಲಸದಲ್ಲಿ ನಿರತರಾಗಿರುವಂತಹ ನಿವೇದಿತ ಗೌಡ ಅವರು ಕಳ್ಳನನ್ನು ಹಿಡಿದು ತಂದು ಸ್ಟೇಷನ್ ಗೆ ಹಾಕುತ್ತಾರೆ.

ತದನಂತರ ಲಾಕ್ ಅಪ್ ಗೆ ಹಾಕುವುದಕ್ಕಿಂತ ಮುಂಚೆ ಕಳ್ಳನ ಬಾಯಿಂದ ನಿಜವನ್ನು ಹೊರ ಹಾಕಿಸುವಂತಹ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಕಳ್ಳ ನಿವೇದಿತಾ ಗೌಡ ಅವರ ವೇಷಭೂಷಣ ಹಾಗೂ ಡೈಲಾಗ್ ಕೇಳಿ ನಗುತ್ತಾನೆ. ಸಾಮಾನ್ಯವಾಗಿ ಪೊಲೀಸ್ ಅಂದರೆ ಒಂದು ಗತ್ತು ಇರುತ್ತದೆ ಆತನನ್ನು ಅಥವಾ ಆಕೆಯನ್ನು ನೋಡಿದಾಗ ಭಯ ಮೂಡುವುದು ಸಹಜ. ಆದರೆ ನಿವೇದಿತ ಗೌಡ ಅವರನ್ನು ನೋಡಿ ಈತ ಕಿಂಚಿತ್ತು ಕೂಡ ಭಯಪಡುವುದಿಲ್ಲ ಬದಲಾಗಿ ಕಾಮಿಡಿ ಪೀಸ್ ತರ ಟ್ರೀಟ್ ಮಾಡುತ್ತಾನೆ.

ಇನ್ನು ನಿವೇದಿತಾ ಗೌಡ ಅವರ ಜೊತೆ ಕಾನ್ಸ್ಟೇಬಲ್ ಪಾತ್ರ ನಿರ್ವಹಿಸಿದಂತಹ ವ್ಯಕ್ತಿಯು ಕೂಡ ನಿವೇದಿತಾ ಗೌಡ ಅವರು ಹೇಳುವಂತಹ ಡೈಲಾಗ್ ಅನ್ನು ಕೇಳಿ ನಗುತ್ತಾನೆ. ಆದರೆ ಇದೊಂದು ಮನರಂಜನಾ ದೃಷ್ಟಿಯಿಂದ ಮಾಡಿದಂತಹ ವಿಡಿಯೋ ಆಗಿದೆ ಹಾಗಾಗಿ ಇದನ್ನು ನೋಡಿದಂತಹ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ‌ ಇಷ್ಟು ದಿನಗಳ ಕಾಲ ಚೈಲ್ಡ್ ಆಗಿ ಕಾಣಿಸಿಕೊಂಡಿದ್ದಂತಹ ನಿವೇದಿತಾ ಗೌಡ ಅವರು ಇದೇ ಮೊದಲ ಬಾರಿಗೆ ಪ್ರಬುದ್ಧಮಾನವಾಗಿ ಕಾಣಿಸಿಕೊಂಡಿದ್ದಾರೆ ಎಂದು ಕೆಲವು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದೆಲ್ಲವನ್ನು ನೋಡುತ್ತಿದ್ದರೆ ಮುಂದೊಂದು ದಿನ ನಿವೇದಿತ ಗೌಡ ಅವರು ಬೆಳ್ಳಿತೆರೆಯಲ್ಲಿ ಖಂಡಿತವಾಗಿಯೂ ಕೂಡ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ. ಉತ್ತಮವಾದಂತಹ ಚಿತ್ರದಲ್ಲಿ ಪಾತ್ರವನ್ನು ಪಡೆದುಕೊಳ್ಳುತ್ತಾರೆ ಎಂಬುದು ನಿವೇದಿತಾ ಗೌಡ ಅವರ ಅಭಿಮಾನಿಗಳ ವಾದವಾಗಿದೆ. ಸದ್ಯಕಂತು ಯಾವುದೇ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ನೋಡಿದರೂ ಕೂಡ ಅಲ್ಲಿ ನಿವೇದಿತಾ ಗೌಡ ಅವರ ಈ ಖಡಕ್ ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್ ಆಗಿದೆ. ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ ನಿಜಕ್ಕೂ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಾ. ನಿವೇದಿತ ಗೌಡ ಅವರು ಅಂತಹ ಮೋಡಿಯನ್ನು ಈ ವಿಡಿಯೋದಲ್ಲಿ ಮಾಡಿದ್ದಾರೆ ನೀವು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here