Thursday, April 24, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentವಿಷ್ಣು ಪ್ರತಿಮೆ ನಿರ್ಮಾಣಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತ.? ಕಲ್ಲಿನಲ್ಲೇ ವಿಷ್ಣು ಪ್ರತಿಮೆಯನ್ನು ಕೆತ್ತಿಸಿರುವುದು ಯಾಕೆ ಗೊತ್ತಾ.?...

ವಿಷ್ಣು ಪ್ರತಿಮೆ ನಿರ್ಮಾಣಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತ.? ಕಲ್ಲಿನಲ್ಲೇ ವಿಷ್ಣು ಪ್ರತಿಮೆಯನ್ನು ಕೆತ್ತಿಸಿರುವುದು ಯಾಕೆ ಗೊತ್ತಾ.? ಇದರ ಹಿಂದೆ ಇದೇ ಒಂದು ರಹಸ್ಯ.

ಸಾಕಷ್ಟು ವಿವಾದ, ಚರ್ಚೆ, ಸಂಘರ್ಷಗಳ ನಡುವೆ 13 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿ, ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ (Memorial) ಮೈಸೂರಿನಲ್ಲಿ ( Mysore) ನಿರ್ಮಾಣ ಆಗಿದೆ. ಕರ್ನಾಟಕ ಕಂಡ ಕನ್ನಡ ತಾಯಿ ಭುವನೇಶ್ವರಿ ಹೆಮ್ಮೆಯ ಪುತ್ರನ ಸ್ಮಾರಕ ನಿರ್ಮಾಣ ಇಷ್ಟೊಂದು ತಡವಾಗಿದ್ದು ಕನ್ನಡಿಗರೆಲ್ಲರ ನೋವಿಗೆ ಕಾರಣವಾಗಿತ್ತು. ಆದರೂ ಸಹ ಅಂತಹ ಒಂದು ಘಳಿಗೆಗೆ ಈಗ ಋಣ ಕೂಡ ಬಂದಿದ್ದು ಜನವರಿ 29ರಂದು ಮೈಸೂರಿನಲ್ಲಿ ಹೆಮ್ಮೆಯ ಕನ್ನಡಿಗನ ಸ್ಮಾರಕ ನಿರ್ಮಾಣ ಆಗಿದೆ.

ಕಾಟಾಚಾರಕ್ಕೆ ಸರ್ಕಾರ ಆತುರವಾಗಿ ನಿರ್ಮಾಣ ಮಾಡಿದೆ ಎಂದು ಜನರ ಆಕ್ರೋಶ ಇದೆ, ಇದರ ನಡುವೆ ಕಲ್ಲಿನಲ್ಲಿ ದಾದನ ವಿಗ್ರಹ ಮಾಡಿರುವುದಕ್ಕೆ ಕಾರಣ ಏನು ಎನ್ನುವುದನ್ನು ಈ ವಿಗ್ರಹದ ಶಿಲ್ಪಿಯಾದ ಅರುಣ್ ಯೋಗಿರಾಜ್ (Arun Yogiraj) ಅವರೇ ಹೇಳಿಕೊಂಡಿದ್ದಾರೆ. ಇಂಡಿಯಾ ಗೇಟ್ ಅಲ್ಲಿ ನಿಂತಿರುವ ಸುಭಾಷ್ ಚಂದ್ರ ಬೋಸ್ ಅವರ ಶಿಲ್ಪವನ್ನು ಕೂಡ ಕೆತ್ತಿ ಪ್ರಧಾನಿಯಿಂದ ಹೊಗಳಿಸಿಕೊಂಡಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಇಂದು ಮೈಸೂರಿನಲ್ಲಿ ನಿಂತಿರುವ ವಿಷ್ಣುವರ್ಧನ್ ಅವರ ಪ್ರತಿಮೆಗೆ ಜೀವ ತುಂಬಿರುವುದು.

ಅವರ ಬಾಯಿಯಲ್ಲಿಯೇ ಅವರ ವಿಗ್ರಹ ಕಲ್ಲಿನಿಂದ ಮಾಡಿರುವುದಕ್ಕೆ ಕಾರಣ ಏನು ಎಂದು ಕೇಳುವುದಾದರೆ ಅವರು ಕೊಡುವ ಸ್ಪಷ್ಟನೆ ಇದು. ಕಲ್ಲಿನಲ್ಲಿ ವಿಗ್ರಹ ಮಾಡಬೇಕು ಎನ್ನುವುದು ಭಾರತಿ ಅಮ್ಮನವರ ಆಸೆ ಆಗಿತ್ತು, ಯಾಕೆಂದರೆ ವಿಷ್ಣುವರ್ಧನ್ ಅವರ ಚಿತಾಬಸ್ಮವನ್ನು ಇಟ್ಟು ಅದರ ಮೇಲೆ ವಿಗ್ರಹ ನಿರ್ಮಿಸಿದರೆ ಶಾಶ್ವತವಾಗಿರುತ್ತದೆ ಎನ್ನುವುದು ಅವರ ಆಸೆ ಆಗಿದ್ದಂತೆ. ಮೊದಲಿಗೆ ವಿಷ್ಣುವರ್ಧನ್ ಅಳಿಯ ಹಾಗೂ ಅವರ ಪತ್ನಿಯಾದ ಭಾರತಿ ವಿಷ್ಣುವರ್ಧನ್ (Bharathi Vishnuvardhan) ಅವರನ್ನು ಅರುಣ್ ಯೋಗಿರಾಜ್ ಅವರ ಸಂಪರ್ಕಿಸಿದ್ದರಂತೆ.

ನಂತರ ಸರ್ಕಾರವು ಇವರಿಗೆ ಕಲ್ಲಿನಲ್ಲಿ ಮಾಡುವುದಕ್ಕೆ ಸೂಚಿಸುತ್ತಂತೆ, ಮೊದಲಿಗೆ ಏಳು ಟನ್ ಕಲ್ಲನ್ನು ಹುಡುಕಿ ಆಯ್ದುಕೊಂಡು ಸ್ವತಃ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಆದ ಅರುಣ್ ಅವರೇ ಅದನ್ನು ಕೆತ್ತಿದ್ದಾರೆ. ಅರುಣ್ ಅವರು ಬಾಲ್ಯದಿಂದಲೂ ಕೂಡ ವಿಷ್ಣುವರ್ಧನ್ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದರಂತೆ. ಜೊತೆಗೆ ಅವರೂ ಸಹ ಮೈಸೂರಿನವರೇ ಆದಕಾರಣ ಇನ್ನು ಒಂದು ರೀತಿಯ ಸೆಂಟಿಮೆಂಟ್ ಹೆಚ್ಚಿತ್ತು. ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರು ಇರುವ ರೀತಿ ವಿಗ್ರಹ ಇರಲಿ ಎನ್ನುವುದು ವಿಷ್ಣು ವರ್ಧನ್ ಅವರ ಕುಟುಂಬದ ಆಸೆಯಾಗಿದ್ದಂತೆ.

ಅದರಂತೆ ವಿಷ್ಣುವರ್ಧನ್ ಅವರನ್ನು ಮನಸ್ಸಿನಲ್ಲಿ ತುಂಬಿಕೊಂಡು ಪ್ರತಿದಿನ ಕೂಡ ಭಾವನಾತ್ಮಕವಾಗಿ ಅದರ ಜೊತೆ ಸ್ಪಂದಿಸಿ ಕಲ್ಲಿನಲ್ಲಿ ವಿಷ್ಣು ವರ್ಧನ್ ಅವರನ್ನು ಹುಡುಕುವ ಕೆಲಸ ಮಾಡಿದ್ದಾರಂತೆ. ಪ್ರತಿದಿನವೂ ಕೂಡ ಏನಾದರೂ ಒಂದು ಬದಲಾಯಿಸಬೇಕು ಎನ್ನುವ ತುಡಿತದೊಂದಿಗೆ ಎಷ್ಟೋ ಬಾರಿ ಕೆಲಸಗಾರರೆಲ್ಲಿ ಮನೆಗೆ ಹೋದ ಮೇಲೆ ಒಬ್ಬರೇ ಕುಳಿತುಕೊಂಡು ಕೂಡ ಕೆತ್ತಿದ್ದಾರಂತೆ. ಮನಸ್ಸಿನ ಪೂರ್ತಿ ದಾದಾ ಅವರ ವಿಗ್ರಹ ಮಾಡುವ ಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ ಎನ್ನುವ ಭಾವನೆ ತುಂಬಿರುತ್ತಿತ್ತಂತೆ.

ಸರ್ಕಾರವು ಮೊದಲಿಗೆ ಒಂಬತ್ತು ಲಕ್ಷಗಳನ್ನು ಕೊಡುವುದಾಗಿ ಹೇಳಿ ನಂತರ ತುಂಬಾ ಅಚ್ಚುಕಟ್ಟಾಗಿ ಮಾಡಿಕೊಟ್ಟ ಕಾರಣ ಇನ್ನು ಎರಡು ಲಕ್ಷ ರೂಗಳನ್ನು ಹೆಚ್ಚಾಗಿ ಕೊಟ್ಟಿದೆಯಂತೆ. ಯಾವುದೇ ಒಂದು ವಿಗ್ರಹ ಮಾಡಬೇಕಾದರೂ ಅದರ ಗಾತ್ರ ಹಾಗೂ ಅದು ಯಾವ ವಯಸಿನದ್ದು ಎನ್ನುವುದು ಲೆಕ್ಕಕ್ಕೆ ಬರುತ್ತದೆ. ವಿಷ್ಣು ಸರ್ ಕೊನೆ ಕೊನೆಯಲ್ಲಿ ಸ್ವಲ್ಪ ಆರೋಗ್ಯ ಸಮಸ್ಯೆಯಿಂದ ಇರುವ ರೀತಿ ಕಾಣಿಸುತ್ತಿದ್ದರು.

ನನಗೆ ಅವರ ಮಧ್ಯೆ ವಯಸ್ಸಲ್ಲಿದ್ದಾಗ ಇದ್ದ ಎನರ್ಜಿಯನ್ನು ತುಂಬುವ ಮನಸಿತ್ತು. ಹಾಗೆ ಎರಡು ಕಾಂಬಿನೇಷನ್ ಸೇರಿಸುವ ಪ್ರಯತ್ನ ಪಟ್ಟಿದ್ದೇನೆ. ಭಾರತಿ ಅಮ್ಮ ಅವರು ಒಮ್ಮೆ ವಿಗ್ರಹ ನೋಡಿದಾಗ ಆನಂದ ಭಾಷ್ಪ ಸುರಿಸಿದ್ದರು ಹಾಗಾಗಿ ನನ್ನ ಕೆಲಸ ತೃಪ್ತಿಯಾಗಿದೆ ಎಂದು ಸಮಾಧಾನ ಪಟ್ಟುಕೊಂಡ ಎಂದಿದ್ದಾರೆ. ನೀವು ಕೂಡ ವಿಷ್ಣು ಪ್ರತಿಮೆಯನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮುಖಾಂತರ ತಿಳಿಸಿ.