Sunday, May 28, 2023
HomeEntertainmentಬಿಗ್ ಬ್ರೇಕಿಂಗ್ ನ್ಯೂಸ್ ಕನ್ನಡ ಸಿನಿಮಾ ಇಂಡಸ್ಟ್ರಿ ಇಂದ ನಟಿ ರಶ್ಮಿಕಾ ಮಂದಣ್ಣ ಬ್ಯಾನ್, ಕಾರಣವೇನು...

ಬಿಗ್ ಬ್ರೇಕಿಂಗ್ ನ್ಯೂಸ್ ಕನ್ನಡ ಸಿನಿಮಾ ಇಂಡಸ್ಟ್ರಿ ಇಂದ ನಟಿ ರಶ್ಮಿಕಾ ಮಂದಣ್ಣ ಬ್ಯಾನ್, ಕಾರಣವೇನು ಗೊತ್ತ.?

 

ಕನ್ನಡ ಚಿತ್ರರಂಗದಿಂದ ಬ್ಯಾನ್ ಆದ ಕಿರಿಕ್ ಪಾರ್ಟಿ ಹುಡುಗಿ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಿಂತ ವಿವಾದದ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ನಡೆದುಕೊಂಡ ರೀತಿ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ರಶ್ಮಿಕಾ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದು ‘ಕಿರಿಕ್ ಪಾರ್ಟಿ’ ಸಿನಿಮಾ. ಅವರ ಹೇಳಿಕೆ, ಇಂಟರ್ವ್ಯೂಗಳನ್ನು ಶೇರ್ ಮಾಡಿದ ಜನ ನಟಿ ರಶ್ಮಿಕಾರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ವದಂತಿಗಳ ಪ್ರಕಾರ ನಟಿಗೆ ಬೆಸ್ಟ್ ಪಾತ್ರವನ್ನು ನೀಡಿದ ನಟ ನಿರ್ಮಾಪಕ ರಕ್ಷಿತ್ ಶೆಟ್ಟಿ ಒಡೆತನದ ನಿರ್ಮಾಣ ಕಂಪನಿಗೆ ಕೃತಜ್ಞತೆಯಿಲ್ಲದೆ ಕಾಮೆಂಟ್ ಮಾಡಿದ ಕಾರಣಕ್ಕಾಗಿ ರಶ್ಮಿಕಾ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ನಿಷೇಧ ಎದುರಿಸಬಹುದು ಎನ್ನಲಾಗುತ್ತಿದೆ. ಕರ್ಲಿ ಟೇಲ್ಸ್ ಎಂಬ ಶೋನಲ್ಲಿ ಭಾಗವಹಿಸಿದ ರಶ್ಮಿಕಾ ಅಲ್ಲಿ ಕೊಟ್ಟ ಹೇಳಿಕೆಯಿಂದ ನಿಜಕ್ಕೂ ಟೀಕೆಗೆ ಒಳಗಾಗಿದ್ದಾರೆ.

ತಾವು ನಟಿಯಾದ ಬಗ್ಗೆ ರಶ್ಮಿಕಾ ಈ ಶೋನಲ್ಲಿ ವಿವರವಾಗಿ ಮಾತನಾಡಿದ್ದರು. ತಾನು ಎಂದಿಗೂ ನಟಿಯಾಗಲು ಬಯಸಲಿಲ್ಲ. ತನ್ನ ಮೊದಲ ಪಾತ್ರವನ್ನು ಹೇಗೆ ಪಡೆದುಕೊಂಡೆ ಎಂದು ಚರ್ಚಿಸುವಾಗ ಹೀಗೆ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಚಾನೆಲ್ ಒಂದಕ್ಕೆ ಸಂದರ್ಶನ ನೀಡುತ್ತಾ, ತಮ್ಮ ಜರ್ನಿ ಬಗ್ಗೆ ವಿವರಿಸಿದ್ದರು.

ಮಾಡೆಲ್ ಆಗಿ ಬಣ್ಣದ ಬದುಕು ಆರಂಭಿಸಿದೆ, ಪೇಪರ್ನಲ್ಲಿ ಫೋಟೋ ಬಂತು ಎಂಬಿತ್ಯಾದಿ ವಿಚಾರಗಳನ್ನು ಅವರು ಹೇಳಿಕೊಂಡಿದ್ದರು, ರಕ್ಷಿತ್ ಶೆಟ್ಟಿ ಅವರ ಪ್ರೊಡಕ್ಷನ್ ಹೌಸ್ ಪರಂವಾಹ್ ಸ್ಟುಡಿಯೋಸ್ ಹೆಸರನ್ನು ಉಲ್ಲೇಖಿಸುವುದನ್ನು ಅವಾಯ್ಡ್ ಮಾಡಿದ್ದಾರೆ ನಟಿ ರಶ್ಮಿಕ ಮಂದಣ್ಣ. ನಟಿಯಾಗಿ ಕಿರಿಕ್ ಪಾರ್ಟಿ ಸಿನಿಮಾದಿಂದ ಹೇಗೆ ತನ್ನ ದೊಡ್ಡ ಬ್ರೇಕ್ ಅನ್ನು ಹೇಗೆ ಪಡೆದರು.

ತ್ವರಿತ ಯಶಸ್ಸನ್ನು ಪಡೆದರು. ಹೀಗಿದ್ದರೂ ಪ್ರೊಡಕ್ಷನ್ ಹೌಸ್ ಹೆಸರಿಗೆ ವ್ಯಂಗ್ಯ ಮಾಡಿದ್ದು ನೆಟ್ಟಿಗರನ್ನು ಕೆರಳಿಸಿದೆ. ವಿಶೇಷವಾಗಿ ಕನ್ನಡಿಗರು ಇದನ್ನು ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ. ರಶ್ಮಿಕಾ ಮತ್ತು ರಕ್ಷಿತ್ ಡೇಟಿಂಗ್ ಮಾಡುತ್ತಿದ್ದರು. ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರೂ ಸಹ ನಂತರ ಅದನ್ನು ಕ್ಯಾನ್ಸಲ್ ಮಾಡಿ ಬೇರೆಯಾದರು.

ಆದರೆ ರಶ್ಮಿಕಾಗೆ ಅವರಿಗೆ ಮೊದಲ ಅವಕಾಶ ಸಿಕ್ಕಿದ್ದು ರಕ್ಷಿತ್ ಅವರ ಸಿನಿಮಾದಲ್ಲಿ. ಇದೀಗ ಕರ್ಲಿ ಟೇಲ್ಸ್ ಸಂದರ್ಶನದ ನಂತರ ರಶ್ಮಿಕಾ ಮಂದಣ್ಣ ಅವರ ವರ್ತನೆಯಿಂದ ಕನ್ನಡ ಥಿಯೇಟರ್ ಮಾಲೀಕರು, ಸಂಘಟನೆಗಳು ಮತ್ತು ಚಿತ್ರರಂಗ ಅಸಮಾಧಾನಗೊಂಡಿದೆ ಎನ್ನಲಾಗಿದೆ.

ನಟಿಯ ಮುಂದಿನ ಚಿತ್ರಗಳಾದ ಪುಷ್ಪ 2 ಮತ್ತು ವಾರಿಸುವನ್ನು ಕರ್ನಾಟಕದ ಥಿಯೇಟರ್‌ಗಳಿಂದ ತೆಗೆದುಹಾಕುವ ಮೂಲಕ ನಟಿಯ ವಿರುದ್ಧ ಕ್ರಮ ಕೈಗೊಳ್ಳಲು ಯೋಚಿಸಲಾಗುತ್ತಿದೆ ಎಂಬ ಚರ್ಚೆ ಶುರುವಾಗಿದೆ. ರಶ್ಮಿಕಾ ಪ್ರಸ್ತುತ ಅಲ್ಲು ಅರ್ಜುನ್ ಜೊತೆ ಪುಷ್ಪ: ದಿ ರೂಲ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ, ಇದರಲ್ಲಿ ಫಹದ್ ಫಾಸಿಲ್ ಕೂಡ ನಟಿಸಿದ್ದಾರೆ.

ರಶ್ಮಿಕಾ ಅವರ ಆ್ಯಟಿಟ್ಯೂಡ್ ಅನೇಕರಿಗೆ ಇಷ್ಟವಾಗಿಲ್ಲ. ಹೀಗಾಗಿ ಅವರನ್ನು ಕನ್ನಡ ಚಿತ್ರರಂಗದಿಂದ ಹೊರಗಿಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಈ ಮಧ್ಯೆ ತೆಲುಗು ಮಾಧ್ಯಮಗಳಲ್ಲಿ ರಶ್ಮಿಕಾ ಬಗ್ಗೆ ಕೆಲ ಸುದ್ದಿ ಪ್ರಕಟವಾಗಿದೆ. ‘ರಶ್ಮಿಕಾ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲು ಕನ್ನಡ ಚಿತ್ರರಂಗ ಮುಂದಾಗಿದೆ’ ಎಂದು ಬಾಲಿವುಡ್ ಹಂಗಾಮ ಟ್ವೀಟ್ ಒಂದನ್ನು ಉಲ್ಲೇಖಿಸಿ ವರದಿ ಮಾಡಿದೆ.

ಇದು ಸತ್ಯಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಇತ್ತ ಕರ್ನಾಟಕದಲ್ಲಿ ನಟಿಯ ವಿರುದ್ಧ ಟೀಕೆ ಹೆಚ್ಚಾಗುತ್ತಿದೆ ಇದರ ಜೊತೆಗೆ ರಷ್ಮಿಕ ಅವರ ವೃತ್ತಿ ಜೀವನಕ್ಕೆ ಎಷ್ಟು ದುಷ್ಪರಿಣಾಮ ಬೀರುವುದು ಎಂದು ನೋಡಬೇಕಾಗಿದೆ.