Thursday, April 24, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentವಿಷ್ಣು ಅಭಿನಯದ ಬಂಧನ ಸಿನಿಮಾಗೆ ಮೊದಲು ಆಯ್ಕೆ ಆಗಿದ್ದ ನಟ ಯಾರು ಗೊತ್ತಾ.? ಆ ನಟ...

ವಿಷ್ಣು ಅಭಿನಯದ ಬಂಧನ ಸಿನಿಮಾಗೆ ಮೊದಲು ಆಯ್ಕೆ ಆಗಿದ್ದ ನಟ ಯಾರು ಗೊತ್ತಾ.? ಆ ನಟ ಬಂಧನ ಸಿನಿಮಾ ರಿಜೆಕ್ಟ್ ಮಾಡಿದ್ದೇಕೆ ಗೊತ್ತ ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

ಬಂಧನ ಸಿನಿಮಾಗೆ ಮೊದಲು ಆಯ್ಕೆ ಆಗಿದ್ದ ನಟ

ಡಾಕ್ಟರ್ ವಿಷ್ಣುವರ್ಧನ್(Vishnuvardhan) ಹಾಗೂ ಸುಹಾಸಿನಿ(Suhasini) ಅಭಿನಯದ ಬಂಧನ(Bandana) ಸಿನಿಮಾ ಅಂದಿನ ಕಾಲದಲ್ಲಿ ಬಹುದೊಡ್ಡ ಮಟ್ಟಿಗೆ ಹೆಸರು ಮಾಡಿದ ಸಿನಿಮಾ. ಅದರಲ್ಲಿಯೂ ಕೂಡ ಈ ಸಿನಿಮಾದಲ್ಲಿ ವಿಷ್ಣು ದಾದಾ ಅಭಿನಯಿಸಿದಂತಹ ಪ್ರತಿಯೊಂದು ಸೀನ್ ಕೂಡ ಈಗಲೂ ನಮ್ಮ ಕಣ್ಣ ಮುಂದೆ ಬರುತ್ತದೆ ಅಷ್ಟರ ಮಟ್ಟಿಗೆ ಇವರು ಆ ಪಾತ್ರಕ್ಕೆ ಜೀವವನ್ನು ತುಂಬಿದ್ದಾರೆ. ಆದರೆ ಸಾಕಷ್ಟು ಜನರಿಗೆ ಒಂದು ವಿಚಾರ ತಿಳಿದೇ ಇಲ್ಲ ಹೌದು ಬಂಧನ ಸಿನಿಮಾಗೆ ಮೊದಮೊದಲು ವಿಷ್ಣುವರ್ಧನ್ ಆಯ್ಕೆ ಆಗಿರಲಿಲ್ಲ ಬದಲಾಗಿ ಈ ಸಿನಿಮಾವನ್ನು ಬೇರೊಬ್ಬ ನಟನಿಗೆ ನಾಯಕ ನಟನಾಗಿ ಪಾತ್ರ ಮಾಡುವಂತೆ ಹೇಳಿದ್ದರಂತೆ.

ಆದರೆ ಆ ನಟ ನಾನು ಬಂಧನ ಸಿನಿಮಾದಲ್ಲಿ ನಟನೆ ಮಾಡಲು ಸಾಧ್ಯವಿಲ್ಲ ಎಂದು ರಿಜೆಕ್ಟ್ ಮಾಡಿದ್ದರಂತೆ ಈ ವಿಚಾರ ಇದೀಗ ರಿವಿಲ್ ಆಗಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ 1984ರಲ್ಲಿ ತೆರೆಕಂಡ ಬಂಧನ ಸಿನಿಮಾ ಅಂದಿನ ಕಾಲದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದಂತಹ ಸಿನಿಮಾ ಈಗಲೂ ಕೂಡ ಬಂಧನ ಸಿನಿಮಾ ಅಂದರೆ ಸಿನಿ ಪಕ್ಷಕರು ಅಷ್ಟೇ ಉತ್ಪ್ರಕ್ಷೆಯಿಂದ ಈ ಸಿನಿಮಾವನ್ನು ವೀಕ್ಷಣೆ ಮಾಡುತ್ತಾರೆ. ಇನ್ನು ಈ ಸಿನಿಮಾವನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದು ರಾಜೇಂದ್ರ ಸಿಂಗ್ ಬಾಬು ಅವರು. ಇನ್ನು ಬಂಧನ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದ ನಟ ಯಾರು ಎಂಬುದನ್ನು ನೋಡುವುದಾದರೆ ಅದು ನಮ್ಮ ರೆಬಲ್ ಸ್ಟಾರ್ ಅಂಬರೀಶ್(Ambareesh).

ಹೌದು ರಾಜೇಂದ್ರ ಸಿಂಗ್ ಬಾಬು(Rajendra Singh Babu) ಹಾಗೂ ಅಂಬರೀಶ್ ಅವರು ಆತ್ಮೀಯ ಸ್ನೇಹಿತರು ಒಮ್ಮೆ ರಾಜೇಂದ್ರ ಸಿಂಗ್ ಅವರು ಅಂಬರೀಶ್ ಅವರ ಮನೆಗೆ ಭೇಟಿ ನೀಡಿ ನಾನೊಂದು ಸಿನಿಮಾವನ್ನು ಮಾಡಬೇಕೆಂದಿದ್ದೇನೆ ಕಥೆಯೂ ಕೂಡ ಸಿದ್ದವಾಗಿದೆ ಇದನ್ನು ಒಮ್ಮೆ ನೀನು ಕೇಳು ಎಂದು ಬಂಧನ ಸಿನಿಮಾದ ಕಥೆಯನ್ನು ಹೇಳುತ್ತಾರಂತೆ. ಸಿನಿಮಾದ ಕಥೆಯನ್ನು ಕೇಳಿ ಅಂಬರೀಶ್ ಮೆಚ್ಚಿಕೊಳ್ಳುತ್ತಾರಂತೆ ತದನಂತರ ರಾಜೇಂದ್ರ ಸಿಂಗ್ ಅವರು ಈ ಸಿನಿಮಾದ ನಾಯಕ ನಟ ನೀನೆ ಎಂದು ಹೇಳುತ್ತಾರಂತೆ ಆಗ ಅಂಬರೀಶ್ ಅವರು ಇದಕ್ಕೆ ಸುತಾರಂ ಒಪ್ಪುವುದಿಲ್ಲವಂತೆ.

ಏಕೆಂದರೆ ಬಂಧನ ಸಿನಿಮಾದ ಪಾತ್ರ ಮಾಡಬೇಕಾದರೆ ಸಾಫ್ಟ್ ನೆಸ್ ಇರಬೇಕು ಆದರೆ ನಾನು ರೆಬೆಲ್ ಇಂತಹ ಸಾಫ್ಟ್ ನೆಸ್ ಕ್ಯಾರೆಕ್ಟರ್ ಮಾಡುವುದಕ್ಕೆ ಸೂಟೆಬಲ್ ವ್ಯಕ್ತಿ ನಾನಲ್ಲ, ನನ್ನ ಬದಲು ಈ ಸಿನಿಮಾಗೆ ವಿಷ್ಣುವರ್ಧನ್ ಅವರನ್ನು ಆಯ್ಕೆ ಮಾಡಿಕೋ ಈ ಸಿನಿಮಾ ಅದ್ಬುತವಾಗಿ ಮೂಡಿ ಬರುತ್ತದೆ, ವಿಷ್ಣು ಈ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಾನೆ ಎಂದು ಸಲಹೆ ನೀಡಿದರಂತೆ. ಅವರ ಸಲಹೆಯಂತೆ ವಿಷ್ಣುವರ್ಧನ್ ಅವರ ಮನೆಗೆ ಭೇಟಿ ನೀಡಿದಂತಹ ರಾಜೇಂದ್ರ ಸಿಂಗ್ ಅವರು ಬಂಧನ ಸಿನಿಮಾದ ಕಥೆಯನ್ನು ವಿಷ್ಣು ದಾದಾಗೆ ಹೇಳುತ್ತಾರಂತೆ ಕಥೆಯನ್ನು ಕೇಳಿ ಇಷ್ಟ ಪಟ್ಟ ವಿಷ್ಣು ದಾದಾ ಈ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಡುತ್ತಾರಂತೆ.

ಅಂದುಕೊಂಡಂತೆ ಬಂಧನ ಸಿನಿಮಾದ ಶೂಟಿಂಗ್ ಸಂಪೂರ್ಣ ಮುಕ್ತಾಯವಾಗಿ ಪ್ರದರ್ಶನವೂ ಕೂಡ ಕಂಡಿತು ಅಂದಿನ ಕಾಲದಲ್ಲಿ ಸುಮಾರು 100 ದಿನಗಳ ಕಾಲ ಈ ಸಿನಿಮಾ ಪ್ರದರ್ಶನ ಕಂಡಿದು ಎಲ್ಲರಿಂದಲೂ ಕೂಡ ಮೆಚ್ಚುಗೆಯನ್ನು ಪಡೆದಿತ್ತು. ಒಂದು ವೇಳೆ ಈ ಒಂದು ಪಾತ್ರದಲ್ಲಿ ಅಂಬರೀಶ್ ಅವರು ಅಭಿನಯಿಸಿದ್ದರೆ ಸಿನಿಮಾ ಅದೇಗೆ ಮೂಡಿ ಬರುತ್ತಿತ್ತೋ ಏನೋ ತಿಳಿದಿಲ್ಲ. ಆದರೆ ವಿಷ್ಣು ದಾದಾ ಅಭಿನಯಿಸಿದ್ದು ಮಾತ್ರ ಇಂದಿಗೂ ಕನ್ನಡಿಗರ ಕಣ್ಣಲ್ಲಿ ಕಟ್ಟಿದ ಹಾಗಿದೆ ಇಲ್ಲಿ ನಾವು ಅಂಬರೀಶ್ ಅವರ ಗುಣವನ್ನು ಮೆಚ್ಚಲೇಬೇಕು ಸಾಮಾನ್ಯವಾಗಿ ಇಂದಿನ ಕಾಲದ ನಟರು ಯಾವುದೇ ಕಥೆಯನ್ನಾದರೂ ಕೂಡ ಬಹಳ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ.

ಚಾನ್ಸ್ ಸಿಕ್ಕರೆ ಸಾಕು ಎಲ್ಲವನ್ನು ನಾನೇ ಮಾಡುತ್ತೇನೆ ಅಂತ ಹೇಳುತ್ತಾರೆ ಆದರೆ ಅಂಬರೀಶ್ ಅವರು ಮಾತ್ರ ತಮಗೆ ಸೂಟೆಬಲ್ ಆಗುವಂತಹ ಪಾತ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಈ ಕಾರಣಕ್ಕಾಗಿಯೇ ಬಂಧನ ಸಿನಿಮಾದ ಆಫರ್ ಎಂದು ರಿಜೆಕ್ಟ್ ಮಾಡಿ ಆ ಸಿನಿಮಾಗೆ ವಿಷ್ಣುವರ್ಧನ್ ಅವರನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ಕೊಟ್ಟರಂತೆ. ಈಗಿನ ಕಾಲದಲ್ಲಿ ಯಾವ ನಟರು ತಾನೇ ಈ ರೀತಿ ಮಾಡುತ್ತಾರೆ ಹೇಳಿ ಅದೇನೇ ಆಗಲಿ ಎಷ್ಟೇ ವರ್ಷ ಆದರೂ ಕೂಡ ಬಂಧನ ಸಿನಿಮಾ ಯವರ್ ಗ್ರೀನ್ ಆಗಿಯೇ ಉಳಿದುಕೊಳ್ಳುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ ಹಾಗೂ ಬಂಧನ ಸಿನಿಮಾದಲ್ಲಿ ಅಂಬಿ ಅಭಿನಯಿಸಬೇಕಿತ್ತ ಅಥವಾ ವಿಷ್ಣು ಅಭಿನಯಿಸಿದ್ದೆ ಒಳ್ಳೆದ ನಿಮ್ಮ ಅಭಿಪ್ರಾಯವನ್ನು ತಿಳಿಸಿ.