Home Entertainment ಗಂಡನ ದುಡ್ಡಲ್ಲಿ ದಿನಕ್ಕೊಂದು ದೇಶ ಸುತ್ತುತ ಮಜ ಮಾಡ್ತ ಇದಿಯಾ ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದವರ ವಿರುದ್ಧ ಸಿಡಿದೆದ್ದು ಕಣ್ಣೀರು ಹಾಕುತ್ತ ನಿವೇದಿತಾ ಗೌಡ ಹೇಳಿದ್ದೇನು ಗೊತ್ತ.?

ಗಂಡನ ದುಡ್ಡಲ್ಲಿ ದಿನಕ್ಕೊಂದು ದೇಶ ಸುತ್ತುತ ಮಜ ಮಾಡ್ತ ಇದಿಯಾ ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದವರ ವಿರುದ್ಧ ಸಿಡಿದೆದ್ದು ಕಣ್ಣೀರು ಹಾಕುತ್ತ ನಿವೇದಿತಾ ಗೌಡ ಹೇಳಿದ್ದೇನು ಗೊತ್ತ.?

0
ಗಂಡನ ದುಡ್ಡಲ್ಲಿ ದಿನಕ್ಕೊಂದು ದೇಶ ಸುತ್ತುತ ಮಜ ಮಾಡ್ತ ಇದಿಯಾ ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದವರ ವಿರುದ್ಧ ಸಿಡಿದೆದ್ದು ಕಣ್ಣೀರು ಹಾಕುತ್ತ ನಿವೇದಿತಾ ಗೌಡ ಹೇಳಿದ್ದೇನು ಗೊತ್ತ.?

 

ನಿವೇದಿತಾ ಗೌಡ ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಬಹಳ ಬೇಡಿಕೆ ಇರುವ ನಟಿ. ಕನ್ನಡದ ಬಿಗ್ ಶೋ ಬಿಗ್ ಬಾಸ್ ಶೋ ಸೀಸನ್ ಐದರಲ್ಲಿ ಸಾಮಾನ್ಯರಾಗಿ ಎಂಟ್ರಿ ಕೊಟ್ಟ ಇವರು ಆ ನಂತರ ಕಲರ್ಸ್ ಕನ್ನಡ ವಾಹಿನಿಗೆ ಖಾಯಂ ಸದಸ್ಯೆ ಆಗಿಬಿಟ್ಟಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ಅವರು ಭಾಗವಹಿಸಿದ್ದ ಅದೇ ಸೀಸನ್ ವಿನ್ನರ್ ಆದ ಕನ್ನಡದ ಫೇಮಸ್ ರಾಪರ್ ಕೂಡ ಆಗಿರುವ ಚಂದನ್ ಶೆಟ್ಟಿ ಅವರನ್ನು ಪ್ರೇಮ ವಿವಾಹ ಆದ ನಿವೇದಿತ ಗೌಡ ಅವರು ಮದುವೆ ಆದ ಬಳಿಕವೂ ಕಿರುತೆರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ರಾಜ ರಾಣಿ, ಗಿಚ್ಚ ಗಿಲಿ ಗಿಲಿ ಅಂತಹ ಪ್ರಖ್ಯಾತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಇತರ ವಾಹಿನಿಯ ಕೆಲವು ಕಾರ್ಯಕ್ರಮಗಳಲ್ಲೂ ಕೂಡ ಭಾಗಿಯಾಗಿದ್ದಾರೆ. ನಿವೇದಿತ ಗೌಡ ಅವರಿಗೆ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಾರಿ ಡಿಮ್ಯಾಂಡ್ ಇದ್ದು, ಬೇಬಿ ಡಾಲ್ ಲುಕ್ ಮತ್ತು ಮುದ್ದಾದ ಮಾತಿನಿಂದ ಮೋಡಿ ಮಾಡಿರುವ ಇವರಿಗೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಇತ್ತೀಚೆಗಷ್ಟೇ ಮಿಸ್ಸಸ್ ಇಂಡಿಯಾ 2022 ಅಲ್ಲಿ ಪೀಪಲ್ ಚಾಯ್ಸ್ ಇಂಕ್ನಾ ಅವಾರ್ಡ್ ಕೂಡ ಮೂಡಿಗೇರಿಸಿಕೊಂಡು ದೇಶದಾದ್ಯಂತ ಫೇಮಸ್ ಆಗಿರುವ ನಿವೇದಿತ ಗೌಡ ಅವರು ಸಿನಿಮಾಗಳಲ್ಲಿ ನಾಯಕಿ ಆಗಿ ಅಭಿನಯಿಸುವ ಆಫರ್ ಕೂಡ ಪಡೆಯುತ್ತಿದ್ದಾರೆ. ಕಿರುತೆರೆ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳು, ತನ್ನದೇ ಆದ ಯೂಟ್ಯೂಬ್ ಚಾನೆಲ್, ಕುಟುಂಬ ಹೀಗೆ ವರ್ಷಪೂರ್ತಿ ಬಹಳ ಬಿಜಿ ಆಗಿರುವ ನಿವೇದಿತ ಗೌಡ ಅವರು ತನ್ನ ಬ್ಯುಸಿ ಶೆಡ್ಯೂಲ್ ನಡುವೆ ಬ್ರೇಕ್ ತೆಗೆದುಕೊಂಡು ಬಾಲಿ ದ್ವೀಪಕ್ಕೆ ಸೋಲೋ ಟ್ರಿಪ್ ಹೋಗಿದ್ದಾರೆ.

ಮೊದಲಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿರುವ ಇವರು ತಮ್ಮ ಜೀವನದ ಯಾವುದೇ ವಿಷಯ ಆದರೂ ಕೂಡ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗಲೂ ಸಹ ಬಾಲಿಯಲ್ಲಿ ಟ್ರಿಪ್ ಎಂಜಾಯ್ ಮಾಡುತ್ತಿರುವ ನಿವೇದಿತಾ ಗೌಡ ಅವರು ಹೊಸ ಹೊಸ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಆ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನು ನೋಡಿದ ಕೆಲವರು ಫೋಟೋಶೂಟ್ ಮತ್ತು ಟ್ರಿಪ್ ಬಗ್ಗೆ ಪ್ರಶ್ನೆ ಕೇಳಿ ನಿವೇದಿತ ಅವರ ಗ್ಲಾಮರ್ ಅನ್ನು ಹೊಗಳುತ್ತಿದ್ದರೆ ಕೆಲ ಕಿಡಿಗೇಡಿಗಳು ಅಲ್ಲೂ ಕೂಡ ಕಿರಿಕ್ ಮಾಡಿ ಬೇಬಿ ಡಾಲ್ ಕಾಲು ಎಳೆಯುವ ಕೆಲಸ ಮಾಡುತ್ತಿದ್ದಾರೆ. ಗಂಡನ ದುಡ್ಡನ್ನು ಚೆನ್ನಾಗಿ ಮಜಾ ಉಡಾಯಿಸುತ್ತಿದ್ದೀಯ, ಗಂಡನನ್ನೆ ಬಿಟ್ಟು ಸೋಲೋ ಟ್ರಿಪ್ ಹೋಗಿದ್ದೀಯಲ್ಲಾ ಎಂದು ಕೆಟ್ಟದಾಗಿ ಕಮೆಂಟ್ ಮಾಡಿದವರ ವಿರುದ್ಧ ಈ ಬಾರಿ ನಿವೇದಿತಾ ಗೌಡ ಅವರ ಸಿಡಿದೆದ್ದಿದ್ದಾರೆ.

ಇಂತಹ ಕಾಮೆಂಟ್ ಗಳಿಗೆ ತಾವು ಕೂಡ ರಿಪ್ಲೈ ಮಾಡುವ ಮೂಲಕ ಅಂದವರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ. ನಾನೇನು ನನ್ನ ಪತಿಯ ದುಡ್ಡಿನ ಮೇಲೆ ಅವಲಂಬಿತವಾಗಿಲ್ಲ, ನಾನು ಕೂಡ ದುಡಿಯುವ ಶಕ್ತಿ ಹೊಂದಿದ್ದೇನೆ ನನ್ನ ಹಣವನ್ನು ನಾನೇ ಸಂಪಾದಿಸಿಕೊಳ್ಳುತ್ತೇನೆ. ಹುಡುಗರು ಸೋಲೊ ಟ್ರಿಪ್ ಹೋದರೆ ಯಾರಿಗೂ ಸಮಸ್ಯೆ ಇಲ್ಲ, ಹುಡುಗಿಯರು ಸೋಲೊ ಟ್ರಿಪ್ ಹೋಗುವುದು ನಿಮಗೆ ಮಾತನಾಡಲು ಟಾಪಿಕ್ ಆಗಿದೆ.

ಅಷ್ಟಕ್ಕೂ ನಾನು ನನ್ನ ಗಂಡನ ದುಡ್ಡಿನಲ್ಲಿ ಟ್ರಿಪ್ ಹೋದರೆ ಅದರಲ್ಲೇನು ತಪ್ಪಿದೆ ಇದರಿಂದ ನಿಮಗೇನು ಕಷ್ಟ ಎಂದು ಪ್ರಶ್ನಿಸುತ್ತಿದ್ದಾರೆ. ನಿವೇದಿತ ಗೌಡ ಅವರು ಹೇಳುತ್ತಿರುವ ಈ ಮಾತುಗಳಲ್ಲೂ ಕೂಡ ಸತ್ಯವಿದ್ದು ಸುಖಾ ಸುಮ್ಮನೆ ಮಾತನಾಡುವವರಿಗೆ ಈ ಸಾರಿ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ ನಿವಿ ಎಂದು ಅನಿಸುತ್ತದೆ.

LEAVE A REPLY

Please enter your comment!
Please enter your name here