ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು ದಾನ ಧರ್ಮ ಮಾಡಿದರಲ್ಲೂ ಕೂಡ ಎತ್ತಿದ ಕೈ ಆದರೆ ಬಲಗೈನಲ್ಲಿ ಕೊಟ್ಟದ್ದು ಎಡಗೈಗೂ ಕೂಡ ತಿಳಿಯಬಾರದು ಎಂಬ ಗಾದೆ ಮಾತಿನ ಪ್ರಕಾರವೇ ಕಿಚ್ಚ ಸುದೀಪ್ ನಡೆದುಕೊಳ್ಳುತ್ತಾರೆ. ಇಲ್ಲಿಯವರೆಗೂ ಕಿಚ್ಚ ಸುದೀಪ್ ಅವರು ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಆದರೆ ತಾವು ಮಾಡಿದಂತಹ ಸಹಾಯವನ್ನು ಎಲ್ಲಿಯೂ ಕೂಡ ತೋರ್ಪಡಿಸಿಕೊಳ್ಳುವುದಿಲ್ಲ.
ಆದರೆ ಸಹಾಯ ಪಡೆದ ವ್ಯಕ್ತಿಗಳು ಇದೀಗ ಕಿಚ್ಚ ಸುದೀಪ್ ಅವರ ಬಗ್ಗೆ ಒಂದೊಂದೇ ವಿಚಾರವನ್ನು ರಿವೀಲ್ ಮಾಡಿದ್ದಾರೆ ಈ ವಿಚಾರ ಕೇಳಿದರೆ ನಿಜಕ್ಕೂ ಕೂಡ ಆಶ್ಚರ್ಯ ಅನ್ನಿಸುತ್ತದೆ. ಹೌದು, ಚಿತ್ರರಂಗ ಅಂದ ಮೇಲೆ ಅಲ್ಲಿ ಭೇದ ಭಾವ ಇರುತ್ತದೆ ಮೇಲು ಕೇಳು ಎಂಬ ಭಾವನೆಯ ಕೂಡ ಮೂಡುತ್ತದೆ. ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಎಂದಿಗೂ ಕೂಡ ಸಹಕಲಾವಿದರು ಮತ್ತು ಟೆಕ್ನಿಷಿಯನ್ ಗಳನ್ನು ಕೀಳು ಮಟ್ಟದಲ್ಲಿ ನೋಡಿಲ್ಲ.
ಅದರಲ್ಲಿಯೂ ಕೂಡ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂದು ಆತರೆಯುತ್ತಾರೆ ಇದೇ ಕಾರಣಕ್ಕಾಗಿ ಕೆಂಪೇಗೌಡ ಸಿನಿಮಾ ಖ್ಯಾತಿಯ ರವಿಶಂಕರ್ ಅವರಿಗೆ ಅವಕಾಶವನ್ನು ಕೊಟ್ಟು ಆರ್ಮುಗಂ ಎಂಬ ಪಾತ್ರದಲ್ಲಿ ಅಭಿನಯಿಸುವುದಕ್ಕೆ ಚಾನ್ಸ್ ನೀಡುತ್ತಾರೆ. ಈ ಸಿನಿಮಾದಿಂದ ಇವರಿಗೆ ಯಶಸ್ಸು ಕೀರ್ತಿ ದೊರೆಯುತ್ತದೆ ಇದೊಂದೇ ಒಂದು ಸಿನಿಮಾದಲ್ಲಿ ನಟನೆ ಮಾಡಿದ ನಂತರ ರವಿಶಂಕರ್ ಅವರ ಸಂಪೂರ್ಣ ಜೀವನವೇ ಬದಲಾಗುತ್ತದೆ.
ಸುಮಾರು ಒಂದುವರೆ ಸಾವಿರ ಸಿನಿಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದ ರವಿಶಂಕರ್ ಅವರಿಗೆ ತೆರೆ ಮೇಲೆ ನಟಿಸಲು ಎಲ್ಲಿಯೂ ಕೂಡ ಅವಕಾಶ ದೊರೆಯುವುದಿಲ್ಲ. ಆ ಸಮಯದಲ್ಲಿ ಕಿಚ್ಚ ಸುದೀಪ್ ತಮ್ಮ ಸಿನಿಮಾದಲ್ಲಿ ಅವಕಾಶ ನೀಡುತ್ತಾರೆ ಸದ್ಯಕ್ಕೆ ರವಿಶಂಕರ್ ಬಹು ಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಅರ್ಜುನ್ ಜನ್ಯ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ಮ್ಯೂಸಿಕ್ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.
ಸಂಗೀತ ಮಾಂತ್ರಿಕ ಅಂತಾನೆ ಇವರನ್ನು ಕರೆಯುತ್ತಾರೆ ಆದರೆ ಅರ್ಜುನ್ ಜನ್ಯ ಅವಕಾಶಕ್ಕಾಗಿ ಗಾಂಧಿನಗರದ ಬೀದಿ ಬೀದಿಗಳಲ್ಲಿ ಅಲೆದಾಡುವಂತಹ ಸಂದರ್ಭದಲ್ಲಿ ಯಾರು ಕೂಡ ಇವರಿಗೆ ಅವಕಾಶ ನೀಡುವುದಿಲ್ಲ. ಆ ಸಮಯದಲ್ಲಿ ಕಿಚ್ಚ ಸುದೀಪ್ ಇವರನ್ನು ಗುರುತಿಸಿ ಅವರನ್ನು ಮನೆಗೆ ಕರೆಸಿ ಸಿನಿಮಾದಲ್ಲಿ ಹಾಡು ಕಂಪೋಸ್ ಮಾಡುವುದಕ್ಕೆ ಚಾನ್ಸ್ ನೀಡುತ್ತಾರೆ. ಅಂದು ಕಿಚ್ಚ ಸುದೀಪ್ ಕೊಟ್ಟ ಚಾನ್ಸ್ ಇಂದು ಅರ್ಜುನ್ ಜನ್ಯ ಅವರ ಭವಿಷ್ಯವನ್ನೇ ಬದಲಾಯಿಸಿದೆ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆ ಇರುವಂತಹ ಮ್ಯೂಸಿಕ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ.
ಮೂರನೆಯದಾಗಿ ಡಾನ್ಸ್ ಮಾಸ್ಟರ್ ಹರ್ಷ ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಾಶಿ ಎಂಬ ಸಿನಿಮಾದಲ್ಲಿ ಡ್ಯಾನ್ಸ್ ಮಾಸ್ಟರ್ ಹರ್ಷ ಅವರು ಸುದೀಪ್ ಅವರ ತಮ್ಮನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ಹರ್ಷ ಅವರು ಡಾನ್ಸ್ ಮಾಸ್ಟರ್ ಉತ್ತಮ ನೃತ್ಯಗಾರ ಆಗಿದ್ದರೂ ಕೂಡ ಇವರಿಗೆ ಎಲ್ಲಿಯೂ ಕೂಡ ಚಾನ್ಸ್ ದೊರೆಯುವುದಿಲ್ಲ ಆ ಸಮಯದಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕಿಚ್ಚ ಸುದೀಪ್ ಅವರು ಇವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಇಲ್ಲಿಂದ ಹರ್ಷ ಅವರು ಡಾನ್ಸ್ ಮಾಸ್ಟರ್ ಆಗಿ ಕೊರಿಯೋಗ್ರಾಫರ್ ಆಗಿ ಮತ್ತು ನಿರ್ದೇಶಕರಾಗಿಯೂ ಕೂಡ ಕನ್ನಡದಲ್ಲಿ ಈವರೆಗೂ ಒಳ್ಳೊಳ್ಳೆ ಸಿನಿಮಾವನ್ನು ನೀಡಿದ್ದಾರೆ. ಎಲ್ಲೇ ಹೋದರು ಕೂಡ ಹರ್ಷ ಮಾಸ್ಟರ್ ಮೊದಲು ಕಿಚ್ಚ ಸುದೀಪ್ ಅವರಿಗೆ ಸ್ಮರಿಸಿ ತದನಂತರ ಅಷ್ಟೇ ಅವರ ಮಾತನ್ನು ಪ್ರಾರಂಭಿಸುತ್ತಾರೆ. ಇನ್ನು ಕನ್ನಡದಲ್ಲಿ ಅದ್ಭುತ ಹಾಡುಗಳನ್ನು ಹೇಳಿರುವಂತಹ ವಿಜಯ್ ಪ್ರಕಾಶ್ ಅಂದರೆ ಎಲ್ಲರಿಗೂ ಕೂಡ ಅಚ್ಚು ಮೆಚ್ಚು.
ಆದರೆ ವಿಜಯ ಪ್ರಕಾಶ ಅವರಿಗೆ ಕೆಂಪೇಗೌಡ ಸಿನಿಮಾದಲ್ಲಿ ಹಾಡು ಹೇಳುವ ಮೂಲಕ ಮೊಟ್ಟಮೊದಲ ಬಾರಿಗೆ ಚಾನ್ಸ್ ಕೊಟ್ಟ ನಟ ಅಂದರೆ ಅದು ಕಿಚ್ಚ ಸುದೀಪ್ ಅಂತಾನೇ ಹೇಳಬಹುದು. ಹೀಗೆ ಒಬ್ಬರಲ್ಲ ಇಬ್ಬರಲ್ಲ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕಲಾವಿದರಿಗೆ ಅವಕಾಶವನ್ನು ಕಲ್ಪಿಸಿ ಕೊಟ್ಟು ಇಂದು ಅವರ ಜೀವನವನ್ನು ಹಸನಾಗಿರುವ ಏಕೈಕ ವ್ಯಕ್ತಿ ಅಂದರೆ ಅದು ಕಿಚ್ಚ ಸುದೀಪ್ ನಿಜಕ್ಕೂ ಕೂಡ ಇವರು ಮಾಡಿರುವ ಸಹಾಯವನ್ನು ಇಂದಿಗೂ ಈ ಸೆಲೆಬ್ರಿಟಿಗಳು ಸ್ಮರಿಸಿಕೊಳ್ಳುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ