ಲೈವ್ ಬಂದು ದರ್ಶನ್ ಫ್ಯಾನ್ಸ್ ಬಳಿ ಮನವಿ ಮಾಡಿಕೊಂಡ ಒಳ್ಳೆ ಹುಡುಗ ಪ್ರಥಮ್.

 

ಒಳ್ಳೆ ಹುಡುಗ ಪ್ರಥಮ್ (Olle hudga Pratham) ಎಂದೇ ಕರ್ನಾಟಕದಲ್ಲಿ ಖ್ಯಾತಿ ಆಗಿರುವ ಪ್ರಥಮ್ ಅವರು ಆಗಾಗ ಫೇಸ್ಬುಕ್ ಲೈವ್ ಬರುತ್ತಿರುತ್ತಾರೆ. ಸದಾ ಸಿನಿಮಾರಂಗದ ವಿಚಾರ ಅಥವಾ ಅವರ ಅಭಿನಯದ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿ ಇರುವ ಪ್ರಥಮ್ ಅವರು ಅಭಿನಯಿಸಿರುವ ನಟಭಯಂಕರ (Natabhayankara) ಸಿನಿಮಾ ರಿಲೀಸ್ ಆಗಿದೆ. ಇಷ್ಟು ದಿನ ಸಿನಿಮಾ ಪ್ರಚಾರಕ್ಕಾಗಿ ಸಂದರ್ಶವನ್ನು ಕೊಡುತ್ತಿದ್ದ ಪ್ರಥಮ್ ಅವರು ಈಗ ಫೇಸ್ಬುಕ ಲೈವ್ ಬರುವ ಮೂಲಕ ಅಭಿಮಾನಿಗಳನ್ನು ಸಂಪರ್ಕಿಸುತಿದ್ದಾರೆ.

ಮೊನ್ನೆ ಅಷ್ಟೇ ಸಿನಿಮಾ ಚೆನ್ನಾಗಿದ್ದರೂ ಥಿಯೇಟರ್ ಕಡೆ ಯಾರು ಬರುತ್ತಿಲ್ಲ, ಬೇಕೆಂದಲೇ ಕೆಲವರು ನೆಗೆಟಿವ್ ರಿವ್ಯೂ ಕೊಡುತ್ತಿದ್ದಾರೆ, ಕನ್ನಡದ ಒಂದೊಳ್ಳೆ ಸಿನಿಮಾ ಮಿಸ್ ಮಾಡಿಕೊಳ್ಳುತ್ತಿದ್ದೀರಿ, ನನ್ನ ಭವಿಷ್ಯವೇ ಈ ಸಿನಿಮಾದಲ್ಲಿ ಇದೆ, ನನ್ನ ಕೆರಿಯರ್ ಗೆ ನನ್ನ ಕನಸುಗಳಿಗೆ ಈ ಸಿನಿಮಾ ಸೋತರೆ ತೊಂದರೆ ಆಗುತ್ತದೆ ದಯವಿಟ್ಟು ಕನ್ನಡ ಸಿನಿಮಾ ಅನ್ನು ನೋಡಿ ನನ್ನನು ಕಾಪಾಡಿ ಎಂದು ವಿಡಿಯೋ ಮಾಡಿ ಹರಿ ಬಿಟ್ಟಿದ್ದರು.

ಈಗ ಮತ್ತೆ ಫೇಸ್ಬುಕ್ ಲೈವ್ (facebook live) ಬಂದಿರುವ ಇವರು ಈ ಬಾರಿ ದರ್ಶನ್ ಅಭಿಮಾನಿಗಳಿಗೆ (Darshan fan’s) ಮನವಿ ಸಲ್ಲಿಸಿದ್ದಾರೆ. ಅದೇನೆಂದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರಥಮ್ ಅವರ ಮೊದಲ ಸಿನಿಮಾ ಕಲೆಕ್ಷನ್ ಬಗ್ಗೆ ಫೇಕ್ ಪೋಸ್ಟರ್ ಹರಿದಾಡುತ್ತಿದೆ ಅದನ್ನು ಕ್ರಾಂತಿ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಜೊತೆ ಕಂಪೇರ್ ಮಾಡಿ ಕ್ರಾಂತಿ (Kranthi) ಮೊದಲ ದಿನದ ಕಲೆಕ್ಷನ್ ಗಿಂತಲೂ ಹೆಚ್ಚು ಕಲೆಕ್ಷನ್ ಪ್ರಥಮ್ ನ ನಟ ಭಯಂಕರ ಸಿನಿಮಾ ಮಾಡಿದೆ ಎನ್ನುವ ರೀತಿ ಬಿಂಬಿಸಲಾಗುತ್ತಿದೆ.

ಒಂದರ್ಥದಲ್ಲಿ ಇದನ್ನು ಟ್ರೋಲ್ ಮಾಡುತ್ತಿರುವುದು ಎಂದೇ ಹೇಳಬಹುದು, ಆದರೆ ಅದು ಪ್ರಥಮ ಮನಸ್ಸಿಗೆ ಬೇಸರವಾಗಿದೆ. ಇದನ್ನೇ ಮಾತನಾಡಿದ ಪ್ರಥಮ್ ಅವರು ಲೈವ್ ಬಂದು ಎರಡು ವಿಷಯ ಹೇಳಲು ಇಚ್ಛೆ ಪಡುತ್ತಿದ್ದೇನೆ ಎಂದಿದ್ದಾರೆ. ಮೊದಲಿಗೆ ಈಗ ನನ್ನ ಸಿನಿಮಾ ಚೆನ್ನಾಗಿ ಹೋಗುತ್ತಿದೆ ಇದು ಕನ್ನಡಿಗರ ಆಶೀರ್ವಾದ ಹಾಗೂ ಎಲ್ಲಾ ಕಲಾವಿದರ, ದೊಡ್ಡ ದೊಡ್ಡ ಸ್ಟಾರ್ ಗಳ ಆಶೀರ್ವಾದ ಅದಕ್ಕಾಗಿ ಎಲ್ಲರಿಗೂ ಧನ್ಯವಾದಗಳು.

ಮತ್ತೊಂದು ವಿಷಯವೇನೆಂದರೆ ದಯವಿಟ್ಟು ಯಾರು ಈ ರೀತಿ ದರ್ಶನ್ ಅವರ ಜೊತೆ ನನ್ನ ಸಿನಿಮಾ ಹೋಲಿಕೆ ಮಾಡಿ ಮಾತನಾಡಬೇಡಿ, ನನ್ನ ಸಿನಿಮಾ ಚೆನ್ನಾಗಿ ಹೋಗುತ್ತಿದೆ ಸುಮ್ಮನೆ ನೀವು ಈ ರೀತಿ ಮಾಡುವುದರಿಂದ ಅದು ಅವರನ್ನು ಪ್ರೊವೋಕ್ ಮಾಡಿದ ರೀತಿ ಆಗುತ್ತದೆ. ದರ್ಶನ್ ಅವರು ಯಾವತ್ತಿದ್ದರೂ ದೊಡ್ಡವರು ಅವರು ಎಷ್ಟು ದೊಡ್ಡ ಸ್ಟಾರ್ ಅವರ ಮಟ್ಟಕ್ಕೆ ನಾನು ಎಲ್ಲಿ ಹೋಗಲು ಸಾಧ್ಯ. ಅವರ ಮೇಲೆ ನನಗೆ ಬಹಳ ಪ್ರೀತಿ ವಿಶ್ವಾಸ ಇದೆ ಅದನ್ನು ತೋರ್ಪಡಿಸಬೇಕಾಗಿಲ್ಲ.

ಅವರ ಕ್ರಾಂತಿ ಸಿನಿಮಾ ಕೂಡ ರಿಲೀಸ್ ಆಗಿದೆ, ನಾನು ಹೋಗಿ ನೋಡಿದ್ದೇನೆ. ಈಗ ನನ್ನ ಸಿನಿಮಾ ಕೂಡ ರಿಲೀಸ್ ಆಗಿದೆ ಆ ಸಿನಿಮಾ ಗೆ ನನ್ನ ಸಿನಿಮಾ ಕಾಂಪಿಟೇಷನ್ ಆಗಲು ಸಾಧ್ಯವೇ ಇಲ್ಲ. ಆದರೂ ಅವರ ಜೊತೆ ಕಂಪೇರ್ ಮಾಡಿ ವಿವಾದ ಸೃಷ್ಟಿಸಲು ಪ್ರಯತ್ನ ಮಾಡುತ್ತಿದ್ದೀರಿ, ಇದೆಲ್ಲ ನೆಗೆಟಿವ್ ಆಗುತ್ತದೆ ಮತ್ತು ಇದು ನನ್ನ ಮೇಲೆ ಕೆಟ್ಟ ರೀತಿಯ ಪರಿಣಾಮ ಬೀರುತ್ತದೆ. ನಾನು ಎಲ್ಲೂ ಕೂಡ ದರ್ಶನ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ ಈ ರೀತಿ ಮಾಡುವುದರಿಂದ ಬೇರೆಯವರಿಗೆ ಕೆಟ್ಟ ಸಂದೇಶ ಹೋಗುತ್ತದೆ. ಯಾಕೆ ಈ ರೀತಿಯಲ್ಲಾ ಮಾಡಿ ತೊಂದರೆ ಕೊಡುತ್ತಿದ್ದೀರಿ ದಯವಿಟ್ಟು ಯಾರು ಈ ರೀತಿ ಮಾಡಬೇಡಿ ಎಂದು ಬೇಡಿಕೊಂಡಿದ್ದಾರೆ.

Leave a Comment