ತಪ್ಪಿನ ಅರಿವಾಗ ದರ್ಶನ್ & ಫ್ಯಾನ್ಸ್ ಗೆ ಕ್ಷಮೆ ಕೇಳಿದ ಸುವರ್ಣ ನ್ಯೂಸ್ ಚಾನೆಲ್ ಆಂಕರ್ ಜಯಪ್ರಕಾಶ್. ಅಷ್ಟಕ್ಕೂ ಮೀಡಿಯಾದವರು ಮಾಡಿದ ತಪ್ಪೇನು ಗೊತ್ತ.? ತಕ್ಕ ಶಾಸ್ತಿ ಮಾಡಿದ್ದಾರೆ ಫ್ಯಾನ್ಸ್

ದರ್ಶನ್ (Darshan) ಹಾಗೂ ಮಾಧ್ಯಮದವರ (Media) ನಡುವೆ ಇರುವ ಜಟಾಪಟಿ ಎಲ್ಲರಿಗೂ ತಿಳಿದೇ ಇದೆ. ದರ್ಶನ್ ಅವರ ಸಣ್ಣ ಪುಟ್ಟ ವಿಚಾರಗಳನ್ನು ಮಾಧ್ಯಮದವರು ದೊಡ್ಡದು ಮಾಡಿ ಬೆಂಕಿ ಹಾಕಿದ್ದು, ಜೊತೆಗೆ ಇದರಿಂದ ಕೋಪಗೊಂಡ ದರ್ಶನ್ ಅವರು ಏಕವಚನದಲ್ಲಿ ಅಶ್ಲೀಲ ಪದಗಳನ್ನು ಉಪಯೋಗಿಸಿ ಮಾಧ್ಯಮದವರೆಲ್ಲರನ್ನು ನಿಂದಿಸಿದ್ದು. ಅದಕ್ಕೆ ಅವರೆಲ್ಲ ಒಗ್ಗೂಡಿ ದರ್ಶನ್ ಅವರ ಯಾವುದೇ ವಿಷಯವನ್ನು ನಾವು ಪ್ರಸಾರ ಮಾಡುವುದಿಲ್ಲ ಎಂದು ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಿದ್ದು.

ಅದಕ್ಕೆ ತೊಡೆತಟ್ಟಿ ನಿಂತು ದರ್ಶನ್ ಅಭಿಮಾನಿಗಳು ಸ್ವತಃ ತಾವೇ ಕ್ರಾಂತಿ ಸಿನಿಮಾವನ್ನು ಅವರ ಪ್ರಚಾರ ಮಾಡಿ ಗೆಲ್ಲಿಸಿದ್ದು ಇದೊಂದು ಕರ್ನಾಟಕದಲ್ಲಿ ಇತಿಹಾಸ ಎಂದೇ ಹೇಳಬಹುದು. ಇದಾದಮೇಲೆ ಸೂಕ್ಷ್ಮ ಮಟ್ಟದಲ್ಲಿ ಮಾಧ್ಯಮದವರು ದರ್ಶನ್ ಅವರ ವಿರುದ್ಧ ಮಸಲತ್ತು ಮಾಡುತ್ತಲೇ ಇದ್ದರು ಅಂದರೆ ಅದು ಕೂಡ ಸುಳ್ಳಲ್ಲ, ಆದರೆ ಸುಳಿವು ಈಗಾಗಲೇ ಅನೇಕ ಬಾರಿ ಕನ್ನಡಿಗರಿಗೆ ಸಿಕ್ಕಿದೆ.

ನಿನ್ನೆಯಿಂದ ವೈರಲ್ ಆದ ಒಂದು ವಿಡಿಯೋ ಮಾಧ್ಯಮಯವರು ದರ್ಶನ್ ಅವರ ಮೇಲೆ ಎಷ್ಟರಮಟ್ಟಿಗೆ ಕೋಪ ಇಟ್ಟುಕೊಂಡಿದೆ ಎನ್ನುವುದನ್ನು ನಿರೂಪಿಸುವಂತಿದೆ. ಆ ವೀಡಿಯೋದಲ್ಲಿರುವ ಮಾತುಗಳು ದರ್ಶನ್ ಅವರ ಅಭಿಮಾನಿಗಳನ್ನು ಬಹಳ ಕೆರಳಿಸಿದ್ದು ಅದರ ಪರಿಣಾಮ ಇಂದು ಆ ವಾಹಿನಿಯ ನಿರೂಪಕ ದರ್ಶನ್ ಹಾಗೂ ಅವರ ಅಭಿಮಾನಿಗಳ ಬಳಿ ಕ್ಷಮೆ ಕೇಳುವಂತೆ ಮಾಡಿದೆ.

ಇಷ್ಟಕ್ಕೂ ನಡೆದಿರುವುದು ಏನು ಎಂದರೆ ನೆನ್ನೆ ಕನ್ನಡ ಸುದ್ದಿ ಮಾಧ್ಯಮ ಸುವರ್ಣ ನ್ಯೂಸ್ ಚಾನೆಲ್ (Suvarna news ) ಗೆ ಒಂದು ಗಿಫ್ಟ್ ಬಾಕ್ಸ್ ಬಂದಿತ್ತು. ಸ್ಟುಡಿಯೋ ಮುಂದೆ ನಿಂತು ಸಿಬ್ಬಂದಿಗಳೆಲ್ಲಾ ಸೇರಿ ಆ ಗಿಫ್ಟ್ ಬಾಕ್ಸ್ ಅನ್ನು ಓಪನ್ ಮಾಡುತ್ತಿದ್ದರು. ಜೊತೆಗೆ ಕೆಲವರು ಒಳಗೆ ಏನಿರಬಹುದು ಎನ್ನುವ ವಿಷಯದ ಕುರಿತು ಕುತೂಹಲ ತೋರುತ್ತಿದ್ದರು.

ಅದರಲ್ಲಿದ್ದ ಒಬ್ಬರು ನಮಗಾಗಿ ಕ್ರಾಂತಿ ಸಿನಿಮಾದ ಟಿಕೆಟ್ ಗಳು ಬಂದಿರಬಹುದು ಎಂದು ಕೇಳಿದ್ದರೆ ಮತ್ತೊಬ್ಬರು ಇಲ್ಲ ದರ್ಶನ್ ಅವರ ತಲೆ ಬಂದಿದೆ ಎಂದು ತೀರ ತುಚ್ಚ ಮಟ್ಟದಲ್ಲಿ ಮಾತನಾಡಿದ್ದಾರೆ. ಮತ್ತೊಬ್ಬ ಇಲ್ಲ ಚಪ್ಪಲಿ ಬಂದಿರಬಹುದು ಎಂದು ಸಹ ಹೇಳಿದ್ದಾರೆ ಇದೆಲ್ಲವೂ ದರ್ಶನ್ ಅವರಿಗೆ ಸಂಬಂಧಪಟ್ಟ ಮಾತಾಗಿದ್ದು. ಎಲ್ಲದಕ್ಕಿಂತ ದರ್ಶನ್ ಅವರ ತಲೆ ಬಂದಿರಬಹುದು ಎಂದು ಆಡಿದ ಮಾತುಗಳು ದರ್ಶನ್ ಅವರ ಅಭಿಮಾನಿಗಳನ್ನು ಕೆರಳಿಸಿದೆ.

ಇದಾದ ಬಳಿಕ ಅವರ ಸ್ಟುಡಿಯೋ ಬಳಿ ಹೋಗಿ ದರ್ಶನ್ ಫ್ಯಾನ್ಸ್ ಪ್ರತಿಭಟನೆ ಮಾಡಿದ್ದು ಇದೆ. ಒಂದು ಜವಾಬ್ದಾರಿ ಸ್ಥಾನದಲ್ಲಿರುವ ಸಮಾಜದ ಆಗು ಹೋಗುಗಳನ್ನು ಜನರ ಮುಂದೆ ತಂದು ಪ್ರತಿನಿಧಿಸುವ ಮಾಧ್ಯಮ ಪ್ರತಿನಿಧಿಗಳು ಒಬ್ಬ ವ್ಯಕ್ತಿಯ ಸಾ.ವಿ.ನ ಬಗ್ಗೆ ನಿರೀಕ್ಷಿಸುತ್ತಾರೆ ಎಂದರೆ ಅದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಮಾತು. ಅವರವರ ನಡುವಿನ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಕನ್ನಡದ ಒಬ್ಬ ಸ್ಟಾರ್ ನಟನ ಬಗ್ಗೆ ಈ ರೀತಿ ಮಾತಾಡಿದ್ದು ಎಲ್ಲರಿಗೂ ಬೇಸರ ತರಿಸಿದೆ.

ಇದು ವೈರಲ್ ಆಗುತ್ತಿದ್ದಂತೆ ತಮ್ಮ ತಪ್ಪನ್ನು ಅರಿತುಕೊಂಡ ಸುವರ್ಣ ನ್ಯೂಸ್ ಚಾನೆಲ್ ನಿರೂಪಕರೊಬ್ಬರು ಮತ್ತೊಂದು ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾರೆ. ಸುವರ್ಣ ಸುದ್ದಿ ವಾಹಿನಿ ಹಿರಿಯ ನಿರೂಪಕರಾದ ಜಯಪ್ರಕಾಶ್ ಅವರು ಇಂದು ವಿಡಿಯೋ ಮಾಡಿ ದರ್ಶನ್ ಹಾಗೂ ಅವರ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ನಾವು ಎಂದು ಎಲ್ಲರನ್ನೂ ಒಗ್ಗೂಡಿಸುವ ಎಲ್ಲರ ಜೊತೆಗೆ ಇರುವ ಸಾಧ್ಯವಾದಷ್ಟು ಖುಷಿಯನ್ನು ಹಂಚುವ ಮನಸ್ಥಿತಿಯವರು ಆದರೆ ಯಾವುದೋ ವಿಷಯ ಘಳಿಗೆ ಅಂತಹ ಮಾತು, ಅಂತಹ ಘಟನೆ ನಡೆದು ಹೋಯಿತು ದಯವಿಟ್ಟು ಈ ಬಾರಿ ನಮ್ಮನ್ನು ಕ್ಷಮಿಸಿ ಎಂದು ಪೂರ್ವಕವಾಗಿ ಎಲ್ಲರ ಬಳಿ ಕ್ಷಮೆ ಕೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave a Comment