ಅರ್ಜುನ್ ಸರ್ಜಾ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಚಿತ್ರರಂಗದಲ್ಲೂ ಕೂಡ ಹೆಸರು ಮಾಡಿರುವ ಖ್ಯಾತ ನಟ ಮೂಲತಃ ಕನ್ನಡದವರೇ ಆದ ಇವರಿಗೆ ಹೆಚ್ಚಿನ ಅವಕಾಶಗಳು ತಮಿಳು ಸಿನಿಮಾ ರಂಗದಲ್ಲಿ ಕಂಡುಬಂದದ್ದರಿಂದ ಅಲ್ಲೇ ನೆಲೆಯೂರಿರುವ ಇವರು ಆಗಾಗ ಕನ್ನಡ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಾರೆ. ಇವರು ಒಬ್ಬ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿ ಸಹ ನಿರ್ದೇಶಕನಾಗಿ ಮತ್ತು ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಕೂಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164
ಸಿಂಹದಮರಿ ಸೈನ್ಯ ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಇವರು ಕನ್ನಡದಲ್ಲಿ ಪ್ರತಾಪ್, ಅಳಿಮಯ್ಯ, ಅಭಿಮನ್ಯು, ಗೇಮ್, ಪ್ರಸಾದ್ ಇನ್ನು ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ದೇಶಕನಾಗಿ ಕೂಡ ಸೈ ಅನಿಸಿಕೊಂಡಿರುವ ಇವರು ತಮಿಳಿನಲ್ಲಿ ಅಬ್ಬಾಸ್, ಪ್ರಭುದೇವ್ ಇಂತಹ ಖ್ಯಾತ ನಟರಿಗೂ ಕೂಡ ನಿರ್ದೇಶನ ಮಾಡಿದ್ದಾರೆ ಅಲ್ಲದೆ ತಮ್ಮ ಸಿನಿಮಾಗಳನ್ನೂ ಕೂಡ ನಿರ್ದೇಶನ ಮಾಡಿಕೊಂಡಿದ್ದಾರೆ.
ಕನ್ನಡದಲ್ಲಿ ತಮ್ಮ ಮಗಳನ್ನು ಲಾಂಚ್ ಮಾಡಲು ಪ್ರೇಮ ಬರಹ ಎನ್ನುವ ಸಿನಿಮಾವನ್ನು ನಿರ್ದೇಶನ ಮತ್ತು ನಿರ್ಮಾಣ ಕೂಡ ಮಾಡಿದ್ದರು. ಭಾರತದ ಸೈನಿಕರ ಕಷ್ಟ ಸುಖ ತಿಳಿಸುವ ಸಿನಿಮಾ ಕೂಡ ಆಗಿದ್ದು ಇದೊಂದು ಒಳ್ಳೆಯ ಕಂಟೆಂಟ್ ಚಿತ್ರವಾಗಿ ಕನ್ನಡದಲ್ಲಿ ಸದ್ದು ಮಾಡಿತ್ತು. ಅಲ್ಲದೆ ಸಿನಿಮಾದ ಹಾಡುಗಳು ಕೂಡ ಸೂಪರ್ ಹಿಟ್ ಆಗಿದ್ದವು. ಈ ಸಿನಿಮಾದ ಆಂಜನೇಯನ ಹಾಡಿಗೆ ಇಡೀ ಸರ್ಜಾ ಕುಟುಂಬದ ಜೊತೆ ದರ್ಶನ್ ಸಹ ಹೆಜ್ಜೆ ಹಾಕಿದ್ದರು.
ಕನ್ನಡ ಆದ ಬಳಿಕ ತೆಲುಗು ಚಿತ್ರರಂಗದಲ್ಲೂ ಕೂಡ ತಮ್ಮ ಮಗಳನ್ನು ಲಾಂಚ್ ಮಾಡುವ ಉದ್ದೇಶದಿಂದ ಅರ್ಜುನ್ ಸರ್ಜಾ ಅವರು ತಾವೇ ಕಥೆಯೊಂದನ್ನು ತಯಾರಿಸಿದ್ದರು. ನಟ ವಿಶ್ವಕ್ ಸೇನ್ ಅವರಿಗೆ ನಾಯಕನಾಗಲು ಆಫರ್ ಮಾಡಿ ಕಥೆ ಹೇಳಿದ್ದರು. ಮೊದಲ ಬಾರಿಗೆ ಕಥೆ ಕೇಳಿದ ಇವರು ಸಿನಿಮಾ ಮಾಡೋದಾಗಿ ಒಪ್ಪಿಕೊಂಡಿದ್ದರು.
ಜೂನ್ ತಿಂಗಳಲ್ಲೇ ಇದಕ್ಕೆ ಮುಹೂರ್ತ ನಡೆದಿದ್ದು ಪವನ್ ಕಲ್ಯಾಣ್ ಅವರು ಬಂದು ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಇದಾದ ಬಳಿಕ ಅಕ್ಟೋಬರ್ ತಿಂಗಳಿನಲ್ಲಿ ಸಿನಿಮಾ ಶುರು ಆಗಬೇಕಿತ್ತು ಆದರೆ ನಟ ವಿಶ್ವಕ್ ಸೇನ್ ಅವರು ತಾವು ಹೇಳಿಕೊಂಡ ಮಾತಿನಂತೆ ನಡೆಯದೇ ಶೂಟಿಂಗ್ ಇಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರಂತೆ. ಈ ಬಗ್ಗೆ ಮಾಧ್ಯಮಗಳನ್ನು ಕರೆದು ತಮ್ಮ ಅಳಲನ್ನು ತೋಡಿಕೊಂಡಿರುವ ಅರ್ಜುನ್ ಸರ್ಜಾ ಅವರು ನಟ ವಿಶ್ವಕ್ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ.
ಅವರ ಮಾತುಗಳು ಹೀಗಿದ್ದವು ನಟ ವಿಶ್ವಕ್ ಹಲವು ಬಾರಿ ನನ್ನಲ್ಲಿ ಕಥೆ ಹೇಳಿ ಎಂದು ಕೇಳಿದ್ದಾರೆ. ಪ್ರತಿ ಬಾರಿ ಕೂಡ ಬದಲಾಯಿಸಿದ ವಿಷಯವನ್ನು ಸೇರಿಸಿ ಹೊಸದಾಗಿ ನಾನು ಕಥೆ ಹೇಳಿದ್ದೇನೆ. ಸಂಭಾವನೆ ಬಗ್ಗೆ ನನ್ನೊಂದಿಗೆ ಅವರು ಜಗಳ ಆಡಿಕೊಂಡಿದ್ದರು, ಆತನ ಎಲ್ಲಾ ಡಿಮಾಂಡ್ ಗಳಿಗೂ ನಾನು ಒಪ್ಪಿಕೊಂಡಿದ್ದೆ, ಅಲ್ಲದೆ ಒಂದು ಏರಿಯಾದ ರೈಟ್ಸ್ ಕೂಡ ಬಿಟ್ಟುಕೊಡುವಂತೆ ಕೇಳಿದರು ಅದಕ್ಕೂ ಕೂಡ ಸಮ್ಮತಿಸಿದ್ದೆ.
ಎಷ್ಟೋ ಬಾರಿ ಶೂಟಿಂಗ್ ಶುರುವಾಗಬೇಕು ಎನ್ನುವ ಸಮಯದಲ್ಲಿ ಮೆಸೇಜ್ ಮಾಡಿ ಇದು ನನಗೆ ಶೂಟಿಂಗ್ ಬರಲು ಆಗುವುದಿಲ್ಲ ಎಂದು ತಿಳಿಸುತ್ತಾರೆ. ಈ ರೀತಿ ಒಬ್ಬ ನಿರ್ದೇಶನಕ್ಕೆ ಗೌರವ ಕೊಡದ ನಟನನ್ನು ನೋಡಿಲ್ಲ. ನಾನು ಈವರಿಗೆ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದೇನೆ. ಆದರೆ ವಿಶ್ವಕ್ ಅತಿಯಾಗಿ ವರ್ತಿಸುತ್ತಿದ್ದಾರೆ.
ನಾನು ಇದುವರೆಗೆ ಯಾರಿಗೂ ಮಾಡಿದಷ್ಟು ಕರೆಗಳನ್ನು ಅವರಿಗೆ ಮಾಡಿದ್ದೇನೆ. ಮೊದಲ ಪೋಶನ್ ಗಾಗಿ ಜಗಪತಿ ಬಾಬು ಹಾಗೂ ಕೆರಳದ ನಟರಿಂದ ಡೇಟ್ಸ್ ತೆಗೆದುಕೊಂಡಿದ್ದೆ. ವಿಶ್ವಕ್ ಅವರ ಬೇಜವಾಬ್ದಾರಿಯಿಂದ ಎಲ್ಲರಿಗೂ ತೊಂದರೆ ಆಗುತ್ತಿದೆ. ಇಂತಹ ನಟನನ್ನು ನಾನೆಲ್ಲೂ ನೋಡಿಲ್ಲ ಎಂದು ತಮ್ಮ ಬೇಸರವೆಲ್ಲಾ ಹೊರ ಹಾಕಿದ್ದಾರೆ. ಅರ್ಜುನ್ ಸರ್ಜಾ ಮಾತನಾಡಿದ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.