Friday, June 9, 2023
HomeViral Newsವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ 2 ವರ್ಷ ಶಿಕ್ಷೆಗೆ ಗುರಿಯಾಗಿರುವ ನಟಿ ಅಭಿನಯ ಜೈಲು ಸೇರುವ...

ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ 2 ವರ್ಷ ಶಿಕ್ಷೆಗೆ ಗುರಿಯಾಗಿರುವ ನಟಿ ಅಭಿನಯ ಜೈಲು ಸೇರುವ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ ಅಭಿನಯ & ಕುಟುಂಬಸ್ಥರ ಹುಡುಕಾಟ ನೆಡೆಸುತ್ತಿರುವ ಪೋಲಿಸರು

 

ಹೋದೆಯ ದೂರ ಓ ಜೊತೆಗಾರ ಎನ್ನುವ ಕನ್ನಡದ ಎವರಿನ್ ಗ್ರೀನ್ ಸಾಂಗ್ ಅಲ್ಲಿ ಅಭಿನಯಿಸಿರುವ ನಟಿ ಅಭಿನಯ ( Abhinaya) ಯಾರಿಗೆ ಗೊತ್ತಿಲ್ಲ ಹೇಳಿ, ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಇವರು ಭಾಗ್ಯವಂತ, ದೇವತಾ ಮನುಷ್ಯ ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ನಂತರ ತಮ್ಮ 13ನೇ ವಯಸ್ಸಿನಲ್ಲಿ ಕಾಶಿನಾಥ್ ಅವರ ಅನುಭವ (Anubhava) ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡು ನಾಯಕ ನಟಿಯಾಗಿ ಗುರುತಿಸಿಕೊಂಡರು.

ಇಲ್ಲಿತ ತನಕವೂ ಪೋಷಕ ಪಾತ್ರಧಾರಿಯಾಗಿ ಮತ್ತು ಇತ್ತೀಚೆಗೆ ಸೀರಿಯಲ್ ಕಲಾವಿದೆಯಾಗಿ ಕನ್ನಡಿಗರನ್ನು ರಂಜಿಸುತ್ತಿದ್ದ ನಟಿ ಅಭಿನಯ ಅವರು ಈಗ ತಲೆ ಮರೆಸಿಕೊಂಡಿದ್ದಾರೆ. ನಟಿ ಅಭಿನಯ ಅವರ ತಾಯಿ ಜಯಮ್ಮ ಮತ್ತು ಸಹೋದರ ಚೆಲುವರಾಜ್ ಈ ಮೂವರ ಮೇಲೆ ವರದಕ್ಷಿಣಕ್ಕೆ ಕೇಸ್ (dowri case) ದಾಖಲಾಗಿತ್ತು, ಆರೋಪಿಗಳನ್ನು ಬಂಧಿಸಿ ಕೋರ್ಟಿನ ಎದುರು ನಿಲ್ಲಿಸಬೇಕಾಗಿತ್ತು ಅಷ್ಟರಲ್ಲಿ ಮೂರು ಜನ ಕೂಡ ತಲೆ ಮರೆಸಿಕೊಂಡಿದ್ದಾರೆ.

ಅಭಿನಯ ಅವರ ಅಣ್ಣನ ಹೆಂಡತಿಯಾದ ಲಕ್ಷ್ಮಿ ದೇವಿ ( Lakshmi devi) ಎನ್ನುವವರಿಗೆ ವರದಕ್ಷಿಣೆ ಕಿರುಕುಳ ಕೊಟ್ಟಿರುವುದರಿಂದ ಅಭಿನಯ ಹಾಗೂ ಅವರ ಅಣ್ಣ ಮತ್ತು ತಾಯಿಯ ಮೇಲೆ ದೂರು ನೀಡಲಾಗಿತ್ತು. ಅಪರಾಧಿಗಳಿಗೆ ಸೆಷನ್ಸ್ ಕೋರ್ಟ್ (session court) ಶಿ.ಕ್ಷೆ ಕೂಡ ವಿಧಿಸಿತ್ತು, ಇದರ ವಿರುದ್ಧ ಅಭಿನಯ ಅವರು ಹೈಕೋರ್ಟಿಗೆ (High court) ಮೇಲ್ಮನವಿ ಸಹ ಸಲ್ಲಿಸಿದ್ದರು. ಆದರೆ ಉಚ್ಚ ನ್ಯಾಯಾಲಯ ಸೆಷನ್ಸ್ ನ್ಯಾಯಾಲದ ತೀರ್ಪನ್ನೇ ಎತ್ತಿ ಹಿಡಿದಿದೆ.

ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲದ ಮುಂದೆ ಹಾಜರು ಪಡಿಸಬೇಕಾಗಿತ್ತು. ಆದರೆ ಈ ಮೂವರು ಈಗ ಪೊಲೀಸರ ಕೈಗೆ ಸಿಗದಂತೆ ಎಸ್ಕೇಪ್ ಆಗಿದ್ದಾರೆ. ಹಾಗಾಗಿ ಇವರ ಮೇಲೆ ಚಂದ್ರ ಲೇಔಟ್ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿ ಆರೋಪಿಗಳ ಬಗ್ಗೆ ಸುಳಿವು ಸಿಕ್ಕರೆ ಪೊಲೀಸ್ ರಿಗೆ ತಿಳಿಸಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ನಟಿ ಅಭಿನಯ ಅವರು ಪೋಷಕರ ಜೊತೆ ಸೇರಿಕೊಂಡು ಅತ್ತಿಗೆಯಾದ ಲಕ್ಷ್ಮಿ ದೇವಿಯವರಿಗೆ ಹಿಂ.ಸೆ ಕೊಟ್ಟಿದ್ದಾರೆ ಎನ್ನುವ ಆರೋಪ ಅವರ ಮೇಲೆ ಇತ್ತು. ಅವರಿಗೆ ಕೋರ್ಟ್ ಶಿ.ಕ್ಷೆ ಜಾರಿ ಮಾಡಿದ ಮೇಲೆ ಮಾಧ್ಯಮದವರೊಂದಿಗೆ ಅತ್ತಿಗೆಯಾದ ಲಕ್ಷ್ಮಿ ದೇವಿ ಅವರು ಸಹ ಮಾತನಾಡಿ ತನಗಾದ ಎಲ್ಲಾ ನೋವನ್ನು ಹಾಗೂ ಅವರು ನೀಡಿದ್ದ ಚಿತ್ರ ಹಿಂಸೆಯನ್ನು ಬಯಲು ಮಾಡಿದ್ದರು.

ಅಭಿನಯ ಅವರ ನಿಜರೂಪ ಎಂತಹದ್ದು ಎಂದು ಎಲ್ಲರಿಗೂ ತಿಳಿದು ಹೋಗಿತ್ತು. ತಾವು ಸಹ ಒಬ್ಬ ಮಹಿಳೆಯಾಗಿ ತಮ್ಮ ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಹಣಕ್ಕಾಗಿ ಪೀಡಿಸಿ ಅಷ್ಟು ಮಾತ್ರ ಅಲ್ಲದೆ ಮಾಡಿ ಹ.ಲ್ಲೆ ಮಾಡಿ ನೋಯಿಸಿದ್ದರು. ಇಂದು ಅದಕ್ಕೆ ಪ್ರತಿಫಲವಾಗಿ ಕೋರ್ಟ್ ಶಿ.ಕ್ಷೆ ಅನುಭವಿಸುವಂತೆ ಆಗಿದೆ. ಆದರೆ ಬಂಧನದ ಬಗ್ಗೆ ಭಯ ಬಿದ್ದ ಇವರು ಪರಾರಿ ಆಗಿದ್ದಾರೆ ಕಾನೂನಿನ ಮುಂದೆ ಯಾರು ಸಹ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಅಭಿನಯ ಅವರ ನಿಜಮುಖ ಬಯಲಾದ ಮೇಲೆ ಅವರಿಗೆ ಶಿ.ಕ್ಷೆ ಆಗಲೇಬೇಕು, ಇದರಿಂದ ಇನ್ನಷ್ಟು ಜನ ಬುದ್ಧಿ ಕಲಿಯಬೇಕು ಎನ್ನುವ ಕೂಗು ಜೋರಾಗಿ ಕೇಳಿ ಬರುತ್ತಿದೆ. ಪೊಲೀಸರ ಹದ್ದಿನ ಕಣ್ಣಿನಿಂದ ಇವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸದ್ಯದಲ್ಲೇ ಸೆರೆ ಸಿಕ್ಕಿ ಶಿಕ್ಷೆ ಅನುಭವಿಸಲಿದ್ದಾರೆ. ಇತ್ತೀಚೆಗೆ ಜೀ ಕನ್ನಡ ( Zee kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಿಟ್ಲರ್ ಕಲ್ಯಾಣ (Hitler kalyana ) ಎನ್ನುವ ಧಾರಾವಾಹಿಯಲ್ಲಿ ಇವರು ಕಾಣಿಸಿಕೊಳ್ಳುತ್ತಿದ್ದರು. ಆದರೆ ಯಾವಾಗ ಕೇಸ್ ಬಗ್ಗೆ ಎಲ್ಲೆಡೆ ಸುದ್ದಿ ಆಗಲಿ ಶುರುವಾಯಿತು ಆ ಪಾತ್ರದಿಂದ ಇವರು ರಿಪ್ಲೇಸ್ ಆಗಿದ್ದಾರೆ.