ನಟಿ ವಿನಯ ಪ್ರಸಾದ್ ಅವರು ರಿಲಾಕ್ಸ್ ಆಗಲು ತೆಗೆದುಕೊಳ್ಳುವ ನಶೆ ಯಾವುದು ಗೊತ್ತಾ.? ಅವರೇ ಹೇಳುತ್ತಿದ್ದಾರೆ ಕೇಳಿ.
ನಟಿ ವಿನಯ ಪ್ರಸಾದ್ ಅವರು ಕಳೆದ ಹಲವು ದಶಕಗಳಿಂದ ಕನ್ನಡ ಚಲನ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ವಿಷ್ಣುವರ್ಧನ್, ಅಂಬರೀಶ್, ದೇವರಾಜ್, ಅನಂತ್ ನಾಗ್, ಪ್ರಭಾಕರ್ ಮುಂತಾದ ಸ್ಟಾರ್ ನಟರೊಂದಿಗೆ ನಾಯಕಿ ಆಗಿ ಅಭಿನಯಿಸಿದವರು. ನಂತರ ಪೋಷಕ ಪಾತ್ರಗಳಲ್ಲಿ ಇತ್ತೀಚಿಗೆ ಕಿರುತೆರೆ ಧಾರಾವಾಹಿಗಳಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಇನ್ನೂ ಸಹ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ.
ಬಣ್ಣದ ಲೋಕದ ಕುರಿತು ಕಲೆಯಲ್ಲಿ ಅವರಿಗಿರುವ ಆಸಕ್ತಿ ಹಾಗೂ ಉತ್ಸಾಹದ ಕುರಿತು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಆ ಸಂದರ್ಶನದಲ್ಲಿ ಅವರು ತಮ್ಮ ಜೀವನದ ಹಲವು ವಿಷಯಗಳನ್ನು ಹಂಚಿಕೊಂಡಿದ್ದು ಕಲಾವಿದೆಯಾಗಿ ಅವರನ್ನು ಜನರು ಯಾವ ಯಾವ ಪ್ರಶ್ನೆ ಕೇಳುತ್ತಾರೆ ಎನ್ನುವುದನ್ನು ಸಹ ಹೇಳಿಕೊಂಡಿದ್ದಾರೆ. ಆ ಪ್ರಶ್ನೆಗಳಿಗೆ ಅವರು ಹೇಳಿರುವ ಉತ್ತರಗಳು ಮತ್ತು ಯುವಜನತೆಯನ್ನು ಎಚ್ಚರಿಸುವ ಕೆಲವು ಉತ್ತಮ ಸಂದೇಶಗಳನ್ನು ನೀಡಿದ್ದಾರೆ.
ವಿನಯ ಪ್ರಸಾದ್ ಅವರನ್ನು ನೋಡಿದವರು ನೀವು ಯಾವಾಗಲೂ ಅಭಿನಯವನ್ನು ಮಾಡುತ್ತಿರುತ್ತೀರಾ ಅದು ಒಂದು ಬಾರಿ ಅಲ್ಲ ದಿನಪೂರ್ತಿ ವರ್ಷಪೂರ್ತಿ ಈ ರೀತಿ ಆಕ್ಟಿಂಗ್ ಅಲ್ಲೇ ಇರುತ್ತೀರಾ? ನಿಮಗೆ ಈ ಪ್ರೊಫೆಶನ್ ಬೋರ್ ಆಗುವುದಿಲ್ಲ ಎಂದು ಕೇಳುತ್ತಾರಂತೆ. ಅದಕ್ಕೆ ವಿನಯ ಪ್ರಸಾದ್ ಅವರು ಈ ರೀತಿ ಉತ್ತರ ನೀಡುತ್ತಾರಂತೆ. ನನ್ನ ಅಭಿನಯ ನೋಡುವಾಗ ನೀವು ಒಂದೇ ದೃಷ್ಟಿಕೋನದಿಂದ ನೋಡುತ್ತೀರಾ.
ಆದರೆ ನಾವು ಆಕ್ಟಿಂಗ್ ಮಾಡುವಾಗ ಅದನ್ನು ಸಹ ನಟರ ದೃಷ್ಟಿಕೋನದಿಂದ, ಅವರ ಮ್ಯಾನರಿಸಂ, ಎಡಿಟಿಂಗ್ ಮಾಡುವವರು ದೃಷ್ಟಿಕೋನ, ಕ್ಯಾಮೆರಾಮೆನ್, ಡೈರೆಕ್ಟರ್ ನಾವು ಅಭಿನಯಿಸುತ್ತಿರುವ ಪಾತ್ರ ಹಾಗೂ ಹಿನ್ನೆಲೆ ಗಾಯನ ಇದಕ್ಕೆಲ್ಲ ಸಂಬಂಧಪಟ್ಟ ಹಾಗೆ ಇವೆಲ್ಲವನ್ನು ತಲೆಯಲ್ಲಿಟ್ಟುಕೊಂಡು ಅಭಿನಯಿಸಬೇಕು ಹೀಗಾಗಿ ಇದು ಹಲವು ದೃಷ್ಟಿಕೋನಗಳಿಂದ ಕೂಡಿರುತ್ತದೆ. ಅಲ್ಲದೇ ಇದು ಪ್ರತಿ ಸನ್ನಿವೇಶದಿಂದ ಸನ್ನಿವೇಶಕ್ಕೆ ಚಿತ್ರದಿಂದ ಚಿತ್ರಕ್ಕೆ ವಿಭಿನ್ನವಾಗಿರುವುದರಿಂದ ಎಂದು ಸಹ ಈ ಪ್ರೊಫೆಶನ್ ಬೋರ್ ಎಂದು ಅನಿಸೇ ಇಲ್ಲ ಎಂದು ಹೇಳುತ್ತಾರಂತೆ.
ಅದಲ್ಲದೆ ದಿನಪೂರ್ತಿ ಶೂಟಿಂಗ್ ಮುಗಿಸಿ ಬರುವ ವಿನಯ ಪ್ರಸಾದ್ ಅವರನ್ನು ನಿಮಗೆ ರಿಲಾಕ್ಸೇಶನ್ ಬೇಕು ಅಂದಾಗ ನಶೆಗಾಗಿ ಏನು ತೆಗೆದುಕೊಳ್ಳುತ್ತೀರ ಎಂದು ಕೇಳುತ್ತಾರಂತೆ. ಇದಕ್ಕೂ ಸಹ ವಿನಯಾ ಪ್ರಸಾದ್ ಅವರು ಕೊಟ್ಟಿರುವ ಉತ್ತರ ಅದ್ಭುತವಾಗಿದೆ. ಅವರು ಈ ರೀತಿ ಹೇಳುತ್ತಾರೆ, ಕಲೆ ಎನ್ನುವುದೇ ಒಂದು ಮಹಾನಶೆ. ಅಭಿನಯ, ಸಂಗೀತ, ಸಾಹಿತ್ಯ ಇನ್ನು ಮುಂತಾದ ಅನೇಕ ಕಲೆಗಳು ಇವೆ.
ಇವುಗಳನ್ನು ಮನ ಪೂರ್ತಿ ತುಂಬಿಕೊಂಡಾಗ ಅದೇ ದೊಡ್ಡ ನಶೆ ಆಗುತ್ತದೆ ಈಗ ನನಗೆ ಯಾವುದಾದರೂ ಒಂದು ಸಿನಿಮಾದಲ್ಲಿ ಒಂದು ಪಾತ್ರಕ್ಕೆ ಅವಕಾಶ ಇದೆ ಎಂದು ಹೇಳಿದಾಗ ನಾನು ಆ ಪಾತ್ರದ ಒಳ ಹೃದಯ ಹಾಗೂ ಹೊರ ರೂಪ ಹೇಗಿರುತ್ತದೆ ಎಂದು ಯೋಚಿಸುತ್ತೇನೆ. ಅದಷ್ಟು ಯೋಚನೆ ಮೊದಲ ದಿನದಿಂದ ಅದು ಮುಗಿಯುವವರೆಗೂ ನನ್ನ ಮನಸ್ಸಿನಲ್ಲಿ ಇರುತ್ತದೆ.
ನಾನು ಆಕ್ಟಿಂಗ್ ಶುರು ಮಾಡಿದ ಮೊದಲ ದಿನದಿಂದ ಇಲ್ಲಿಯ ವರೆಗೂ ಕೂಡ ದಿನದಿಂದ ದಿನಕ್ಕೆ ಅದನ್ನು ಹೇಗೆ ಬೆಸ್ಟ್ ಮಾಡಬಹುದು ಎಂದು ಯೋಚಿಸುತ್ತೇನೆ. ಇಷ್ಟೆಲ್ಲಾ ನನ್ನಲ್ಲಿ ತುಂಬಿರುವಾಗ ಬೇರೆ ಯಾವುದೇ ನಶೆಗೆ ಜಾಗವಿಲ್ಲ. ಅದಲ್ಲದೆ ದಿನದ ಎಷ್ಟು ಹೊತ್ತು ಆಕ್ಟಿಂಗ್ ಮಾಡಿದರು ಸಂಜೆ ಮನೆಗೆ ಹೋದ ಮೇಲೆ ನನ್ನ ಮನೆ ಕೆಲಸವನ್ನು ನಾನೇ ಮಾಡುವಷ್ಟು ಉತ್ಸಾಹ ಸಹ ಇರುತ್ತದೆ ಎಂದು ಹೇಳುತ್ತಾರಂತೆ. ಅವರ ಮಾತಿನಲ್ಲಿಯೇ ಅವರ ಜೀವನದ ಇನ್ನಷ್ಟು ವಿಷಯಗಳ ಕುರಿತು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.