Sunday, June 4, 2023
HomeEntertainmentನಟಿ ಪ್ರೇಮಾ ಮೊದಲ ಬಾರಿಗೆ ತಮ್ಮ ಲವರ್ ಅನ್ನು ಪರಿಚಯಿಸುತ್ತಿದ್ದಾರೆ. ಈ ವಿಡಿಯೋ ನಿಜಕ್ಕೂ ಶಾ-ಕ್...

ನಟಿ ಪ್ರೇಮಾ ಮೊದಲ ಬಾರಿಗೆ ತಮ್ಮ ಲವರ್ ಅನ್ನು ಪರಿಚಯಿಸುತ್ತಿದ್ದಾರೆ. ಈ ವಿಡಿಯೋ ನಿಜಕ್ಕೂ ಶಾ-ಕ್ ಆಗ್ತೀರಾ

ಪ್ರೇಮಾ ಅವರು ಕನ್ನಡ ಮತ್ತು ಕೆಲವು ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡಿದ ಭಾರತೀಯ ನಟಿ. ಅವರು ಅನೇಕ ವಾಣಿಜ್ಯಿಕವಾಗಿ ಯಶಸ್ವಿ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಹೌದು ಸ್ನೇಹಿತರೆ ನಮ್ಮ ಕನ್ನಡದ ಚಿತ್ರರಂಗದ ಪ್ರಸಿದ್ಧ ಹಾಗೂ ಒಂದು ಕಾಲದ ಬಹುಬೇಡಿಕೆಯ ನಟಿ ಅಂದರೆ ಪ್ರೇಮ.

ಉಪೇಂದ್ರ ನಿರ್ದೇಶನದ ಶಿವರಾಜಕುಮಾರ್ ಅಭಿನಯದ ಓಂ ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರವನ್ನು ನೀಡಲಾಯಿತು . ಈ ಚಿತ್ರವು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು ಮತ್ತು ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದರು. ಪ್ರೇಮ ರವರು ಈಗಾಗಲೇ ಬಹಳ ವರ್ಷಗಳ ಕಾಲ ತಮ್ಮ ವೈಯಕ್ತಿಕ ವಿಚಾರಗಳ ಕಾರಣದಿಂದಾಗಿ ನಟನೆಯನ್ನು ಮಾಡುತ್ತಿರಲಿಲ್ಲ. ಸದ್ಯ ಈಗ ಬಹಳ ವರ್ಷಗಳ ನಂತರ ನಟಿ ಪ್ರೇಮಾರವರು ಚಿತ್ರ ಒಂದರಲ್ಲಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ.

ಈ ಚಿತ್ರವು ತುಂಬಾ ವಿಶೇಷವಾದ ಕಥೆಯನ್ನು ಹೊಂದಿರುವ ಸಿನಿಮಾವಾಗಿದ್ದು, ಪ್ರೇಮ ರವರ ಪಾತ್ರವೂ ವಿಭಿನ್ನವಾಗಿದೆ. ಈ ಸಿನಿಮಾದ ಹೆಸರು ವೆಡ್ಡಿಂಗ್ ಗಿಫ್ಟ್ ಎಂದು ಹೇಳಲಾಗಿದೆ. ನಟಿ ಪ್ರೇಮಾರವರು ತಮ್ಮ ವಿಶೇಷವಾದ ಶೈಲಿಯ ನಟನೆಯಿಂದ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪನ್ನೂ ಮೂಡಿಸಿದ್ದಾರೆ. ಪ್ರೇಮ ರವರು ಹಲವು ಚಿತ್ರಗಳಲ್ಲಿ ನಾಯಾಕ ನಟಿಯಾಗಿ ಅಭಿನಯಿಸಿದ್ದಾರೆ ಹಾಗೂ ಅವರ ಹೆಚ್ಚಿನ ಚಿತ್ರಗಳು ಯಶಸ್ಸಿನ ಹಾದಿಯಲ್ಲಿ ಬಂದಿದೆ.

ಅವರು ಚಿತ್ರರಂಗದಿಂದ ದೂರ ಉಳಿದಿರುವುದು ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿತು. ಸದ್ಯ ಇವರು ಚಲನಚಿತ್ರಕ್ಕೆ ಹಿಂದಿರುಗಿರುವುದು ಅಭಿಮಾನಿಗಳಿಗೆ ಸಂತಸವನ್ನು ತಂದಿದೆ. ನಟಿ ಪ್ರೇಮ ರವರು ತೆರೆ ಮೇಲೆ ಮತ್ತೆ ಬರುವುದು ಅಭಿಮಾನಿಗಳ ಬಹಳ ದಿನದ ಆಸೆ ಕೂಡ ಆಗಿದೆ. ಸದ್ಯ ಈಗ ಪ್ರೇಮ ರವರು ವೆಡ್ಡಿಂಗ್ ಗಿಫ್ಟ್ ಚಿತ್ರದ ಮೂಲಕ ಮತ್ತೆ ಅಭಿನಯಿಸುತ್ತಿದ್ದು ಈ ಚಿತ್ರವು ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡಿದೆ.

ಈ ಚಿತ್ರಕ್ಕೆ ವಿಕ್ರಂ ಕೆ ಪ್ರಭು ಎನ್ನುವರು ನಿರ್ಮಾಣ ಮಾಡಿ ಹಾಗು ನಿರ್ದೇಶನವನ್ನು ಮಾಡಿದ್ದಾರೆ. ಹಾಗೂ ಈ ಚಿತ್ರಕ್ಕೆ ಕಥೆಯು ಕೂಡ ಇವರೇ ಬರೆದಿದ್ದಾರೆ ಎನ್ನುವುದು ವಿಶೇಷ. ಇನ್ನು ಈ ಚಿತ್ರಕ್ಕೆ ಉದಯ್ ಲೀಲಾ ರವರು ಛಾಯಾಗ್ರಹಣವನ್ನು ಮಾಡಿದ್ದಾರೆ. ಈ ಚಿತ್ರದ ವಿಶೇಷವೇನೆಂದರೆ ಇದರಲ್ಲಿ ದೊಡ್ಡ ತಾರೆಯರ ಬಳಗವೇ ಇದೆ ಎಂದು ಹೇಳಬಹುದು.

ಈ ಚಿತ್ರವು ಮದುವೆಯ ಸುತ್ತ ಹೆಣದಿರುವ ಸಂಬಂಧಗಳ ಬಗ್ಗೆಯ ಕಥೆಯಾಗಿದೆ. ನಟಿ ಪ್ರೇಮ ರವರು ವಿಶೇಷವಾದ ಪಾತ್ರದಿಂದ ಅಂದರೆ ಈ ಚಿತ್ರದಲ್ಲಿ ವಕೀಲರ ಪಾತ್ರವನ್ನು ಮಾಡದಿದ್ದರೆ. ಹಾಗೂ ಪವಿತ್ರ ಲೋಕೇಶ್, ನಿಶಾನ್ ಸೋನು ಗೌಡ, ಹಿರಣ್ಣಯ್ಯ ಇನ್ನು ಮುಂತಾದ ಅದ್ಭುತವಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಬಹುದು. ಇನ್ನು ಇಷ್ಟು ದಿನ ನಟನೆಯಿಂದ ದೂರ ಉಳಿದಿರುವ ಕಾರಣವೇನು ಎಂದು ಪ್ರೇಮಾರವರನ್ನು ಕೇಳಿದಾಗ ಅವರು ಹೀಗೆ ಉತ್ತರಿಸಿದ್ದಾರೆ‌

ನಾನು ಇದುವರೆಗೂ ನನಗೆ ಇಷ್ಟವಾದ ಪಾತ್ರವನ್ನು ಮಾತ್ರ ನಟಿಸಿದ್ದೇನೆ. ಸರಿಯಾದ ಪಾತ್ರವೂ ಸಿಗದೆ ಇರುವ ಕಾರಣ, ಸದ್ಯ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ನನಗೆ ಇಷ್ಟವಾಗಿರುವ ಪಾತ್ರವನ್ನು ಕೊಟ್ಟಿದ್ದಾರೆ ಹಾಗಾಗಿ ನಾನು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ. ಇನ್ನು ಅವರ ಲವರ್ ಬಗ್ಗೆ ಕೇಳಿದಾಗ ಪ್ರೇಮರವರು ಹೀಗೆ ಹೇಳಿದ್ದಾರೆ, ನಾನು ಇದುವರೆಗೂ ಕ್ಯಾಮರವನ್ನೇ ಜನರು ಎಂದು ಭಾವಿಸಿ ಅಭಿನಯಿಸಿದ್ದೇನೆ ಹಾಗಾಗಿ ನನಗೆ ನನ್ನ ಕ್ಯಾಮರಾನೇ ನನ್ನ ಲವರ್ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.