Home Entertainment ಮದುವೆಗೆ ಮುನ್ನ ಹನಿಮೂನ್ ಗೆ ದುಬೈಗೆ ಹಾರಿದ ನಟಿ ಹರಿಪ್ರಿಯಾ & ವಿಶಿಷ್ಠ ಸಿಂಹ ವಿಡಿಯೋ ವೈರಲ್, ಏರ್ ಪೋರ್ಟ್ ನಲ್ಲಿ ಮುಖಮುಚ್ಚಿ ಕೈ ಕೈ ಹಿಡಿದು ತಿರುಗಾಡುತ್ತಿರುವ ಜೋಡಿ ಹಕ್ಕಿಗಳು.

ಮದುವೆಗೆ ಮುನ್ನ ಹನಿಮೂನ್ ಗೆ ದುಬೈಗೆ ಹಾರಿದ ನಟಿ ಹರಿಪ್ರಿಯಾ & ವಿಶಿಷ್ಠ ಸಿಂಹ ವಿಡಿಯೋ ವೈರಲ್, ಏರ್ ಪೋರ್ಟ್ ನಲ್ಲಿ ಮುಖಮುಚ್ಚಿ ಕೈ ಕೈ ಹಿಡಿದು ತಿರುಗಾಡುತ್ತಿರುವ ಜೋಡಿ ಹಕ್ಕಿಗಳು.

0
ಮದುವೆಗೆ ಮುನ್ನ ಹನಿಮೂನ್ ಗೆ ದುಬೈಗೆ ಹಾರಿದ ನಟಿ ಹರಿಪ್ರಿಯಾ & ವಿಶಿಷ್ಠ ಸಿಂಹ ವಿಡಿಯೋ ವೈರಲ್, ಏರ್ ಪೋರ್ಟ್ ನಲ್ಲಿ ಮುಖಮುಚ್ಚಿ ಕೈ ಕೈ ಹಿಡಿದು ತಿರುಗಾಡುತ್ತಿರುವ ಜೋಡಿ ಹಕ್ಕಿಗಳು.

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸ್ಯಾಂಡಲ್ ವುಡ್ ನ ಮತ್ತೊಂದು ಸ್ಟಾರ್ ಜೋಡಿ, ಒಟ್ಟೊಟ್ಟಿಗೆ ಕಾಣಿಸಿಕೊಂಡು ಊಹೆ ಅಲ್ಲ ನಿಜ ಎನ್ನುತ್ತಿರುವ ನವ ಜೋಡಿ.

ಈ ವರ್ಷ ಸ್ಯಾಂಡಲ್ ವುಡ್ ಸ್ಟಾರ್ಗಳ ಪಾಲಿಗೆ ಸಾಲು ಸಾಲು ಸಿಹಿ ಸುದ್ದಿ ಕೊಟ್ಟ ವರ್ಷ .ಒಂದು ಕಡೆ ನಮ್ಮ ಕನ್ನಡದ ಕೆಜಿಎಫ್ 2, ಚಾರ್ಲಿ777, ವಿಕ್ರಾಂತ್ ರೋಣ, ಜೇಮ್ಸ್ ಕಾಂತರಾದಂತಹ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಇಡೀ ದೇಶದಲ್ಲೇ ಭರ್ಜರಿಯಾಗಿ ಪ್ರದರ್ಶನ ಕಂಡು ಎಲ್ಲರೂ ಸ್ಯಾಂಡಲ್ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ.

ಜೊತೆಗೆ ನಮ್ಮ ಸ್ಟಾರ್ ಗಳು ಕೂಡ ವೈಯಕ್ತಿಕ ಜೀವನದಲ್ಲೂ ಸಹಾ ಸಿಹಿ ಸುದ್ದಿ ಪಡೆಯುತ್ತಿದ್ದು ಮದುವೆ, ನಿಶ್ಚಿತಾರ್ಥ, ಮಗುವಿನ ಆಗಮನದ, ಹೊಸ ಮನೆ ಗೃಹಪ್ರವೇಶದ ಸಂತಸದಲ್ಲಿದ್ದಾರೆ. ವರ್ಷದ ಆರಂಭದಲ್ಲಿಯೇ ಅಮೂಲ್ಯ ಅವರು ಅವಳಿ ಮಕ್ಕಳಿಗೆ ಜನ್ಮ ಕೊಟ್ಟು ಇಡೀ ಕರ್ನಾಟಕಕ್ಕೆ ಖುಷಿಪಡುವ ಸುದ್ದಿ ನೀಡಿದ್ದರು.

ಬಹಳ ದಿನಗಳಿಂದ ಮಗುವಿನ ನಿರೀಕ್ಷೆಯಲ್ಲಿದ್ದಂತೆ ಧ್ರುವ ಅವರಿಗೂ ಕೂಡ ದೇವರ ಕರುಣೆಯಿಂದ ಅಪ್ಪನಾಗುವ ಭಾಗ್ಯ ಸಿಕ್ಕಿದೆ. ರವಿಚಂದ್ರನ್ ಅವರ ಪುತ್ರ ಮನೋರಂಜನ್ ಕೂಡ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಾಕ್ಟರ್ ವಿಷ್ಣುವರ್ಧನ್ ಅವರ ಕುಟುಂಬವು ಹೊಸಮನೆ ಗೃಹಪ್ರವೇಶ ಮಾಡಿ ವಿಷ್ಣು ದಾದಾ ಅವರ ಕನಸನ್ನು ನನಸಾಗಿಸಿದೆ.

ಮತ್ತು ನೆನ್ನೆ ಅಷ್ಟೇ ಅಧಿತಿ ಪ್ರಭುದೇವ ಅವರು ಕೂಡ ನೆಚ್ಚಿನ ಇನಿಯನ ಕೈಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಭಿಷೇಕ್ ಅಂಬರೀಶ್ ಅವರು ಕೂಡ ಮುಂದಿನ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಗುಲ್ಲೇರಿದೆ. ಇದೇ ಸಾಲಿನಲ್ಲಿ ಮತ್ತಿಬ್ಬರು ಸ್ಟಾರ್ಗಳ ಹೆಸರುಗಳು ಕೇಳಿ ಬರುತ್ತಿದ್ದು ಶೀಘ್ರದಲ್ಲೇ ಇವರಿಬ್ಬರು ಜೋಡಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ತಮ್ಮ ವಿಶಿಷ್ಟ ಅಭಿನಯ ಹಾಗೂ ವಿಶೇಷ ಕಂಠದಿಂದ ಫೇಮಸ್ ಆಗಿರುವ ವಸಿಷ್ಠ ಸಿಂಹ ಅವರು ಕನ್ನಡದ ಹೆಸರಾಂತ ನಾಯಕಿ ಹರಿಪ್ರಿಯಾ ಅವರ ಕೈ ಹಿಡಿಯುತ್ತಿದ್ದಾರೆ ಎನ್ನುವ ಸುದ್ದಿ ಬಾರಿ ಚರ್ಚೆ ಆಗುತ್ತಿದೆ. ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಇದೇ ವಿಷಯದ ಬಗ್ಗೆ ಬಹಳ ಚರ್ಚೆ ಆಗುತ್ತಿದ್ದು ಸದ್ಯದಲ್ಲೇ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಹಾಗೂ ಶೀಘ್ರದಲ್ಲಿಯೇ ಹಸೆಮಣೆ ಕೂಡ ಏರಲಿದ್ದಾರೆ ಎಂದು ಈ ಜೋಡಿಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ.

ಸಾಲದ್ದಕ್ಕೆ ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಳ್ಳುವ ಶಾಸ್ತ್ರ ಕೂಡ ಮಾಡಿಕೊಂಡಿದ್ದರು. ಕೆಲವು ಮೂಲಗಳ ಮಾಹಿತಿ ಪ್ರಕಾರ ಆ ಶಾಸ್ತ್ರವನ್ನು ಮಾಡಿಸಿದ್ದೆ ವಸಿಷ್ಟ ಸಿಂಹ ಅವರಂತೆ. ಅವರೇ ಕುದ್ದು ನಿಂತು ಹರಿಪ್ರಿಯಾ ಅವರಿಗೆ ಮೂಗು ಚರ್ಚಿಸಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇಷ್ಟೆಲ್ಲಾ ಸುದ್ದಿಯಾಗುತ್ತಿದ್ದರು ಹರಿಪ್ರಿಯ ಕಡೆಯಿಂದಾಗಲಿ ಅಥವಾ ವಸಿಷ್ಟ ಸಿಂಹ ಅವರ ಕಡೆಯಿಂದಾಗಲಿ ಯಾವುದೇ ಸ್ಪಷ್ಟನೆ ಅಥವಾ ವಿವರಣೆ ಕೊಡುವ ಕೆಲಸ ನಡೆದಿಲ್ಲ.

ಹೀಗಾಗಿ ಇವರಿಬ್ಬರೂ ಸೀಕ್ರೆಟ್ ಆಗಿ ಎಂಗೇಜ್ಮೆಂಟ್ ಆಗುತ್ತಿದ್ದಾರಾ ಅಥವಾ ಸರ್ಪ್ರೈಸ್ ಕೊಟ್ಟು ಅನೌನ್ಸ್ ಮಾಡಲಿದ್ದಾರಾ ಎಂದು ಅಭಿಮಾನಿಗಳ ಯೋಚಿಸುತ್ತಿದ್ದಾರೆ. ಈಗ ದುಬೈ ಪ್ರವಾಸಕ್ಕೆ ಕೂಡ ಒಟ್ಟಿಗೆ ಹೋಗಿರುವ ಮತ್ತು ಅಲ್ಲಿನ ಪ್ರವಾಸದ ಬಗ್ಗೆ ಹಂಚಿಕೊಳ್ಳುತ್ತಿರುವ ಫೋಟೋಗಳನ್ನು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಇವರಿಬ್ಬರ ಫೋಟೋಗಳನ್ನು ನೋಡಿದರೆ.

ನಿಶ್ಚಿತಾರ್ಥ ಸುದ್ದಿ ನಿಜ ಅನಿಸುತ್ತದೆ ಮತ್ತು ಕೆಲವರ ಪ್ರಕಾರ ಇದು ಯಾವುದೋ ಸಿನಿಮಾಗಾಗಿ ಇರಬಹುದು, ಸಿನಿಮಾ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಾ ಇರಬಹುದು ಎನ್ನುವ ಲೆಕ್ಕಾಚಾರ ಕೂಡ ಇದೆ. ಈ ಸುದ್ದಿ ಸಿನಿಮಾ ಕುರಿತೆ ಆಗಿದ್ದರೂ ಅಥವಾ ನಿಜ ಜೀವನದಲ್ಲಿ ಇವರಿಬ್ಬರೂ ಒಂದಾಗುತ್ತಿದ್ದರು ಶುಭವಾಗಲಿ ಎಂದು ಹರಸುವುದು ಅಷ್ಟೇ ಅಭಿಮಾನಿಗಳಾಗಿ ನಮ್ಮ ಕೆಲಸವಾಗಿದೆ.

LEAVE A REPLY

Please enter your comment!
Please enter your name here