ಅಂದು ಅಪ್ಪು ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಚೀಫ್ ಗೆಸ್ಟ್ ಆಗಿ ಕರಿಯೊಣ ಎಂದು ಹೇಳಿ ಇಂದು ಮಾತು ತಪ್ಪಿದ್ರಾ ಆರ್.ಅಶೋಕ್ ಈ ಬಾರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಕಂಡ ಶ್ರೇಷ್ಠ ಮಾನವ ದೈವ ಮಾನವ ನಮ್ಮೆಲ್ಲರ ಪ್ರೀತಿಯ ಅಪ್ಪು (Appu) ಅವರಿಗೆ ಕರ್ನಾಟಕ ಸರ್ಕಾರವು ಕರ್ನಾಟಕ ರತ್ನ (Karnataka Rathna) ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತ್ತು. ಆ ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನೆರೆಯ ರಾಜ್ಯಗಳ ಸ್ಟಾರ್ ಕಲಾವಿದರಾದ ಜೂನಿಯರ್ ಎನ್ಟಿಆರ್ (Jn.NTR) ಮತ್ತು ರಜನಿಕಾಂತ್ (Rajanikanth) ಅವರನ್ನು ಆಹ್ವಾನಿಸಿತ್ತು.
ಇದಾದ ಮೇಲೆ ಬೆಂಗಳೂರಿನಲ್ಲಿ ಸಾಯಿ ಸಂಗಮ ಹೆಲ್ತ್ ಕೇರ್ ಮತ್ತು ಡಯೋಗ್ನೋಸ್ಟಿಕ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ (Ashwini Punith Rajkumar) ಹಾಗೂ ಆರ್ ಅಶೋಕ್ (R.Ashok) ಇಬ್ಬರು ಸಹ ಹೋಗಿದ್ದರು. ಆಗ ಅವರಿಬ್ಬರೂ ಮಾತನಾಡಿಕೊಂಡಿದ್ದು ಮಾಧ್ಯಮದವರ ಕಣ್ಣಿಗೂ ಬಿದ್ದಿತ್ತು. ಆರ್ ಅಶೋಕ್ ಅವರು ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಕುರಿತು ಈ ಬಾರಿ ಅಪ್ಪು ರಸ್ತೆ ಉದ್ಘಾಟನೆ ಕಾರ್ಯಕ್ರಮಕ್ಕೆ ಕನ್ನಡಿಗರನ್ನು ಮಾತ್ರ ಕರೆಯೋಣ, ಕರ್ನಾಟಕ ರತ್ನ ಪ್ರಶಸ್ತಿಗೆ ಬೇರೆಯವರನ್ನು ಕರೆದವರು ಎಂದು ಇವರಿಗೆ ಬೇಜಾರು ಆಗಬಾರದು ಎಂದು ಹೇಳುತ್ತಾ ದರ್ಶನ್ ಕರೆಸೋಣ ಎಂದು ಹೇಳಿದ್ದರು.
ದರ್ಶನ್ ಅವರ ಹೆಸರು ಹೇಳುತ್ತಿದ್ದಂತೆ ಅಶ್ವಿನಿ ಪುನೀತ್ ಅವರ ಸಹ ಅದಕ್ಕೆ ಅಭ್ಯಂತರ ಇಲ್ಲ ನೀವು ಕರೆಯಿರಿ ಯಾರನ್ನು ಬೇಕಾದರೂ ಕರೆಸಿ ನಿಮ್ಮಿಷ್ಟ ಎಂದು ಸಹ ಹೇಳಿದ್ದರು. ಆದರೆ ಈಗ ಆ ಮಾತನ್ನು ಬದಲಾಯಿಸಿದ್ದಾರೆ ನಾಳೆ ನಡೆಯುವ ಅಪ್ಪು ರಸ್ತೆ ಉದ್ಘಾಟನೆ ಕಾರ್ಯಕ್ರಮದ ಕುರಿತು ಕನ್ನಡ ಚಲನಚಿತ್ರ ಮಂಡಳಿ ಜೊತೆ ಸುದ್ದಿಗೋಷ್ಠಿ ನಡೆಸಿ ನಾಳೆ ನಡೆಯಲಿರುವ ಕಾರ್ಯಕ್ರಮಗಳ ಕುರಿತು ವಿವರಗಳನ್ನು ಹೇಳಿದ ಆರ್ ಅಶೋಕ್ ಅವರು ಅಪ್ಪುವರಿಗಾಗಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಶಮಿತಾ ಮಲ್ನಾಡ್ ಅವರ ಮುಖ್ಯಸ್ಥಿಕೆಯಲ್ಲಿ ಕನ್ನಡ ಚಿತ್ರರಂಗದ ಹೇಮಂತ್, ಅನುರಾಧ ಭಟ್, ವಿಜಯ ಪ್ರಕಾಶ್, ಸಾಧುಕೋಕಿಲ ಇವರನ್ನು ಒಳಗೊಂಡಂತೆ ಸುಮಾರು 17 ಹೆಚ್ಚು ಗಾಯಕರುಗಳು ಅಪ್ಪು ಅವರ ಹಾಡುಗಳನ್ನು ಹಾಗೂ ಅಪ್ಪು ಅವರಿಗಾಗಿ ಹಾಡುಗಳನ್ನು ಹಾಡಲಿದ್ದಾರೆ ಎನ್ನುವುದನ್ನು ತಿಳಿಸಿದರು. ಈ ರೀತಿ ಅದರ ವಿವರಗಳನ್ನು ಹೇಳುತ್ತಿದ್ದ ಅವರಿಗೆ ಮಾಧ್ಯಮದವರು ಪ್ರಶ್ನೆಯೊಂದನ್ನು ಕೇಳಿದ್ದಾರೆ. ಹಿಂದೆ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ನೀವು ಹಾಗೂ ಅಶ್ವಿನಿ ಅವರು ಮಾತನಾಡಿಕೊಂಡಿದ್ದಿರಿ.
ಈ ಕಾರ್ಯಕ್ರಮಕ್ಕೆ ದರ್ಶನ್ (Darshan) ಅವರನ್ನು ಮುಖ್ಯ ಅತಿಥಿಯಾಗಿ ಕರಿಯಬೇಕು ಎಂದು ಪ್ಲಾನ್ ಮಾಡಿದ್ದಿರಿ ಅದರ ವಿಷಯ ಏನಾಯ್ತು ಎಂದು ಕೇಳಿದಾಗ ಕಾರ್ಯಕ್ರಮವನ್ನು ಆಯೋಜನೆ ಮಾಡುವುದಷ್ಟೇ ಸರ್ಕಾರದ ಯೋಜನೆ ಆನಂತರದ ಅತಿಥಿಗಳ ವಿಷಯವನ್ನೆಲ್ಲ ಸಂಪೂರ್ಣವಾಗಿ ಚಿತ್ರರಂಗಕ್ಕೆ ಬಿಟ್ಟು ಕೊಟ್ಟಿದ್ದೇವೆ. ಕನ್ನಡ ಚಲನ ಚಿತ್ರಮಂಡಳಿ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಈಗಾಗಲೇ ಎಲ್ಲಾ ಕಲಾವಿದರಗಳಿಗೂ ಸಹ ಮನವಿಯನ್ನು ಮಾಡಿಕೊಳ್ಳಲಾಗಿದೆ.
ನನಗೆ ತಿಳಿದಿರುವ ಪ್ರಕಾರ ಶಿವರಾಜ್ ಕುಮಾರ್ ಅವರ ಪತ್ನಿಯಾದ ಗೀತ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರು ವಿಜಯ ರಾಘವೇಂದ್ರ ಇವರೆಲ್ಲಾ ಬರಲಿದ್ದಾರೆ ಎಂದಿದ್ದಾರೆ. ಕೆಲವರ ಊಹೆ ಪ್ರಕಾರ ಹೊಸಪೇಟೆಯಲ್ಲಿ (Hosapet) ಆದ ಘಟನೆ ಬಳಿಕ ನಿರ್ಧಾರ ಬದಲಾಗಿದೆಯಂತೆ. ಹೊಸಪೇಟೆಯಲ್ಲಿ ದರ್ಶನ ಅವರ ಮೇಲಾದ ಚಪ್ಪಲಿ ಹ-ಲ್ಲೆ ಬಳಿಕ ಅದಕ್ಕೆಲ್ಲ ಅಪ್ಪು ಅವರ ಅಭಿಮಾನಿಗಳನ್ನು ದರ್ಶನ ಅಭಿಮಾನಿಗಳು ದೂಷಿಸಿದ್ದು.
ಅಂದಿನಿಂದ ಇಂದಿನವರೆಗೂ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರಿಗೊಬ್ಬರು ಕಿತ್ತಾಡಿಕೊಂಡು ಸ್ಟಾರ್ ವಾರ್ ದೊಡ್ಡದು ಮಾಡಿಕೊಂಡಿರುವುದು ಬದಲಾಗಿರುವ ಈ ನಿರ್ಧಾರಕ್ಕೆ ಕಾರಣ ಎಂದು ಊಹೆ ಮಾಡಲಾಗುತ್ತಿದೆ. ಇನ್ನು ಎಲ್ಲಾ ಹೀರೋಗಳಿಗೂ ಮನವಿ ಕಳುಹಿಸಲಾಗಿದೆ ಎನ್ನುವ ವಿಷಯವನ್ನು ಹೇಳಿರುವುದರಿಂದ ನಾಳೆ ದರ್ಶನ್ ಅವರು ಬರುತ್ತಾರೆ ಎನ್ನುವ ನಿರೀಕ್ಷೆಯು ಸಹ ಇದೆ, ನಾಳೆ ತನಕ ಕಾದು ನೋಡೋಣ. ಒಂದು ವೇಳೆ ದರ್ಶನ್ ಬಂದರೆ ಫ್ಯಾನ್ ವಾರ್ ಅಂತ್ಯ ಆಗುತ್ತೆ ಇಲ್ಲವಾದರೆ ಉರಿಯುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತೆ ಆಗುತ್ತದೆ ಎನ್ನುವುದು ಕೆಲವರ ಅಭಿಪ್ರಾಯ.