
ನಟರ ಸ್ಮಾರಕಕ್ಕೆ ಸರ್ಕಾರದ ಹಣ ಬಳಸಬಾರದು ಎಂದು ವಿವಾದ ಮಾಡುತ್ತಿರುವ ಚೇತನ್ ಅಹಿಂಸಾ ಜನವರಿ 29 ರಂದು ಮೈಸೂರಿನಲ್ಲಿ ಕಳೆದ 13 ವರ್ಷಗಳಿಂದ ಹೋರಾಟದಲ್ಲಿ ಉಳಿದಿದ್ದ ವಿಷ್ಣುವರ್ಧನ್ ಅವರ ಸ್ಮಾರಕ (Dr. Vishnuvardhan memorial ) ನಿರ್ಮಾಣ ಆಗಿತ್ತು. ನಿರ್ಮಾಣದ ಹಿಂದೆ ಆಗಿರುವ ಅನೇಕ ಸಂಘರ್ಷ ಪ್ರತಿಭಟನೆ ಮತ್ತು ಮನವಿಯ ಕಥೆ ಎಲ್ಲರಿಗೂ ಗೊತ್ತೇ ಇದೆ. ಕೊನೆಗೂ ವಿಷ್ಣುವರ್ಧನ್ ಅವರ ಕುಟುಂಬದವರ, ಅಭಿಮಾನಿಗಳ ಹಾಗೂ ಆಸೆಯಂತೆ ಮೈಸೂರಿನಲ್ಲಿ ಈ ಸ್ಮಾರಕ ಆಗಿರುವುದು ಇಡೀ ಕರ್ನಾಟಕಕ್ಕೆ ಸಂತಸ ಬಂದಿದೆ.
ಆದರೆ ಸದಾ ಒಂದಲ್ಲ ಒಂದು ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡುವ ಚೇತನ್ ಅಹಿಂಸಾ (Chethan Ahimsa) ಅವರು ಈ ವಿಷಯಕ್ಕೂ ಕೂಡ ಕಿರಿಕ್ ಮಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸರ್ಕಾರದ ಹಣ ಜನರ ಜನಸಾಮಾನ್ಯರ ಹಣವನ್ನು ಈ ರೀತಿ ಸ್ಟಾರ್ ನಟರುಗಳ ಸ್ಮಾರಕ ನಿರ್ಮಾಣಕ್ಕೆ ಉಪಯೋಗಿಸಿ ವ್ಯರ್ಥ ಮಾಡಬಾರದು ಎಂದು ಮನಸೋ ಇಚ್ಛೆ ಬರೆದುಕೊಂಡಿದ್ದಾರೆ.
ಆದರೆ ವಿಷ್ಣುವರ್ಧನ್ ಅವರ ಜೀವನದುದ್ದಕ್ಕೂ ನೋಡುವುದಾದರೆ ಅವರಿಗೆ ಸಾಕಷ್ಟು ಅನ್ಯಾಯವಾಗಿದೆ ಎನ್ನುವುದು ಇಲ್ಲಿಯ ಪ್ರತಿಯೊಬ್ಬರ ಅಭಿಮಾನಿಗೂ ಗೊತ್ತು. ಅವರಿಗೆ ಸಂದ ಬೇಕಾದ ಅನೇಕ ಅವಾರ್ಡ್ ಗಳನ್ನು ತಪ್ಪಿಸಲಾಗಿದೆ ಹಾಗೂ ಒಂದಲ್ಲ ಒಂದು ವಿಚಾರದಿಂದ ಅವರಿಗೆ ಅವಮಾನ ಹಾಗೂ ನೋವನ್ನುಂಟು ಮಾಡಲಾಗಿದೆ. ಕೊನೆಗೆ ಸ್ಮಾರಕದ ವಿಚಾರವನ್ನು ಕೂಡ 13 ವರ್ಷದವರೆಗೆ ಎಳೆದು ತಂದು ಮೂರ್ನಾಲ್ಕು ಸರ್ಕಾರಗಳು ಬದಲಾದರು ಅದನ್ನು ಸರಿಯಾಗಿ ನಿರ್ವಹಿಸಲಾಗಿರಲಿಲ್ಲ.
ಬೆಂಗಳೂರಿನಲ್ಲಿ ಅವರ ಪುಣ್ಯಭೂಮಿ ಹಾಗೂ ಸ್ಮಾರಕ ಆಗಬೇಕು ಎನ್ನುವ ಹಠ ಇದ್ದರೂ ಕೂಡ ಅದು ಸಾಧ್ಯವೇ ಆಗುವುದಿಲ್ಲ ಎನ್ನುವ ವಿಷಯ ತಿಳಿದ ಮೇಲೆ ಬೇಸರದೊಂದಿಗೆ ಮೈಸೂರಿನಲ್ಲಿ ಈ ಕಾರ್ಯಕ್ಕೆ ಕೈ ಹಾಕಲಾಗಿದೆ. 2010ರಲ್ಲಿ ಇದಕ್ಕಾಗಿಯೇ ವಿಷ್ಣುವರ್ಧನ್ ಸ್ಮಾರಕ ಪ್ರತಿಷ್ಠಾಪನೆ ಟಸ್ಟ್ ಎಂದು ಸರ್ಕಾರ ಒಂದು ಟ್ರಸ್ಟ್ ರಚಿಸಿ ಟ್ರಸ್ಟ್ ಗೆ ಬಂದ ಹಣದಿಂದ ಈ ಸ್ಮಾರಕ ನಿರ್ಮಿಸಿದೆ. ಇದು ಕರುನಾಡಿನ ಎಲ್ಲರಿಗೂ ತಿಳಿದಿರುವ ವಿಚಾರ.
ಆದರೆ ಕನ್ನಡರಿಗೆ ಮನೋರಂಜಿಸುವ ಸಲುವಾಗಿ ಇಷ್ಟು ವರ್ಷ ಕಲಾ ಸೇವೆ ಮಾಡಿ ರಂಜಿಸಿದ ಒಬ್ಬ ಹೆಮ್ಮೆಯ ಕಲಾವಿದನಿಗೆ ಇದು ಸೇರುವುದರಲ್ಲಿ ಯಾವ ಅನ್ಯಾಯವು ಇಲ್ಲ ಅನ್ನುವುದು ಅಷ್ಟೇ ನಿಜ. ಆದರೆ ಚೇತನ್ ಅಹಿಂಸಾ ಅವರು ಈ ವಿಷಯದ ಬಗ್ಗೆ ಬರೆದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಯಾಂಡಲ್ ನಟ ಹಾಗೂ ಸಾಮಾಜಿಕ ಹೋರಾಟಗಾರ ಎಂದು ಗುರುತಿಸಿಕೊಂಡಿರುವ ಚೇತನ್ ಅಹಿಂಸವರು ಯಾವುದೇ ಕಾರಣಕ್ಕೂ ಸರ್ಕಾರಿ ಜಾಗವನ್ನು ಸ್ಟಾರ್ ನಟರ ಸ್ಮಾರಕ ನಿರ್ಮಾಣಕ್ಕೆ ನೀಡಬಾರದು ಎಂದು ಟ್ವೀಟ್ ಮಾಡಿದ್ದಾರೆ.
ಚಲನಚಿತ್ರ ನಟರ ಸ್ಮಾರಕ ನಿರ್ಮಾಣಗಳಿಗೆ ಕರ್ನಾಟಕ ಸರ್ಕಾರವು ಸಾರ್ವಜನಿಕರ ಹಣ ಸಂಪನ್ಮೂಲ ಹಾಗೂ ಜಾಗ ಬಳಸಬಾರದು. ಕನ್ನಡಿಗರಂತೆ ಕೆಲಸ ಮಾಡಿ ಸಂಪಾದಿಸುವ ಫಿಲಂ ಸ್ಟಾರ್ ಗಳು ಈಗಾಗಲೇ ಅನಗತ್ಯ ಪ್ರಚಾರ ಹಾಗೂ ಚಲನಚಿತ್ರದ ಕಾರಣದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಎಂಬಿತ್ಯಾದಿಯಾಗಿ ಬರೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಅಷ್ಟೇ ಕಾಂತರಾ ಸಿನಿಮಾದ ಬಗ್ಗೆ ಕೂಡ ವಿವಾದ ಮಾಡಿಕೊಂಡಿದ್ದ ಇವರು ಈ ಬಾರಿ ವಿಷ್ಣುವರ್ಧನ್ ಅವರ ಸ್ಮಾರಕ ವಿಚಾರಕ್ಕೆ ತಲೆ ಹಾಕಿರುವುದರಿಂದ ಅನೇಕರು ಇವರ ಮೇಲೆ ಸಿಟ್ಟಿಗೆದ್ದಿದ್ದಾರೆ. ಇಲ್ಲಿಯ ನಾಗರಿಕ ಹಕ್ಕು ನಿಮಗಿಲ್ಲ ಅಂದಮೇಲೆ ಇಲ್ಲಿನ ಆಂತರಿಕ ವಿಷಯಕ್ಕೆ ತಲೆ ಹಾಕಬಾರದು ಎಂದು ಕಮೆಂಟ್ ಮಾಡುವ ಮೂಲಕ ತಿರುಗೇಟು ಸಹ ನೀಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ