Friday, June 9, 2023
HomeViral Newsಗಂಡನ ಸಾ-ವಿ-ನಿಂದ ಖಿನ್ನತೆಗೆ ಜಾರಿ ನೆನಪಿನ ಶಕ್ತಿ ಕಳೆದಕೊಂಡ ನಟಿ ಭಾನುಪ್ರಿಯಾ. ಈಗ ಭಾನುಪ್ರಿಯಾ ಸ್ಥಿತಿ...

ಗಂಡನ ಸಾ-ವಿ-ನಿಂದ ಖಿನ್ನತೆಗೆ ಜಾರಿ ನೆನಪಿನ ಶಕ್ತಿ ಕಳೆದಕೊಂಡ ನಟಿ ಭಾನುಪ್ರಿಯಾ. ಈಗ ಭಾನುಪ್ರಿಯಾ ಸ್ಥಿತಿ ಹೇಗಿದೆ ಗೊತ್ತ.? ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ.!

ನೆನಪಿನ ಶಕ್ತಿ ಕಳೆದುಕೊಂಡ ನಟಿ ಭಾನುಪ್ರಿಯ, ಡೈಲಾಗ್ ಮರೆಯುವ ಭಯದಿಂದ ಸಿನಿಮಾಗಳಿಂದ ದೂರ ಇರುವ ನಟಿ. ನಟಿ ಭಾನುಪ್ರಿಯ ಒಂದು ಕಾಲಘಟ್ಟದಲ್ಲಿ ಕನ್ನಡ ತಮಿಳು ತೆಲುಗು ಮಲಯಾಳಂ ಎಲ್ಲಾ ಚಿತ್ರರಂಗದಲ್ಲೂ ಪೀಕ್ ಅಲ್ಲಿ ಇದ್ದ ನಟಿ. ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಇಂತಹ ಸ್ಟಾರ್ ನಟರುಗಳಿಗೆ ನಾಯಕಿಯಾಗಿ ಅಭಿನಯಿಸಿದ ಅದ್ಭುತ ಕಲಾವಿದೆ.

ನೃತ್ಯ ಮತ್ತು ಅಭಿನಯವನ್ನು ಕರಗತ ಮಾಡಿಕೊಂಡಿದ್ದ ಈಕೆ ಕನ್ನಡದವರೇ ಎನಿಸುವಷ್ಟು ಕನ್ನಡಿಗರಿಗೂ ಹತ್ತಿರವಾಗಿದ್ದರು. ನಾಯಕ ನಟಿಯಾಗಿ ಬಳಿಕ ಪೋಷಕ ನಟಿಯಾಗಿ ಸಹ ಬೇಡಿಕೆ ಅಲ್ಲಿದ್ದ ನಟಿ ಇದ್ದಕ್ಕಿದ್ದಂತೆ ಹಲವು ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಹಲವು ಜನರು ಭಾನುಪ್ರಿಯ ಯಾಕೆ ಈ ರೀತಿ ಮರೆಯಾಗಿ ಹೋದರು ಎಂದು ಅವರ ಬಗ್ಗೆ ನೆನಪಿಸಿಕೊಂಡಿದ್ದು ಇದೆ.

ಇದೀಗ ಅವರೇ ತಾವು ಸಿನಿಮಾಗಳಿಂದ ದೂರ ಉಳಿಯಲು ಕಾರಣ ಏನು ಎನ್ನುವ ವಿಷಯವನ್ನು ತೆಲುಗಿನ ಚಾನೆಲ್ ಒಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಟಿ ಭಾನುಪ್ರಿಯ ಅವರಿಗೀಗ ಮೆಮೊರಿ ಲಾಸ್ ಆಗಿದೆಯಂತೆ ಅದು ಎಷ್ಟರಮಟ್ಟಿಗೆ ಎಂದರೆ ಕೊನೆಯ ಹಂತದಲ್ಲಿ ಇರುವಷ್ಟು. ಇತ್ತೀಚೆಗೆ ಹಲವು ಜನರಲ್ಲಿ ಈ ಕಾಯಿಲೆ ಬಗ್ಗೆ ಕೇಳುತ್ತಿದ್ದೇವೆ. ಕೆಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲೂ ಮರೆವಿನ ಕಾಯಿಲೆ ಬಗ್ಗೆ ತೋರಿಸುತ್ತಿದ್ದಾರೆ.

ಮರೆವಿನ ಸಮಸ್ಯೆ ಎಲ್ಲರಿಗೂ ಇರುತ್ತದೆ, ಆದರೆ ಇದು ಕಾಯಿಲೆ ಹಂತಕ್ಕೆ ಹೋಗಬಾರದು ಎಷ್ಟರ ಮಟ್ಟಿಗೆ ಎಂದರೆ ತಾವು ಏನು ಮಾಡುತ್ತಿದ್ದೇವೆ ಏನಕ್ಕಾಗಿ ಬಂದೆವು ಎನ್ನುವುದನ್ನೇ ಮರೆತು ಬಿಡುವಷ್ಟು ಮರೆವಿನ ಸಮಸ್ಯೆ ಆಗಿದೆಯಂತೆ. ಹಾಗಾಗಿ ಸಿನಿಮಾ ಸೆಟ್ಟಿಗೆ ಹೋದರೆ ಕೊಟ್ಟಿದ ಡೈಲಾಗ್, ಪ್ರಾಕ್ಟೀಸ್ ಮಾಡಿದ್ದ ಡೈಲಾಗ್ ಅನ್ನೇ ಮರೆತು ಬಿಡುವಷ್ಟು ಮರೆವಿನ ಕಾಯಿಲೆ ಕಾಯುತ್ತಿದ್ದೆಯಂತೆ.

ಹೀಗಾಗಿ ಅಲ್ಲಿ ಹೋಗಿ ಅವಮಾನ, ಮುಜುಗರ ಅನುಭವಿಸಬಾರದು ಜೊತೆಗೆ ನನ್ನಿಂದ ಇತರರಿಗೆ ಸಮಸ್ಯೆಯನ್ನು ಆಗಬಾರದು ಎನ್ನುವ ಕಾರಣಕ್ಕೆ ನಟಿ ಸಿನಿಮಾಗಳಿಂದ ದೂರ ಉಳಿದಿದ್ದಾರಂತೆ. ಜೊತೆಗೆ ಆಕೆಗೆ ಒಂದು ನೃತ್ಯ ಶಾಲೆ ಆರಂಭಿಸಬೇಕು ಎನ್ನುವ ಆಸೆ ಇತ್ತು ಆದರೆ ಈಗ ಮರೆವಿನ ಕಾಯಿಲೆಯಿಂದಾಗಿ ಅದು ಕನಸಾಗೇ ಉಳಿಯುವಂತಾಗಿದೆ.

ಅಷ್ಟೊಂದು ಲವಲವಿಕೆಯಿಂದ ಚಟುವಟಿಕೆಯಿಂದ ಚಾರ್ಮಿಂಗ್ ಆಗಿದ್ದ ನಟಿಗೆ ಈ ಸಮಸ್ಯೆ ಬರಲು ಕಾರಣ ಏನು ಎಂದು ನೋಡುವುದಾದರೆ ಅವರ ಗಂಡನ ಸಾವಿನ ಖಿನ್ನತೆ. ಅದೇ ಅವರನ್ನು ಈ ಪರಿಯಾಗಿ ಕಾಡುತ್ತಿರುವುದು. ಬಹಳ ಪ್ರೀತಿಸಿ ಭಾನುಪ್ರಿಯ ಅವರು 1998ರಲ್ಲಿ ಸಿನಿಮಾಟೋಗ್ರಾಫರ್ ಆದರ್ಶ್ ಕೌಶಲ್ ಎನ್ನುವವರನ್ನು ಕೈ ಹಿಡಿದಿದ್ದರು. ಆದರೆ ಇಬ್ಬರ ಮಧ್ಯೆ ಸಣ್ಣಪುಟ್ಟ ಸಮಸ್ಯೆಗಳಿಂದ ಭಿನ್ನಭಿಪ್ರಾಯ ಮೂಡಿ 2005ರಿಂದ ಇಬ್ಬರು ಬೇರೆ ಬೇರೆಯಾಗಿ ಬದುಕಲು ಶುರು ಮಾಡಿದರು.

ಎಷ್ಟೋ ಬಾರಿ ಇವರಿಬ್ಬರಿಗೂ ಡಿ.ವೋ.ರ್ಸ್ ಆಗಿದೆ ಎಂದು ಗಾಳಿ ಸುದ್ದಿ ಹರಡಿದ್ದರೂ ನಟಿ ಇಲ್ಲ ಬೇರೆಯಾಗಿ ಜೀವಿಸುತ್ತಿದ್ದೆ ಹೊರತು ವಿ.ಚ್ಛೇ.ದ.ನ ಪಡೆದಿಲ್ಲ ಎಂದು ಸ್ಪಷ್ಟತೆಯನ್ನು ಕೊಟ್ಟಿದ್ದರು. ಆದರೆ 2018ರಲ್ಲಿ ಹೃ.ದ.ಯಾ.ಘಾ.ತದಿಂದ ಆದರ್ಶ್ ಕೌಶಲ್ ಅವರು ಸಾ.ವ.ನ್ನ.ಪ್ಪು.ತ್ತಾ.ರೆ. ಆ ಸಾ.ವು ಭಾನುಪ್ರಿಯ ಅವರನ್ನು ಇನ್ನಿಲ್ಲದಂತೆ ಕಾಡಿದೆ. ನಾವಿಬ್ಬರೂ ಒಳ್ಳೆ ಸ್ಥಾನದಲ್ಲಿದ್ದೆವು, ಕೈತುಂಬಾ ದುಡಿಯುತ್ತಿದ್ದೆವು, ಸಮಯ ಇತ್ತು ಆದರೆ ನಾವು ಚೆನ್ನಾಗಿರಬೇಕಾಗಿದ್ದ ಸಮಯದಲ್ಲಿ ಚಿಕ್ಕಪುಟ್ಟ ಸಮಸ್ಯೆಗಳಿಗೆ ಬೇರೆ ಆಗಿಬಿಟ್ಟೆವು.

ಈಗ ಅವರನ್ನು ಕಳೆದುಕೊಂಡೆ ಎನ್ನುವ ದುಃಖ ನನ್ನನ್ನು ಕಾಡುತ್ತಿದೆ. ಸಹಿಸಲಾರದಷ್ಟು ಹಿಂಸೆ ಕೊಡುತ್ತಿದ್ದೆ ಹಾಗಾಗಿ ಬದುಕಿನ ಬಗ್ಗೆ ನನಗೆ ಆಸಕ್ತಿಯೇ ಹೊರಟು ಹೋಗಿದೆ ಎನ್ನುವಷ್ಟರ ಮಟ್ಟಕ್ಕೆ ನಟಿ ಖಿನ್ನತೆಗೆ ಒಳಗಾಗಿದ್ದಾರೆ. ಅದರಿಂದಲೇ ಈಗ ಮೆಮೊರಿ ಲಾಸ್ ಖಾಯಿಲೆಯೂ ಆಕೆಯನ್ನು ಬಾಧಿಸುತ್ತಿದೆ. ಆದರೆ ಪ್ರತಿಭಾನ್ವಿತ ನಟಿ ಈ ರೀತಿಯಾಗಿ ವೈವಾಹಿಕ ಜೀವನವನ್ನು ಕೊನೆಗಾಣಿಸಿಕೊಂಡಿದ್ದು ದು.ರಂ.ತ.ವೇ ಸರಿ.