Friday, April 18, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeViral Newsಆಂಕರ್ ಅನುಶ್ರೀ ಗ್ರಹಚಾರ ಬಿಡಿಸಿದ್ದಿನಿ, ನಟಿ ರಿಷಿಕಾ ಸಿಂಗ್ ಹೀಗೆ ಮೀಡಿಯಾ ಮುಂದೆ ಹೇಳಿದ್ದೇಕೆ ಗೊತ್ತ.?...

ಆಂಕರ್ ಅನುಶ್ರೀ ಗ್ರಹಚಾರ ಬಿಡಿಸಿದ್ದಿನಿ, ನಟಿ ರಿಷಿಕಾ ಸಿಂಗ್ ಹೀಗೆ ಮೀಡಿಯಾ ಮುಂದೆ ಹೇಳಿದ್ದೇಕೆ ಗೊತ್ತ.? ಅಂತ ತಪ್ಪು ಅನುಶ್ರೀ ಏನ್ ಮಾಡಿದ್ರು.?

ಕಳೆದ ನಾಲ್ಕೈದು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ರಿಷಿಕ ಸಿಂಗ್ ಅವರ ಕುರಿತಾದ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿವೆ ಇದಕ್ಕೆಲ್ಲ ಕಾರಣ ರಿಷಿಕ ಸಿಂಗ್ ಅವರು ವರ್ಷದ ಹಿಂದೆ ತಮಗಾದ ಅಪಘಾತದಿಂದ ಚೇತರಿಸಿಕೊಂಡಿರುವುದು. ಅ.ಪ.ಘಾ.ತ ತೀವ್ರತೆಗೆ ಆಕೆಯ ಬದುಕೇ ಮುಗಿದು ಹೋಯಿತು ಎಂದು ಎಷ್ಟೋ ಜನ ಭಾವಿಸಿದ್ದರು. ಆದರೆ ರಿಷಿಕ ಸಿಂಗ್ ಅವರು ಈಗ ತಮ್ಮ ಕುಟುಂಬದವರ ಬೆಂಬಲದಿಂದ ಸುಧಾರಿಸಿಕೊಂಡಿದ್ದು ಕಳೆದ ವಾರ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮತ್ತು ಇಷ್ಟು ದಿನಗಳ ಚಿಕಿತ್ಸೆ ಬಗ್ಗೆ ಕುಟುಂಬದವರು ತೋರಿದ ಅಕ್ಕರೆಯ ಬಗ್ಗೆ ಫೋಟೋಗಳನ್ನೆಲ್ಲ ಸೇರಿಸಿ ವಿಡಿಯೋ ಮಾಡಿ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದರು.

ಇದಾಗಿದ್ದೆ ತಡ ಅವರ ಚೈತನ್ಯ ಕಂಡು ಅನೇಕ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾ ಚಾನಲ್ ಗಳು ಈಗ ಅವರ ಸಂದರ್ಶನ ನಡೆಸಿದ್ದಾರೆ. ಹೀಗೆ ಒಂದು ಸಂದರ್ಶನದಲ್ಲಿ ರಿಷಿಕಾ ಸಿಂಗ್ ಅವರನ್ನು ಇಂಡಸ್ಟ್ರಿಯಲ್ಲಿ ಯಾರ ಜೊತೆ ಆದರೂ ಗಲಾಟೆ ಮಾಡಿಕೊಂಡಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ರಿಷಿಕಾ ಅವರು ಕೊಟ್ಟಿರುವ ಉತ್ತರ ಈ ರೀತಿ ಇದೆ. ನಾನು ಸುಖ ಸುಮ್ಮನೆ ಯಾರ ಜೊತೆಗೂ ಕೂಡ ಜಗಳಕ್ಕೆ ಹೋಗುವುದಿಲ್ಲ, ವಿವಾದವನ್ನು ಮಾಡಿಕೊಳ್ಳುವುದಿಲ್ಲ.

ನನಗೆ ನೆನಪಿರುವ ಹಾಗೆ ನಾನು ಅನುಶ್ರೀ ಗೆ ಚೆನ್ನಾಗಿ ಬೈದಿದ್ದೆ. ಅದು ಕೂಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಾನು ಮತ್ತು ಅನುಶ್ರೀ ಬಿಗ್ ಬಾಸ್ ಸೀಸನ್ 1 ರ ಕಂಟೆಸ್ಟೆಂಟ್ಗಳು ಆಗಿದ್ದೆವು ಆಗ. ಅದರಲ್ಲಿ ಒಂದು ದಿನ ಅವಳು ಅಲ್ಲಿ ನಡೆದ ಒಂದು ಘಟನೆಗೆ ನಾನು ಸಂಬಂಧ ಇರದೇ ಇದ್ದರೂ ಕೂಡ ಅವಳು ಒಳ್ಳೆಯ ರೀತಿ ಪ್ರೇಮ್ ಆಗುವ ಉದ್ದೇಶ ಇಟ್ಟುಕೊಂಡು ನನ್ನನ್ನು ಅದರಲ್ಲಿ ಇನ್ವೊಲ್ ಮಾಡಿ ಮಾತನಾಡಿದ್ದಳು. ಅದು ನನಗೆ ಇಷ್ಟ ಆಗದೆ ಜೋರಾಗಿ ಬೈದಿದ್ದೆ ನನಗೂ ಅವಳಿಗೂ ದೊಡ್ಡ ಜಗಳವೇ ನಡೆದು ಹೋಯಿತು.

ಅದಾದ ಮೇಲೆ ಸುದೀಪ್ ಸರ್ ಅವಳಿಗೆ ಒಂದು ಹ್ಯಾಂಡ್ ಕರ್ಚೀಫ್ ಕೂಡ ಕೊಟ್ಟಿದ್ದರು ಕಣ್ಣೀರು ಒರೆಸಿಕೊಳ್ಳಲು, ಯಾಕೆಂದರೆ ನಾನು ಅವಳನ್ನು ಅಷ್ಟು ಅಳಿಸಿ ಬಿಟ್ಟಿದ್ದೆ. ಆದರೆ ಅವಳ ಮುಖದಲ್ಲಿ ಅವಳು ಮಾಡಿದ್ದು ತಪ್ಪು ಎನ್ನುವ ಅರಿವು ಬಂದಿದೆ ಎನ್ನುವುದು ನನಗೆ ಗೊತ್ತಾಯ್ತು. ಅವಳು ಸಹ ತುಂಬಾ ಸ್ವಾಭಿಮಾನಿ ಮತ್ತೆ ಬಂದು ಕ್ಷಮೆ ಕೇಳುವ ರೀತಿ ಏನು ಆಗಲಿಲ್ಲ ಆದರೆ ಅವಳಿಗೆ ಅರ್ಥವಾಗಿದೆ ಎಂದು ನನಗೆ ಗೊತ್ತಾದ ತಕ್ಷಣ ಮತ್ತೆ ಪ್ಯಾಚಪ್ ಆದೆ.

ನಾನು ಅವಳಿಗೆ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದೆ ನಿನಗೆ ತಂದೆ ಇಲ್ಲ ಆದರೆ ಈ ಮನೆಯಲ್ಲಿ ನಾನು ನಿನಗೆ ತಂದೆ ರೀತಿ ಸಪೋರ್ಟಿವ್ ಆಗಿ ಇರುತ್ತೇನೆ ಎಂದು. ನನಗೆ ಹುಡುಗಿಯರ ಜೊತೆ ಜಗಳವಾಡಲು ಇಷ್ಟವೇ ಇಲ್ಲ ಯಾಕೆಂದರೆ ಹುಡುಗ ಹುಡುಗರ ಮಧ್ಯೆ ಫ್ರೆಂಡ್ಶಿಪ್ ಅಲ್ಲಿ ಎಷ್ಟು ಗಟ್ಟಿತನ ಇರುತ್ತದೆ ಆದರೆ ನಾವ್ಯಾಕೆ ಹೆಣ್ಣು ಮಕ್ಕಳು ಹೆಣ್ಣು ಮಕ್ಕಳೇ ಜಗಳಾಡಿಕೊಳ್ಳುತ್ತೇವೆ, ಅದು ಆಗುವುದು ನನಗೆ ಇಷ್ಟ ಇಲ್ಲ. ಒಂದು ವೇಳೆ ಮನಸ್ತಾಪ ಆದರೂ ಅವರಿಂದ ಒಳ್ಳೆ ರೆಸ್ಪಾನ್ಸ್ ಬಂದ ಕೂಡಲೇ ಅದು ನನಗೆ ಕಂಡರೆ ಪ್ಯಾಚ್ ಅಪ್ ಆಗಿಬಿಡುತ್ತೇನೆ. ಒಂದು ವೇಳೆ ಆ ರೀತಿ ಬದಲಾವಣೆ ಕಂಡು ಬರಲಿಲ್ಲ ಎಂದರೆ ಮತ್ತೆ ಅವರ ಕಡೆ ತಿರುಗಿ ಸಹ ನೋಡುವುದಿಲ್ಲ ಎಂದು ಹೇಳಿದ್ದಾರೆ.