Home Entertainment ಬಿಗ್ ಬಾಸ್ ಮನೆಯಿಂದ ಹೊರ ನಡೆದ ಸಾನ್ಯ ಐಯ್ಯರ್

ಬಿಗ್ ಬಾಸ್ ಮನೆಯಿಂದ ಹೊರ ನಡೆದ ಸಾನ್ಯ ಐಯ್ಯರ್

0
ಬಿಗ್ ಬಾಸ್ ಮನೆಯಿಂದ ಹೊರ ನಡೆದ ಸಾನ್ಯ ಐಯ್ಯರ್

ಓಟಿಟಿಯಲ್ಲಿ ಪ್ರಾರಂಭವಾದ ಮಿನಿ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿ ಆಗಿದ್ದಂತಹ ಸಾನ್ಯಾ ಯಾರವರು ಈ ಬಾರಿಯ ಬಿಗ್ ಬಾಸ್ ಮನೆಯ ಆರನೇ ವಾರದ ಎಲಿಮಿನೇಟ್ ಸ್ಪರ್ಧಿಯಾಗಿದ್ದಾರೆ. ಹೌದು ಪುಟ್ಟಗೌರಿ ಧಾರವಾಹಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಂತಹ ಬಾಲ ನಟಿ ಸಾನಿಯಾ ಐಯ್ಯರ್ ಅವರು ಬಿಗ್ ಬಾಸ್ ಓಟಿಟಿಯಲ್ಲಿ ಸ್ಪರ್ಧಿ ಆಗುವುದರ ಮೂಲಕ ಮೆನಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಾಲಿಟ್ಟಿದ್ದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಮಿನಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುಮಾರು 40 ದಿನಗಳ ಕಾಲ ವಾಸ ಮಾಡುವ ಮೂಲಕ ಟಾಪ್ ನಾಲ್ಕನೇ ಸ್ಪರ್ಧಿಯಾಗಿ ಹೊರ ಹೊಮ್ಮಿದರು ಇದರಿಂದ ಬಿಗ್ ಬಾಸ್ ಸೀಸನ್ 9ರಲ್ಲಿಯೂ ಕೂಡ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು. ಮೊದ ಮೊದಲು ಎಲ್ಲಾ ಟಾಸ್ಕ್ ಗಳನ್ನು ಚೆನ್ನಾಗಿ ಆಡುತ್ತಿದ್ದರು ಆದರೆ ರೂಪೇಶ್ ಶೆಟ್ಟಿ ಅವರ ಜೊತೆಗೆ ಹೆಚ್ಚಾದ ಒಡನಾಟದಿಂದ ಟಾಸ್ಕ್ ಗಳ ಕಡೆ ಗಮನ ನೀಡುವುದು ಕಡಿಮೆಯಾಗುತ್ತದೆ.

ಅಷ್ಟೇ ಅಲ್ಲದೆ ಕಳೆದ ವಾರ ಕ್ಯಾಪ್ಟನ್ ಆದಾಗಲೂ ಕೂಡ ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲಿಲ್ಲ ಎಂಬ ಕಾರಣಕ್ಕಾಗಿ ಮನೆ ಮಂದಿ ಎಲ್ಲಾ ಸಾನ್ಯಾ ಅವರ ವಿರುದ್ಧ ತಿರುಗಿ ಬಿದ್ದಿದ್ದರು. ಮತ್ತೊಂದು ಕಡೆ ಕಿಚ್ಚ ಸುದೀಪ್ ಅವರು ಕೂಡ ಸಾನ್ಯಾ ಐಯ್ಯರ್ ಅವರು ಕಳಪೆ ಪ್ರದರ್ಶನ ನೀಡಿದ್ದರು ಎಂದು ಹೇಳಿದ್ದರು ಅಷ್ಟೇ ಅಲ್ಲದೆ ಅವರ ಮನೆಯಲ್ಲಿ ಆದಂತಹ ಆದಷ್ಟು ಅಹಿತಕರ ಘಟನೆಗೆ ಸಾನ್ಯಾ ಐಯ್ಯರ್ ಅವರೇ ನೇರ ಕಾರಣ ಎಂದು ಕೂಡ ತಿಳಿಸಿದರು.

ದಿನದಿಂದ ದಿನಕ್ಕೆ ಸಾನ್ಯಾ ಐಯ್ಯರ್ ಅವರು ತಮ್ಮ ಆಟದ ಕಡೆ ಗಮನ ನೀಡುವುದು ಕಡಿಮೆ ಮಾಡಿದರು ರೂಪೇಶ್ ಶೆಟ್ಟಿ ಅವರ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು ಇದು ಒಂದು ರೀತಿಯಲ್ಲಿ ನೋಡಿದರು ಕೂಡ ಮುಜುಗರ ಉಂಟಾಯತು. ಇದರ ಬಗ್ಗೆ ಕಿಚ್ಚ ಸುದೀಪ್ ಅವರು ಕೂಡ ಹಿಂಟ್ ಕೊಟ್ಟಿದ್ದರು ಇನ್ನು ಮುಂದೆ ಕೇವಲ ನಿಮ್ಮ ಆಟದ ಬಗ್ಗೆ ಮಾತ್ರ ಗಮನವಹಿಸಿ ಅಂತ. ಆದರೆ ಸಾನ್ಯಾ ಅವರಿಗೆ ಎಷ್ಟೇ ಬುದ್ಧಿವಾದ ಹೇಳಿದರೂ ಕೂಡ ಅವರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲಿಲ್ಲ.

ಕಳೆದ ನಾಲ್ಕು ವಾರಗಳಿಂದಲೂ ಕೂಡ ನಿರಂತರವಾಗಿ ನಾಮಿನೇಷನ್ ಆಗುತ್ತಿದ್ದಂತಹ ಸಾನ್ಯಾ ಅವರು ಆರನೇ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿದ್ದಾರೆ. ಇದು ನಿಜಕ್ಕೂ ಕೂಡ ಆ.ಘಾ.ತ ಉಂಟಾಗಿದೆ. ಏಕೆಂದರೆ ಬಿಗ್ ಬಾಸ್ ಸೀಸನ್ 9 ಪ್ರಾರಂಭವಾದ ಮೊದಲ ವಾರದಿಂದ ಹಿಡಿದು ಐದನೇ ವಾರದವರೆಗೂ ಕೂಡ ಹೊಸ ಸ್ಪರ್ಧಿಗಳೇ ಹೊರ ಹೋಗುತ್ತಿದ್ದರು.

ಇನ್ನು ಒ ಟಿ ಟಿ ಯಲ್ಲಿ ಸ್ಪರ್ಧಿಸಿ ಅಲ್ಲಿಂದ ವಿಜೇತರಾದಂತಹ ನಾಲ್ಕು ಜನರು ಇದುವರೆಗೂ ಎಲಿಮಿನೇಷನ್ ಆಗಿರಲಿಲ್ಲ ಹಾಗಾಗಿ ಈ ಬಾರಿ ಓಟಿಟಿಯಲ್ಲಿ ಸ್ಪರ್ಧಿಸಿದಂತಹ ಯಾರಾದರೂ ವ್ಯಕ್ತಿಯೊಬ್ಬರು ಎಲಿಮಿನೇಷನ್ ಆಗಬಹುದು ಎಂದು ಪ್ರೇಕ್ಷಕರು ಊಹೆ ಮಾಡಿದ್ದರು. ಅವರ ಊಹೆ ಇದೀಗ ನಿಜವಾಗಿದೆ ಓಟಿಟಿಯಲ್ಲಿ ಹೆಚ್ಚು ಗಮನ ವಹಿಸಿದಂತಹ ಸಾನ್ಯಾ ರವರು ಇದೀಗ ಮನೆಯಿಂದ ಹೊರ ನಡೆದಿದ್ದಾರೆ.

ಇನ್ನು ರೂಪೇಶ್ ಶೆಟ್ಟಿ ಜೊತೆ ಬಹಳ ಆತ್ಮೀಯವಾಗಿ ಇದ್ದಂತಹ ಸಾನ್ಯಾ ಐಯ್ಯರ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದಕ್ಕೆ ಸಾಕಷ್ಟು ದುಃಖ ಪಟ್ಟಿದ್ದರೆ ಮತ್ತೊಂದು ಕಡೆ ರೂಪೇಶ್ ಶೆಟ್ಟಿಯವರಿಗೂ ಕೂಡ ಇದು ದೊಡ್ಡ ಶಾ.ಕ್ ಅನ್ನು ಉಂಟು ಮಾಡಿದೆ ನಿಮ್ಮ ಪ್ರಕಾರ ಈ ವಾರ ಮನೆಯಿಂದ ಯಾವ ಸ್ಪರ್ಧೆ ಹೊರ ಹೋಗಬೇಕಿತ್ತು ತಪ್ಪದೆ ಕಾಮೆಂಟ್ ಮಾಡಿ.

LEAVE A REPLY

Please enter your comment!
Please enter your name here