Sunday, May 28, 2023
HomeEntertainmentಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡ ನಟ ಲೋಕೇಶ್ ಹಾಗೂ ನಟಿ ರಚನಾ

ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡ ನಟ ಲೋಕೇಶ್ ಹಾಗೂ ನಟಿ ರಚನಾ

 

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಮತ್ತೊಂದು ತಾರಾ ಜೋಡಿ

ನಮ್ಮ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಈ ವರ್ಷ ಮದುವೆಯಾದಂತಹ ಸಾಕಷ್ಟು ಜೋಡಿಗಳನ್ನು ನೀವು ನೋಡಿದ್ದೀರಾ ಅದರಲ್ಲಿಯೂ ಕೂಡ ಕಳೆದ ಎರಡು ತಿಂಗಳಿನಿಂದ ಸಾಕಷ್ಟು ನಟ ನಟಿಯರು ತಮ್ಮ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ನೀಡಿದ್ದಾರೆ. ಸಾಮಾನ್ಯವಾಗಿ ತಾವು ಯಾವ ವೃತ್ತಿಯನ್ನು ಮಾಡುತ್ತಾರೋ ಅದೇ ವೃತ್ತಿಯಲ್ಲಿ ಇರುವಂತಹ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಇತ್ತೀಚಿನ ದಿನದಲ್ಲಿ ಟ್ರೆಂಡ್ ಆಗಿದೆ. ಅದರಲ್ಲಿಯೂ ಕೂಡ ನಟ ನಟಿಯರು ಭಾಗಶಹ ಅವರದ್ದೇ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಹುಡುಗಿಯನ್ನು ಅಥವಾ ಹುಡುಗನನ್ನು ಮದುವೆಯಾಗುತ್ತಿರುವ ವಿಚಾರ ನಿಮಗೆ ತಿಳಿದೇ ಇದೆ.

ಕಳೆದ ತಿಂಗಳಂತೂ ಸಾಲು ಸಾಲು ಎಂಗೇಜ್ಮೆಂಟ್ ಗಳಾಗಿವೆ ಹೌದು ಸತ್ಯ ಸಿರಿಯಲ್ ನಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವಂತಹ ಸಾಗರ್ ಬಿಳಿ ಗೌಡ ಅವರು ತಮ್ಮ ಬಹುಕಾಲದ ಗೆಳತಿ ಆದಂತಹ ಸಿರಿ ಅವರನ್ನು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇದಾದ ನಂತರ ಪಾರು ಧಾರವಾಹಿಯಲ್ಲಿ ಪ್ರೀತಮ್ ಎಂಬ ಪಾತ್ರದಲ್ಲಿ ನಟಿಸುತ್ತಿರುವಂತಹ ಸಿದ್ದು ಮೂಲಿಮನಿ ಅವರು ಗಟ್ಟಿಮೇಳ ಧಾರವಾಹಿಯಲ್ಲಿ ಅದಿತಿ ಪಾತ್ರದಲ್ಲಿ ನಟಿಸುತ್ತಿರುವಂತಹ ಪ್ರಿಯಾ ಆಚಾರ್ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ನಂತರ ಪಾರು ಧಾರವಾಹಿಯಲ್ಲಿ ನಟನೆ ಮಾಡುತ್ತಿರುವಂತಹ ಆದಿತ್ಯ ಅಲಿಯಾ ಶರತ್ ಅವರು ತಮ್ಮ ಬಹುಕಾಲದ ಗೆಳತಿಯೊಟ್ಟಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ಇದಿಷ್ಟು ಮಾತ್ರವಲ್ಲದೆ ಬೆಳ್ಳಿ ತೆರೆಗೆ ಸಂಬಂಧಿಸಿದ ಹಾಗೆ ನಮ್ಮ ಜೂನಿಯರ್ ರೆಬಲ್ ಸ್ಟಾರ್ ಅವರು ಕೂಡ ತಮ್ಮ ಬಹುಕಾಲದ ಗೆಳತಿ ಅವಿವ ಬಿದ್ದಪ್ಪ ಅವರ ಜೊತೆ ಕಳೆದ ವಾರ ಅಷ್ಟೇ ಅದ್ದೂರಿಯಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ಇವರ ಸಾಲಿಗೆ ಮತ್ತೋರ್ವ ನಟ ನಟಿಯರು ಕೂಡ ಸೇರ್ಪಡೆಯಾಗುತ್ತಿದ್ದಾರೆ ಹೌದು ಕಿರುತೆರೆಯಲ್ಲಿ ಖ್ಯಾತ ನಟ ಆಗಿ ಗುರುತಿಸಿಕೊಂಡಿರುವಂತಹ ಲೋಕೇಶ್ ಬಸವಹಟ್ಟಿ ಹಾಗೂ ರಚನಾ ದಶರಥ(Rachana Dasarath) ಅವರು ಇದೀಗ ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇವರಿಬ್ಬರ ಫೋಟೋಸ್ಗಳು ವೈರಲ್ ಆಗಿದೆ ಇವರ ಅಭಿಮಾನಿಗಳು ಕೂಡ ಈ ನೂತನ ದಂಪತಿಗಳಿಗೆ ಶುಭವನ್ನು ಕೋರಿದ್ದಾರೆ.

ಹಾಸ್ಯ ನಟ ಲೋಕೇಶ್‌ ಬಸವಟ್ಟಿ(Lokesh Basavatti) ಅವರು ಎಂಗೇಜ್‌ ಮೆಂಟ್‌ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟನಾ ಸಂಸ್ಥೆ ಸೇರಿ ಅಭಿನಯಿಸಲು ಪ್ರಾರಂಭಿಸಿದ ಲೋಕೇಶ್‌ ಬಸವಟ್ಟಿ ಅವರು ‘ಪಾಯಿಂಟ್‌ ಪರಿಮಳಾ’, ‘ಪಾರ್ವತಿ ಪರಮೇಶ್ವರ’ ಹಾಗೂ ‘ಸಿಲ್ಲಿ ಲಲ್ಲಿ’ ಧಾರಾವಾಹಿಗಳಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದರು. ಇವರಿಗೆ ಪಾರ್ವತಿ ಪರಮೇಶ್ವರ ಧಾರಾವಾಹಿ ಹೆಸರು ತಂದುಕೊಟ್ಟಿತು. ಇನ್ನು ‘ಚತುರ್ಭುಜ’ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ನಟನೆ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಲೋಕೇಶ್‌ ಅವರು ಬಣ್ಣದ ಲೋಕದಲ್ಲೇ ತಮ್ಮ ಜೋಡಿಯನ್ನು ಆರಿಸಿಕೊಂಡಿದ್ದಾರೆ.

ಲೋಕೇಶ್‌ ಬಸವಟ್ಟಿ ಅವರು ರಚನಾ ದಶರಥ್ ಅವರನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ರಚನಾ ಅವರು ಸ್ಯಾಂಡಲ್‌ ವುಡ್‌ ನಲ್ಲಿ ಸಕ್ರಿಯರಾಗಿದ್ದಾರೆ. ‘ಯೋಗಿ ದುನಿಯಾ’, ‘ಸಮರ್ಥ’, ‘ಮಾತು ಕಥೆ’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೂಲತಃ ರಚನಾ ನೇಪಾಳಿಯವರಾದರೂ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಮಾಡೆಲಿಂಗ್‌ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ರಚನಾ ಹಾಗೂ ಲೋಕೇಶ್‌ ಬಸವಟ್ಟಿ ಎಂಗೇಜ್‌ ಮೆಂಟ್‌ ಮಾಡಿಕೊಂಡಿದ್ದಾರೆ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇನ್ನು ಮದುವೆಯ ದಿನಾಂಕವನ್ನು ಈ ಜೋಡಿ ತಿಳಸಬೇಕಿದೆ. ಒಟ್ಟಾರೆಯಾಗಿ ಹೇಳುವುದಾದರೆ ಈ ವರ್ಷದ ಕೊನೆಯಲ್ಲಿ ಸಾಲು ಸಾಲು ಎಂಗೇಜ್ಮೆಂಟ್ ಮಾಡಿಕೊಂಡಿರುವ ನಟ ನಟಿಯರು ಮುಂದಿನ ವರ್ಷದ ಆರಂಭದಲ್ಲಿ ಮದುವೆಯಾಗುತ್ತಿದ್ದಾರೆ.