Home Entertainment ಯಾಕಿಷ್ಟು ನೋವು ಕೊಡ್ತಾ ಇದ್ದೀರ.? ನನ್ನ ಮೇಲೆ ಯಾಕೆ ದ್ವೇಷ.? ಅಂತ ತಪ್ಪು ನಾನೇನು ಮಾಡಿದ್ದಿನಿ.? ಹೇಳಿ ಎಂದು ಕಣ್ಣೀರು ಹಾಕ್ತಿರೋ ನಟಿ ರಶ್ಮಿಕಾ.!

ಯಾಕಿಷ್ಟು ನೋವು ಕೊಡ್ತಾ ಇದ್ದೀರ.? ನನ್ನ ಮೇಲೆ ಯಾಕೆ ದ್ವೇಷ.? ಅಂತ ತಪ್ಪು ನಾನೇನು ಮಾಡಿದ್ದಿನಿ.? ಹೇಳಿ ಎಂದು ಕಣ್ಣೀರು ಹಾಕ್ತಿರೋ ನಟಿ ರಶ್ಮಿಕಾ.!

0
ಯಾಕಿಷ್ಟು ನೋವು ಕೊಡ್ತಾ ಇದ್ದೀರ.? ನನ್ನ ಮೇಲೆ ಯಾಕೆ ದ್ವೇಷ.? ಅಂತ ತಪ್ಪು ನಾನೇನು ಮಾಡಿದ್ದಿನಿ.? ಹೇಳಿ ಎಂದು ಕಣ್ಣೀರು ಹಾಕ್ತಿರೋ ನಟಿ ರಶ್ಮಿಕಾ.!

ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ಪಾತ್ರದ ಮೂಲಕ ಸಿನಿಮಾರಂಗ ಪ್ರವೇಶ ಮಾಡಿ ಇಂದು ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಳ್ಳುತ್ತಿರುವ ಪ್ರತಿಭಾನ್ವಿತ ನಟಿ. ಸದ್ಯಕ್ಕೆ ಇವರನ್ನು ಸಿನಿಮಾ ಇಂಡಸ್ಟ್ರಿಯ ಲಕ್ಕಿ ಹೀರೋಯಿನ್ ಎಂದೇ ಕರೆಯುತ್ತಿದ್ದಾರೆ. ಯಾಕೆಂದರೆ ಈಕೆ ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಕನ್ನಡದ ಮೂಲಕ ತನ್ನ ಕೆರಿಯರ್ ಸ್ಟಾರ್ಟ್ ಮಾಡಿದರು ಈಕೆ ಇಂದು ಟಾಲಿವುಡ್ ಕಾಲಿವುಡ್ ಹಾಗೂ ಬಾಲಿವುಡ್ ಅಂಗಳದಲ್ಲಿ ಬಹು ಬೇಡಿಕೆ ಇರುವ ನಟಿ. ಕನ್ನಡದ ದರ್ಶನ್ ಪುನೀತ್ ಗಣೇಶ್ ಧ್ರುವ ಸರ್ಜಾ ಈ ಸ್ಟಾರ್ ಹೀರೋಗಳು ಸೇರಿದಂತೆ ತೆಲುಗು ಮತ್ತು ತಮಿಳಿನಲ್ಲೂ ಕೂಡ ವಿಜಯ್, ಕಾರ್ತಿಕ್, ವಿಜಯ್ ದೇವರಕೊಂಡ, ನಿತಿನ್, ಅಲ್ಲು ಅರ್ಜುನ್, ಮಹೇಶ್ ಬಾಬು ಹೀಗೆ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಈಗಷ್ಟೇ ಗುಡ್ ಬೈ ಸಿನಿಮಾದ ಮೂಲಕ ಅಮಿತಾಬ್ ಜೊತೆ ಸ್ಕ್ರೀನ್ ಶೇರ್ ಮಾಡುವ ಅದೃಷ್ಟ ಪಡೆದುಕೊಂಡರು ಅತಿ ಕಡಿಮೆ ಸಮಯದಲ್ಲಿ ಇಷ್ಟು ಸಕ್ಸಸ್ ಕಂಡಿರುವ ಈ ನಟಿ ಅವರ ಅದೃಷ್ಟದಿಂದಲೋ ಅಥವಾ ಕಠಿಣ ಪರಿಶ್ರಮದಿಂದಲೋ ಈ ಲೆವೆಲ್ ಗೆ ಬೆಳೆದಿದ್ದಾರೆ. ಇದೀಗ ವ್ಯತ್ತಿ ಜೀವನದ ಉತ್ತುಂಗದಲ್ಲಿ ಇರುವ ಇವರು ಇನ್ಸ್ಟಾಗ್ರಾಮ್ ಅಲ್ಲಿ ಭಾವುಕವಾಗಿ ಪತ್ರ ಬರೆದು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

ಇವರು ಬರೆದಿರುವ ಸಾಲುಗಳು ಈ ರೀತಿ ಇವೆ. ನಾನು ನಟಿಯಾಗಲು ಈ ವೃತ್ತಿ ಆಯ್ದುಕೊಂಡಿದ್ದಕ್ಕಾಗಿ ಈಗ ಬೆಲೆ ತೆರುತ್ತಿದ್ದೇನೆ. ನನಗೆ ಗೊತ್ತು ನಾನು ಎಲ್ಲರಿಗೂ ಸಿಗುವವಳಲ್ಲ ಹೀಗಾಗಿ ನನ್ನನ್ನು ಒಪ್ಪದೇ ಇರುವ ಕಾರಣಕ್ಕೆ ನೆಗೆಟಿವ್ ಆಗಿ ಏನನ್ನಾದರೂ ಹೇಳಬಹುದು ಎಂದಲ್ಲ. ನಾನು ನೋಡಿದ್ದೇನೆ ಸೋಶಿಯಲ್ ಮೀಡಿಯಾದಲ್ಲಿ ಈವರಿಗೆ ನನ್ನನ್ನು ಬಹಳಷ್ಟು ಟ್ರೋಲ್ ಮಾಡಿದ್ದಾರೆ.

ಒಂದು ಹಂತದವರೆಗೆ ನಾನು ಕೂಡ ನೆಗ್ಲೆಟ್ ಮಾಡಿದ್ದೆ ಇನ್ನು ಕೂಡ ಅದೇ ಮುಂದುವರೆದಿದೆ. ನಾನು ಒಬ್ಬ ನಟಿಯಾಗಿ ನಿಮ್ಮನ್ನು ರಂಜಿಸಲು ನನ್ನಿಂದ ಎಷ್ಟು ಆಗುತ್ತದೆ ಅಷ್ಟು ಪ್ರಯತ್ನ ಪಡುತ್ತೇನೆ. ಅದಕ್ಕಾಗಿ ನಾನು ಶ್ರಮ ಹಾಕುತ್ತಿದ್ದೇನೆ. ನಿಮ್ಮನ್ನು ರಂಜಿಸುವುದು ಅಷ್ಟೇ ನನ್ನ ಕೆಲಸ ಆ ಮೂಲಕ ನಾನು ಖುಷಿ ಕಾಣುತ್ತೇನೆ. ಇದರ ಆಚೆಗೆ ನೆಟ್ಟಿಗರು ನನ್ನನ್ನು ನಾನು ಉತ್ತರಿಸಿದ ಪ್ರಶ್ನೆಗಳ ಸಲುವಾಗಿ ಬಹಳ ವಿಪರೀತವಾಗಿ ಟೀಕಿಸುತ್ತಿದ್ದಾರೆ.

ಇದು ನನ್ನ ವೃತ್ತಿ ಜೀವನದ ಹಾಗೂ ಅದರ ಆಚೆಗಿನ ಸಂಬಂಧಗಳನ್ನು ಹಾಳು ಮಾಡುತ್ತಿದೆ. ನಾನು ಪಾಲ್ಗೊಳ್ಳುವ ಸಂದರ್ಶನಗಳಲ್ಲಿ ನಾನು ಮಾತನಾಡುವ ವಿಷಯಗಳು ಕೂಡ ನನ್ನ ವಿರುದ್ಧ ತಿರುಗಿತ್ತಿವೆ. ಇಷ್ಟೆಲ್ಲ ಯಾಕೆ ಬೆಳೆಯುತ್ತದೆ ಎಂದು ನನಗೆ ಅರ್ಥ ಆಗುತ್ತಿಲ್ಲ. ಇಲ್ಲಿಯವರೆಗೆ ನಾನು ಕೆಲಸ ಮಾಡಿದ ಎಲ್ಲರ ಜೊತೆ ಹಾಗೂ ನನ್ನ ಸುತ್ತಮುತ್ತ ಇರುವ ಎಲ್ಲರೊಡನೇ ಮೊದಲಿನಂತೆ ಇದ್ದೇನೆ.

ನಾನು ಪ್ರೀತಿಯನ್ನು ಅಷ್ಟೇ ಎಲ್ಲರಿಗೂ ಹಂಚಲು ಬಯಸುತ್ತೇನೆ. ಆದರೂ ಕೂಡ ಹಲವು ವಿಚಾರದಲ್ಲಿ ನನ್ನ ಮನಸ್ಸಿಗೆ ಬಹಳ ನೋವಾಗುತ್ತಿದೆ. ಇತ್ತೀಚೆಗಂತೂ ಕಳೆದ ಕೆಲವು ದಿನಗಳಿಂದ ವಾರಗಳಿಂದ ತಿಂಗಳಿಂದ ವರ್ಷಗಳಿಂದ ನಾನು ಮಾನಸಿಕವಾಗಿ ಇದರಿಂದ ಬಹಳ ನೋವು ತಿನ್ನುತ್ತಿದ್ದೇನೆ. ಇದರ ಬಗ್ಗೆ ನಾನು ಮೊದಲೇ ಮಾತನಾಡಬೇಕಿತ್ತು ಆದರೆ ಇನ್ನೂ ನನ್ನಿಂದ ಸಹಿಸಲು ಸಾಧ್ಯವಾಗದೆ ಈಗ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡು ಕೊನೆಯಲ್ಲಿ ಇಂತಿ ನಿಮ್ಮ ರಶ್ಮಿಕಾ ಎಂದು ಬರೆದುಕೊಂಡಿದ್ದಾರೆ.

ನಟಿ ರಶ್ಮಿಕಾ ಅವರಿಗೆ ಈಗ ತಮ್ಮ ತಪ್ಪಿನ ಅರಿವಾಗಿದೆ ಪಶ್ಚಾತಾಪವಾಗುತ್ತಿದೆ ಅಂತ ಕಾಣಿಸುತ್ತದೆ. ರಕ್ಷಿತ್ ಶೆಟ್ಟಿ ಗೆ ಮಾಡಿದ ಮೋಸ ಹಾಗೂ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ ರೀತಿ, ನಮ್ಮ ಕನ್ನಡ ಭಾಷೆಯ ಮೇಲೆ ಇರುವ ಅಸಡ್ಡೆ ಇವೆಲ್ಲದರಿಂದಾಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದ್ಯಕ್ಕೆ ರಶ್ಮಿಕಾ ಏನೇ ಮಾಡಿದರು ಕೂಡ ಟ್ರೊಲ್ ಮಾಡುತ್ತಿದ್ದಾರೆ ಈ ಟ್ರೋಲ್ ಗಳಿಂದ ಬೇಸತ್ತು ಬಹಳಾನೇ ನೊಂದು ಹೋಗಿದ್ದಾರೆ. ಇದೇ ಕಾರಣಕ್ಕಾಗಿ ತಮ್ಮ instagram ಖಾತೆಯಲ್ಲಿ ಈ ರೀತಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

LEAVE A REPLY

Please enter your comment!
Please enter your name here