ವಸಿಷ್ಠ ಸಿಂಹ ಮೇಲೆ ಲವ್ ಆಗಿದ್ದು ಹೇಗೆ ಎಂಬುದನ್ನು ನಿಸ್ಸಕೋಂಚವಾಗಿ ಹೇಳಿಕೊಂಡ ನಟಿ ಹರಿಪ್ರಿಯಾ ಇವರ ಪ್ರೀತಿಗೆ ಸೇತುವೆಯೇ ಕ್ರಿಸ್ಟಲ್ ಅಂತೆ, ಈ ಕ್ರಿಸ್ಟಲ್ ಅಂದ್ರೆ ಯಾರು ಗೊತ್ತ.?

ಹರಿಪ್ರಿಯಾ ವಸಿಷ್ಠ ಸಿಂಹ ಕ್ಯೂಟ್ ಲವ್ ಸ್ಟೋರಿ

ಕಳೆದ ಕೆಲವು ದಿನಗಳಿಂದ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ನಟ ವಶಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯಾ ಜೋಡಿ ಕುರಿತಾಗಿ ಹಲವು ಸುದ್ದಿಗಳು ಪ್ರಸಾರವಾಗಿದ್ದವು. ಇವರಿಬ್ಬರಿಗೂ ಎಂಗೇಜ್ಮೆಂಟ್ ಕೂಡ ಆಗಿ ಈಗಾಗಲೇ ಆ ಊಹಾಪೋಹಗಳಿಗೆಲ್ಲ ತೆರೆ ಬಿದ್ದಿದೆ. ಮುಂದಿನ ಜನವರಿಯಲ್ಲಿ ಜೋಡಿಗಳು ಹಸೆಮಣೆ ಕೂಡ ಏರಲಿದ್ದಾರೆ ಎನ್ನುವುದು ಫಿಕ್ಸ್ ಆಗಿದೆ.

ಇಂತಹ ಸಂದರ್ಭದಲ್ಲಿ ಹರಿಪ್ರಿಯಾ ಅವರು ವಸಿಷ್ಟ ಸಿಂಹ ಅವರಿಗೆ ತಾವೆಷ್ಟು ಆಪ್ತರಾಗಿದ್ದರು ಹೇಗೆ ಅವರ ಸ್ನೇಹ ಶುರುವಾಗಿ ಅದು ಪ್ರೀತಿ ಆಯಿತು ಎನ್ನುವ ಎಲ್ಲಾ ವಿಚಾರವನ್ನು ಅವರು ಕೊಟ್ಟಿದ್ದ ಸುಂದರವಾದ ಗಿಫ್ಟ್ ಜೊತೆ ವಿವರಿಸಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅವರೇ ಅವರ ಧ್ವನಿಯಲ್ಲಿ ಮಾಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಸಿಷ್ಟ ಸಿಂಹ ಅವರು ಹರಿಪ್ರಿಯವರಿಗೆ ಹತ್ತಿರವಾದ ಸಮಯದಲ್ಲಿ ಒಂದು ನಾಯಿಮರಿ ಅನ್ನು ಗಿಫ್ಟ್ ನೀಡಿದ್ದರಂತೆ. ಈಗಾಗಲೇ ಹರಿಪ್ರಿಯಾ ಅವರ ಮನೆಯಲ್ಲಿ ಎರಡು ನಾಯಿ ಮರಿಗಳು ಇದ್ದವು ಒಂದು ಹ್ಯಾಪಿ ಮತ್ತು ಮತ್ತೊಂದು ಲಕ್ಕಿ ಎನ್ನುವುದು. ಆದರೆ ಲಕ್ಕಿ ಅನ್ನುವುದು ಬಹಳ ಬೇಗ ಹರಿಪ್ರಿಯ ಹಾಗೂ ಅವರ ಕುಟುಂಬದಿಂದ ದೂರ ಆಯಿತು.

ಎಲ್ಲರೂ ಲಕ್ಕಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದರು ಹ್ಯಾಪಿ ಕೂಡ ಲಕ್ಕಿ ಇಲ್ಲದೆ ಹ್ಯಾಪೆ ಮೋರಿ ಹಾಕಿಕೊಂಡು ಇರುತ್ತಿತ್ತು ಅಂತಹ ಸಮಯದಲ್ಲಿ ಆ ಎಲ್ಲ ದುಃಖವನ್ನು ಮರೆಯ ಮರೆಸುವ ಉದ್ದೇಶದಿಂದ ನಾಯಿಮರಿಯನ್ನು ಸಿಂಹ ಗಿಫ್ಟ್ ಮಾಡಿದ್ದರು. ಅದಕ್ಕೆ ಹರಿಪ್ರಿಯ ಕ್ರಿಸ್ಟಲ್ ಎಂದು ಹೆಸರಿಟ್ಟು ಹ್ಯಾಪಿ ಜೊತೆ ತಂದು ಬಿಟ್ಟಿದ್ದರು.

ಮೊದಮೊದಲು ಹ್ಯಾಪಿ ಆಟ ಸಾಮಾನುಗಳಲ್ಲಿ ಆಟ ಆಡುತ್ತಿದ್ದ ಕ್ರಿಸ್ಟಲ್ ನೋಡಿ ಹ್ಯಾಪಿಗೆ ಬಹಳ ಕೋಪ ಬರುತ್ತಿತ್ತು. ಅಲ್ಲದೆ ಕ್ರಿಸ್ಟಲ್ ಬಹಳ ತುಂಟನಾಗಿತ್ತು, ಹ್ಯಾಪಿಯನ್ನು ಯಾವಾಗಲೂ ಗೋಳು ಹೊಯ್ದು ಕೊಳ್ಳುತ್ತಿತ್ತು. ಸದಾ ಇವರಿಬ್ಬರ ಆಟ ಕಿತ್ತಾಟ ಚೆಲ್ಲಾಟಗಳು ಮನೆಯವರಿಗೆ ಸಾಕೆನಿಸಿತ್ತು. ಕೊನೆಗೆ ನಿಧಾನವಾಗಿ ಹ್ಯಾಪಿ ಮತ್ತು ಕ್ರಿಸ್ಟಲ್ ಇಬ್ಬರು ಒಳ್ಳೆಯ ಸ್ನೇಹಿತರಾದರು.

ಹೀಗೆ ಹಲವು ದಿನಗಳು ಕಳೆದ ಮೇಲೆ ಲಕ್ಕಿ ಸ್ಥಾನವನ್ನು ಕ್ರಿಸ್ಟಲ್ ತುಂಬಿದ್ದು ಈಗ ಹ್ಯಾಪಿ ಮತ್ತು ಕ್ರಿಸ್ಟಲ್ ಒಟ್ಟಿಗೆ ಆಟ ಆಡುತ್ತಾರೆ, ಒಟ್ಟಿಗೆ ಊಟ ಮಾಡುತ್ತಾರೆ ಮತ್ತು ಒಟ್ಟಿಗೆ ಮಲಗುತ್ತಾರೆ. ಈಗ ಇವರಿಬ್ಬರ ನಡುವೆ ಒಂದು ಅನ್ಯೋನ್ಯ ಬಾಂಧವ್ಯ ಬೆಳೆದಿದೆ ಎನ್ನುವುದನ್ನು ತಮ್ಮ ಧ್ವನಿಯಲ್ಲಿ ಹೇಳುತ್ತಾ.

ಹ್ಯಾಪಿ ಮತ್ತು ಕ್ರಿಸ್ಟಲ್ ಇಬ್ಬರ ಆಟಗಳು, ಜಗಳಗಳು ಮತ್ತು ಈಗ ಒಟ್ಟಿಗೆ ಇರುವ ಕೆಲವು ಕ್ಷಣಗಳ ವಿಡಿಯೋ ತುಣುಕುಗಳನ್ನು ಒಟ್ಟಿಗೆ ಸೇರಿಸಿ ಅದನ್ನು ಹಂಚಿಕೊಂಡಿದ್ದಾರೆ ಹರಿಪ್ರಿಯ. ವಸಿಷ್ಠ ಸಿಂಹ ಕ್ರಿಸ್ಟಲನ್ನು ಗಿಫ್ಟ್ ಕೊಡುವುದರ ಜೊತೆಗೆ ಅವರೊಂದು ಸೀಕ್ರೆಟ್ ಮೆಸೇಜ್ ಕೂಡ ಕಳುಹಿಸಿದರು ಎಂದು ಆ ಸೀಕ್ರೆಟ್ ಏನು ಎನ್ನುವುದನ್ನು ಕೂಡ ರಿವೀಲ್ ಮಾಡಿದ್ದಾರೆ.

ಕ್ರಿಸ್ಟಲ್ ಹೊಟ್ಟೆ ಭಾಗದಲ್ಲಿ ಹಾರ್ಟ್ ಸಿಂಬಲ್ ಇದೆ ಅದನ್ನು ತಂದಾಗ ಯಾರು ಗಮನಿಸಿದೆ ಹೋದರು ಕ್ರಿಸ್ಟಲ್ ಬೆಳೆಯುತ್ತಾ ಹೋದಂತೆ ಆ ಹಾರ್ಟ್ ಬರ್ತ್ ಮಾರ್ಕ್ ಕೂಡ ದೊಡ್ಡದಾಗಿ ಬೆಳೆದಿದೆ. ಕ್ರಿಸ್ಟಲ್ ಹೊಟ್ಟೆ ತೋರಿಸುತ್ತಾ ಹೇಗೆ ಕ್ರಿಸ್ಟಲ್ ಹೊಟ್ಟೆ ಮೇಲಿನ ಸಿಂಬಲ್ ಬೆಳೆಯುತ್ತಾ ಇದೆಯೋ ಹಾಗೆ ನನ್ನ ಮತ್ತು ವಸಿಷ್ಠ ಸಿಂಹ ನಡುವಿನ ಸ್ನೇಹ ಪ್ರೀತಿಯಾಗಿ ಪ್ರೀತಿ ಈಗ ಬಾಳ ಸಂಗಾತಿ ಆಗುವ ತನಕ ಆತ್ಮೀಯತೆ ಬೆಳೆದಿದೆ ಎಂದು ಹೇಳಿಕೊಂಡಿದ್ದಾರೆ ಹರಿಪ್ರಿಯಾ ಅವರು.

Leave a Comment

WhatsApp Group Join Now
Telegram Group Join Now