ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೊನ್ನೆಯಷ್ಟೇ ಪುನೀತ ಪರ್ವ ಕಾರ್ಯಕ್ರಮವನ್ನು ಡಾ. ರಾಜಕುಮಾರ್ ಕುಟುಂಬದವರು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಯುವರಾಜ್ ಕುಮಾರ್ ಅವರು ವಹಿಸಿಕೊಂಡಿದ್ದರು. ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮಕ್ಕೆ ಪುನೀತಪರ್ವ ಎಂಬ ಹೆಸರನ್ನು ಇಟ್ಟು ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಸೇರಿದಂತೆ ದಕ್ಷಿಣ ಭಾರತದ ಸಾಕಷ್ಟು ಸ್ಟಾರ್ ನಟ ನಟಿಯರಿಗೆ ಆಹ್ವಾನವನ್ನು ನೀಡಲಾಗಿತ್ತು. ಇನ್ನು ಸ್ವತಃ ಅಶ್ವಿನಿಯವರ ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆರಳಿ ಈ ಒಂದು ಕಾರ್ಯಕ್ರಮದ ಇನ್ವಿಟೇಶನ್ ಅನ್ನು ನೀಡಿ ಅಪ್ಪು ಅವರ ಪುತ್ಥಳಿಯನ್ನು ನೀಡಿ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದರು ಕೇವಲ ಇದು ಇಷ್ಟು ಮಾತ್ರವಲ್ಲದೆ ಕರೆ ಮಾಡಿ ಸಹ ಎಲ್ಲರಿಗೂ ಮತ್ತೊಮ್ಮೆ ನೆನಪಿಸಿದ್ದರು.
ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339
ಹಾಗಾಗಿ ಸಾಕಷ್ಟು ನಟ ನಟಿಯರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ತಮಿಳು ತೆಲುಗು ಮಲಯಾಳಂ ಸೇರಿದಂತೆ ಸಾಕಷ್ಟು ದಿಗ್ಗಜ ನಟರು ಕೂಡ ಇಲ್ಲಿ ನೆರದಿದ್ದರೂ. ಆದರೆ ನಮ್ಮ ಕನ್ನಡ ಇಂಡಸ್ಟ್ರಿಗೆ ಸಂಬಂಧಪಟ್ಟ ಹಾಗೆ ದರ್ಶನ್ ಜಗ್ಗೇಶ್ ಸುದೀಪ್ ರಿಷಬ್ ಶೆಟ್ಟಿ ರಕ್ಷಿತ್ ಶೆಟ್ಟಿ ಸೇರಿದಂತೆ ಇನ್ನೂ ಕೆಲವು ಜನ ಈ ಕಾರ್ಯಕ್ರಮಕ್ಕೆ ಪಾಲ್ಗೊಂಡದೆ ಇರುವುದು ನಿಜಕ್ಕೂ ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸುವಂತಿದೆ. ಆದರೂ ಕೂಡ ಅವರ ವೈಯಕ್ತಿಕ ಕಾರಣಗಳಿಂದ ಬಂದಿದ್ಲವೇನೋ ಎಂದು ಸಾಕಷ್ಟು ಅಭಿಮಾನಿಗಳು ತಿಳಿದುಕೊಂಡಿದ್ದಾರೆ. ಇದೆಲ್ಲ ಒಂದು ಕಡೆಯಾದರೆ ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮವನ್ನು ಇಷ್ಟು ಅದ್ದೂರಿಯಾಗಿ ಯಾಕೆ ಆಯೋಜಿಸಲಾಯಿತು ಎಂದು ಕೆಲವು ಅಭಿಮಾನಿಗಳು ಪ್ರಶ್ನೆಯನ್ನು ಕೇಳಿದ್ದಾರೆ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವಂತಹ ಕೆಲಸವನ್ನು ನಾವಿಂದು ಮಾಡುತ್ತಿದ್ದೇವೆ.
ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ವರ್ಷಗಳ ಹಿಂದೆ ಲಾಕ್ಡೌನ್ ಇದ್ದಾಗ ಕಾರಣ ಕಿರುತೆರೆ ಮತ್ತು ಬೆಳ್ಳಿ ತೆರೆಗೆ ಸೇರಿದಂತಹ ಎಲ್ಲಾ ಚಿತ್ರೀಕರಣವು ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಈ ಸಮಯದಲ್ಲಿ ನಮ್ಮ ಪ್ರೀತಿಯ ಅಪ್ಪು ಅವರು ಕರ್ನಾಟಕದಲ್ಲಿ ಇರುವಂತಹ ಅರಣ್ಯ ಪ್ರದೇಶ ಬೆಟ್ಟ ಕಾಡು ಗುಡ್ಡಕ್ಕೆ ತೆರಳಿ ಅಲ್ಲಿನ ವಿಶೇಷ ಮತ್ತು ವಿಭಿನ್ನತೆಯನ್ನು ಒಳಗೊಂಡ ಹಾಗೆ ಹಾಗೂ ಅಲ್ಲಿನ ಪ್ರಕೃತಿಯ ಸೌಂದರ್ಯವನ್ನು ಮತ್ತು ರಮಣೀಯವಾದ ತಾಣವನ್ನು ಸೆರೆ ಹಿಡಿಯುವುದರ ಮೂಲಕ ಒಂದು ಡಾಕ್ಯುಮೆಂಟರಿ ಚಿತ್ರವನ್ನು ನಿರ್ಮಾಣ ಮಾಡಬೇಕು ಎಂಬ ಆಸೆ ಕನಸನ್ನು ಹೊಂದಿದ್ದರು.
ಈ ಕಾರಣಕ್ಕಾಗಿ ಅಮೋಘ ವರ್ಷ ಅವರ ಸಹಾಯವನ್ನು ಪಡೆದು ಇಬ್ಬರೂ ಕೂಡ ಸುಮಾರು ಎರಡು ತಿಂಗಳುಗಳ ಕಾಲ ಕರ್ನಾಟಕದ ಭಾಗಶಃ ಎಲ್ಲಾ ಜಾಗದಲ್ಲಿ ಸುತ್ತಾಡಿ ಅಲ್ಲಿನ ಅರಣ್ಯ ವನ್ಯಜೀವಿ ಹಾಗೂ ಪ್ರಕೃತಿಯ ಸೌಂದರ್ಯವನ್ನು ಸೆರೆ ಹಿಡಿದಿದ್ದರು. ಈ ಒಂದು ಚಿತ್ರವನ್ನು ಒ ಟಿ ಟಿ ಯಲ್ಲಿ ಅಥವಾ ತಮ್ಮದೇ ಆದ ಪಿ.ಆರ್.ಕೆ ಸ್ಟುಡಿಯೋದಲ್ಲಿ ಬಿಡುಗಡೆ ಮಾಡಬೇಕು ಅಂತ ಅಂದುಕೊಂಡಿದ್ದರು. ಆದರೆ ವಿಧಿ ಆಟ ಎಂಬುವುದೇ ಬೇರೆ ಇತ್ತು ಈ ಒಂದು ಡಾಕ್ಯುಮೆಂಟರಿ ಸಾಕ್ಷ್ಯಾ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕಿಂತ ಮುಂಚೆ ಅಪ್ಪು ನಮ್ಮೆಲ್ಲರನ್ನು ಬಿಟ್ಟು ಹೋದರು. ಹಾಗಾಗಿ ಅವರ ಕನಸಿನ ಕೂಸು ಆಗಿದ್ದಂತಹ ಗಂಧದಗುಡಿ ಸಿನಿಮಾವನ್ನು ಸರಳವಾಗಿ ಓಟಿಟಿ ಅಥವಾ ಪಿ.ಆರ್.ಕೆ ಸ್ಟುಡಿಯೋದಲ್ಲಿ ಬಿಡುಗಡೆ ಮಾಡುವುದು ಬೇಡ ಎಂದು ಅಶ್ವಿನಿ ಅವರು ಅಂದುಕೊಂಡರು.
ತಮ್ಮ ಪತಿಯ ಕೊನೆಯ ಆಸೆಯನ್ನು ನೆರವೇರಿಸಬೇಕು ಈ ಒಂದು ಡಾಕ್ಯುಮೆಂಟರಿ ಸಿನಿಮಾವನ್ನು ಕಂಡು ಕೇಳರಿಯದ ರೀತಿಯಲ್ಲಿ ಸಂಭ್ರಮಾಚರಣೆ ಮಾಡಬೇಕು ಪ್ರತಿಯೊಬ್ಬರೂ ಕೂಡ ಈ ಸಿನಿಮಾವನ್ನು ನೋಡುವಂತೆ ಮಾಡಬೇಕು ಇದರ ಮೂಲಕ ಅಪ್ಪು ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಅಶ್ವಿನಿ ಅವರು ದೃಢ ನಿರ್ಧಾರ ಮಾಡಿದರು. ಅದರಂತೆ ಈ ಗಂಧದಗುಡಿ ಡಾಕ್ಯುಮೆಂಟರಿ ಸಾಕ್ಷ್ಯಾ ಸಿನಿಮಾವನ್ನು ಕೆಲವು ಮಾಡಿಲೇಷನ್ ಮಾಡಿ ಟೀಸರ್ ಮತ್ತು ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಇನ್ನಷ್ಟು ಸೊಬಗನ್ನು ಹೆಚ್ಚಿಸಿದರು ತದನಂತರ ಪ್ರೀ ಈವೆಂಟ್ ಕಾರ್ಯಕ್ರಮಕ್ಕೆ ಪುನೀತ ಪರ್ವ ಎಂಬ ಹೆಸರನ್ನು ಇಟ್ಟು ಸಾಕಷ್ಟು ಸೆಲೆಬ್ರೆಟಿಗಳನ್ನು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ಸುಮಾರು 50ಕ್ಕೂ ಹೆಚ್ಚು ವಿವಿಐಪಿ ಮತ್ತು 500ಕ್ಕೂ ಹೆಚ್ಚು ವಿಐಪಿ ಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು ಅಷ್ಟೇ ಅಲ್ಲದೆ 25000 ಹೆಚ್ಚು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಅದ್ದೂರಿಯಾಗಿ ಈ ಒಂದು ಪುನೀತ ಪರ್ವ ಕಾರ್ಯಕ್ರಮ ನೆರವೇತು ಇದೆಲ್ಲ ಒಂದು ಕಡೆಯಾದರೆ ಇದೀಗ ಮತ್ತೊಂದು ಕಡೆ ಈ ಪುನೀತ ಪರ್ವ ಕಾರ್ಯಕ್ರಮಕ್ಕೆ ಅಶ್ವಿನಿ ಅವರು ಎಷ್ಟು ಹಣವನ್ನು ಖರ್ಚು ಮಾಡಿದರು ಎಂಬ ವಿಚಾರ ವೈರಲಾಗುತ್ತಿದೆ. ಕೆಲವು ಮಾಹಿತಿಗಳ ಪ್ರಕಾರ ಅಶ್ವಿನಿ ಅವರು ಈ ಒಂದು ಪುನೀತಪರ್ವ ಕಾರ್ಯಕ್ರಮಕ್ಕೆ ಬರೋಬ್ಬರಿ ಎರಡುವರೆ ಕೋಟಿ ( 2.5 Cro )ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರಂತೆ. ವಿಶೇಷ ಏನೆಂದರೆ ಈ ಕಾರ್ಯಕ್ರಮಕ್ಕೆ ಯಾರಿಂದಲೂ ಕೂಡ ಒಂದು ರೂಪಾಯಿ ಸಹಾಯವನ್ನು ಪಡೆಯದೆ ಅಶ್ವಿನಿಯವರೆ ಎಲ್ಲಾ ಖರ್ಚನ್ನು ನಿಭಾಯಿಸಿದ್ದಾರೆ.
ನಿಜಕ್ಕೂ ಕೂಡ ಇದು ಮೆಚ್ಚುವಂತಹ ಕೆಲಸವೇ ಅಶ್ವಿನಿ ಅವರು ಮನಸ್ಸು ಮಾಡಿದ್ದರೆ ಈ ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾವನ್ನು ಡೈರೆಕ್ಟ್ ಆಗಿ ಥಿಯೇಟರ್ ನಲ್ಲಿ ಅಥವಾ ಓ ಟಿ ಟಿ ಯಲ್ಲಿ ಬಿಡುಗಡೆ ಮಾಡಿ ಇದರಿಂದ ಸಾಕಷ್ಟು ಹಣ ಸಂಪಾದನೆ ಮಾಡಬಹುದಿತ್ತು. ಆದರೆ ಅಶ್ವಿನಿ ಅವರ ಉದ್ದೇಶ ಅಪ್ಪು ಅವರ ಕನಸಿನ ಕೂಸನ್ನು ಕೇವಲ ಲಾಭದ ದೃಷ್ಟಿಗೆ ಮಾತ್ರವಲ್ಲದೆ ಜನರು ನೋಡಿ ಮೆಚ್ಚಿಕೊಳ್ಳುವಂತಹ ರೀತಿಯಲ್ಲಿ ಪ್ರದರ್ಶನ ಮಾಡಬೇಕು ಎಂಬುದಾಗಿತ್ತು. ಹಾಗಾಗಿಯೇ ಕೋಟಿ ಕೋಟಿ ಹಣವನ್ನು ಖರ್ಚು ಮಾಡಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಿದರು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಒಂದೆರಡು ಸಾಲನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.