ಮುಖ್ಯಮಂತ್ರಿ ಚಂದ್ರು ಅವರ ಮೇಲೆ ದಾಖಲಾದ ಕೇಸ್, ಬಂಧನಕ್ಕಾಗಿ ಆಗ್ರಹ. ಮುಖ್ಯಮಂತ್ರಿ ಚಂದ್ರು (Mukyamanthri Chandru) ಅವರು ತರಳಬಾಳು ಹುಣ್ಣಿಮೆ (Tharalabalu hunnime) ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ವೇದಿಕೆ ಮೇಲೆ ಅವರು ಮಾತನಾಡುವ ಸಂದರ್ಭದಲ್ಲಿ ಇಂದು ದೇಶದ ಯುವ ಜನತೆ ಯಾವ ರೀತಿ ದೇಶಾಭಿಮಾನ ತೋರಬೇಕು, ನಾಗರಿಕರು ನಮ್ಮ ದೇಶದ ವಿಷಯದಲ್ಲಿ ಯಾವ ರೀತಿ ಜವಾಬ್ದಾರಿಯಾಗಿ ನಡೆದುಕೊಳ್ಳಬೇಕು ಎನ್ನುವ ಬಗ್ಗೆ ಎಚ್ಚರಿಸಿ ಮಾತನಾಡುವಾಗ ರಾಜಕೀಯ ವಿಚಾರವಾಗಿ ರಾಜಕಾರಣಿಗಳನ್ನು (politicians) ಸರಿಯಾಗಿ ತರಾಟೆಗೆ ತೆಗೆದುಕೊಂಡರು.
ನಾನು ಯಾವುದೇ ಪಕ್ಷದ ವಿಷಯವಾಗಿ ಮಾತನಾಡುತ್ತಿಲ್ಲ ಪಕ್ಷೇತರವಾಗಿ ಎಲ್ಲ ರಾಜಕಾರಣಿಗಳನ್ನು ಸೇರಿಸಿ ಹೇಳುತ್ತಿದ್ದೇನೆ ನೀವು ಯಾರು ಈಗ ರಾಜಕೀಯ ಮಾಡಲು ಯೋಗ್ಯರಲ್ಲ. ನಾನು 70 ವರ್ಷದ ಬಳಿಕ ರಾಜಕೀಯಕ್ಕೆ ಬರುವುದಿಲ್ಲ ಚುನಾವಣೆಗೆ ನಿಲ್ಲುವುದಿಲ್ಲ ಎಂದು ದೃಢ ನಿರ್ಧಾರ ಮಾಡಿ ಯುವ ಜನತೆಗೆ ಜಾಗ ಮಾಡಿ ಕೊಟ್ಟಿದ್ದೇನೆ ನೀವು ಸಹ ಹಾಗೆ ಮಾಡಿ ನಿಮಗೆ ವಯಸ್ಸಾಗಿದ್ದರು ವೀಲ್ ಛೇರಲ್ಲಿ ಓಡಾಡುತ್ತಿದ್ದರು ಇನ್ನೂ ಅಧಿಕಾರದ ಆಸೆ ಹೋಗುವುದೇ ಇಲ್ಲ ಎಂದಿದ್ದಾರೆ.
ತಮ್ಮ ಭಾಷಣದ ಉದ್ದಕ್ಕೂ ಸರ್ಕಾರ (government) ಜನರಿಗೆ ಮೋಸ ಮಾಡುತ್ತಿದೆ, ಹಸಿದಿರುವ ಮಕ್ಕಳಿಗೆ ಅನ್ನ ಹಾಗೂ ಜ್ಞಾನದ ಹಸಿವು ಇರುವವರಿಗೆ ಉಚಿತವಾಗಿ ಶಿಕ್ಷಣ ಕೊಟ್ಟು ಅವರ ಸಮವಸ್ತ್ರ ಮತ್ತು ಉನ್ನತ ಶಿಕ್ಷಣ ಎಲ್ಲವನ್ನು ನೋಡಿಕೊಳ್ಳಬೇಕು. ಯಾರ್ಯಾರೋ ಮೋಸ ಮಾಡಿ ಹೋದವರ ಸಾವಿರಾರು ಕೋಟಿಗಳನ್ನು ಮನ್ನಾ ಮಾಡುತ್ತೀರಾ ಬಡ ಮಕ್ಕಳ ಬಗ್ಗೆ ಕೇಳಿದರೆ ಸರ್ಕಾರದ ಬಳಿ ಹಣ ಇಲ್ಲ ಎನ್ನುತ್ತೀರಾ.
ಮುಂದಿನ ಭವಿಷ್ಯ ನಿರ್ಮಿಸುವವರು ಈಗಿನ ವಿದ್ಯಾರ್ಥಿಗಳೇ ಅಲ್ಲವೇ, ಸರ್ಕಾರ ಈ ಕಡೆ ಗಮನ ಕೊಡಬೇಕು ಬಡವನ ಮಕ್ಕಳು ಕೂಡ ಐಎಎಸ್ ಮೆಡಿಕಲ್ ಓದುವ ರೀತಿ ಯೋಜನೆಗಳನ್ನು ರೂಪಿಸಿ ನವ ಭಾರತವನ್ನು ನಿರ್ಮಾಣ ಮಾಡಬೇಕು ಮತ್ತು ಆರೋಗ್ಯದ ವಿಚಾರದಲ್ಲಿ ನಾಗರಿಕರಿಗೆ ಉಪಕಾರ ಆಗುವ ರೀತಿ ಯೋಜನೆ ತಂದು ನೋಡಿಕೊಳ್ಳಬೇಕು ಎಂದು ಇದನ್ನು ಒಂದು ಸರ್ಕಾರ ಅಲ್ಲ ಯಾವುದೇ ಸರ್ಕಾರ ಬಂದರೂ ಹೀಗೆ ಮಾಡಬೇಕು ಎಂದು ಸಲಹೆ ನೀಡಿದರು.
ಆದರೆ ಕೊನೆಯಲ್ಲಿ ಆಡಿದ ಒಂದು ಮಾತಿನಿಂದ ಈಗ ಅವರ ಮೇಲೆ ದೂರು ದಾಖಲಾಗಿದೆ. ವಿಶೇಷ ಚೇತನರನ್ನು ಅವರ ಭಾಷಣದಲ್ಲಿ ನಿಂದಿಸಿ ಮಾತನಾಡಿದ್ದಾರೆ ಅವರು ಮಾಧ್ಯಮದ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸುವುದರ ಜೊತೆಗೆ ಸರ್ವೋದಯ ಕ್ಷೇಮಾಭಿವೃದ್ಧಿ ವಿಕಲಚೇತನ ಸಂಘದಿಂದ ಮುಖ್ಯಮಂತ್ರಿ ಚಂದ್ರು ಅವರ ಮೇಲೆ ಮದ್ದೂರಿನಲ್ಲಿ ದೂರು (case) ದಾಖಲಾಗಿದೆ.
ತಹಶೀಲ್ದಾರರಿಗೆ ಭೇಟಿಯಾಗಿ ದೂರು ದಾಖಲಿಸಿದ್ದಾರಂತೆ ಈಗ ಅದು ಅವರ ಮೂಲಕ ಮುಖ್ಯಮಂತ್ರಿಗಳವರೆಗೂ ತಲುಪಿದೆಯಂತೆ. ಇಷ್ಟಕ್ಕೂ ಅವರು ಮಾಡಿಕೊಂಡಿರುವ ವಿವಾದ ಏನೆಂದರೆ, ಅಲ್ಲಿದ್ದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಚಂದ್ರು ಅವರು ನೀವು ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡುವಾಗ ಯಾರಿಗಾದರೂ ಕೊಟ್ಟು ಬಿಡುತ್ತೀರಾ ಅವರು ಕುಂಟರೋ ಕುರುಡರೋ ಹೆಳವರೋ ಭ್ರಷ್ಟಾಚಾರಿಗಳೋ ಕಳ್ಳರೋ ಬಲಿಷ್ಠರೋ ದುರ್ಬಲರೋ ನಿರುದ್ಯೋಗಿಗಳೋ ಎಲ್ಲವನ್ನು ನೋಡುತ್ತೀರಿ.
ಹಾಗೆ ಐದು ವರ್ಷಗಳ ದೇಶದ ಭವಿಷ್ಯವನ್ನು ಅವರಿಗೆ ಕೊಟ್ಟು ಅಧಿಕಾರ ಕೊಡುವ ನೀವು ಆ ವಿಚಾರದಲ್ಲಿ ಅವರು ಕುಂಟರೋ ಕುರುಡರೋ ಹೇಳವರೋ ಕುಡುಕರೋ ಕಟುಕರೋ ಅನಾಚಾರಿಗಳೋ ಜೈಲಿಗೆ ಹೋಗಿ ಬಂದಿರುವ ಖದೀಮರೋ ಎಂದು ನೋಡುವುದಿಲ್ಲ ಯಾಕೆ ಎಂದು ಅಲ್ಲಿದ್ದವರಿಗೆ ಬುದ್ಧಿ ಹೇಳಿದ್ದಾರೆ. ಆದರೆ ಈ ಮಾತಿನ ಮೂಲಕ ವಿಶೇಷ ಚೇತನರಿಗೆ ನೋವು ಆಗಿದೆ. ಈ ಮಾತಿನ ಮೂಲಕ ಅವರನ್ನು ನಿಂದಿಸಲಾಗಿದೆ ಎಂದು ಕೇಸ್ ದಾಖಲಿಸಲಾಗಿದೆ.