ಉರ್ಫಿಯನ್ನು ನೀನು ದೈವಾಂಶ ಸಂಭೂತೆ ಎಂದು ಕರೆದು ಅಕ್ಕಮಹಾದೇವಿಗೆ ಹೋಲಿಕೆ ಮಾಡಿದ ನಟಿ ಕಂಗಾನ ರಣವತ್.

ನೀನು ದೈವಾಂಶ ಹೊಂದಿದವಳು ನಿನ್ನ ದೇಹದ ಬಗ್ಗೆ ನಿಂದಿಸಲು ಯಾರಿಗೂ ಅವಕಾಶ ಕೊಡಬೇಡ, ಉರ್ಫಿಗೆ ಪಾಠ ಮಾಡಲು ಅಕ್ಕ ಮಹಾದೇವಿಯ ಹೆಸರನ್ನು ತೆಗೆದುಕೊಂಡ ಕಂಗನಾ ರಣಾವತ್. ಬಾಲಿವುಡ್ ನಟಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಕಂಗನಾ ರಣಾವತ್ (Kangana Ranavath) ಅವರು ದೇಶದ ಆಗು ಹೋಗುಗಳ ಬಗ್ಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುವ ಟ್ರೆಂಡಿಂಗ್ ವಿಚಾರಗಳ ಬಗ್ಗೆ ಹೀಗೆ ಸದಾ ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಈ ಬಾರಿ ಹೊಸ ಬಗೆಯ ಟ್ವೀಟ್ ಒಂದನ್ನು ಮಾಡಿ ಸಂಚಲನ ಸೃಷ್ಟಿಸಿದ್ದಾರೆ ಇವರು ಈಗ ಧ್ವನಿ ಎತ್ತಿ ಮಾತನಾಡಿರುವುದು ಉರ್ಫಿ ಜಾವೇದ್ (Urfi javed) ಬಗ್ಗೆ.

ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಬಟ್ಟೆಗಳ ಫ್ಯಾಷನ್ ಕಾರಣದಿಂದಾಗಿ ಸದಾ ಟ್ರೋಲ್ ಆಗುತ್ತಲ್ಲೇ ಇರುವ, ಈ ರೀತಿ ಬಟ್ಟೆ ಹಾಕುವುದೇ ತನ್ನಿಷ್ಟ ಎನ್ನುವಂತೆ ಯಾರಿಗೂ ಕೇರ್ ಮಾಡದೆ ಇಂಚಿನಷ್ಟು ಬಟ್ಟೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಇದೇ ಕಾರಣಕ್ಕೆ ಹೀಗೆ ಸದಾ ವಿವಾದದಲ್ಲಿ ಇರುವ ಉರ್ಫಿ ಜಾವೇದ್ ಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ನೆಗೆಟಿವ್ ಕಾಮೆಂಟ್ ಗಳ ಸುರಿಮಳೆಯೇ ಬರುತ್ತಿರುತ್ತದ್ದೆ.

ಏಕೆಂದರೆ ಭಾರತೀಯ ಸಂಸ್ಕೃತಿಯನ್ನು ಈಕೆ ಹಾಳು ಮಾಡುತ್ತಿದ್ದಾಳೆ ಈ ರೀತಿ ತುಂಡುಗೆಗಳನ್ನು ತೊಟ್ಟು ರಸ್ತೆಯಲ್ಲಿ ಓಡಾಡುವುದು ಇಲ್ಲಿಯ ಸಂಸ್ಕೃತಿಯಲ್ಲ. ಇದೇನಿದ್ದರೂ ಸಿನಿಮಾಗಳಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಇರಬೇಕು ಹೊರತು ಬೇರೆ ಸಮಯದಲ್ಲಿ ನಾರ್ಮಲ್ ಇರಬೇಕು ಎಂದೇ ಹೆಚ್ಚಿನವರ ವಾದ. ಆದರೆ ಯಾರು ಎಷ್ಟೇ ಹೇಳಿದರು ಕೂಡ ಉರ್ಫಿ ಬದಲಾಗುತ್ತಿಲ್ಲ ಆಕೆ ಬಟ್ಟೆ ವಿಚಾರಕ್ಕಾಗಿ ಎನ್ನುವುದಕ್ಕಿಂತ ಬಟ್ಟೆ ಇಲ್ಲದಂತೆ ಇದ್ದಾರೆ ಎನ್ನುವಷ್ಟು ಚಿಕ್ಕದಾದ ಬಟ್ಟೆ ಹಾಕಿರುತ್ತಾರೆ.

ಬಿಗ್ ಬಾಸ್ ಕಂಟೆಸ್ಟೆಂಟ್ ಕೂಡ ಆಗಿದ್ದ ಉರ್ಫಿ ಜಾವೇದ್ ಫ್ಯಾಶನ್ ಗೆ ಬಾಲಿವುಡ್ ನ ಖ್ಯಾತ ನಟಿ ಕಂಗನ ರಣಾವತ್ ಬಾರಿ ಸಪೋರ್ಟ್ ಮಾಡಿದ್ದಾರೆ. ಮತ್ತೊಂದು ಆಶ್ಚರ್ಯಕರ ವಿಷಯ ಏನೆಂದರೆ ಕನ್ನಡದ ಕವಿಯತ್ರಿ ಹೆಸರು ಬಳಿಸಿಕೊಂಡು ಆಕೆಗೆ ಬುದ್ಧಿ ಹೇಳಿದ್ದಾರೆ. ಸಾಲುಗಟ್ಟಲೇ ಬರೆದು ಟ್ವೀಟ್ ಮಾಡಿರುವ ಇವರು ಕನ್ನಡದಲ್ಲಿ ಅಕ್ಕಮಹಾದೇವಿ (Akka Mahadevi) ಎನ್ನುವ ಕವಿಯತ್ರಿ ಇದ್ದಾರೆ.

ಕನ್ನಡದ ಶ್ರೇಷ್ಠ ಕವಿಯತ್ರಿ ಆಗಿ ಸಾಕಷ್ಟು ವಚನಗಳನ್ನು ಬರೆದಿರುವ ಅವರು ಬಟ್ಟೆಯನ್ನು ಧರಿಸುತ್ತಿರಲಿಲ್ಲ. ಕಾರಣ ಅವರ ಪತಿ ಗಿಂತ ಅವರು ಚೆನ್ನ ಮಲ್ಲಿಕಾರ್ಜುನನನ್ನು (Chenna Mallikarjuna) ಹೆಚ್ಚು ಇಷ್ಟ ಪಡುತ್ತಿದ್ದರು. ಆ ಕಾರಣಕ್ಕೆ ರಾಜನಾಗಿದ್ದ ಆತನ ಪತಿ ಈಶ್ವರನನ್ನೇ ಇಷ್ಟ ಪಡುವುದಾದರೆ ನನ್ನಿಂದ ಏನನ್ನು ತೆಗೆದುಕೊಂಡು ಹೋಗಬಾರದು ಎಂದು ವಾರ್ನ್ ಮಾಡಿದ್ದರಂತೆ. ಈ ಕಾರಣಕ್ಕಾಗಿ ಆಕೆ ಉಟ್ಟಿದ ಬಟ್ಟೆಯನ್ನು ಬಿಚ್ಚಿ ಅರಮನೆಯಿಂದ ಆಚೆ ಬಂದರು.

ಅಂದಿನಿಂದ ಎಂದೂ ಕೂಡ ಆಕೆ ಬಟ್ಟೆ ತೊಡಲೇ ಇಲ್ಲ. ಅದನ್ನು ಉದಾಹರಣೆ ತೆಗೆದುಕೊ ನಿನ್ನ ದೇಹದ ಬಗ್ಗೆ ಅಥವಾ ಬಟ್ಟೆಯ ಬಗ್ಗೆ ನಿಂದಿಸಲು ಯಾರಿಗೂ ಕೂಡ ಅವಕಾಶ ಮಾಡಿಕೊಡಬೇಡ ಅದು ನಿನ್ನ ಇಷ್ಟ ಎಂದು ಸಪೋರ್ಟ್ ಮಾಡಿದ್ದಾರೆ. ಇದಕ್ಕೆ ಉರ್ಫಿ ಜಾವೇದ್ ಅಕ್ಕ ನಾನು ಬಟ್ಟೆ ತೊಡುವುದರಿಂದಲೇ ಫೇಮಸ್ ಆಗಿರುವುದು. ನೀವು ಕೊಡುತ್ತಿರುವ ಸಲಹೆ ಉಲ್ಟಾ ಆಗಬಹುದು ಎನ್ನುವ ರೀತಿ ರೀ ಟ್ವೀಟ್ ಮಾಡಿದ್ದಾರೆ.

ಸದ್ಯಕ್ಕೆ ಉರ್ಫಿ ಜಾವೇದ್ ಅವರನ್ನೇ ಜನರು ಇಷ್ಟು ತರಾಟೆಗೆ ತೆಗಿದುಕೊಳ್ಳುತ್ತಿದ್ದಾರೆ, ಇನ್ನು ಸದಾ ವಿವಾದಾತ್ಮಕ ಹೇಳಿಕೆ ಕೊಡುವ ಕಂಗನ ರಣಾವತ್ ಅವತ್ತು ಉರ್ಫಿಯನ್ನು ದೈವಾಂಶ ಸಂಭೂತೆ ಎಂದು ಹೇಳಿ ಸಪೋರ್ಟ್ ಮಾಡಿರುವುದು ನೋಡಿ ಇದು ಇನ್ನಷ್ಟು ದೊಡ್ಡ ಮಟ್ಟಿಗೆ ತಿರುಗುತ್ತದೋ ಎಂದು ಕಾದು ನೋಡಬೇಕಾಗಿದೆ. ಎಲ್ಲರಿಗೂ ಅವರಿಷ್ಟದ ಬಟ್ಟೆ ತೊಡುವ ಸ್ವಾತಂತ್ರ್ಯ ಖಂಡಿತ, ಇದೆ ಆದರೆ ಅದು ಸ್ವೇಚ್ಛಾಚಾರ ಆಗಬಾರದು ಎನ್ನುವುದಷ್ಟೇ ಭಾರತೀಯರ ಇಚ್ಛೆ.

Leave a Comment