ಕನ್ನಡತಿ ಧಾರಾವಾಹಿ ಮುಕ್ತಾಯ, ಪ್ರೇಕ್ಷಕರ ಮನಗಿದ್ದ ಅಂಶಗಳು ಇವು. ಜನಪ್ರಿಯ ಕನ್ನಡತಿ (Kannadathi) ಧಾರಾವಾಹಿಯ ಮುಕ್ತಾಯಗೊಂಡಿದೆ. ಅಂತಿಮ ಎಪಿಸೋಡ್ಗಳು ಪ್ರಸಾರ ಆಗುತ್ತಿದ್ದು, ಈ ವಾರದಲ್ಲೇ ಕೊನೆಗೊಳ್ಳುವ ಸ್ಪಷ್ಟತೆ ಸಿಕ್ಕಿದೆ. ಸುಮಾರು 800 ಎಪಿಸೋಡ್‌ಗಳನ್ನು ಕಂಡಿದ್ದ ಕನ್ನಡದ ಹೆಸರಾಂತ ಧಾರಾವಾಹಿಯು ಒಳ್ಳೆ ಕ್ಲೈಮ್ಯಾಕ್ಸ್ ಒಂದಿಗೆ ಎಂಡ್ ಆಗುತ್ತಿದ್ದೆ. ಇಷ್ಟು ದಿನ ಪ್ರೇಕ್ಷಕ ಪ್ರಭುಗಳು ಏಳುವರೆಗೆ ಟಿವಿ ಮುಂದೆ ಬಂದು ಕೂರುವಂತೆ ಹಿಡಿದಿಟ್ಟುಕೊಂಡಿದ್ದ ಈ ಧಾರಾವಾಹಿಯಲ್ಲಿ ಜನರಿಗೆ ಇಷ್ಟವಾದ ಅಂಶಗಳು ಯಾವುದು ಎಂದರೆ ಕನ್ನಡಕ್ಕೆ ಕೊಟ್ಟಿರುವ ಆದ್ಯತೆ.
ಹೆಸರೇ ಕನ್ನಡತಿ ಎಂದು ಇರುವಂತೆ ಧಾರಾವಾಹಿಯಲ್ಲಿ ನಾಯಕ ನಟಿ ಕನ್ನಡದ ಟೀಚರ್ ಆಗಿದ್ದಾರೆ. ಜೊತೆಗೆ ಕನ್ನಡ ಎಂದರೆ ಈಕೆಗೆ ಅಷ್ಟು ಇಷ್ಟ. ಧಾರಾವಾಹಿ ಶುರುವಾದ ದಿನದಿಂದಲೂ ಈಕೆ ತುಂಬಾ ಸ್ಪಷ್ಟವಾಗಿ ಹೆಮ್ಮೆಯಿಂದ ಕನ್ನಡವನ್ನೇ ಮಾತನಾಡಿಕೊಂಡು ಬಂದಿದ್ದಾರೆ. ಹಾಗಾಗಿ ಈ ಧಾರಾವಾಹಿ ಕನ್ನಡ ಅಭಿಮಾನಿಗಳ ಮನವನ್ನು ಕೂಡ ಸೆಳೆದಿದೆ. ಧಾರವಾಹಿಯ ಕಥೆ ,ಹಸಿರುಪೇಟೆಯ ಹಳ್ಳಿ ಹುಡುಗಿಯಾದ ಭುವನೇಶ್ವರಿ (Bhuvaneshwari) ಅಲಿಯಾಸ್ ಸೌಪರ್ಣಿಕ (Souparnika) ಎನ್ನುವ ಈಕೆ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಬೆಂಗಳೂರಿಗೆ ಬಂದು ಮಾಡರ್ನ್ ಹುಡುಗ ಹರ್ಷನ (Harsha) ಪರಿಚಯವಾಗುವುದು.
ಜೊತೆಗೆ ಭುವಿ ಸ್ನೇಹಿತೆ ವರುಧಿನಿ ಹರ್ಷನನ್ನು ಪ್ರೀತಿಸುವುದು. ಹೀರೋಗಿಂತ ಮುಂಚೆ ಅವರ ತಾಯಿ ಭುವನೇಶ್ವರಿ ಗೆ ಹತ್ತಿರವಾಗಿರುವುದು, ಕೊನೆಗೆ ಎಲ್ಲಾ ಅಡೆತಡೆಗಳ ನಡುವೆ ಭುವನೇಶ್ವರಿ ಬಂದು ಹರ್ಷನ ಮನೆ ಸೇರುವುದ. ಹರ್ಷನ ತಮ್ಮನ ಹೆಂಡತಿ ಸಾನಿಯಾ ಸಿ.ಇ.ಓ ಪಟ್ಟದ ಆಸೆಯಿಂದ ಹರ್ಷ ಹಾಗೂ ಭುವನೇಶ್ವರಿ ಮೇಲೆ ಕತ್ತಿ ಮಸೆಯುವುದು. ಪ್ರಾಣ ಸ್ನೇಹಿತ ಹಾಗೂ ಪ್ರೀತಿಸಿದ ಹುಡುಗನ ಮದುವೆ ಮುರಿಯಲು ವರುಧಿನಿ ಒದ್ದಾಡುವುದು. ಇದೆಲ್ಲವೂ ಬಹಳ ಕುತೂಹಲ ಮೂಡಿಸಿ ಇಷ್ಟು ದಿನ ಪ್ರೇಕ್ಷಕರನ್ನು ಮನೋರಂಜಿಸಿತ್ತು.
ಜೊತೆಗೆ ಈ ಎಲ್ಲಾ ಧಾರಾವಾಹಿಯಲ್ಲಿ ನಟಿಸಿರುವ ಕಲಾವಿದರುಗಳು ಆಯಾ ಪಾತ್ರಗಳಿಗೆ ಜೀವ ತುಂಬಿ ತುಂಬಾ ಸಹಜವಾಗಿ ನಟಿಸಿರುವುದು ಕೂಡ ಕನ್ನಡತಿಯ ಒಂದು ಪ್ಲಸ್ ಪಾಯಿಂಟ್ ಹರ್ಷ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ಕಿರಣ್ ರಾಜ್ (Kiran raj) ಮತ್ತು ಭುವನೇಶ್ವರಿ ರಂಜನಿ ರಾಘವನ್ (Ranjani Raghavan) ಇವರಿಬ್ಬರ ಕೆಮಿಸ್ಟ್ರಿ ಸಹ ಬಹಳ ಚೆನ್ನಾಗಿ ವರ್ಕ್ ಆಗಿದ್ದು. ಹವಿ (Havi) ಜೋಡಿ ಎಂದೇ ಫೇಮಸ್ ಆಗಿದ್ದಾರೆ. ಇವರಿಬ್ಬರ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಇದ್ದು ಇದುವರೆಗೆ ಪುಟ್ಟಗೌರಿ ಆಗಿ ಫೇಮಸ್ ಆಗಿದ್ದ ರಂಜನಿ ರಾಘವನ್ ಅವರನ್ನು ಕನ್ನಡತಿ ಇಮೇಜ್ ಗೆ ಧಾರಾವಾಹಿ ಬದಲಾಯಿಸಿದೆ.
ಧಾರಾವಾಹಿ ಮತ್ತೊಂದು ಪ್ರಮುಖ ಪಾತ್ರ ಅಮ್ಮಮ್ಮ (Ammamma) ಹರ್ಷನ ತಾಯಿ ಆದ ಇವರು ಸಹ ಮಲೆನಾಡಿನ ಬಂದ ಬಂದು ಬೆಂಗಳೂರಿನಲ್ಲಿ ದೊಡ್ಡ ಕಾಫಿ ಶಾಪ್ ಓನರ್ ಆಗಿರುತ್ತಾರೆ. ಜೊತೆಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿರುತ್ತಾರೆ. ಚಿತ್ಕಲ ಬಿರಾದರ್ (Chithkala Biradar) ಎನ್ನುವ ಕಲಾವಿದೆ ಅಭಿನಯಿಸಿದ ರತ್ನಮಾಲ (Rathnamala) ಎನ್ನುವ ಈ ಪಾತ್ರ ಕೂಡ ಎಲ್ಲರ ಮನಸ್ಸಿನ ಮೇಲೆ ಗಂಭೀರವಾದ ಪರಿಣಾಮ ಬೀರಿತು.
ಸಾನಿಯಾ ಹಾಗೂ ವರುಧಿನಿ ಎನ್ನುವ ವಿಲನ್ ಪಾತ್ರಗಳು ಜನರಿಗೆ ಬಹಳ ಇಷ್ಟ ಆಗಿವೆ ಇದುವರೆಗೆ ಖಡಕ್ ಅತ್ತೆಯನ್ನು ಅಥವಾ ಹೀರೋ ತಾಯಿ ಅಥವಾ ಚಿಕ್ಕಮ್ಮನೋ ವಿಲನ್ ಆಗಿ ಇರುತ್ತಿದ್ದ ಧಾರಾವಾಹಿಗಳಿಗೆ ಸ್ವಲ್ಪ ವಿಭಿನ್ನವಾಗಿ ಯಂಗ್ ವಿಲನ್ ಗಳಾಗಿ ಸಾನಿಯಾ (Saniya) ಪಾತ್ರದಲ್ಲಿ ಆರೋಹಿ (Arohi) ಮತ್ತು ವರು (Varudhini) ಪಾತ್ರದಲ್ಲಿ ಸಾರ ಅಣ್ಣಯ್ಯ (Sara Annayya) ಅವರು ಅಭಿನಯಿಸಿರುವುದು ಧಾರಾವಾಹಿಗೆ ಹೊಸ ಅಟ್ರಾಕ್ಷನ್ ಅನ್ನು ನೀಡಿತ್ತು.
ಮತ್ತೊಂದು ಹೆಮ್ಮೆಯ ವಿಚಾರ ಏನು ಎಂದರೆ ಈ ಧಾರಾವಾಹಿಯು ಹಿಂದಿಯಲ್ಲಿ (Hindi) ಮತ್ತು ಮರಾಠಿಯಲ್ಲಿ (Marati) ಕೂಡ ಡಬ್ (dub) ಆಗಿದೆ. ಮರಾಠಿಯಲ್ಲಿ ಭಾಗ್ಯ ದಿಲೆ ತು ಮಲ ಎನ್ನುವ ಹೆಸರಿನಲ್ಲಿ ಮತ್ತು ಹಿಂದಿಯಲ್ಲಿ ಅಬ್ಜನಿ ಬನ್ನಿ ಹಮ್ಸಫರ್ ಎನ್ನುವ ಹೆಸರಿನಲ್ಲಿ ಪ್ರಸಾರಗೊಳ್ಳುತ್ತಿವೆ. ಅಲ್ಲಿಯೂ ಸಹ ಅಲ್ಲಿನ ಪ್ರೇಕ್ಷಕರಿಗೆ ಬಹಳ ಇಷ್ಟವಾದ ದಾರಾವಾಹಿ ಆಗಿದೆ. ಇಷ್ಟು ದಿನ ಮನೋರಂಜಿಸಿದ್ದ ಈ ಧಾರಾವಾಹಿ ಈಗ ಮುಕ್ತಾಯ ಆಗುತ್ತಿರುವುದು ಹಲವರ ಬೇಸರಕ್ಕೂ ಕಾರಣವಾಗಿದೆ. ಕನ್ನಡತಿ ಧಾರಾವಾಹಿ ಮುಕ್ತಾಯವಾಗುತ್ತಿರುವುದು ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ ಈ ಧಾರಾವಾಹಿಯನ್ನು ಇನ್ನೂ ಮುಂದುವರಿಸಬೇಕಿತ್ತ ಅಥವಾ ಕೊನೆಗೊಂಡಿದೆ ಒಳಿತಾಯಿತಾ.?