ಮಹಿಳೆಯರ ಮೇಲೆ ಆಗಿಂದ ಹಾಗೆ ಲೈಂ.ಗಿ.ಕ ದೌ.ರ್ಜ.ನ್ಯ ಕಿರುಕುಳ ಅಶ್ಲೀಲ ವಿಡಿಯೋ ಮತ್ತು ಮೆಸೇಜ್ ಕಳಿಸುವುದನ್ನು ನೀವು ಕೇಳೇ ಇರುತ್ತೀರ. ಇದು ಜನಸಾಮಾನ್ಯರಿಗೆ ಪ್ರತಿನಿತ್ಯವೂ ಕೂಡ ಕಾಡುವಂತ ಒಂದು ಸರ್ವೇ ಸಾಮಾನ್ಯ ತೊಂದರೆಯಾಗಿದೆ ಆದರೆ ನಟಿಯರಿಗೂ ಕೂಡ ಇಂತಹ ಕಿರುಕುಳ ಎದುರಾಗುತ್ತಿದೆ ಅಂದರೆ ನಿಜಕ್ಕೂ ಕೂಡ ಆಶ್ಚರ್ಯವೇ. ಏಕೆಂದರೆ ಸಮಾಜದಲ್ಲಿ ನಟಿಯರಿಗೆ ಉನ್ನತ ಸ್ಥಾನ ಮಾನವಿರುತ್ತದೆ ಅವರಿಗೆ ಚಿಕ್ಕ ಏರುಳಿತ ಕಂಡು ಬಂದರೂ ಕೂಡ ಬಹುದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ.
ಅಷ್ಟೇ ಅಲ್ಲದೆ ನಟಿಯರ ಪಾಲಿಗೆ ಕಾನೂನಾಗಿರಬಹುದು ಅಥವಾ ರಂಗಕ್ಕೆ ಸೇರಿದವರಾಗಿರಬಹುದು ಎಲ್ಲರೂ ಕೂಡ ಸಪೋರ್ಟ್ ಮಾಡುತ್ತಾರೆ ಹಾಗಾಗಿ ನಟಿಯರಿಗೆ ಏನಾದರೂ ಇಂತಹ ವಿಚಾರಕ್ಕೆ ಸಂಬಂಧಪಟ್ಟಂತಹ ತೊಂದರೆಯಾದರೆ ಎಲ್ಲರೂ ಕೂಡ ಒಗ್ಗಟ್ಟಾಗಿ ನಿಲ್ಲುತ್ತಾರೆ. ಆದರೆ ವಿಪರ್ಯಾಸ ಏನೆಂದರೆ ಸದ್ಯಕ್ಕೆ ಚಿತ್ರರಂಗದಲ್ಲಿಯೇ ಇದೀಗ ಕಿತ್ತಾಟ ಶುರುವಾಗಿದೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಎಲ್ಲಾ ರಂಗದಲ್ಲಿಯೂ ಕೂಡ ತಮ್ಮದೇ ಆದಂತಹ ಒಂದು ಸಂಘವನ್ನು ಕಟ್ಟಿಕೊಂಡಿರುತ್ತಾರೆ.
ಅದೇ ರೀತಿ ಕನ್ನಡ ಚಲನಚಿತ್ರ ಮಂಡಳಿಯಲ್ಲಿ ಹಿರಿಯ ಹಾಗೂ ಪೋಷಕ ನಟರ ಸಂಘವನ್ನು ಕಟ್ಟಿಕೊಂಡಿದ್ದರು ಈ ಸಂಘದಲ್ಲಿ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಿದಂತಹ ಹಲವಾರು ನಟ ನಟಿಯರು ಸದಸ್ಯತ್ವವನ್ನು ಪಡೆದುಕೊಂಡಿದ್ದರು. ಪ್ರತಿಬಾರಿಯೂ ಕೂಡ ಏನಾದರೂ ಒಂದು ವಿಚಾರವನ್ನು ಪ್ರಸ್ತಾಪ ಮಾಡಬೇಕಾದರೆ ಅಥವಾ ಹಿರಿಯ ನಟರಿಗೆ ಏನಾದರೂ ತೊಂದರೆಯಾದರೆ ಅದನ್ನು ಬಗೆಹರಿಸುವಂತಹ ಕೆಲಸವನ್ನು ಈ ಸಂಘದಲ್ಲಿ ಮಾಡಲಾಗುತ್ತದೆ.
ಇದರ ಜೊತೆಗೆ ಸಂಘದ ಸದಸ್ಯತ್ವವನ್ನು ಪಡೆಯಬೇಕಾದರೆ ಇಂತಿಷ್ಟು ಪ್ರಮಾಣದ ಹಣವನ್ನು ಕೂಡ ನೀಡಬೇಕಾಗುತ್ತದೆ. ಸದ್ಯಕ್ಕೆ ಸಂಘದಲ್ಲಿ ಇರುವಂತಹ ಅಣವು ದುರ್ಬಳಕೆಯಾಗುತ್ತಿದೆ ಎಂದು ನಟಿ ರಾಣಿ ಅವರು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಡಿಂಗ್ರಿ ನಾಗರಾಜು ಅವರ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಕನ್ನಡ ಚಲನಚಿತ್ರ ಪೋಷಕರ ಸಂಘದಲ್ಲಿ ಗಲಾಟೆ ದೊಡ್ಡದಾಗಿದೆ. ಹಿರಿಯ ನಟರು ಸಂಘದ ಹಣವನ್ನು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ ಹಾಗೂ ಮಹಿಳಾ ಕಲಾವಿದರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಸುದ್ದಿಗೋಷ್ಠಿ ನಡೆಸುವ ಮೂಲಕ ಸಂಪೂರ್ಣ ಮಾಹಿತಿಯನ್ನು ತಿಳಿಸುವುದಾಗಿ ನಟಿಯರು ಹೇಳಿದ್ದಾರೆ. ಅವಾಚ್ಯ ಶಬ್ದಗಳಿಂದ ಅವಮಾನಿಸಿ ನಿಂದುತ್ತಿದ್ದಾರೆ ಜೊತೆಗೆ ಮಹಿಳಾ ಸದಸ್ಯರ ಮೊಬೈಲ್‌ಗೆ ಅಶ್ಲೀಲ ವಿಡಿಯೋವನ್ನು ಕಳುಹಿಸಿ ದೌರ್ಜನ್ಯ ಏಸಗುತ್ತಿದ್ದಾರೆ ಎಂದು ನಟಿ ಶ್ರೀಮತಿ ರಾಣಿ ಮಾತನಾಡಿದ್ದಾರೆ.
“ಈ ರೀತಿ ಅಶ್ಲೀಲ ವಿಡಿಯೋಗಳನ್ನು ಕಳಿಸಬೇಡಿ ಎಂದು ಹೇಳಿದ್ದೆವು. ಕಳೆದ ವರ್ಷ ಕನಿಷ್ಕ ಹೋಟೆಲ್‌ನಲ್ಲಿ ಈ ವಿಚಾರವಾಗಿ 300 ಜನರ ಮಧ್ಯೆ ಜಗಳ ಆಗಿದೆ. ಆಗ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ಕಳೆದ ತಿಂಗಳು ನನ್ನನ್ನು ಸಂಘದಿಂದ ಉಚ್ಛಾಟನೆ ಮಾಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಯಾರು ಯಾರನ್ನೋ ಸಂಘಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ನಮ್ಮ ಐಡಿಯನ್ನು ಬದಲಾಯಿಸಿದ್ದಾರೆ.
ಏಕವಚನದಲ್ಲಿ ನಮ್ಮನ್ನು ಮಾತನಾಡಿಸುತ್ತಾರೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಅಸಭ್ಯ ಪದ ಬಳಸಿ ನಾವು ಹೇಳುವ ಹಾಗೆ ಕೇಳುವುದಿದ್ದರೆ ಕೇಳಿ, ಇಲ್ಲ ಅಂದರೆ ಹೋಗಿ ಅಂತ ಹೇಳುತ್ತಾರೆ. ಯಾವುದೇ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ನಮ್ಮ ಬಳಿ ಚರ್ಚೆ ಮಾಡದೆ ಅವರೇ ನಿರ್ಧಾರಕ್ಕೆ ಬರುತ್ತಾರೆ. ಏನೇ ಹೇಳಿದರೂ ನೀವು ರಾಜೀನಾಮೆ ಕೊಟ್ಟು ಹೋಗಿ ಅಂತಾರೆ. ನಾನು ಮೊದಲ ಹೆಜ್ಜೆ ತೆಗೆದುಕೊಂಡು ಮುಂದೆ ಬಂದಿದ್ದೇನೆ, ಸಾಕಷ್ಟು ಹಿರಿಯ ಕಲಾವಿದರಿಗೂ ಈ ವಿಷಯವನ್ನು ತಿಳಿಸಿದ್ದೇನೆ” ಎಂದು ರಾಣಿ ಹೇಳಿದ್ದಾರೆ.
https://youtu.be/o2FzlnByUR4