Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸತ್ಯ ಧಾರವಾಹಿ ನಟ ಕಾರ್ತಿಕ್ ಅಲಿಯಾಸ್ ಸಾಗರ್ ಬಿಳಿಗೌಡ, ಮೊದಲ ಬಾರಿಗೆ ತಾವು ಮದುವೆಯಾಗುವ ಹುಡುಗಿ ಫೋಟೋ ರಿವೀಲ್ ಮಾಡಿದ್ದಾರೆ.

Posted on November 16, 2022November 16, 2022 By Kannada Trend News No Comments on ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸತ್ಯ ಧಾರವಾಹಿ ನಟ ಕಾರ್ತಿಕ್ ಅಲಿಯಾಸ್ ಸಾಗರ್ ಬಿಳಿಗೌಡ, ಮೊದಲ ಬಾರಿಗೆ ತಾವು ಮದುವೆಯಾಗುವ ಹುಡುಗಿ ಫೋಟೋ ರಿವೀಲ್ ಮಾಡಿದ್ದಾರೆ.

ಸಾಗರ್ ಬಿಳಿ ಗೌಡ ಕನ್ನಡದ ಕಿರುತೆರೆಯ ಫೇಮಸ್ ಫೇಸ್, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಎನ್ನುವ ಧಾರಾವಾಹಿಯಲ್ಲಿ ಕಾರ್ತಿಕ್ ಎನ್ನುವ ಪಾತ್ರ ಮಾಡುತ್ತಿರುವ ಇವರ ನಿಜ ನಾಮಧೇಯ ಸಾಗರ್ ಬಿಳಿ ಗೌಡ ಎಂದು ಇದಕ್ಕೂ ಮುನ್ನ ಹಲವು ಸೀರಿಯಲಲ್ಲಿ ನಟಿಸಿದ್ದರೂ ಕಿನ್ನರಿ ಎನ್ನುವ ಧಾರವಾಹಿ ಮತ್ತು ಸತ್ಯ ಧಾರವಾಹಿ ಮೂಲಕ ಇವರು ಹೆಚ್ಚು ಗುರುತಿಸಿಕೊಂಡರು.

ಕಿನ್ನರಿ ಧಾರಾವಾಹಿಯಲ್ಲಿ 2ನೇ ನಾಯಕನಾಗಿದ್ದರ ಇವರು ಸತ್ಯ ಧಾರವಾಹಿ ಮೂಲಕ ಸ್ವತಂತ್ರ ನಾಯಕನಾಗಿ ಕಾಣಿಸಿಕೊಂಡರು. ಇವರು ಸದ್ಯಕ್ಕೆ ಕನ್ನಡ ಕಿರುತೆರೆ ಪ್ರೇಕ್ಷಕರ ಪ್ರೀತಿಯ ಅಮೂಲ್ ಬೇಬಿ. ಅಮೂಲ್ ಬೇಬಿ ನಿಕ್ ನೇಮ್ ಜೊತೆಗೆ ಮುದ್ದು ಮುದ್ದಾಗಿ ಪೆದ್ದು ತನದ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿರುವ ಇವರು ಇದೀಗ ತಮ್ಮ ಜೀವನದ ಬಹುದೊಡ್ಡ ಅಧ್ಯಾಯವನ್ನು ಬರೆಯುತ್ತಿದ್ದಾರೆ.

ವಿವಾಹ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗ ಆಗಿದ್ದು, ಜೀವನದ ಬಹುದೊಡ್ಡ ಪಾಲು ವಿವಾಹ ಜೀವನದ ಆಗಿರುತ್ತದೆ. ಹೀಗಾಗಿ ಬಹಳ ಸಮಯ ತೆಗೆದು ಕೊಂಡು ತಮ್ಮ ಸರಿ ಹೊಂದುವ ಜೋಡಿಯ ಕೈ ಹಿಡಿಯುವ ಸಲುವಾಗಿ ಎಲ್ಲರೂ ಕಾಯುತ್ತಾರೆ. ಆದರೆ ಸಾಗರ್ ಅವರ ಪಾಲಿಕೆ ಬಹುಬೇಗ ಈ ಅದೃಷ್ಟ ಒಲಿದಿದೆ. ಇನ್ನೂ ಎಳೆ ವಯಸಿನ ಹುಡುಗನಂತಿರುವ ಇವರಿಗೆ ಈಗಾಗಲೇ ಕಂಕಣ ಭಾಗ್ಯ ಕೂಡಿ ಬಂದಿದೆ.

ಅದು ಕೂಡ ತನ್ನ ವೃತ್ತಿಗೆ ಸರಿಹೊಂದುವ ಸಂಗಾತಿಯ ಜೊತೆ. ಸಿರಿ ರಾಜು ಎನ್ನುವ ಕಿರುತೆರೆ ನಟಿ ಜೊತೆ ಸಾಗರ್ ಗೌಡ ಅವರು ಸದ್ದಿಲ್ಲದ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಸಿರಿ ರಾಜು ಅವರು ಕೂಡ 2018ರಲ್ಲಿ ತೆರೆಕಂಡ ರಾಘವಾಂಕ ಪ್ರಭು ಅವರ ನಿರ್ದೇಶನದ ಇದಂ ಶ್ರೀಮಂತರಾಗಬೇಕು ಜೀವನಂ ಎನ್ನುವ ಸಿನಿಮಾ ಮೂಲಕ ಹೆಸರು ಮಾಡಿದ್ದರು.

ಇದಾದ ಬಳಿಕ ಅನೇಕ ಕನ್ನಡ ಧಾರವಾಹಿ ಕೂಡ ಭಾಗವಹಿಸಿದ್ದ ಇವರು ಚಂದನವನದ ಬಣ್ಣದ ಲೋಕದಲ್ಲಿ ಮಿನುಗಲು ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಇದೇ ಸಮಯಕ್ಕೆ ಸಾಗರ್ ಅವರ ಭೇಟಿ ಆಗಿದ್ದು ಇವರಿಬ್ಬರ ಸಂಬಂಧದ ಬಗ್ಗೆ ಇನ್ಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಮಾಡಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ದಿಯನ್ನು ಬಹಿರಂಗ ಪಡಿಸಿದ್ದಾರೆ.

ಸಿರಿ ರಾಜು ಅವರ ಇನ್ಸ್ಟಾಗ್ರಾಂ ಖಾತೆಯಿಂದ ಅವರಿಬ್ಬರ ಎಂಗೇಜ್ಮೆಂಟ್ ಮತ್ತು ಇಬ್ಬರ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳು ಶೇರ್ ಆಗುತ್ತಿದ್ದಂತೆ ಅವರ ಆತ್ಮೀಯರು ಹಾಗೂ ಅಭಿಮಾನಿಗಳು ಮತ್ತು ಸ್ನೇಹಿತರು ಈ ಜೋಡಿಗೆ ಶುಭ ಹಾರೈಸಿದ್ದಾರೆ. ತಮ್ಮ ಇನಿಯನ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿರುವ ಸಿರಿ ರಾಜು ಅವರು ಅದಕ್ಕೆ ಸವಿ ಬರಹ ಕೂಡ ಬರೆದಿದ್ದಾರೆ.

ವಿಧಿ ಅದರ ಆಟವನ್ನು ತನ್ನ ಪಾಡಿಗೆ ತಾನು ನಡೆಸುತ್ತಿರುತ್ತದೆ ಈ ವಿಧಿಯಾಟದಲ್ಲಿ ನಾನು ಸಾಗರ್ ಎನ್ನುವ ಅದ್ಭುತ ವ್ಯಕ್ತಿಯನ್ನು ಪರಿಚಯವಾಗಿ ಅದು ಮದುವೆಯಾಗುವ ಮೂಲಕ ನಾವಿಬ್ಬರು ಒಂದಾಗುವಂತೆ ಆಗಿದೆ ಎಂದು ಬರೆದು ಕೊಂಡಿದ್ದಾರೆ. ಇದರೊಂದಿಗೆ ಅವರು ಹಂಚಿಕೊಂಡಿರುವ ಸ್ವೀಟ್ಸ್ ಫೋಟೋಶೂಟ್ ಫೋಟೋಗಳು ಕೂಡ ಬಹಳ ಮುದ್ದಾಗಿದ್ದು ಶೇರ್ ಆದ ಕೆಲವೇ ಕ್ಷಣಗಳಲ್ಲಿ ಅತಿ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ಗಳನ್ನು ಪಡೆಯುತ್ತಿದೆ.

ನೋಡಿದ ಪ್ರತಿಯೊಬ್ಬರು ಕೂಡ ಈ ಮುದ್ದಾದ ಜೋಡಿಯನ್ನು ಹಾಡಿ ಹೊಗಳಿ ಹಾರೈಸುತ್ತಿದ್ದಾರೆ. ಈಗಷ್ಟೇ ತನ್ನ ವೃತ್ತಿ ಜೀವನದಲ್ಲಿ ಸತ್ಯ ಅಂತಹ ಪ್ರಾಜೆಕ್ಟ್ ಮೂಲಕ ಬೆಳೆಯುತ್ತಿರುವ ಸಾಗರ್ ಅವರಿಗೆ ಮತ್ತು ಸಿರಿ ಅವರಿಗೂ ಕೂಡ ವೈಯಕ್ತಿಕ ಜೀವನದ ಜೊತೆಗೆ ವೃತ್ತಿ ಜೀವನದಲ್ಲೂ ಶುಭವಾಗಲಿ ಎಂದು ಹರಸೋಣ.

Entertainment Tags:Karthik, Sagar BiliGowda, Sathya Serial
WhatsApp Group Join Now
Telegram Group Join Now

Post navigation

Previous Post: ರವಿ ಬೆಳಗೆರೆ ಸಾ-ಯು-ವ ಮುನ್ನ ದರ್ಶನ್ ಬಗ್ಗೆ ಹೇಳಿದ್ದೇನು ಗೊತ್ತ‌.? ಎರಡು ವರ್ಷದ ಬಳಿಕ ಬಯಲಿಗೆ ಬಂತು ಸತ್ಯಾಂಶ ಈ ವಿಚಾರ ನೋಡಿ ಇಡೀ ಚಿತ್ರರಂಗವೇ ಶಾ-ಕ್
Next Post: Dhruva Sarja: ಮುದ್ದು ಮಗಳಿಗೆ ನಾಮಕರಣ ಮಾಡುವ ಸಂಭ್ರಮದಲ್ಲಿ ಓಡಾಡುತ್ತಿರುವ ಧ್ರುವ ಸರ್ಜಾ, ಮಗುವಿಗೆ ಯಾವ ಹೆಸರಿಡುತ್ತಿದ್ದಾರೆ ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore