ನನ್ನ ಕೋರಿಕೆಯನ್ನು ನೆಡೆಸಿಕೊಡ್ತಿರಾ.? ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ದರ್ಶನ್ ಏನದು ಗೊತ್ತ.?

ನನ್ನ ಈ ಕೋರಿಕೆಯನ್ನು ನಡೆಸಿಕೊಡುತ್ತೀರ ಎಂದು ನಂಬಿದ್ದೇನೆ ಎಂದು ತಮ್ಮ ಸೆಲೆಬ್ರಿಟಿಗಳ ಬಳಿ ಕೇಳಿಕೊಂಡ ಚಾಲೆಂಜಿಂಗ್ ಸ್ಟಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ತಾವು ಸೆಲೆಬ್ರಿಟಿಗಳು ಎಂದು ಕರೆಯುವ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. ಅದೇನೆಂದರೆ ಇದೆ ಫೆಬ್ರವರಿ ತಿಂಗಳಲ್ಲಿ ದರ್ಶನ್ ಅವರ ಹುಟ್ಟುಹಬ್ಬ ಬರಲಿದೆ. ಫೆಬ್ರವರಿ 16ನೇ ತಾರೀಖಿನಂದು ದರ್ಶನ್ ಅಭಿಮಾನಿಗಳಿಗೆ ಯುಗಾದಿ ಮತ್ತು ದೀಪಾವಳಿ ಹಬ್ಬದ ಸಂಭ್ರಮ.

ನೆಚ್ಚಿನ ನಟನ ಮನೆ ಮುಂದೆ ಬಂದು ಅವರನ್ನು ಭೇಟಿಯಾಗಿ, ಕೇಕ್ ಕಟ್ ಮಾಡಿಸಿ ತಿನ್ನಿಸಿ, ಕೈ ಕುಲಕಿ ವಿಶ್ ಮಾಡಿ, ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಹೋಗುವುದಕ್ಕೆ ಬೆಳಗಿನ ಜಾವದಿಂದಲೇ ಸಾವಿರಾರು ಸಂಖ್ಯೆಯಲ್ಲಿ ಕ್ಯೂ ನಿಂತಿರುತ್ತಾರೆ. ಹಲವು ವರ್ಷಗಳಿಂದ ಇದೇ ರೀತಿ ದರ್ಶನ್ ಅವರ ಹುಟ್ಟು ಹಬ್ಬವನ್ನು ಮಾಡಿಕೊಂಡು ಬಂದಿದ್ದರೂ ಕಳೆದ ಮೂರು ವರ್ಷಗಳಿಂದ ಇದಕ್ಕೆ ಬ್ರೇಕ್ ಹಾಕಲಾಗಿತ್ತು. ಕೊರೋನ ಕಾರಣದಿಂದ ಎರಡು ವರ್ಷ ಹಾಗೂ ಅಪ್ಪು ಅವರ ಅ.ಗ.ಲಿಕೆಯ ಕಾರಣದಿಂದ ಒಂದು ವರ್ಷ ದರ್ಶನ್ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರಲಿಲ್ಲ.

ಈ ಬಾರಿ ಕ್ರಾಂತಿ (Kranti) ಸಿನಿಮಾದ ಸಕ್ಸಸ್ ನ ಜೊತೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬದ ಆಚರಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ. ಆದರೆ ಅದಕ್ಕೂ ಮುನ್ನ ಮನವಿ ಒಂದನ್ನು ಮಾಡಿದ್ದಾರೆ. ಅದೇನೆಂದರೆ ನನ್ನ ಹುಟ್ಟುಹಬ್ಬಕ್ಕಾಗಿ ದಯಮಾಡಿ ಯಾರು ಹಣವನ್ನು ವೆಚ್ಚ ಮಾಡಬೇಡಿ. ಹಾರ, ಬ್ಯಾನರ್, ತುರಾಯಿ, ಕೇಕು ತರಬೇಡಿ. ಅದರ ಬದಲು ನಿಮ್ಮ ಕೈಲಾದಷ್ಟು ದವಸ ಧಾನ್ಯ ಸಕ್ಕರೆ ಇಂತವುಗಳನ್ನು ತಂದುಕೊಡಿ. ಅದನ್ನು ಅವಶ್ಯಕತೆ ಇರುವ ವೃದ್ಧಾಶ್ರಮ ಅನಾಥಾಶ್ರಮ ಇವುಗಳಿಗೆ ತಲುಪಿಸುವ ಕೆಲಸವನ್ನು ಜವಾಬ್ದಾರಿಯಿಂದ ನಾನು ಮಾಡುತ್ತೇನೆ ಎಂದು ದರ್ಶನ್ ಅವರು ಹೇಳಿದ್ದಾರೆ.

ಜೊತೆಗೆ ನನ್ನ ಹುಟ್ಟು ಹಬ್ಬದ ಪ್ರಯುಕ್ತ ನನ್ನ ಮನೆಗೆ ಬರುತ್ತೀರಾ ಅದೇ ಸಂಭ್ರಮದಲ್ಲಿ ಪಟಾಕಿ ಹೊಡೆಯುವುದು, ಅಕ್ಕಪಕ್ಕದ ಮನೆ ಕಾಂಪೌಂಡ್ ಹತ್ತುವುದು, ಹೂ ಗಿಡ ಬೀಳಿಸುವುದು, ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಈ ರೀತಿ ಮಾಡಿ ಅವರಿಗೆ ಬೇಸರ ಮಾಡಬೇಡಿ. ಸಂಘದ ಕಾರ್ಯಕರ್ತರು ಹಾಗೂ ಪೊಲೀಸರ ಜೊತೆ ಶಾಂತಿಯುತವಾಗಿ ನಡೆದುಕೊಳ್ಳಿ ದಯವಿಟ್ಟು ನನಗಾಗಿ ಇಷ್ಟನ್ನು ನಡೆಸಿ ಕೊಡಿ ಎಂದು ಕೇಳಿಕೊಂಡಿದ್ದಾರೆ.

ದರ್ಶನ್ ಅವರ ಪ್ರತಿ ಮಾತನ್ನು ಕೂಡ ಅಭಿಮಾನಿಗಳು ಅಕ್ಷರಶಃ ಪಾಲಿಸುತ್ತಾರೆ ಹಾಗಾಗಿ ಈ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ದರ್ಶನವರು ಹೇಳಿರುವ ಇಷ್ಟು ಮಾತುಗಳಿಗೂ ಕೂಡ ತಕ್ಕನಾಗಿ ನಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ಜೊತೆಗೆ ದರ್ಶನ್ ಅವರ ಕಡೆಯಿಂದಲೂ ಅಭಿಮಾನಿಗಳಾಗಿ ಗಿಫ್ಟ್ ಸಿಗುವ ಸಾಧ್ಯತೆ ಇದೆ. ಅವರ ಮುಂದಿನ ಸಿನಿಮಾದ ಟೈಟಲ್ ಹಾಗೂ ಟೀಸರ್ ಝಲಕ್ ರಿಲೀಸ್ ಆಗಲಿದೆ ಎನ್ನುವ ಸುದ್ದಿ ಇದೆ.

ಮಾಲಾಶ್ರೀ ಪುತ್ರಿ ರಾಧನರಾಮ್ ನಾಯಕಿ ಆಗಿ ಲಾಂಚ್ ಆಗುತ್ತಿರುವ ವಿಶೇಷ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ ತರುಣ್ ಸುಧೀರ್ ಅವರ ನಿರ್ದೇಶನದ ರಾಕ್ ಲೈನ್ ವೆಂಕಟೇಶ್ ಅವರ ನಿರ್ಮಾಣದ ಇನ್ನು ಹೆಸರಿಡದ ಡಿ ಫಿಫ್ಟಿ (D56) ಸಿಕ್ಸ್ ಸಿನಿಮಾದ ಮುಹೂರ್ತ ಕಳೆದ ವರ್ಷವೇ ನಡೆದಿತ್ತು. ಈಗ ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ಆ ಸಿನಿಮಾದ ಟೈಟಲ್ ಮತ್ತು ಅದರ ಟೀಸರ್ ರಿಲೀಸ್ ಮಾಡುವ ನಿರೀಕ್ಷೆ ಇದೆ. ಜೊತೆಗೆ ಸ್ಪೆಷಲ್ ಕಾಮನ್ ಡಿಪಿ (Common DP) ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ತಯಾರಾಗುತ್ತಿದ್ದು, ಅದನ್ನು ಟ್ವಿಟರ್ (Twitter) ಅಲ್ಲಿ ಟ್ರೆಂಡಿಂಗ್ ಮಾಡಲಾಗುವುದು ಎನ್ನುವ ಮಾತುಗಳು ಇವೆ.

Leave a Comment