Home Entertainment ಗಂಡನನ್ನು ಬಿಟ್ಟು ಏಕಾಂಗಿಯಾಗಿ ಹನಿಮೂನ್ ಸ್ಪಾಟಿಗೆ ಸೋಲೊ ಟ್ರಿಪ್ ಹೋದ ನಿವೇದಿತಾ ಗೌಡ ವಿಡಿಯೋ ವೈರಲ್‌.

ಗಂಡನನ್ನು ಬಿಟ್ಟು ಏಕಾಂಗಿಯಾಗಿ ಹನಿಮೂನ್ ಸ್ಪಾಟಿಗೆ ಸೋಲೊ ಟ್ರಿಪ್ ಹೋದ ನಿವೇದಿತಾ ಗೌಡ ವಿಡಿಯೋ ವೈರಲ್‌.

0
ಗಂಡನನ್ನು ಬಿಟ್ಟು ಏಕಾಂಗಿಯಾಗಿ ಹನಿಮೂನ್ ಸ್ಪಾಟಿಗೆ ಸೋಲೊ ಟ್ರಿಪ್ ಹೋದ ನಿವೇದಿತಾ ಗೌಡ ವಿಡಿಯೋ ವೈರಲ್‌.

 

ಕಿರುತೆರೆಯ ನಟಿ ನಿವೇದಿತ ಗೌಡ ಅವರು ಏನೇ ಮಾಡಿದರು ಕೂಡ ಅದು ತಕ್ಷಣ ಸುದ್ದಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಡುತ್ತದೆ. ಬಿಗ್ ಬಾಸ್ ಸೀಸನ್ 5ರ ಕಂಟೆಸ್ಟೆಂಟ್ ಆಗಿ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಡ ನಿವೇದಿತಾ ಗೌಡ ಅವರು ಇದಾದ ಬಳಿಕ ಕಿರುತೆರೆಯಲ್ಲಿ ಬಾರಿ ಸುದ್ದಿಯಲ್ಲಿರುವ ನಟಿ.

ಸಾಲು ಸಾಲು ರಿಯಾಲಿಟಿ ಶೋ ಅಲ್ಲಿ ಕಾಣಿಸಿಕೊಂಡಿರುವ ನಿವೇದಿತ ಗೌಡ ಅವರು ಈವರಿಗೆ ಭರ್ಜರಿ ಕಾಮಿಡಿ, ಕುಕ್ ವಿತ್ ಕಿರಿಕ್, ರಾಜ ರಾಣಿ ಸೀಸನ್ ಒನ್, ಗಿಚ್ಚ ಗಿಲಿ ಗಿಲಿ ಹೀಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಕಿರುತೆರೆಯಲ್ಲಿ ಸದಾ ಕಾಲ ಬೇಡಿಕೆಯಲ್ಲಿರುವ ನಟಿ ಆಗಿರುವ ನಿವೇದಿತ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಅಷ್ಟೇ ಆಕ್ಟಿವ್ ಆಗಿದ್ದಾರೆ.

ತಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹೊಸ ಹೊಸ ಫೋಟೋಶೂಟ್ ಮಾಡಿಸಿ ಅಥವಾ ಹೊಸ ರೀಲ್ಸ್ ಮಾಡಿ ಹಂಚಿಕೊಳ್ಳುವ ಮೂಲಕ ತನ್ನ ಅಭಿಮಾನಿಗಳಿಗೆ ರಂಜಿಸುವ ಇವರಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಫಾಲೋವರ್ಸ್ ಸಹಾ ಇದ್ದಾರೆ. ಹೀಗಾಗಿ ನಿವೇದಿತಾ ಅವರ ಹೊಸ ಹೊಸ ಅಪ್ಡೇಟ್ಸ್ ಬಗ್ಗೆ ಎಲ್ಲರೂ ಕಾತುರದಿಂದ ಕಾಯುತ್ತಿರುತ್ತಾರೆ.

ನಿವೇದಿತ ಗೌಡ ಅವರು ರಿಯಾಲಿಟಿ ಶೋ ಅಲ್ಲಿ ಮಾತ್ರ ಅಲ್ಲದೆ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಅದರಲ್ಲೂ ಹೊಸ ಹೊಸ ಕಂಟೆಂಟ್ ತಂದು ಸಕ್ಸಸ್ ಆಗಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲು ಅಖಾಡಕ್ಕೆ ಇಳಿದಿರುವ ಇವರು ತೆರೆ ಹಿಂದೆ ನಾಯಕಿ ಆಗುವ ತಾಲಿಮಿನಲ್ಲಿ ಬಿಸಿ ಆಗಿದ್ದಾರೆ.

ಇತ್ತೀಚೆಗಷ್ಟೇ ಮಿಸಸ್ ಇಂಡಿಯಾ 2022 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೀಪಲ್ ಚಾಯ್ಸ್ ಇಂಕ್ನಾ ಅವಾರ್ಡ್ ಕೂಡ ಮೂಡಿಗೇರಿಸಿಕೊಂಡು ಬಂದಿರುವ ನಿವೇದಿತ ಗೌಡ ಅವರಿಗೆ ಕನ್ನಡ ಮತ್ತು ಕನ್ನಡೇತರ ಸಿನಿಮಾಗಳಲ್ಲಿ ಅಭಿನಯಿಸಲು ಆಫರ್ ಗಳು ಬಂದಿವೆಯಂತೆ. ರಿಯಾಲಿಟಿ ಶೋಗಳು, ತನ್ನದೇ ಚಾನೆಲ್, ಸೋಶಿಯಲ್ ಮೀಡಿಯಾ, ಪರ್ಸನಲ್ ಲೈಫ್ ಹೀಗೆ ಬಹಳ ಬಿಜಿ ಆಗಿರುವ ನಿವೇದಿತ ಗೌಡ ಅವರು ಕೊಂಚ ಬ್ರೇಕ್ ತೆಗೆದುಕೊಂಡು ಸೋಲೊ ಟ್ರಿಪ್ ಹೊರಟಿದ್ದಾರೆ.

ಬಾಲಿಗೆ ವಿಶ್ರಾಂತಿಗೆ ತೆರಳಿರುವ ನಿವೇದಿತ ಗೌಡ ಅವರು ಅಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಬಳಿಕ ಅಭಿಮಾನಿಗಳ ಮನದಲ್ಲಿ ಪ್ರಶ್ನೆ ಮೂಡಿದೆ. ಏನೆಂದರೆ ಇದುವರೆಗೆ ಎಲ್ಲಾ ಫೋಟೋ ಹಾಗೂ ರೀಲ್ಸ್ ಗಳಲ್ಲಿ ಚಂದನ್ ಜೊತೆ ಕಾಣಿಸಿಕೊಳ್ಳುತ್ತಿದ್ದ ನಿವೇದಿತಾ ಗೌಡ ಅವರು ಈ ಬಾರಿ ಒಬ್ಬಂಟಿಯಾಗಿದ್ದಾರಲ್ಲಾ ಎಂದು.

ಹಾಗಾಗಿ ಎಲ್ಲರಲ್ಲಿ ಕೂಡ ಸೋಲೋ ಟ್ರಿಪ್ ಹೋಗಿದ್ದಾರಾ ನಿವಿ ಎನ್ನುವ ಊಹೆ ಇದೆ ಮತ್ತು ಕೆಲವರು ನೇರವಾಗಿ ಚಂದನ್ ಎಲ್ಲಿ ಎನ್ನುವ ಪ್ರಶ್ನೆಯನ್ನು ಕೂಡ ಕೇಳಿದ್ದಾರೆ, ಗಂಡನನ್ನೇ ಬಿಟ್ಟು ಹನಿಮೂನ್ ಗೆ ಹೋಗಿದ್ದಾರಾ ನಿವೇದಿತ ಎಂದು ಕೆಲವರು ಗೇಲಿ ಕೂಡ ಮಾಡುತ್ತಿದ್ದಾರೆ. ಆದರೆ ಅಧಿಕೃತವಾಗಿ ನಿವೇದಿತ ಎಲ್ಲೂ ಕೂಡ ಅವರು ಪ್ರವಾಸವನ್ನು ಎಂಜಾಯ್ ಮಾಡಲು ಹೋಗಿದ್ದಾರಾ ಅಥವಾ ಇನ್ಯಾವುದಾದರೂ ಪ್ರಾಜೆಕ್ಟ್ ಸಲುವಾಗಿ ಶೂಟಿಂಗ್ ಹೋಗಿದ್ದಾರಾ ಎನ್ನುವುದನ್ನು ಬಹಿರಂಗಗೊಳಿಸಿಲ್ಲ.

ಕನ್ನಡದ ಫೇಮಸ್ ರಾಪರ್ ಚಂದನ್ ಶೆಟ್ಟಿ ಅವರ ಕೈ ಹಿಡಿದಿರುವ ನಿವೇದಿತ ಗೌಡ ಅವರು ಚಂದನ್ ಅವರನ್ನು ವಿವಾಹದ ವಾದ ಬಳಿಕ ಬಹಳ ಸುದ್ದಿಯಲ್ಲಿ ಇದ್ದಾರೆ ಮತ್ತು ತಮ್ಮ ಕೆರಿಯರ್ ಅಲ್ಲೂ ಕೂಡ ಒಳ್ಳೆ ಒಳ್ಳೆ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇವರಿಬ್ಬರ ಜೀವನ ಹೀಗೆ ಸದಾ ಸಂತೋಷಮಯದಿಂದ ಕೂಡಿರಲಿ ಇಬ್ಬರೂ ಕೂಡ ಕನ್ನಡದ ಖ್ಯಾತಿಯನ್ನು ಬೆಳಗಿಸುವ ಸಾಧನೆ ಮಾಡಲಿ ಎಂದು ಹಾರೈಸೋಣ.

LEAVE A REPLY

Please enter your comment!
Please enter your name here