ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಸೀಸನ್ 9ರಲ್ಲಿ ಹೈಲೈಟ್ ಆಗಿರುವ ವ್ಯಕ್ತಿ ಅಂದರೆ ಅದು ಆರ್ಯವರ್ಧನ್ ಗುರೂಜಿ ಅಂತನೇ ಹೇಳಬಹುದು. ಓಟಿಟಿಯಲ್ಲಿ ಪ್ರಾರಂಭವಾದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೊನೆಯವರೆಗೂ ಕೂಡ ಇದ್ದು ಟಾಪ್ ಎರಡನೇ ಸ್ಥಾನವನ್ನು ಪಡೆದು ಇದೀಗ ಬಿಗ್ ಬಾಸ್ ಸೀಸನ್ 9 ರ ಮನೆಗೆ ಕಾಲಿಟ್ಟಿದ್ದಾರೆ. ಮೊದಲ ವಾರದಿಂದಲೂ ಗುರೂಜಿಯವರು ಉತ್ತಮವಾಗಿಯೇ ಆಟ ಆಡಿಕೊಂಡು ಬಂದಿದ್ದಾರೆ ಅದರಲ್ಲಿಯೂ ಕೂಡ ಟಾಸ್ಕ್ ವಿಚಾರದಲ್ಲಿ 100% ನೀಡುತ್ತಾರೆ. ಕೇವಲ ಇದಿಷ್ಟು ಮಾತ್ರವಲ್ಲದೆ ಮನೆಯ ಸ್ವಚ್ಛತೆಯ ಬಗ್ಗೆ ಅಡುಗೆಯ ಬಗ್ಗೆ ಎಲ್ಲದರಲ್ಲೂ ಕೂಡ ಹೆಚ್ಚಿನ ಗಮನವನ್ನು ನೀಡುತ್ತಾರೆ.
ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339
ಆದರೆ ಕಳೆದ ವಾರ ಸುದೀಪ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ. ಸುದೀಪ್ ಎದುರಿಗೆ ಬಿಗ್ ಬಾಸ್ ಒಂದು ಮ್ಯಾಚ್ ಫಿಕ್ಸಿಂಗ್ ಅನುಪಮಾ ಗೌಡ ಅವರನ್ನು ಗೆಲ್ಲಿಸುವುದಕ್ಕಾಗಿ ನೀವೆಲ್ಲರೂ ಅವರಿಗೆ ಸಪೋರ್ಟ್ ಮಾಡುತ್ತಿದ್ದೀರಾ ಎಂದು ಹೇಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ವಿಚಾರ ಹೇಳುತ್ತಿದ್ದ ಹಾಗೆ ಕೆಲವು ಬಿಗ್ ಬಾಸ್ ಅಭಿಮಾನಿಗಳು ಗುರೂಜಿಯವರು ಹೇಳಿದ್ದು ಸತ್ಯ ಅಂತ ಅಂದರು. ಇನ್ನು ಕೆಲವರು ಸುದೀಪ್ ಅವರಿಗೆ ಸಪೋರ್ಟ್ ನೀಡಿ ಗುರೂಜಿ ಅವರು ಸುಳ್ಳು ಹೇಳುತ್ತಿದ್ದಾರೆ ಅಂದರು.
ಇದೆಲ್ಲ ಒಂದು ವಿಚಾರ ಆದರೆ ಇದೀಗ ಗುರೂಜಿಯವರು ಟಾಸ್ಕ್ ಮಾಡುವ ವೇಳೆಯಲ್ಲಿ ನಿಂತ ಜಾಗದಲ್ಲಿಯೇ ಸುಸ್ಸು ಮಾಡಿಕೊಂಡಿದ್ದಾರೆ. ಹೌದು ಕಳೆದ ರಾತ್ರಿ ಬಿಗ್ ಬಾಸ್ ಮನೆಯಲ್ಲಿ ಇರುವಂತಹ ವ್ಯಕ್ತಿಗಳಿಗೆ ವಿಶೇಷವಾದ ಟಾಸ್ಕ್ ಒಂದನ್ನು ನೀಡಲಾಯಿತು. ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳನ್ನು ಎರಡು ತಂಡವಾಗಿ ಮಾರ್ಪಾಡು ಮಾಡಲಾಯಿತು ಅದರಲ್ಲಿ ಪ್ರಶಾಂತ್ ಸಂಬರ್ಗಿ ಕಾಮನ ಬಿಲ್ಲು ತಂಡದ ನಾಯಕರಾಗಿದ್ದರು ಈ ತಂಡದಲ್ಲಿ ಅರುಣ್ ಸಾಗರ್, ಅನುಪಮಾ ಗೌಡ, ಮಯೂರಿ, ಸಾನ್ಯ ಅಯ್ಯರ್, ರಾಕೇಶ್ ಅಡಿಗ, ವಿನೋದ್ ಗೊಬ್ಬರಗಾಲ ಇದ್ದರು. ಇನ್ನೂ, ರೂಪೇಶ್ ರಾಜಣ್ಣ ಟೀಮ್ನಲ್ಲಿ ನೇಹಾ ಗೌಡ, ಅಮೂಲ್ಯ ಗೌಡ, ಕಾವ್ಯಶ್ರೀ ಗೌಡ, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ ಇದ್ದರು
ಎರಡೂ ತಂಡಗಳಿಗೆ “ಜೋಪಾನ ರಾತ್ರಿ ಆಯ್ತು ಜಾಗರಣೆ ಖಾತ್ರಿ ಆಯ್ತು” ಎಂಬ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದರು. ಇದರ ಅನುಸಾರ ಎರಡೂ ತಂಡದ ಎಲ್ಲಾ ಸದಸ್ಯರು ಕಂಬದಲ್ಲಿರುವ ಸ್ವಿಚ್ ಒತ್ತಿ ಹಿಡಿಯಬೇಕಿತ್ತು. ಅತಿ ಹೆಚ್ಚು ಕಾಲ ಸ್ವಿಚ್ ಒತ್ತಿ ಹಿಡಿಯುವ ತಂಡ ಟಾಸ್ಕ್ ಗೆಲ್ಲುತ್ತದೆ. ರಾತ್ರಿ ಶುರುವಾದ ಈ ಟಾಸ್ಕ್ ಬೆಳಗ್ಗೆ ಮುಕ್ತಾಯಗೊಂಡಿತು 10 ಗಂಟೆಗಳ ಕಾಲ ಈ ಟಾಸ್ಕ್ ನಡೆಯಿತು ಹೇಗಾದರೂ ಮಾಡಿ ತಮ್ಮ ‘ಕಾಮನಬಿಲ್ಲು’ ತಂಡವನ್ನ ಗೆಲ್ಲಿಸಬೇಕು ಅಂತ ಆರ್ಯವರ್ಧನ್ ಗುರೂಜಿ ನಿರ್ಧರಿಸಿದ್ದರು. ಹೀಗಾಗಿ, 10 ಗಂಟೆಗಳ ಸ್ವಿಚ್ ಒತ್ತಿ ಹಿಡಿಯುತ್ತಲೇ ಆರ್ಯವರ್ಧನ್ ಗುರೂಜಿ ನಿಂತಿದ್ದರು.
ಮಧ್ಯದಲ್ಲಿ ಪ್ರಕೃತಿಯ ಕರೆ ಬಂದರೂ ಅದನ್ನ ತಡೆದು ಆರ್ಯವರ್ಧನ್ ಗುರೂಜಿ ನಿಂತರು ಒಂದು ಸಮಯದಲ್ಲಿ ತಡೆಯಲು ಸಾಧ್ಯವಾಗಲೇ ಇದ್ದಾಗ ನಿಂತಲ್ಲೇ ಮೂತ್ರ ವಿಸರ್ಜನೆ ಮಾಡಿ ಕೊಂಡುಬಿಟ್ಟರು. ಇದನ್ನ ಕಂಡ ಇತರೆ ಕೆಲವು ಸ್ಪರ್ಧಿಗಳು ನಕ್ಕರೆ ಕೆಲವರು ‘ಅಯ್ಯಯ್ಯೋ.. ಛೀ’ ಎಂದರು. ಇನ್ನೂ ‘’ಡೆಡಿಕೇಷನ್ ಅಂದ್ರೆ ಇದು’’ ಎಂದು ಬಿಟ್ಟರು ಸಾನ್ಯ ಅಯ್ಯರ್ ಬಿಗ್ ಬಾಸ್ ನಿಮಗೆ ಸ್ವಲ್ಪನಾದರೂ ಕರುಣೆ ಇಲ್ವಾ ಬಾತ್ರೂಮ್ಗೆ ಹೋಗಬೇಕು, ಕರುಣೆ ಇಲ್ವಾ? ಒಂದು ನೋಡಿದ್ರಿ ಎರಡೂ ನೋಡಬೇಕಾ.? ಎಂದು ಬಿಗ್ ಬಾಸ್ ಗೆ ಆರ್ಯವರ್ಧನ್ ಗುರೂಜಿ ಪ್ರಶ್ನಿಸುತ್ತಿದ್ದರು.
10 ಗಂಟೆಗಳು ಕಳೆದ ಬಳಿಕ ಟಾಸ್ಕ್ ಸಂಪೂರ್ಣಗೊಂಡಿತು ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ನೇಹಾ ಗೌಡ, ದಿವ್ಯಾ ಉರುಡುಗ ನಿಂತಿದ್ದ ಕಾರಣ “ಕಾಮನಬಿಲ್ಲು” ತಂಡ ಟಾಸ್ಕ್ ಗೆದ್ದಿದೆ ಎಂದು ‘’ಬಿಗ್ ಬಾಸ್’’ ಘೋಷಿಸಿದರು. ಆರ್ಯವರ್ಧನ್ ಗುರೂಜಿ ಸಂತೋಷಗೊಂಡರು. ಇನ್ನು ಗುರೂಜಿ ಅವರ ಡೆಡಿಕೇಶನ್ ಅನ್ನು ನಾವೆಲ್ಲರೂ ಮೆಚ್ಚಲೇಬೇಕು ಟಾಸ್ಕ್ ಅನ್ನು ಕೈ ಬಿಡಬಾರದು ಎಂಬ ಒಂದೇ ಒಂದು ಕಾರಣಕ್ಕೆ ಪ್ರಕೃತಿ ಕರೆ ಕೊಟ್ಟರು ಕೂಡ ಅದನ್ನು ಲೆಕ್ಕಿಸದೆ ತಮ್ಮ ನಾಚಿಕೆಯನ್ನು ಬದಿಗಿಟ್ಟು ಟಾಸ್ ನಲ್ಲಿಯ ನಿರತರಾಗಿದ್ದರು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆರ್ಯವರ್ಧನ್ ಅವರ ಈ ಒಂದು ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.